ಒಟ್ಟು 138 ಕಡೆಗಳಲ್ಲಿ , 40 ದಾಸರು , 107 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓ ದೇವ ನೀನೆಂಥ ಕರುಣಾಳೊ ಮಾದೇವ ನೀನೆಂಥ ಕರುಣಾಳೊ ಪ ಕಾಲನ ಕಾಲಲೊದ್ದು ಬಾಲನಿಗಾಯುಷ್ಯ ಪಾಲಿಸಿದೆ ನೀನೆಂಥ ಕರುಣಾಳೊ 1 ಸುರೇಂದ್ರ ಪ್ರಮುಖರ ಪೊರೆಯಲು ಗರಳವ ಕೊರಳೊಳು ಧರಿಸಿದೆ ಕರುಣಾಳು 2 ಘೋರ ಭವಾಂಬುಧಿ ತಾರಣೋಪಾಯವ ಬೀರಿದೆ ಜಗಕೆಲ್ಲ ಕರುಣಾಳು 3 ಕ್ಷೀರವ ಬೇಡಲು ಕ್ಷೀರೋದಧಿಯನಿತ್ತೆ ಪೋರನಿಗೆ ಇನ್ನೆಂಥ ಕರುಣಾಳು 4 ಶ್ರೀಕಾಂತ ಹಿತ ಸಖ ಶ್ರೀಕಂಠ ನಿನ್ನಂಥ ನಾ ಕಾಣೆ ಧರೆಯೊಳು ಕರುಣಿಗಳ 5
--------------
ಲಕ್ಷ್ಮೀನಾರಯಣರಾಯರು
ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ ಕಂಡೆ ಕಂಡೆನು ಕೃಷ್ಣರಾಯನ ಪುಂಡರೀಕ ದಳಾಯತಾಕ್ಷನ ಪಾಂಡವಪ್ರಿಯ ಪಾರ್ಥಸಖನ ಉ ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ. ಕನಕ ನವಮಣಿ ಖಚಿತ | ವಾಗಿಹ ಸಿಂಹಾ ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ ಘನನೀಲನಿಭರಂಜಿತ | ನಿರ್ಮಲಗಾತ್ರ ಕುಂಡಲ ಮಣಿ ಗಣದ ಹಾರಾದಿ ಬಹು ಭೂ ಷಣಗಳನುಪಮ ಕಾಂತಿಯಿಂದಲಿ ಮಿನುಗುವತಿ ಲಾವಣ್ಯ ಮೂರ್ತಿಯ 1 ಕೋಟಿ ಮನ್ಮಥರೂಪನ | ಶ್ರೀಕೃಷ್ಣನ ಹಾಟಕಾಂಬರಧಾರನ | ಕರುಣಾಮಯ ಕಂಬು ಕಂಠನ ಆಟಮಾತ್ರದಿ ಪ್ರಬಲ ದೈತ್ಯ ಮ ಹಾಟವಿಯ ನಿರ್ಧೂಮಗೈದನ ಖೇಟವಾಹನನೆನಿಪ ತ್ರಿಜಗದಿ ಸಾಟಿಯಿಲ್ಲದ ದೇವದೇವನ 2 ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ ಮೊರೆ ಕೇಳಿ ಸಲಹಿದನ | ಭಜಿಪರ ಅವ ಸರಕೊದಗುವ ದೇವನ | ಶ್ರೀ ಕೃಷ್ಣನ ತರಳತನದಲಿ ಗೋಕುಲದಿ ತಾ ಪರಿಪರಿಯ ಲೀಲೆಗಳ ತೋರಿದ ಪರಮ ಪುರುಷನ ಕರಿಗಿರೀಶನ ಸರಿಯಧಕರಿಲ್ಲದ ಸುರೇಶನ 3
--------------
ವರಾವಾಣಿರಾಮರಾಯದಾಸರು
ಕರುಣಾಕರ ಧರಣೀಧರೇಂದ್ರ ಪ ದಶರಥಸುಪುತ್ರ ಶಶಧರ ಸುವಕ್ತ್ರ ಪಶುಪತಿಮಿತ್ರನೆ ಪೊರೆಯೊ ಎನ್ನನು 1 ವನರುಹದಳಾಕ್ಷ ದನುಭುಜವಿಪಕ್ಷ ಮುನಿಜನ ಸುರಕ್ಷ ರಕ್ಷಿಸೆನ್ನನು ದೇವನೆ 2 ಸುರಜನ ಸುಪೋಷ ಖರಹರ ಸುರೇಶ ನಿರತವು ನಾ ನಿನ್ನ ನಮಿಸುವೆನೈ ಹರೇ 3 ದಾನವಖಂಡನ ಧೇನುಪುರೀಶನೆ ಮಾನವ ಪುಂಗವ ದೇವನೆ ಪೊರೆಯೈ 4
--------------
ಬೇಟೆರಾಯ ದೀಕ್ಷಿತರು
ಕರ್ಪೂರದಾರತಿಯ ತಂದೆತ್ತಿರೆ ಚೆಲ್ವಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವಭಾವಗೆ ದೇವರ ದೇವಗೆನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬ್ಜನಾಗಿಹೆÉಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನುನಿರ್ಜಿಸಲು ಬಂದ ವಾಮನಗೆ ನಿಸ್ಸೀಮನಿಗೆ ಪೂರ್ಣ ಕಾಮನಿಗೆ 1 ನಳಿನನಾಭನೆಂದು ತಿಳಿದು ಬೇಗನೆ ಬಲಿಕೆಳದಿಯ ಕರೆದುದಕವತರಿಸಿಚಲುವ ಪಾದವ ತೊಳೆದಿಳೆಯ ದಾನವ ಮಾಡೆನಳಿನಜಾಂಡಕ್ಕಾಗಿ ಬೆಳೆದವಗೆ ಬಹು ತಳೆದವಗೆ-ಭೂಮಿಯಳೆದವಗೆ 2 ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿನ ಕೃಷ್ಣಉಳಿದ ಭೂಮಿಯ ತೋರೆನ್ನುತ ನುಡಿಯೆಸತಿ ನಾಚಿಕೆಯಿಂದ ತನ್ನಳೆದುಕೋ ಎನ್ನತಲೆಯ ಮೆಟ್ಟಿದ ಬಹು ವಿಕ್ರಮಗೆ ಪರಾಕ್ರಮಗೆ ತ್ರಿವಿಕ್ರಮಗೆ3
--------------
ವ್ಯಾಸರಾಯರು
ಕರ್ಮ ದೊಡ್ಡದೊ ಸ್ವಾಮಿ ನಿನ್ನ ಮಹಿಮೆ ದೊಡ್ಡದೊ ಮುನ್ನಿನ ದೃಷ್ಟಾಂತದಿಂದ ನಿರ್ಣಯಿಸುವ ನಿತ್ಯಾನಂದ ಪ. ಅಡವಿಯಲ್ಲಿ ನಿಂತು ಮೃಗವ ಬಡಿದು ತಿಂಬ ಬ್ಯಾಡ ಕಡೆಗೆ ಗಿಡವ ಕೂಡಿಸೆಂದ ನುಡಿಯ ದೃಢಕೆ ಮೆಚ್ಚಿ ಕಡೆಹಾಯಿಸಿದೆ 1 ಉಗ್ರಭಾವದಿಂದ ತಮ್ಮ ಅಗ್ರಜರನ್ನು ಕೊಲಿಸಿದಂಥ ಸುಗ್ರೀವ ವೈಶ್ರವಣರ ಭಕ್ತಾಗ್ರಣ್ಯರೆಂದು ಕಾಯ್ದೆ 2 ಕರ್ಮ ಬಾಧೆ ಕಳದು ಕರುಣದಿಂದ ಮಾಧವ ನೀ ಸಲಹೊ ಶೇಷ ಭೂಧರೇಂದ್ರ ಶಿಖರವಾಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೋ ನೀ ಅನಸೂಯಾ ಪುತ್ರನೇ ಜೀಯಾ ದತ್ತಾತ್ರೇಯ ದೇವನೇ ಪ ಪತ್ರೇಂದ್ರ ಗಮನಾ ಪರಮಾನಂದಾ ಶತ ಪತ್ರದಳ ನಯನಾ ಕೇಶವಾ ಮಿತ್ರ ಶತಕೋಟಿ ಪ್ರಕಾಶ ಸುರೇಶನೇ ಅತ್ರಿ ಗೋತ್ರ ಸಮುದ್ಭವಾ 1 ಸರ್ವಾಧಾರವ್ಯಯ ತ್ರಯ ಮೂರು ಸರ್ವ ಲೋಕ ವ್ಯಾಪ್ತನು ಚಾರು ತತ್ವರಿತ ಸರ್ವಾತೀತ ಮುಕುಂದನೇ 2 ಯೋಗಿ ಜನರ ಮಾನಸ ಹಂಸಾ ಸಂತ ಗುಣ ಸಂಪನ್ನನು ಅನಂತ ರೂಪ ಮಹಿಪತಿ ನಂದನ ಪ್ರಭು ಅನಂತ ಮಹಿಮ ಶ್ರೀ ಕೃಷ್ಣನೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೃತ್ಯವನು ತಿಳಿಸಯ್ಯ ಕೃತ್ತಿವಾಸನ ಪ್ರೀಯಾ ಪ ಭೃತ್ಯವತ್ಸಲ ಭಾಗ್ಯ ಸಂಪನ್ನ ಮೋಹನ್ನಾ ಅ.ಪ ಹಾಸರಲಿ ನಿಂತು ಕ್ಲೇಶಪಡಿಸುವ ವಾಕ್ಯ ಅಕ್ಲೇಶಪಡಿಸುವಾ 1 ಭಾವದಿಂದೊಮ್ಮೆ ಭಯನಿತ್ತಭಯ ಪಾಲಿಪ ಭಕ್ತ ಬಂಧೊ 2 ಕಾಲಕಾಲಕೆ ಕಾಲೋಚಿತದ ಮರ್ಮ ಸೂಚಿಸೆನಗೆ 3 ವಚನ ಸತ್ಯವ ಮಾಡು ವಾಚನಸ್ವತಿಯ ಸಖಚಾಚುವ್ಯನೋಕರ 4 ವಾಚಾಮಗೋಚರ ತಂದೆವರದಗೋಪಾಲವಿಠಲನ ಚರಣ ಭಜಕ ಸುಖೇಚರೇಂದ್ರಾಧಿಪ 5
--------------
ತಂದೆವರದಗೋಪಾಲವಿಠಲರು
ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ ಕೋಲುಶ್ರೀ ಗುರು ನಿನ್ನ ಬಲಗೊಂಬೆ ಕೋಲ ಪ ಪಾದ ಏಕಚಿತ್ತಾದಲ್ಲಿ ಬಲಗೊಂಬೆ ಕೋಲಅ.