ನಿನ್ನವನೆನಿಸಿದಾ ಮಾನವನಿಂಗೆ ಇನ್ನು ಭವಭಯ ಉಂಟೇ
ಭಕುತ ವತ್ಸಲ ಕೃಷ್ಣಾ ಪ
ಶ್ರವಣ ದರಹು ಇಲ್ಲಾ ನವವಿಧ ಭಜನಿಲ್ಲಾ
ಕವಿತದನುಡಿಯ ಚಾತುಯ್ರ್ಯವಿಲ್ಲಾ
ತವಚರಣವನಂಬಿ ಅವನಿಯೋಳಗನಿಶಿ
ದಿವಸದಿ ಅಚ್ಯುತಾನಂತ ಗೋವಿಂದ ಯನುತಲಿ 1
ಘನ್ನ ವಿರಕ್ತಿಯಿಲ್ಲಾ ಮನ್ನಣೆಯ ತಪವಿಲ್ಲಾ
ಉನ್ನತ ದ ವ್ಯತಶೀಲ ಕರ್ಮವಿಲ್ಲಾ
ಅನ್ಯದೈವ ಕೆರಗದೆ ನಿನ್ನ ನಾಮ ನಿನ್ನ ಮುದ್ರೆ
ನಿನ್ನವರಪರಿಚಾರ ತನದಲ್ಲಿ ರಮಿಸುತಾ 2
ಮರೆದೊಮ್ಮೆನೆನೆದರೆ ಸರಿವದಘರಾಶಿ
ಅರಿದೊಮ್ಮೆನೆನೆಯಲು ಗತಿಸಂಪದಾ
ದೊರೆವುದೆನುತಶೃತಿ ನಿರುತ ಸಾರುತಲಿದೆ
ಗುರುಮಹಿಪತಿ ಪ್ರಭು ಎನ್ನನುದ್ದರಿಸುದೈಯ್ಯಾ 3