ಒಟ್ಟು 202 ಕಡೆಗಳಲ್ಲಿ , 36 ದಾಸರು , 175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರ್ಯನ್ನ ಯೋಗಧುರ್ಯನ್ನ ಭಜಿಸಿವರ್ಯನ್ನ ಮಧ್ವಾಚಾರ್ಯನ್ನಪ. ಅಕಳಂಕ ಮಹಿಮ ಚರಿತ್ರನ್ನ ಈಸಕಲ ಭುವನಕೆ ಪವಿತ್ರನ್ನಪ್ರಕಟ ಭಾರತಿ ಸತ್ಕಳತ್ರನ್ನ ಪಾಪ-ನಿಕರಕಾನನವೀತಿಹೋತ್ರನ್ನ 1 ನಿರ್ಜಿತ ಪಾಷಂಡಯೂಥನ್ನ ದೂರವರ್ಜಿತ ಭವದುಃಖಬದ್ಧನ್ನಸಜ್ಜನರಘಕೆ ನಿರೋಧನ್ನ ದೋಷವರ್ಜಿತ ಗುಣಪೂರ್ಣಬೋಧನ್ನ 2 ತಿಮಿರ ಪತಂಗನ್ನ ಹಯ-ವದನನ್ನ ಚರಣಾಂಬ್ಜಭೃಂಗನ್ನ 3
--------------
ವಾದಿರಾಜ
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಪ ಆಡದಿರಪವಾದಗಳನು ಕೊಂ | ಡಾಡದಿರಿನ್ನು ಚಿಲ್ಲರೆ ದೈವತಗಳನು || ಬೇಡದಿರು ಭಯ ಸೌಖ್ಯವನು ನೀ | ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು1 ನರಜನ್ಮ ಬರುವದೆ ಕಷ್ಟ ಇದ- | ನರಿದು ನೋಡು ವಿಪ್ರಾದಿ ಶ್ರೇಷ್ಠ || ಮರಳಿಬಾಹುದು ಉತೃಷ್ಟ | ಕೇಳೆಲವೊ ಮರ್ಕಟ 2 ಹಾಳು ಹರಟೆಗೆ ಹೋಗಬೇಡ ನೀ ಕಂಡ | ಕೂಳನು ತಿಂದು ಒಡಲ್ಹೊರಿಯಬೇಡ || ಕಾಲ ವ್ಯರ್ಥ ಕಳಿಯ ಬೇಡ ನಮ್ಮ | ಶ್ರೀ ಹರಿಯ ದಯಮಾಡ 3 ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ | ಮಣ್ಣುಕೂಡಿದವರ ನೀ ನೋಡಾ || ಅನ್ಯ ಶಾಸ್ತ್ರವನೋದಬೇಡಾ ನಮ್ಮ | ಬೋಧ ಮೈ ಮರೆತಿರಬೇಡಾ 4 ಗೋ ವಿಪ್ರರ ಸೇವೆ ಮಾಡು ಸೋಹಂ | ಭಾವಗಳನು ಬಿಟ್ಟು ದಾಸತ್ವ ಕೊಡು || ಕೇವಲ ವೈರಾಗ್ಯ ಮಾಡು ವಿಜಯ || ಲಜ್ಜೆಯ ಈಡ್ಯಾಡೊ5 ನಾನು ಎಂಬುದು ಬಿಡು ಕಂಡ್ಯ ಎನ್ನ | ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ || e್ಞÁನಿಗಳ ಒಳಗಾಡು ಕಂಡ್ಯ ವಿಷಯ | ಬೀಳುವಿ ಯಮಗೊಂಡಾ 6 ಕಷ್ಟ ಪಡದೆ ಸುಖಬರದು ಕಂ- | ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು || ದುಷ್ಟ ವಿಷಯ ಆಶೆ ಜರಿದು ವಿಜಯ- | ಕೂಗೆಲವೊ ಬಾಯಿ ತೆರೆದು 7
