ಪುಂಡನಾದೆನು ನಾನು ಭಂಡ ಮನುಜಾ
ಕಂಡವರಲ್ಲಿಯುಂಡು ಎಂಜಲವನು ಪ
ಪುಂಡರೀಕಾಕ್ಷ ಶ್ರೀ ಕೃಷ್ಣಗರ್ಪಿಸದೆಡೆ-
ಯುಂಡರದು ಬುಧರರಿವರೆಂಜಲಂದು
ತುಂಡ ಜನರಿಂಧನ್ನ ಮುದ್ದು ಮೆರೆದರು ಕೊಬ್ಬಿ
ಕಂಡಿವರೊಳಾದರದಿ ಸವಿಯಗೊಂಡನು ದೇವಾ 1
ಲಿಂಗಭವನೈಯ್ಯ ನಿನ್ನೊಲಿಮೆ ಮರೆಯನು ನಾನು
ಮಂಗಳಾಂಗಿಯ ಮೊರೆ ಕೇಳ್ದು ಭರದಿ
ಭಂಗ ಬಹುದೆಂದು ಕಾನನದಿ ಎಂಜಲನುಂಡು
ಅಂಗರಕ್ಷಕನಾಗಿ ಪಾಂಡವರ ಪೊರೆದಿ ಧೊರಿಯೆ 2
ಸರಸಿಜಾಕ್ಷನೆ ನಿನ್ನ ಕರುಣಪಾತ್ರನು ನಾನು
ಅರಿಯದುಡಿದನು ತೀಕ್ಷಮಿಪುದೀಗ (?)
ಸುರನಿರಲಿ ನರನಿರಲಿ ಪತಿತನಾದವನಿರಲಿ
ಸರಿಯಾಗಿ ಕರುಣಿಸುವಿ ನರಸಿಂಹವಿಠಲ 3