ಪ್ರಾಣನಾಥ ಪ್ರಾಣನಾಥ ತ್ರಿಭುವನಚೇಷ್ಟ ಪ್ರದಾತಾ ಪ
ಅಖಿಲನೇತಾ ಸುಗುಣಜಾತಾ ಶೂರ ಸೀತಾರಾಘವದೂತ ಅ.ಪ
ನೂರು ಯೋಜನ ಶರಧಿಯ ಹಾರಿ ಲಂಕಾಪುರವ
ಸೇರಿ ಹರುಷದಿ ಜನಕಕುಮಾರಿಗುಂಗುರವಿತ್ತ 1
ದುಷ್ಟ ದಶಕಂಧರನನು ಮುಷ್ಟಿತಾಡನದಿಂದ
ಚೇಷ್ಟರಹಿತನ ಮಾಡಿ ದಿಟ್ಟತನದಲಿ ಮೆರೆದ 2
ಗಂಧಮಾದನ ಗಿರಿಯನು ಒಂದು ಕರದಲಿ ಸುಖದಿ
ಪಾದ ದ್ವಂದ್ವಕೆರಗಿದ ಮುಖ್ಯ 3
ಕ್ರೂರನಿಶೇಚರಪತಿ ಪರಿವಾರವನು ಸದೆ ಬಡಿದು
ಮೂರು ಜಗಂಗಳ ಮೀರಿದ ಕೀರುತಿಯ ಪೊಂದಿದ 4
ಇನ್ನು ಎರಡವತಾರಗಳನ್ನು ಧರಿಸುತ ಜಗದಿ ಪ್ರ
ಸನ್ನ ಮಾಧವವ್ಯಾಸರನ್ನು ಸೇವೆಯ ಮಾಡಿದ 5