ಒಟ್ಟು 19 ಕಡೆಗಳಲ್ಲಿ , 12 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೊ ಸ್ವಾಮಿ ನೀ ಪಕ್ಷಿ ಸುವಾಹನ ಭಿಕ್ಷೆ ಸುನೀಡೊ ನೀ ಲಕ್ಷ ಸುಸಾಧನ ಅಕ್ಷಯಾನಂದ ನೀ ಲಕ್ಷುಮಿ ಜೀವನ ಪಕ್ಷ ನೀ ಪ್ರಾಣಕ ಈಕ್ಷಿಸಿದವನ 1 ಸೃಷ್ಟಿಗಧಿಕ ನೀ ವಿಷ್ಣು ಜನಾರ್ಧನ ಕಷ್ಟ ನೀ ಹಿಂಗಿಸೊ ದುಷ್ಟರ ಮರ್ದನ ಶಿಷ್ಟರ ಪಾಲಕ ಶ್ರೇಷ್ಠ ನಾರಾಯಣ ದೃಷ್ಟಿಸಿ ನೋಡೊ ನೀ ಕೃಷ್ಣ ಕೃಪಾಘನ2 ಈಶನೆಂದರಿಯದೆ ದೋಷದ ರಾಶಿ ನಾ ವಾಸನೆ ಪೂರಿಸೊ ದಾಸರ ದಾಸ ನಾ ಏಸು ತಾ ಜನ್ಮಕೆ ಬಂದು ಸೂಸಿದೆನೊ ಹೇಸಿತು ಜೀವನ ಸ್ಮರಿಸಬೇಕೆಂದು ನಾ 3 ನಿಮ್ಮನೆ ನೋಡಬೇಕೆಂದು ಬಂದೆ ನಾ ಘಮ್ಮನೆ ಪೂರಿಸೊ ಭಾವನೆ ಕಂದನ ತಮ್ಮನೆ ಬೇಡಿಕೊಂಬುದು ತಾ ವಂದನ ಅಮ್ಮ ನಮ್ಮಪ್ಪನೆ ಬಂಧು ನೀ ಎಂದೆ ನಾ 4 ಕಾಣದ ಪಾಮರ ಹೀನ ಸೂಕರ ಏನು ತಾ ಬಲ್ಲದು ಲೂನದ ಸೂಕರ ನೀನೆ ದಯಾನಿಧೆ ಜ್ಞಾನದ ಸಾಗರ ನ್ಯೂನ ನೋಡದೆ ತಾರಿಸೊ ಶ್ರೀಧರ 5 ಪಾರ ನೀ ಗೆಲಿಸೊ ದ್ವಾರಕಿನಾಥನೆ ಸಾರಿ ನೀ ಬೋಧವ ತಾರಿಸೊ ದಾತನೆ ತೋರಿ ನೀ ಪಾದವ ಬೀರು ಸ್ವಹಿತನೆ ಸಿರಿ ಲೋಲನೆ ನೀಕರುಣಿಸಿ ಮಾತನೆ 6 ಪಾಲಿಸೊ ಪ್ರಾಣವ ಬಾಲಮುಕುಂದನೆ ಲಾಲನೆ ನೋಡು ಗೋಪಾಲ ಗೋವಿಂದನೆ ತ್ಯಕ್ತ ನಾ ತಾಳು ನೀ ಸಚ್ಚಿದಾನಂದನೆ ಕೀಲನೆ ಹೇಳು ನೀ ಭಕ್ತಿಯ ವಂದನೆ 7 ದೇವರ ದೇವನೆ ಕಾವ ಕರುಣನೆ ಜೀವದ ಜೀವ ನೀ ಸ್ವಾಮಿ ಸರ್ವೇಶನೆ ಭಾವದ ಭಾವ ನೀ ಸಾವಿರ ನಾಮನೆ ಸೇವೆಗೆ ಯೋಗ್ಯನ ಮಾಡು ಸರ್ವೋತ್ಮನೆ 8 ಹಿಂಡ ದೈವಕೆ ಪ್ರಚಂಡ ಪರೇಶನೆ ಗಂಡು ಹೆಣ್ಣಿಗೆ ತಾ ಒಬ್ಬ ಸರ್ವೇಶನೆ ಮಂಡಿ ಮರೆಯಲಿಹನೆ ಮಹೇಶನೆ ಕಂಡುಕಾಂಬ ಸುಖದೋರು ದೇವನೆ 9 ವೇದಕ ನಿಲ್ಕದಾಭೇದ್ಯ ಪುರುಷನೆ ಸಾರ ಸುರಸನೆ ಅದಿಗಿಂದತ್ತಲ್ಯಾನಾದಿ ನಿರ್ವಿಶೇಷನೆ ಹಾದಿದೋರಿಕೊಡೊ ಭಕ್ತಿಗೊಂದೀಶನೆ 10 ಮಹಿಪತಿಗೆ ನೀ ಸ್ವಾಮಿ ಶ್ರೀನಾಥನೆ ಬಾಹ್ಯ ಅಂತ್ರಕೆ ನೀನೆವೆ ಸುದಾತನೆ ಸೋಹ್ಯದೋರಿಕೊಡೊ ಸಾಹ್ಯವುಳ್ಳಾತನೆ ತ್ರಾಹಿಯಂದವನ ಮಾಡು ಸನಾಥನೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಪ್ರಾಣದೇವರ ಸ್ತೋತ್ರಗಳು ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ ಜ್ಞಾನ ಪೂರ್ವಕದಿ ಶ್ರೀನಿವಾಸನಗುಣ ಗಾನ ಮಾಡುವಮತಿ ಸಾನುರಾಗದಿ ಕೊಡು ಪ ಶರಧಿಯ ಲಂಘಿಸಿಧರಿಜೆ ದೇವಿಪದ - ಕ್ಕೆರಗಿ ಮುದ್ರಿಕೆ ಕೊಟ್ಟಹರುಷದಿ ಹನುಮನೆ 1 ಹೇಮನಗರ ದಹಿಸಿ ಸತ್ವರ ರಾಮ ಪದಕೆ ನಮಿಸಿ ಪ್ರೇಮದಿ ಜಾನಕಿ ಕ್ಷೇಮವ ತಿಳುಹಿಸಿ ತಾಮರಸಜಪದ ನೇಮದಿ ಐದಿದ 2 ಕುಂತಿಗರ್ಭದಿ ಜನಿಸಿ ರುಕ್ಮಿಣಿಕಾಂತನಣುಗನೆನಿಸಿ ಅಂತಕಾತ್ಮಜನ ಸಂತತ ಸಲಹಿದೆ ಹಂತಧಾರ್ತೃರಾಷ್ಟ್ರಾಂತಕ ಭೀಮನೆ 3 ದೇಶಿಕಪತಿಯನಿಸಿ ಬದರಿನಿವಾಸನ ಪದ ಭಜಿಸೆ ವಾಸುದೇವಸರ್ವೇಶನೆಂದರುಹಿದೆ ದೂಷಿತ ಮತ ತಮ ನೇಸರಮಧ್ವನೆ 4 ಕಾಮಕ್ರೋಧದಿ ಬೆಂದೆ ನಾ ಬಲು ತಾಮಸದಲಿ ನೊಂದೆ ಶ್ರೀ ಮನೋಹರ ವರದೇಶ ವಿಠಲನ ನಾಮ ಬರೆದೆ ಕುಪ್ಪೀ ಭೀಮನೆ ಪಾಲಿಸು 5
--------------
ವರದೇಶವಿಠಲ