--------------
ವಿಜಯದಾಸ
ಎಂತು ಬಣ್ಣಿಸಲಮ್ಮಯ್ಯಾ ಈ ಗುರುವರರ ಪ ಎಂತು ಬಣ್ಣಿಪೆ ನಾ ನಂತನಾಂಶ ಜಗ - ದಂತರದೊಳಗಾ - ನಂತ ಮಹಿಮರಅ.ಪ ಸುರವರನಗರಸಮ - ವರಮಂತ್ರಸದನ ಜರಿದು ಸ್ಥಿರವಾಗೀ ಪುರದಲ್ಲಿ ಮೆರೆಯುತಲಿಹರನ್ನ 1 ಪೂರ್ವಯುಗದೊಳು ಸಾರ್ವಭೌಮನೆನಿಸಿ ಪಾರ್ವರ ಪೊರೆವದಕ್ಕ ಪೂರ್ವ ಯತಿ ಎನಿಸಿಹರನ್ನ 2 ದಿನ ದಿನದಲ್ಲಿ ಮಹ ಕನಕಾಭೀಷೇಕ ಮಾಳ್ಪ ಧನಿಕರ ತೆಜಿಸಿ ನಿ - ರ್ಧನಿಕ ಗೊಲಿದಿಹರನ್ನ 3 ಕ್ಷೀರಶೇಚನ ನಿತ್ಯ-ಸಾರ ಪಂಚಾಮೃತ ಬಿಟ್ಟು ಕೀರುತಿ ಮಾಳ್ಪಜನರ ಸೇರಿ ಕೊಂಡಿಹರನ್ನ 4 ದಾತರೆನಿಸಿ ಜಗದಿ - ಖ್ಯಾತರಾಗಿ ಗುರುಜಗ ನಾಥ ವಿಠಲನೊಲಿಸಿ ದೂತಜನರ ಪೊರೆವೊರನ್ನ 5
--------------
ಗುರುಜಗನ್ನಾಥದಾಸರು
ಎಲ್ಲವು ನಿನ್ನಾಧೀನ | ನಾ ಬಲ್ಲೆನೆಂಬುದe್ಞÁನ ಪ ವಿಧಿ ಪರಿಯಂತವು ನೀ- ನಿಲ್ಲದೆ ಕದಲದು ನಿಜವಿದು ನಿಜವಿದು ಅ.ಪ ಸುಖವನಪೇಕ್ಷಿಸುತಿಹರು | ದು- ಸಖ ನೀನೆನ್ನದೆ ದಾರಾ ಪುತ್ರಾ- ದ್ಯಖಿಳ ಸಂಪದವ ಬಯಸಿ ಕೆಡುವರು 1 ಹಣ ಸಂಪಾದಿಸುವದಕು | ಸ- ದ್ಗುಣ ವಂತನೆನಿಸುವದಕೂ ಹೆಣಕೆ ಸಮಾನನು ಇವನೆಂಬುವದಕೂ | ಹಿರಿಯ- ನೆನಿಸಿ ಪೂಜಿಸಿ ಕೊಂಬುವುದಕೂ 2 ನೀನೊಲಿದರೆ ವಿಷವಮೃತ | ಬರಿ- e್ಞÁನಿಗಳರಿಯುವರೀ ನಾನಾ ಬಗೆ 3 e್ಞÁನ ಭಕ್ತಿಯು ವಿರಾಗ | ವೆಂ- ಬೀನಿದಾನವೇ ಯೋಗ ಆನಂದ ಪಡುವುದೇ ಬಲು ತ್ಯಾಗ 4 ಕ್ಷೇಮದಿಂದಲಿರುವದಕೂ | ನಿ- ರ್ನಾಮವೈದಿ ಕೆಡುವುದಕೂ ಪಾಮರ ಜೀವರು ತಾವರಿಯರು ಗುರು ರಾಮ ವಿಠಲ ನೀನಾ ಮಮತೆ ಕೊಡದಿರೆ 5
--------------
ಗುರುರಾಮವಿಠಲ
ಎಲ್ಲಿಗೆ ಗಮನವಿದು ದುರ್ಗಾಂಬಿಕೆ ಎಲ್ಲಿಗೆ ಗಮನವಿದು ಪ. ಗಮನ ಹರವಲ್ಲಭೆ ನೀ ದಯ- ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ. ಚಂಡಿಕೆ ಮಹಮ್ಮಾಯೆ ದೇವಿ ಪ್ರ- ಚಂಡ ಲೋಕತಾಯೆ ಖಂಡಪರಶುಪ್ರಿಯೆ ಅಖಿಲ ಭೂ- ಮಂಡಲಕಧಿಪತಿಯೆ ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ- ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ1 ನಿಲ್ಲು ನಿಲ್ಲು ಜನನಿ ಬಾಲಕ- ನಲ್ಲವೆ ಹೇ ಕರುಣಿ ಪುಲ್ಲನಯನೆ ತ್ರಿಗುಣಿ ದಯವಿನಿ- ತಿಲ್ಲವೆ ನಾರಾಯಣಿ ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2 ದಾರಿ ಯಾವುದಮ್ಮ ಮುಕ್ತಿಯ ದಾರಿ ತೋರಿಸಮ್ಮ ಸೇರಿದೆ ನಾ ನಿಮ್ಮ ಭವಾಬ್ಧಿಯ ಪಾರುಗಾಣಿಸಮ್ಮ ಚಾರುನಿಗಮ ಶಿರಭೋರೆನಿಪ ವಿಚಾರ- ಸಾರವಿತ್ತು ದಯಪಾಲಿಸು ಶುಭವರ3 ಕಷ್ಟದುರಿತ ಭಯವ ತಾ ಬಡಿ- ದಟ್ಟಿ ಭಕ್ತಕುಲದ ಶ್ರೇಷ್ಠತನದಿ ಪೊರೆವ ತನ್ನ ಇಚ್ಛೆಯ ಕೈಗೊಳುವ ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಿಗೆ ಗಮನವಿದು ದುರ್ಗಾಂಬಿಕೆ ಎಲ್ಲಿಗೆ ಗಮನವಿದುಪ. ಗಮನ ಹರವಲ್ಲಭೆ ನೀ ದಯ- ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ. ಚಂಡಿಕೆ ಮಹಮ್ಮಾಯೆ ದೇವಿ ಪ್ರ- ಚಂಡ ಲೋಕತಾಯೆ ಖಂಡಪರಶುಪ್ರಿಯೆ ಅಖಿಲ ಭೂ- ಮಂಡಲಕಧಿಪತಿಯೆ ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ- ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ 1 ನಿಲ್ಲು ನಿಲ್ಲು ಜನನಿ ಬಾಲಕ- ನಲ್ಲವೆ ಹೇ ಕರುಣಿ ಪುಲ್ಲನಯನೆ ತ್ರಿಗುಣಿ ದಯವಿನಿ- ತಿಲ್ಲವೆ ನಾರಾಯಣಿ ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2 ದಾರಿ ಯಾವುದಮ್ಮ ಮುಕ್ತಿಯ ದಾರಿ ತೋರಿಸಮ್ಮ ಸೇರಿದೆ ನಾ ನಿಮ್ಮ ಭವಾಬ್ಧಿಯ ಪಾರುಗಾಣಿಸಮ್ಮ ಚಾರುನಿಗಮ ಶಿರಭೋರೆನಿಪ ವಿಚಾರ- ಸಾರವಿತ್ತು ದಯಪಾಲಿಸು ಶುಭವರ 3 ಕಷ್ಟದುರಿತ ಭಯವ ತಾ ಬಡಿ- ದಟ್ಟಿ ಭಕ್ತಕುಲದ ಶ್ರೇಷ್ಠತನದಿ ಪೊರೆವ ತನ್ನ ಇಚ್ಛೆಯ ಕೈಗೊಳುವ ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4
--------------
ತುಪಾಕಿ ವೆಂಕಟರಮಣಾಚಾರ್ಯ
ಏನಯ್ಯ ಧೊರೆಯೆ-ನಿನಗಾನಂದವೆ ಧೊರೆಯೇ ಪ ನುಡಿನೀನೊಲಿದಾಲಿಪುದುಅ.ಪ. ಜಾತಿಧರ್ಮವಿಲ್ಲಾ-ಶಾಸ್ತ್ರದರೀತಿನಡತೆಯಿಲ್ಲ ಮಾತಿದುಪುಸಿಯಲ್ಲಾ-ಮಾನದ-ಭೀತಿಯುಮೊದಲಿಲ್ಲಾ ನೀತಿಯನರಿಯದ-ಕೋತಿಗಳಂದವ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು-ದೋಷವಿ ವರ್ಜಿತರನ್ನು ಜರಿದು ಲಜ್ಜೆಯನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಿಗೆ ಕುಲಕಜ್ಜಳರವ ಮತಿ ಗುಜ್ಜುಗಿಸುತ್ತಿಹ 2 ಗಂಡನ ಬಿಟ್ಟಿಹರು-ಗರತಿಯ-ಕಂಡು ನಗುತ್ತಿಹರು ಮಿಂಡರ ಬೆರೆದಿಹರು-ಮೇಲತಿ-ದಿಂಡೆಯರಾಗಿಹರು ಚಂಡಿಸುತಿರ್ಪರೋ 3 ಕೇಳುಹಂದೆಯಾಳು-ಕ್ಲೇಶವ ಪೇಳಲು ಮತಿತಾಳು ಕೀಳು ಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಜನರೂಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀ ಪುಲಿ-ಗಿರಿಯೊಳು ನೆಲೆಯಾದ ಸಿರಿವರ ನಿಜಪಾದ-ಸೇವೆಯ-ಕರುಣಿಸು ಬಹುಮೋದ ಶರಣಾಭರಣ ನಿಜ ಕರುಣವ ತೋರಿಸು ವರದ ವಿಠಲಧೊರೆ ವರದದಯಾನಿಧೆ 5
--------------
ಸರಗೂರು ವೆಂಕಟವರದಾರ್ಯರು
ಏನು ಪುಣ್ಯವೋ ಯಶೋದೆಯ ಪರೀಕ್ಷಿತರಾಯ ಯಾವ ಪುಣ್ಯವೋ ಯಶೋದೆಯ ಪ. ಚೆನ್ನಕೇಶವನ್ನ ತನ್ನ ಚಿಣ್ಣನೆಂದು ಮುದ್ದಿಸಿ ಬಣ್ಣಿಸಿ ಮೊಲೆಯನುಣ್ಣಿಸಿ ಚಿನ್ನದ ತೊಟ್ಟಿಲೊಳಿಟ್ಟು ತೂಗುವ 1 ಅಗಣಿತ ಬ್ರಹ್ಮಾಂಡಗಳ ತ- ನ್ನುದರದೊಳಡಗಿಸಿದನ ಮುಗುಳುನಗೆಯ ಮೊಗವ ನೋಡಿ ಮಗನೆಂದಾಡಿ ಪೊಗಳಿ ಪಾಡುವ 2 ಲಕ್ಷ್ಮೀನಾರಾಯಣನ ಪ್ರ- ತ್ಯಕ್ಷ ಬಾಲಲೀಲೆಯ ಚಕ್ಷುದಣಿಯೆ ನೋಡುತನ್ಯ- ಪೇಕ್ಷೆಯಿಲ್ಲದಿಹಳೊ ಅಹೋ3
--------------
ತುಪಾಕಿ ವೆಂಕಟರಮಣಾಚಾರ್ಯ
ಏನು ಪುಣ್ಯವೋ ಯಶೋದೆಯ ಪರೀಕ್ಷಿತರಾಯ ಯಾವ ಪುಣ್ಯವೋ ಯಶೋದೆಯ ಪ. ಚೆನ್ನಕೇಶವನ್ನ ತನ್ನ ಚಿಣ್ಣನೆಂದು ಮುದ್ದಿಸಿ ಬಣ್ಣಿಸಿ ಮೊಲೆಯನುಣ್ಣಿಸಿ ಚಿನ್ನದ ತೊಟ್ಟಿಲೊಳಿಟ್ಟು ತೂಗುವ1 ಅಗಣಿತ ಬ್ರಹ್ಮಾಂಡಗಳ ತ- ನ್ನುದರದೊಳಡಗಿಸಿದನ ಮುಗುಳುನಗೆಯ ಮೊಗವ ನೋಡಿ ಮಗನೆಂದಾಡಿ ಪೊಗಳಿ ಪಾಡುವ2 ಲಕ್ಷ್ಮೀನಾರಾಯಣನ ಪ್ರ- ತ್ಯಕ್ಷ ಬಾಲಲೀಲೆಯ ಚಕ್ಷುದಣಿಯೆ ನೋಡುತನ್ಯ- ಪೇಕ್ಷೆಯಿಲ್ಲದಿಹಳೊ ಅಹೋ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಏನೆಂದರು ಸರಿ ಬೀಳ್ವದು ನಮ್ಮ ಶ್ರೀನಿವಾಸನ ಮಹಿಮಾನುಸಂಧಾನದಿಂ ಪ. ಶಯ್ಯದಿಂದೇಳುತ ಶಾರೀರದಾಲಸ್ಯದಿಂ- ದಯ್ಯ ಅಪ್ಪ ಅಮ್ಮನೆಂಬುವರಾ- ಜೀಯನ ಗುಣನಾಮಕನುವಾಗಿ ತಿಳಿದರೆ ಕಯ್ಯ ಪಿಡಿದು ಕಾವ ಕರುಣಾಳು ರಾಜಗೆ 1 ಅಪತತ್ವದಲಿ ನಿಂತು ಅಪ್ಯಾಯನ ಮಾಳ್ಪ ತಪ್ಪನೆಂಬುದಕಿದು ಕಾರಣವು ಮುಪ್ಪುರಹರನಯ್ಯನು ಪೆತ್ತ ದೊರೆಯನು ಒಪ್ಪಲಾರದೆ ಅಮ್ಮ ಅಯ್ಯನೆಂಬುವ ನಾಮ 2 ಕುರಿಯೊ ಮರಿಯೊ ಎಂಬ ದಾತಗೆ ಭಿನ್ನ ಹ- ವರವುದು ಹರಿಗೆ ಮೂಜನವೆಲ್ಲವು ಕುರಿಯಂತೆ ವಶ್ಯವಾಗಿರುವುದು ಭವಬಂಧ ಹರಿದ e್ಞÁನದ ಮುಳ್ಳಮುರಿಯೆಂಬ ಭಾವದಿಂ 3 ಮೂರಾರು ಪುರಾಣ ಮೂಲ ರಾಮಾಯಣ ಭಾರತ ಪಂಚರಾತ್ರಾದಿಗಳು ಸೇರಿ ಪೇಳುವುದೆಲ್ಲ ಸಿರಿಯರಸನ ನಾಮ ವಾರಿಧಿಯೊಳಗಿನ ತೆರೆಗಳಂದದಿ ತೋರ್ಪ 4 ನಾದ ಬಿಂದು ವರ್ಣದಾತನುದಾತ್ತ ಸ್ವ ರಾದಿ ಸಕಲ ಶಬ್ದ ವಾಚ್ಯ- ನಾದ ಶ್ರೀದೇವಿಯರಸ ವೆಂಕಟರಾಜನರಿವಂಥ ಹಾದಿಯ ತಿಳಿದರಗಾಧ ಮಹಿಮಾ ನಿನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ
ಏಳು ಬೆಳಗಾಯಿತು ಯದುಕುಲೋತ್ತಮ | ಪರಮೇಷ್ಠಿ ಹರ ಸುರಪಾಲಕರು ಪ ಆಳುಸಹಿತದಲಿ ರಂಗಾಅ.ಪ. ವೇದವನು ತಮ ಕದ್ದು ಒಯ್ದನು | ಆಧಾರಾಗದೆ ಅದ್ರಿ ಮುಣಗಿತು || ಮೇದಿನಿಯ ಬಳಕೊಂಡು ಹೋದನು | ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು || ಆದರಣೆಯಿಂದ ಕೈಯ ಮುಗಿದು ನೀ | ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ 1 ಅಟ್ಟುಳಿ ಹೆಚ್ಚಿತು ವೆ ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು || ಬಲವಂತನಾದನು ಆರಿಗೊಶವಿಲ್ಲ | ಇಳೆಗೆ ಭಾರವು ತೂಕವಾಯಿತು ಕಳ-| ವಳಗೊಳಲಾರೆವೆನುತಲಿ ಅಳುಕಿ ಭಯದಲಿ | ನಿಮ್ಮ ಬಾಗಿಲ ಬಳಿಯ ಸಾರಿದರೊ ರಂಗಾ2 ಮೂರು ಪುರದವರೀಗ ನಮ್ಮನ್ನ ಮೀರಿದರು | ಕಲಿಪುರುಷ ಸುಜನರ ಮೇರೆದಪ್ಪಿಸಿ ನಡೆಸಿ || ಬಲು ವಿಕಾರ ಮಾಡಿದನು ಈ ರೀತಿ ಶ್ರಮವೆಂದು | ಸಿರಿ ವಿಜಯ- || ವಿಠ್ಠಲ ಕಾರಣಾರ್ಧವ ಕಳೆದು | ಮುಂದೆ ಉದ್ಧಾರ ಮಾಡಿದನು 3
--------------
ವಿಜಯದಾಸ
ಒಂದೇ ನಾಮದಲಡಗಿದವೊ ಅಡಗಿದವೋ ಆಪ ಅಖಿಳ ವೇದಗಳು ಅ ಪ ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು ಒಂದೇ ನಾಮವೆ ಅಜಾಮಿಳಗೆ ವೊಲಿದಿತು ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ ನಂದ ಪದವಿಯಿತ್ತ ಅದ್ಭುತ ಮಹಿಮೆಯು 1 ಮಚ್ಛಾದ್ಯನಂತಾವತಾರಾ ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ ಕಚ್ಛಪ ತ್ರಿಜಗಕೆ ಆಧಾರ ತನ್ನ ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ 2 ಒಬ್ಬರಿಂದಲಿ ತನಗಿಲ್ಲ ತಾ ನೊಬ್ಬನೆ ಜೀವರ ರಕ್ಷಿಪನೆಲ್ಲಾ ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ ದರ್ಭೆಯ ರಮಣನ ಸುಗುಣಗಳೆಲ್ಲಾ 3
--------------
ವಿಜಯದಾಸ