ಪ. ಪಾದ ಭೃಂಗಾನೆಂದೆಸುತಾ ಪಂಚರೂಪಾದಿ ಮೆರೆವೋನು ಕೋಲಪಂಚರೂಪಾದಿ ಮೆರೆವೋನು ಭಾವೀಪಂಚಪ್ರಾಣಾನಾ ಬಲಗೊಂಬೆ ಕೋಲ 1 ಮಂದಜಾಸನ ಪದ ಪೊಂದುವನಾಕಂಡವಾದೀರಾಜಾಖ್ಯನ ಬಲಗೊಂಬೆ ಕೋಲವಾದೀರಾಜಾಖ್ಯನ ಭೂತಾ ಪತಿಯೆಂದು ಆರ್ಯನ್ನ ಮೊದಲೇ ಬಲಗೊಂಬೆ ಕೋಲ 2 ಕಂದುಕಂಠನ ಕೊರಳಿಗ್ಹಾರ ಪದಕವ ಹಾಕಿ ಪರಿಪರಿಯಿಂದ ಮೆರೆಸೋಣ ಕೋಲ ಪರಿಪರಿಯಿಂದ ಹಾರ ಪದಕವ ಹಾಕಿ ಧೀರನ್ನ ಮೊದಲೇ ಬಲಗೊಂಬೆ ಕೋಲ 3 ಕೆಂಡಗಂಣನ ಕಂಡು ರುಂಡ ಹಾರವ ಹಾಕಿ ಪರಿಪರಿಯಿಂದಾ ಭಜಿಸೋಣ ಕೋಲಪರಿಪರಿಯಿಂದಾ ರುಂಡಹಾರವ ಹಾಕಿ ಮಂಡೇ ನದೀ ಧರನ ಬಲಗೊಂಬೆ ಕೋಲ 4 ಅಮರೇಂದ್ರ ಲೋಕದಿ ಶಿವರಾಜ ಧೊರಿಗೆ ಪರಿಪರಿಯಿಂದ ಸೇವಿಪರು ಕೋಲಪರಿಪರಿಯಿಂದ ಸೇವೆಯಾಗೊಂಬಂಥ ವಾದಿರಾಜರ ದಾಸ ವಾದಿರಾಜಾಖ್ಯನ ಬಲಗೊಂಬೆ ಕೋಲ 5 ಚಾರು ಚರಣವ ಬಲಗೊಂಬೆಕೋಲ 6 ಮೂರು ಮಂದಿ ಮಧ್ಯೆ ಮಾತಾಡುತಿಪ್ಪದಿಟ್ಟತನದಿ ತಂದೆವರದಗೋಪಾಲವಿಠ್ಠಲನದಿಟ್ಟಾತನದಿ ಬಲಗೊಂಬೆ ಕೋಲ 7
--------------
ತಂದೆವರದಗೋಪಾಲವಿಠಲರು
ಗಣೇಶಸ್ತುತಿ ಭೂರಿ ಸುಂದರಾಂಗನೆ ಚಾರುಹಾಸ ಪಾಲಿಸೆನ್ನ ನೀರಜಭವ ಮಾಧವನುತ ಪ ಅಜಮುಖಾಮರೇಂದ್ರರು ಭಜಿಸಿ ಸಿದ್ಧಿಗೊಂಬರು ಕಮಲ ವಿಧೃತ ತ್ರಿಜಗವಿನುತ 1 ತ್ರಿಪುರ ದಹನಕಾಲದಿ ರಿಪುದವಾಗ್ನಿ ನಿಮ್ಮನು ಕರುಣಿದೆಯೊ ವಿಭು 2 ಸಾಮಜಾಸೈ ಪಾಲಿಸೆನ್ನ ಕಾಮಿತಗಳ ಕರುಣಿಸುತಲಿ3
--------------
ಬೇಟೆರಾಯ ದೀಕ್ಷಿತರು
ಗಿರಿರಾಜತನೂಜಾತೆವೇದ ವಿಖ್ಯಾತೆಪರಮಂಗಳದಾತೆ ಪದ್ಮಜಮುಖಿ ಸುರಗಣ ಪರಿಪೂಜಿತೆಶಂಕರಪ್ರೀತೆಧುರದಿ ಮಧುಕೈಟಭರ ವಧಿಸಿ ವಿ-ಸ್ತರದ ಜಲದೊಳು ಸ್ಥಿರಮೆನಲು ಭಾ-ಸುರ ಧರಿತ್ರಿಯ ನಿಲಿಸಿ ಸರ್ವಾಮರರಪೊರೆದಮರೇಂದ್ರಸನ್ನುತೆಲೋಕೈಕಮಾತೆ 1 ನಾರದಗಾನಲೋಲೆಶ್ರೀಚಕ್ರಸಂಚಾರಿಣಿ ಶುಭಲೀಲೆದಿವ್ಯಮೌಕ್ತಿಕಹಾರೆ ಕುಂಕುಮನಿಟಿಲೆಮುಕುರಕಪೋಲೆಧೀರಸುರಪತಿಮುಖ್ಯಸುರಪರಿವಾರ ಜಯವೆಂದಾರುತಿರೆ ಜುಝೂರ (?) ಮಹಿಷಾಸುರನ ಮರ್ಧಿನಿಮೂರು ಲೋಕವ ಪೊರೆವ ಮಂಗಲೆಕಸ್ತೂರಿಫಾಲೆ 2 ಎಸಳುಗಂಗಳ ನೀರೆಪರಾತ್ಪರೆಮಿಸುಪ ಕಂಕಣಹಾರೆಬಂದುಗೆಯ ಹೂವಿನಂತೆಸೆವಸುಶೋಣಾಧರೆಬಿಸಜಬಾಣನ ಪೊಸಮಸೆಯ ಕೂರಸಿಯೆನಲು ಮಿಸುಮಿಸುಪ ಕಂಗಡೆಎಸವ ಪೊಸವೆಳಗಿಂದ ದೆಸೆಗಳವಿಸರವನು ಪಸರಿಸುವ ಶ್ರೀಕರೇಮೋಹನಾಕಾರೇ3 ಸುಲಲಿತ ಮಧುರವಾಣಿಮೋಹನಕರಜಲರುಹ ಸದೃಶಪಾಣಿಮಂಗಲಸೂತ್ರೋ-ಜ್ವಲೆ ಹರಿ ನೀಲವೇಣಿಸಿಂಹವಾಹಿನಿನಳನಳಿಪ ನಳಿತೋಳ ಥಳ ಥಳಥಳಿಸುವಳಿಕುಂತಳದದರಸಮಗಳದತಿಲಸುಮನಾಸಿಕದಅರಗಿಳಿನುಡಿಯರುದ್ರಾಣಿ ಗುಣಮಣಿಪರಮಕಲ್ಯಾಣಿ4 ಸರಸಿಜದಳನಯನೆಸಾಮಜಯಾನೆ ಸರಸಮಂಗಲಸದನೆಶಂಕರಿಪೂರ್ಣೆಶರದಿಂದುನಿಭವದನೆಕೋಕಿಲಗಾನೆಪರಮಪಾವನತರ ಸು-ವರದಾನದಿಯ ತೀರದಿ ಮೆರವ ಕೆಳದಿಯಪುರದ ರಾಮೇಶ್ವರನ ವಲ್ಲಭೆಯೆನಿಸಿ ಭ-ಕ್ತರ ಪೊರೆವ ಪಾರ್ವತಿಕಲಹಂಸಗಮನೆ ಪರಮರುದ್ರಾಣಿ5
--------------
ಕೆಳದಿ ವೆಂಕಣ್ಣ ಕವಿ
ಗುರುಸುಶೀಲೇಂದ್ರ | ಚರಣವಾರಿಜ ಯುಗ್ಮ ಸ್ಮರಿಸುವ ನರರು ಶ್ರೀಹರಿದಾಸರು ಪ ಹರಿವರ ಸುಮಚಾಬ್ಧಿ | ಹರಿಣಾಂಕರೆನಿಸಿದ ವರಸುವೃತೀಂದ್ರರ ತೀರ್ಥರ ಕರಕಮಲಜ ಅ.ಪ ಮಾಸ ತ್ರಯದಿ ಸಡಗರದಲಿ ಮಹ ಸಭೆ ನಿರ್ಮಿಸಿ ಪೊಡವಿಯೊಳಿದ್ದ ಭೂಸರರಾಜ್ಞ ಪತ್ರ ಬರಮಾಡಿ ವಿದ್ವಾಂಸರ ಒಡಗೂಡಿ | ಮಧ್ವಾಗಮನವನು ನೋಡಿ ಬೆಲೆಯುಳ್ಳವೆಗ್ಗಳ ಒಡವೆ ಉಡುಪಗಳನು ಕರುಣಿಸಿ ಮೃಷ್ಟಾನ್ನ ದ್ವಿಜರಿಗೆ ಕಡು ಸುಪ್ರೇಮದಿ ಸಲಿಸಿ | ಮುದ ಬಡಿಸಿ ಜಡಕುಮಾಯ್ಗಳ | ಗಡಣ ಜಡಧಿಗೆ ವಡೆಯ ತಾನೆನಿಸಿ ಕ್ರೋಢ ಜಾಸ್ಥಿತ | ಒಡೆಯ ಶ್ರೀಗುರು ರಾಘವೇಂದ್ರರ ಅಡಿಗಳಾಬ್ಜಕಾ ರಡಿಯಂತೊಪ್ಪುತ | ಬಿಡದೆ ಸಂತತ ಧೃಢದಿ ಸೇವಿಸಿ ಜಡಜ ಜಾಂಡದಿ ಮೆರೆದ ಅಸ್ಮದ್ 1 ತರಣಿ ಕುಲೇಂದ್ರನ ಕರುಣವೆಷ್ಟಿವರೊಳು ಅರುಹಲಾರೆ ವರಕಾಪ್ಯಾಸನ ಪುರಕೆ ಎರಡಾರು ಯತಿಗಳ ವತಿಯಿಂದ ತಮ್ಮಯ ಶಿಷ್ಯ ತತಿಯಿಂದ ಬಹುವಿಧ ಬಿರುದಾವಳಿಯಿಂದ ತೆರಳಿ ಶಶಿರವಿವರ ಸುವಾದ್ಯಧ್ವಾನ ಮೊಳಗಿಸುತ ‌ಘನ ಭಕ್ತಿ ಪರವಶರಾಗಿ ಸುರಚಿರ ಕನಕಮಣಿ ಧನ ತನುಮನ ತ್ವರಿತ ತೃಣ ಬಗೆಯ ದೇವಕಿ ತರಳ ರುಕ್ಮಿಣಿ ವರ ಮುರಾಂತಕÀ ಚರಣಗರ್ಪಿಸುತ | ಆನಂದಪಡುತ ಸರ್ವಮುನಿ ಜನಗಳಿಗೆ ಬಲು ಉಪಚರಿಸಿ | ಮನ್ನಣೆ ಧರಿಸಿ ಹರುಷದಿ ವರ ಸುಧೀಂದ್ರರ ಕರಜರನು ನೆರೆಸ್ಥಾಪಿಸಿ ಆಶ್ಚÀರ್ಯ ಚರಿತ 2 ಪತಿ ಶೃತಿ ಶಾಸ್ತ್ರಾರ್ಥ ಚತುರ ತನದಿ ಪಡೆದು ವಿತತ ಮಹಿಮನಾದ ಪತಿತ ಪಾವನ ಶಾಮಸುಂದರನ ಸ್ತುತಿಸುತಲಯ ಚಿಂತನೆ ಗೈಯುತ ಶ್ರೀಯುತ ಸಂಸ್ಥಾನಮತಿ ವಿಶಾರದರಾದವರ ಸುವೃತೀಂದ್ರ ತೀರ್ಥರಿಗೆ ಹಿತದಿಂದ ಒಪ್ಪಿಸಿ | ಯತಿ ಧೀರೇಂದ್ರರ ಚಾರುಸ್ಥಳದೊಳಗೆ ತನುವಿತ್ತು | ಹರಿಪುರಪಥವ ಪಿಡಿದೈದಿದರು ಚನ್ನಾಗಿ | ಸೇವಿಪ ಜನರಿಗೆ ಅತಿದಯದಿ ಮನೋರಥವ ನೀಡುತ ಸತತ ಮಾಣದೆ ಪರಮ ಭಕುತಿಲಿ ಪೃಥ್ವಿ ಸುರಕರ ಶತಪತ್ರಗಳಿಂದ ನುತಿಸಿಕೊಳುತಲರ್ಚನೆಗೊಂಬ 3
--------------
ಶಾಮಸುಂದರ ವಿಠಲ
ಚಿಂತಯಾಮಿ ರಾಮಮಮಿತಮಹಿಮಂ ಶಾಂತದಾಂತ ಮಾಕಾಂತ ಧೀಮಂತ ಪ ಅಂತರಾತ್ಮಮಮಲ ಸುಗುಣ ಭರಿತಂ ಸಂತ ಹನೂಮಂತನಮಿತ ಚರಿತಂಅ.ಪ ಮೌನಿಯಾಗ ಪಾಲಮತುಳ ಶೂರಂ 1 ಮಾನಿನೀಮಣಿ ಶಾಪಭಂಗ ಚತುರಂ 2 ಜಾನಕೀ ಹೃದಯಾಪಹಾರ ಧೀರಂ 3 ಸಾನುಜ ಭರತೇಷ್ಟದಾತಮುದಾರಂ 4 ದಾನವ ಖರದೂಷಣ ಸಂಹಾರಂ 5 ಆನತ ಖಚರೇಂದ್ರ ಮೋಕ್ಷದಾತಾರಂ6 ಕಾನನ ಸತ್ಪಾವನಕರ ಸಂಚಾರಂ 7 ವಾನರಪತಿ ಸೇವಿತ ಪರಿವಾರಂ 8 ದಾನವ ರಾವಣ ಮರ್ದನ ಶೂರಂ9 ದೀನಪಾಲ ಮಾಂಗಿರಿಪತಿ ಗಂಭೀರಂ 10