ಸಾಧನ ದೇಹವಿದು62-3ಸಾzನ ದೇಹವಿದುಶ್ರೀ ಪದುಮೇಶ ದಯದಿ ಕೊಟ್ಟ ದೇಹವಿದು ಪವಿಹಿತಾವಿಹಿತವು ಈರ್ವಿಧ ಕರ್ಮದಿವಿಹಿತವ ಪಿಡಿದು ಅಕಾಮ್ಯದಿ ಸಮ್ಯಕ್ ಆಚರಿಸಿಅಹಿಪಶಯ್ಯನ ಸನ್ಮಹಿಮೆಗಳರಿತು ವರಾಹನ ದಯದಲಿ ಪರಸುಖ ಪೊಂದಲು 1ಬೇಸರ ತೊರೆದು ಸುಶಾಸ್ತ್ರವನೋದಿಸಾಸಿರ ನಾಮನಭಾಸುರಗುಣಕ್ರಿಯರೂಪಗಳಈಶನ ದಯದಿ ಸದ್ಯೋಚಿಸಿ ಹಿಗ್ಗುತವಾಸುದೇವನೆ ಸರ್ವೇಶನೆಂದರಿಯಲು 2ವಿಷಯೀಕ್ಷಣಗಳು ಕ್ಷಣಸುಖವೀವುವುಶೇಷಗಿರೀಶನೆ ಅಕ್ಷಯಸುಖದನು ಸುಖಮಯನುದೋಷದೂರ ಶ್ರೀ ಲಕ್ಷ್ಮಿಯ ರಮಣನೆಪೋಷಕ ಮನೋಗತ ತಿಮಿರಕೆ ಪೂಷನು 3ತಾರಕಗುರುಉದಾರ ಸುಮನದಲಿದಾರಿಯ ತೋರಿಸಿ ಉದ್ಧರಿಸಲು ಬಹು ದಯದಿವಿಧಾತೃಸಮೀರಸುಮೇಧರು ಚಿಂತಿಪವಾರಿಧಿಶಯ್ಯ ಪರೇಶನು ತೋರುವ 4ಸಪ್ತ ಸುಸ್ಥಾನದಿ ಮರುತಾದಿಗಳೊಡೆಗುಪ್ತನಾಗಿಪ್ಪ ನಿರ್ಲಿಪ್ತ ನಿರಾಮಯ ಶ್ರೀಕಪನುಸುಪ್ತಿಜಾಗೃತ ಸ್ವಪ್ನಾದಿ ಕಾಲದಿ ಕಾಯುವಆಪ್ತ ಸುಹೃದನಿವಗಾರು ಈಡಿಲ್ಲವು 5ಪಂಚ ಸುನಾಡಿಯೋಳ್ ಪಂಚ ಸುವರ್ಣದಿಪಂಚ ಸುರೂಪ ಸ್ವತಂತ್ರನು ಇರುತಿಹ ಶ್ರೀಹರಿಯುವಿರಿಂಚಸಮೀರಸುಮೇಧರು ಬಹು ವಿಧಚಿಂತಿಸಿ ನಮಿಪ ಪ್ರಪಂಚದ ಒಡೆಯನು 6ಪದುಮದ ದಳಗಳು ಐದು ಮೂರುಂಟುಅದರ ಮೂಲದಿ ಇಹ ಸದಮಲ ಲಕ್ಷ್ಮೀಶಬಾಧಿಪ ಕರ್ಮವ ಸುಡುವ ಸಂಕರುಷಣಸದಮಲ ಪೊರೆಯುವ ಒಳಹೊರಗೆ 7ಶ್ರವಣ ಮನನ ಸುಧ್ಯಾನದ ಬಲವುಶ್ರೀಶನೊಳ್ ಭಕುತಿಯು ನಿಶ್ಚಯ ಸಾಧನ ಗುರುಮಯದಿಶ್ರೀಶನ ಮಹಿಮೆಗಳರಿತು ಸದೃಷದಿಸುರತಟಿನಿಯಪೋಲು ಸರಿಪ ಪ್ರೇಮವೆ ಭಕ್ತಿ 8ಮುಕುತಿ ಕೊಡುವ ಜ್ಞಾನ ಭಕುತಿಲಿ ಬರುವುದುಸುಖಮಯ ಶ್ರೀಶನ ದಯವು ಇಲ್ಲದೆ ಇದು ಸಿಕ್ಕದಯ್ಯವಿಕಸಿತಾಬ್ಜಜತಾತಪ್ರಸನ್ನ ಶ್ರೀನಿವಾಸಶ್ರೀಕರ ವ್ಯಾಸ ರಾಮ ಕೃಷ್ಣ ನೃಹರಿ ಕಾಯ್ವ 9
--------------
ಪ್ರಸನ್ನ ಶ್ರೀನಿವಾಸದಾಸರು