ಕಂಡೆ ಕಂಡೆ ಸ್ವಾಮಿಯ ಕಂಡೆ ಕಂಡೆ ನಾ ಬ್ರಹ್ಮಾಂಡದೊಡೆಯನ ಪಾಂಡವರ ಪರಿಪಾಲಿಸುವನ ಪ್ರ- ಚಂಡ ಅಸುರರ ಶಿರವ ಚಕ್ರದಿ ಚೆಂಡನಾಡಿದ್ದ ಚೆಲುವ ಕೃಷ್ಣನ ಪ ಪಾದನಖದಿ ಭಾಗೀರಥ್ಯುದಿಸಿದಳು ಈರೇಳು ಲೋಕವನಿಟ್ಟ ಉದರದೊ- ಳಾದಿ ಮೂರುತಿ ಸಾರ್ವಭೌಮ 1 ಎಳೆದುಳಸಿ ಶ್ರೀವತ್ಸ ಕೌಂಸ್ತುಭ ಅ- ರಳು ಮಲ್ಲಿಗೆ ಹಾರ ಪದಕವು ಕೊ- ವೈಜಯಂತಿ ಮಾಲೆಯಂ- ತ್ಹೊಳೆವೊ ಮಾಣಿಕಾಭರಣ ಭೂಷಿತ 2 ಶೀಘ್ರದಲಿ ಜರೆಸುತನ ವಧÉ ಮಾ ಡ್ಯಜ್ಞದಲಿ ಶಿಶುಪಾಲರಂತಕ ರುಕ್ಮಿಣೀಪತಿ ಧರ್ಮಭೀಮರಿಂ- ದಗ್ರಪೂಜೆ ತಕ್ಕೊಂಡ ಕೃಷ್ಣನ 3 ಕಂಕಣ ಕರದಲಿ ಶಂಖ ಚಕ್ರವು ಅರ- ವಿಂದ ರೇಖವು ಚರಣದಲಿ ಪಂಕಜಾಕ್ಷನ ಮುಖದ ಕಾಂತಿಯು ಶಂಕೆಯಿಲ್ಲದೆ ಸೂರ್ಯರಂದದಿ 4 ಎಂಟು ಮಂದ್ಯೆರಡೆಂಟು ಸಾವಿರ ಸತಿಯ- ರಿಂದ ದ್ವಾರಾವತಿಯನಾಳಿದ ಪತಿತಪಾವನ ಪಾರಿಜಾತವ ಸತಿಗೆ ತಂದ ಶ್ರೀಪತಿಯ ಪಾದವ 5 ನಳಿನಮುಖಿ ದ್ರೌಪದಿಯು ಕರೆಯಲು ಸೆಳೆಯೆ ವಸ್ತ್ರ ಅಕ್ಷಯವ ಮಾಡಿಸಿ ಖಳರ ಮರ್ದನ ಕರುಣ ಸಾಗರೆಂ ದಿಳೆಯೊಳಗೆ ಹೆಸÀರಾದ ಕೃಷ್ಣನ 6 ನಂಬಿದವರನು ಬಿಡದೆ ತಾನಿ- ದ್ದಿಂಬಿನಲಿ ಸ್ಥಳಕೊಟ್ಟು ಕರೆವನು ಸುಂದರಾಂಗ ತಾ ಸೋಮಕುಲದಲಿ ಬಂದುದಿಸಿದ ಭೀಮೇಶ ಕೃಷ್ಣನ 7
--------------
ಹರಪನಹಳ್ಳಿಭೀಮವ್ವ
ಕಡೆಗೋಲ ತಾರೆನ್ನ ಚಿನ್ನವೆ- ಮೊಸರೊಡೆದರೆ ಬೆಣ್ಣೆಬಾರದು, ಮುದ್ದುರಂಗ (ಮಗುವೆ ಪಾ) ಅಣ್ಣನ ಒಡಗೊಂಡು ಬಾರೈಯ-ಸವಿಬೆಣ್ಣೆಯ ಮುದ್ದೆಯ ಮೆಲುವಿರಂತೆಬಣ್ಣದ ಸರವನ್ನು ಕೊರಳಲ್ಲಿ ಹಾಕುವೆಚಿಣ್ಣರೊಡನೆ ಆಡಕಳುಹುವೆ ರಂಗ 1 ಪುಟ್ಟ ಬಚ್ಚಿಯ ತಂದು ನಿನ್ನಯ ಚಿನ್ನದತೊಟ್ಟಿಲ ಕಾಲಿಗೆ ಕಟ್ಟಿಸುವೆಬಟ್ಟಲು ತುಂಬಿದ ಸಕ್ಕರೆ ನಿನಗೀವೆಕಟ್ಟಾಣಿ ಮುತ್ತಿನ ಸರವನೀವೆ 2 ಬಡವರ ಭಾಗ್ಯದ ನಿಧಿಯೆ ಗೋಕುಲ-ದೊಡೆಯನೆ ಮಾಣಿಕ್ಯದ ಹರಳೆಕಡುಮುದ್ದು ಉಡುಪಿನ ಬಾಲಕೃಷ್ಣಯ್ಯದÀುಡುಕು ಮಾಡುವರೇನೊ ಪೆಂಗಳೊಳುರಂಗ3
--------------
ವ್ಯಾಸರಾಯರು