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಜಯ ಕರುಣಾಕರ ಕೃಪಾಲ ಜಯ ಜಯ ಗುರುಮುನಿಜನ ಪ್ರತಿಪಾಲ ಧ್ರುವ ರಾಜತೇಜೋನಿಧಿ ರಾಜ ರಾಜೇಂದ್ರ ಮಣಿ ಸುರೇಂದ್ರ ಮಣಿ ಸಾಂದ್ರ ಅಜಸುರ ಸೇವಿತ ಸುಜ್ಞಾನ ಸುಮೋದ 1 ಅಗಣಿತ ಗುಣ ಅಗಾಧ ಅಪಾರ ನಿಗಮಗೋಚರ ನಿರುಪಮ ನಿರ್ಧಾರ ಸಗುಣ ನಿರ್ಗುಣನಹುದೊ ಸಾಕ್ಷಾತ್ಕಾರ ಭಕ್ತವತ್ಸಲ ಮುನಿಜನ ಮಂದಾರ 2 ಧೀರ ಉದಾರ ದಯಾನಿಧಿ ಪೂರ್ಣ ತಾರಕ ಸ್ವಾಮಿ ಸದ್ಗುರು ನಿಧಾನ ತರಳ ಮಹಿಪತಿ ಜನ್ಮೋದ್ಧರಣ ಚರಣ ಸ್ಮರಣಿ ನಿಮ್ಮ ಸಕಲಾಭರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಾನಕೀಮನೋಹರಾ ಜನಪಕುಮಾರಾ ಭಾನುವಂಶಭಾಸ್ಕರಾ ದುರಿತವಿದೂರಾ ಪ ಮಾರಕೋಟಿಸುಂದರ ಶರಧಿಗಂಭೀರ ಶೂರ ದೈತ್ಯಭೀಕರ ಪರಮ ಉದಾರ 1 ವಾನರೇಂದ್ರ ವಂದಿತ ಮೌನಿನಿಕರ ಸೇವಿತ ಸನ್ನುತ 2 ಪಾಹಿ ಪಾಹಿ ರಾಘವೇಶ ಪಾಹಿ ಲೋಕೇಶ ಪಾಹಿ ಪಾಹಿ ಮಾಂಗಿರೀಶ ಸುಪ್ರಕಾಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಂದು ತೋರೆ ಮಂದಹಾಸನ | ಕಾಮಿನಿ | ತಂದು ತೋರೆ ಮಂದಹಾಸ | ನಂದ ಕಂದ ಶ್ರೀಮುಕುಂದ | ವಂದಿತಾಮರೇಂದ್ರ ವಂದ್ಯನ | ಕಾಮಿನಿ ಪ ಉರವನಿತ್ತಗುರುಮೊಮ್ಮನುದರಲಿ ಬಂದ ಮಾತೆ ಮಗನ | ಶರದ ಭರಕೆ ಫಣಿಲಿ ತಾಳ್ದಾನಾ | ಕಾಮಿನಿ 1 ಸರಳದಿಂದ ಪ್ರಾಣ ತೊರಿದನಾ | ಪ್ರೀತಿಯಾ | ಸರಳಕಾದು ಅಳಿದನಯ್ಯನ | ಸರಳಗದೆಯ ಕೈಯ್ಯಲಿಂದ | ಸರಳತ್ರಯನ ಕೊಲಿಸಿದಾತನ | ಕಾಮಿನಿ 2 ಶತಕಮೃಗನ ಭೋಜ್ಯವಾಹನ | ಸಖಉರಭಕಾಗಿ ನಿಲ್ಲದೇ | ಅಖಿಲದೋಳಗೆನುಸಲುತಿಹನಾ | ರಾಶಿಯ | ಪಕವನಳಿದನರಿಯಸುತನ | ರಕ್ಷಕಮಹೀಪತಿನಂದನ| ಮುಖದಿ ತನ್ನ ಚರಿತೆನುಡಿಪನ ಕಾಮಿನಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು