ಒಟ್ಟು 23 ಕಡೆಗಳಲ್ಲಿ , 14 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಹರಿಸ್ತುತಿ ಅಕ್ಕಾ ನೋಡೆ ಚಿಕ್ಕ ಕೃಷ್ಣನೂ ಪೊಕ್ಕಿಹ ರಿಂದಾವನಕೀಗ ಬಾ ಪ. ಸಿಕ್ಕನೆ ಪೋಗದಿರೆ ಲಕ್ಕುಮಿಯರಸ ದಕ್ಕಿಸಿಕೊಳ್ಳೆವೆ ಸಿಕ್ಕದೆ ಬಿಟ್ಟಾರೆ ಅ.ಪ. ಸದ್ದು ಮಾಡದೆ ಬನ್ನಿ ಇಲ್ಲಿದ್ದವರೆಲ್ಲ ಮುದ್ದು ಶ್ರೀ ಕೃಷ್ಣನ ಬಳಸುವ ಬಾರೆ ವಾಹನ ಎದ್ದು ಅಭಯನೀವ ಶುದ್ಧ ಕೋಲಾಟಕೆ ಸಿದ್ಧನಾಗುವನೆ 1 ನವನೀತ ಚೋರನ ರವಿಶತಕೋಟಿ ಕಿರೀಟ ಪ್ರಕಾಶ ಜವದಿ ಪೊಳೆವ ಗೋವಲಯಪಾಲನ ಅವನೀಧವನೊಲಿಸಲು ಪೋಗುವ ಬಾ 2 ಆರಿಗೂ ಸಿಗನೆ ನಾರದ ವಂದ್ಯನೆ ತಾರಕೆಗಳ ಮಧ್ಯ ಚಂದ್ರನಂತಿಹನೆ ನಾರಾಯಣ ಶ್ರೀ ಶ್ರೀನಿವಾಸನ ಸೇರಿ ಸುಖವ ಸುರಿಸಲು ತವಕದಿ 3
--------------
ಸರಸ್ವತಿ ಬಾಯಿ
ಹರಿ ಸಂಕಲ್ಪದ ಕೃಪೆಯಲ್ಲದೆ ಬೇರಿನ್ನಿಲ್ಲವಯ್ಯ ಪ. ಈ ನರವೆಂಬ ದೇಹಕ್ಕೆ ದೃಢ ಭಕುತಿ ಬರಲಿಕೆ ಅ.ಪ. ಸುಕೃತ ಚನ್ನಿಗ ಹರಿ ಬನ್ನ ಬಡಿಸಿ ಅಜಮಿಳನ ತನ್ನ ಸುತನ ನಾರಗನೆಂದು ಕರೆಸಿ ಉನ್ನಂತ ಪದವಿತ್ತ ಚನ್ನಕೇಶವ ಹರಿ1 ರುಕ್ಮಾಂಗದನೇಕಾದಶಿ ವ್ರತವನ್ನು ಚಕ್ರಧರನು ನೇಮದಿ ಮಾಡಿಶಿ ತಕ್ಕ ,ಮಾನಿನಿ ಗಂಟಿಕ್ಕೆ ಜಗದಲವನ ಪ್ರಖ್ಯಾತಿಗೊಳಿಸಿದ ಲಕ್ಕುಮಿರಮಣ ಹರಿ 2 ಮಾನುನಿ ದ್ರೌಪದಿಯನು ಸಭೆಗೆಳಸಿ ಕೃಷ್ಣಾ ನೀನೇ ಗತಿಯೆಂದಾ ತರುಣಿಯೊಳ್ ನುಡಿಸಿ ಅನುಮಾನವಿಲ್ಲದೆ ಜಗದಿ ಪಾಂಡವರಕ್ಷ ನಾನೆಂದಕ್ಷಯವಿತ್ತ ಶ್ರೀ ಶ್ರೀನಿವಾಸ ಹರಿ3
--------------
ಸರಸ್ವತಿ ಬಾಯಿ
ಹರಿಸೇವೆ ಕೈಂಕರ್ಯ ಪರಮ ನಿಷಾತೆ |ಪರಿಹರಿಸು ಭವತಾಪ ಜಾಂಬುವತಿ ಮಾತೇ |5 ಭೃತ್ಯ ಜಾಂಬುವಂತನ ತನುಜೆಶ್ರೀ ಮಹಿಳೆಯಂದದಲಿ ಕೃಷ್ಣ ಪ್ರಿಯಳಾದೇ 1 ಮಿಕ್ಕ ಮಹಿಳೆಯರಿಂದ ಲಕ್ಕುಮಿಯ ಆವೇಶಪೊಕ್ಕು ನಿನ್ನಲಿ ಅಧಿಕ ಸರ್ವಕಾಲದಲೀ |ಅಕ್ಕರದಿ ಇದಕೆ ಮಿಗೆ ಲಕ್ಕುಮಿಯು ಇರಲಾಗಚೊಕ್ಕ ಮಾತೆಯು ನೀನು ಶೇಷ ಸಮಳೆನಿಪೇ 2 ಆವೇಶ ನಿನ್ನಲ್ಲಿ ಇಲ್ಲದಿಹ ಸಮಯದಲಿದೇವಿಯರು ಮಿಕ್ಕೈದು ಮಂದಿ ಸಮ ನೀನು |ದೇವಿ ಶಿರಿ ಆವೇಶ ಅಲ್ಪವಿಹ ಸಮಯದಲಿದೇವ ಕಾಮಾದಿಗಳಿಗಧಿಕ ವಿಂಶತಿ ಗುಣದೀ 3 ನಿರ್ಮಲೈ ಕಾಂತಿತ್ವ ವಿಮಲ ಭಕ್ತ್ಯಾದಿಗುಣಅಮಮ ನಿನ್ನಲಿ ಇಹುದು ನೈಜರೂಪಾ |ವಿಮಲ ಸಚ್ಚಾರಿತ್ರೆ ಈ ಮಹಿಯ ಸಂಚಾರನಿರ್ಮಮದಿ ಗೈದಿರ್ಪೆ ಬಧಿರಾಂಧರಂತೇ 4 ದೇಹ ಮಮತೆಯಲಿಂದ ಮನಸೋತು ಕಷ್ಟಕ್ಕೆವಾಹನಾದಿಗಳೇರಿ ತೀರ್ಥಯಾತ್ರೆಗಳಾ |ಬಹುವಾಗಿ ಗೈದಾಗ್ಯು ಪುಣ್ಯ ಹೀನವು ಎಂದುಮಹಿಳೆ ನೀ ವರ್ಣಿಸಿಹೆ ಭಕುತರುಪಕಾರೀ 5 ಪಾದ ದರ್ಶನವೆಂದುಸಾರ್ವಕಾಲದಿ ನೀನು ಚಿಂತಿಸುತಲಿರಲೂ 6 ಕಂಡು ಶ್ರೀಹರಿಯನ್ನು ಅಪರೋಕ್ಷದಲಿ ನೀನುಬಂಡುಣಿಯು ಹರಿಪಾದ ಕಮಲಕ್ಕೆ ಆಗೀ |ಹಿಂಡು ದೈವರ ಗಂಡ ಪಾಂಡುರಂಗನೆ ಎಂದುಮಂಡಿಸಿದೆ ಪರತತ್ವ ತೊಂಡರುಪಕಾರೀ 7 ಕರದಲ್ಲಿ ಧನ್ವಂತ್ರಿ ಪಿಡಿದಮೃತ ಕಲಶದಲಿಹರಿನಯನ ಆನಂದ ಜಲಬಿಂದು ಉದರೇ |ತುರರೂಪಿಯಾದ ಶ್ರೀ ತುಳಸಿಯಲಿ ನೀನರಲುಹರಿ ನಿನ್ನ ಅಗಲದಿಹ ಸರ್ವ ಪೂಜೆಯಲೀ 8 ಶಾಂಭವಿಯುನುತೆ ದೇವಿ ಜಾಂಬುವತಿ ಶ್ರೀ ಹರಿಯಕಾಂಭಂಥ ಸುಜ್ಞಾನ ಭಕುತಿ ವೈರಾಗ್ಯ |ಹಂಬಲದಿ ನಿನ್ನಂಘ್ರಿ ನಮಿಪೆ ತೋರ್ವುದು ಹೃದಯಅಂಬರದಲಿಹ ಗುರು ಗೋವಿಂದ ವಿಠ್ಠಲನ 9
--------------
ಗುರುಗೋವಿಂದವಿಠಲರು
211ಶೃಂಗಾರವಾಗಿದೆ ಸಿರಿರಂಗನ ಮಂಚಅಂಗನೆಮಹಲಕುಮಿಯರಸ ಮಲಗುವ ಮಂಚಪಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ |ಮೃಡನ ತೋಳಲಿ ನೆಲಸಿಹ ಮಂಚ ||ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |ಕಡಲ ಶಯನ ಶ್ರೀ ರಂಗನ ಮಂಚ 1ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡಮಂಚ2ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |ನಾಲಗೆಯೆರಡುಳ್ಳ ವಿಷದ ಮಂಚ ||ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |ಕಾಳಗದಲಿ ಕಿರೀಟಿಯ ಮುಕುಟಕೊಂಡಮಂಚ3ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |ರಕ್ಕಸರೆದೆದಲ್ಲಣನ ಮಂಚ ||ಸೊಕ್ಕು ಪಿಡಿದ ಮಂಚ | ಘಕ್ಕನೆ ಪೋಗುವ ಮಂಚ |ಲಕ್ಕುಮಿ ರಮಣ ಶ್ರೀ ಹರಿಯ ಮಂಚ 4ಅಂಕುಡೊಂಕಿನ ಮಂಚ | ಅಕಲಂಕ ಮಹಿಮ ಮಂಚ |ಸಂಕರುಕ್ಷಣನೆಂಬ ಸುಖದ ಮಂಚ |ಶಂಕರನ ಕೊರಳಿಗೆ ಪದಕವಾಗಿಹ ಮಂಚ |ವೆಂಕಟಪುರಂದರವಿಠಲ ರಾಯನ ಮಂಚ5
--------------
ಪುರಂದರದಾಸರು
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ.ದಯಾಸಾಗರೆ ದಾರಿದ್ರ್ಯದುಃಖ ಭವ-ಭಯನಾಶಿನಿ ಮಣಿಮಯಕೃತಭೂಷಿಣಿ ಅ.ಪ.ಗಜವದನನ ಮಾತೆ ಸುಜನ-ವ್ರಜಸತ್ಫಲದಾತೆಕುಜನಭಂಜನಿ ನಿರಂಜನಿ ಶೈಲಾ-ತ್ಮಜೆ ಮಹೋಜೆ ನೀರಜದಳಲೋಚನಿ 1ಇಂದ್ರಾದ್ಯಮರನುತೆ ಪೂರ್ಣಾನಂದೆ ನಂದಜಾತೆಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ-ಗೇಂದ್ರವಾಹಿನಿ ಮದಾಂಧರಿಪು ಮಥನಿ 2ಅಂಗಜಶತರೂಪೆ ಸದಯಾ-ಪಾಂಗೆ ಸುಪ್ರತಾಪೆಗಂಗಾಧರವಾಮಾಂಗಶೋಭೆ ಸಾ-ರಂಗನೇತ್ರೆ ಶ್ರೀರಂಗಸಹೋದರಿ 3ದಾಸಜನರ ಪೋಷೆ ರವಿಸಂ-ಕಾಶೆ ತ್ರಿಜಗದೀಶೆವಾಸುದೇವನ ಸ್ಮರಣಾಸಕ್ತಿಯ ಕೊಡುಭಾಸುರಜ್ಞಾನಪ್ರಕಾಶವಿಲಾಸಿನಿ 4ಸೌಖ್ಯವು ಭಕ್ತರ್ಗೆ ಸಲಿಸಲುಸೌಖ್ಯವು ನೀ ಭರ್ಗೆಲಕ್ಕುಮಿನಾರಾಯಣನ ಭಗಿನಿ ನಿ-ರ್ದುಃಖಪ್ರದಕಟಿಲಾಖ್ಯಪುರೇಶ್ವರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತಂಬೂರಿ ಮಾಡಿಸಿ ತರಲಿಲ್ಲವಮ್ಮನಮ್ಮ ರಂಭೆ ದ್ರೌಪತಿ ಕೋಪ ‌ಘನವಾಯಿತಮ್ಮ ಪ.ಮೂಡಲಗಿರಿವಾಸ ನಾಡು ನಾಡಿನ ಜವಳಿಬೇಡಿದ ಪರಿಯು ತರಿಸಿದನಮ್ಮಬೇಡಿದಪರಿತರಿಸಿದನು ಧರ್ಮನನೋಡ ಬಂದವರಿಗೆ ಉಡುಗೊರೆಕೆಲದಿ1ಚಂದದ ಜವಳಿ ಕಂದರಿಗೊಸ್ತವುಇಂದಿರಾರಮಣ ತರಿಸಿದನಮ್ಮಇಂದಿರಾರಮಣ ತರಿಸಿದನಮ್ಮ ಧರ್ಮನಬಂದ ಜನಕೆಲ್ಲ ಉಡುಗೊರೆಕೆಲದಿ2ಲೆಕ್ಕವಿಲ್ಲದ ಜವಳಿ ಮಕ್ಕಳಿಗೊಸ್ತವುಲಕ್ಕುಮಿರಮಣ ತರಿಸಿದನಮ್ಮಲಕ್ಕುಮಿರಮಣ ತರಿಸಿದನಮ್ಮ ಧರ್ಮನಮಿಕ್ಕ ಜನಕೆಲ್ಲ ಉಡುಗೊರೆಕೆಲದಿ3ಏಸುರತ್ನದಹೇರುವಾಸುದೇವನು ತರಿಸಿರಾಶಿ ಸುರುವಿದ ಸಭೆಯೊಳುಕೆಲದಿರಾಶಿ ಸುರುವಿದ ಸಭೆಯೊಳು ಧರ್ಮನಆಸು ಜನಕೆಲ್ಲ ಉಡುಗೊರೆಕೆಲದಿ4ಫುಲ್ಲನಾಭನು ದ್ರವ್ಯ ಚಲ್ಲಿದ ಸಭೆಯೊಳುಎಲ್ಲ ನಾರಿಯರು ಬಳಕೊಳ್ಳಿರಮ್ಮಎಲ್ಲ ನಾರಿಯರು ಬಳಕೊಳ್ಳಿರಮ್ಮ ಎನುತಲೆಚಲ್ವ ರಾಮೇಶ ನಗುತಿಹನಮ್ಮ 5
--------------
ಗಲಗಲಿಅವ್ವನವರು