ಒಟ್ಟು 20 ಕಡೆಗಳಲ್ಲಿ , 11 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇಗಿದ್ದು ಹೇಗಾದೆಯೊ ಆತ್ಮಯೋಗೀಶನಾನಂದಪುರದಲಿರುವುದ ಬಿಟ್ಟು ಪ ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದುಕುಸುಕಾಡಿ ನುಡಿದು ನೆಲಬಟ್ಟೆವಿಡಿದುಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದುವಸುಧೆಯಲಿ ದಿನಗಳೆದೆಯಲ್ಲ ಆತ್ಮ 1 ಎಳಗೆರೆಯಲಿ ಆಡಿ ಯೌವನದೂರಿಗೆ ಬಂದುಥಳಥಳಿಪ ಹಸ್ತಾದ್ರಿ ನೆಳಲ ಸೇರಿಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದುಹಳೆಯ ಬೀಡಿಗೆ ಪಯಣವೇ ಆತ್ಮ 2 ಗನ್ನಗತಕದ ಮಾತು ಇನ್ನು ನಿನಗೇತಕೋಮುನ್ನ ಮಾಡಿದ ಕರ್ಮಭರದೊಡಲಿದೆಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ-ಸನ್ನ ಮೂರುತಿಯ ಭಜಿಸೆಲೊ ಆತ್ಮ 3
--------------
ಕನಕದಾಸ
ಕೆಟ್ಟೆನಲ್ಲೊ ಹರಿಯೆ |ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪಬಂದೆನು ನಾ-ತಂದೆ-ತಾಯಿಗಳುದರದಿ |ಒಂದನೂ ಅರಿಯದೆ ಬಾಲಕತನದೊಳು ||ಮುಂದುವರಿದ ಯೌವನದೊಳು ಸತಿ-ಸುತ-|ರಂದವ ನೋಡುತ ನಿನ್ನ ನಾ ಮರೆತೆನೊ 1ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|ಮಾನವಿಲ್ಲದೆ ಕುಲಹೀನರಾಶ್ರಯದಿಂದ ||ಙ್ಞÕನಿಗಳೊಡನಾಟವಿಲ್ಲದೆ ಮನದೊಳು |ದಾನ-ಧರ್ಮದ ಬಟ್ಟೆಯಂತೆಂದು ಮರೆತನು 2ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |ಕದನವು ದಶದಿಕ್ಕಿನುದಯದ ರಾಯರ ||ಎದೆನೀರು ಬತ್ತಿತು ಅದರಿಂದ ನಿನ್ನಯ |ಪದಪದ್ಮಯುಗಳದ ತುದಿಯ ನಾ ಮರೆತೆನು 3ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |ಕಾಡೊಳಗಾಡುವ ಮೃಗದಂತೆ ಜೀವಿಸಿ ||ಗೂಡೊಳಗಿರುತಿಹ ಗೂಬೆಯ ತೆರನಂತೆ |ಮಾಡದೆ ನಿನ್ನಯ ಸ್ಮರಣೆಯ ಮರೆತೆನು 4ಬುದ್ದಿಹೀನನು ನಾನು ಉದ್ದರಿಸೆಲೊ ದೇವಮುದ್ದು ಶ್ರೀಪುರಂದರವಿಠಲನೆನ್ನ ||ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |ಪೊದ್ದುವೆ ನಿನ್ನಯ ಚರಣಾರವಿಂದವ 5
--------------
ಪುರಂದರದಾಸರು
ಸಾಕು ಸಾಕಿನ್ನು ಸಂಸಾರಸುಖವು |ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪಉದಿಸಿದುವು ಪಂಚಭೂತಗಳಿಂದ ಔಷಧಿಗ-|ಳುದಿಸಿದುವು ಔಷಧಿಗಳಿಂದನ್ನವು ||ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ 1ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |ಪತನವಾದಿಂದ್ರಿಯವು ಹೊಲೆ-ರುಧಿರವು ||ಸುದತಿಯುದರದೊಳೆರಡು ಏಕದಲಿ ಸಂಧಿಸಲು |ಬುದಬುದನೆ ಮಾಸಪರ್ಯಂತರದಿ ಹರಿಯೆ 2ಮಾಸವೆರಡರಲಿ ಶಿರಮಾಸಮೂರರಲಂಗ |ಮಾಸನಾಲ್ಕರಲಿ ಚರ್ಮದ ಹೊದಿಕೆಯು ||ಮಾಸವೈದರೊಳುನಖರೋಮ ನವ ರಂಧ್ರಗಳು |ಮಾಸವೇಳಲಿ ಧಾತು ಹಸಿವು ತೃಷೆಯು 3ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |ಭಂಗವನು ಪಡಲಾರೆ ಭವಭವದೊಳು ||ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ 4ಇನಿತು ಗರ್ಭದೊಳು ನವಮಾಸ ಪರಿಯಂತರದಿ |ತನು ಸಿಲುಕಿ ನರಕದಲಿ ಆಯಾಸಗೊಂಡು ||ಘನಮರುತವೇಗದಿಂ ಅರುಹನಲ್ಲಿಯೆ ಮರೆತುಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ 5ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |ಪರವಶದೊಳಿರಲು ನೀರಡಿಸಲಾಗ ||ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |ದುರಿತರೂಪದ ತನುವ ಧರಿಸಿದೆನೊ ಹರಿಯೆ 6ಶಿಶುತನದೊಳಿರಲು ನೊಣ ಮುಸುಕಲಂದದಕಳಲು |ಹಸಿದನಿವನೆಂದು ಹಾಲನೆ ಎರೆವರು ||ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |ಪಶುವಂತೆ ಶಿಶುತನದೊಳಿರಲಾರೆ ಹರಿಯೆ 7ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |ನುಡಿಯಲರಿಯದ ದುಃಖ ವಿಷಮದಿಂದ ||ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ 8ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |ಗೋಳಿಡುತವಿದ್ಯೆಕರ್ಮಗಳ ಕಲಿತು ||ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾಬಾಲೆಯರ ಬಯಸಿ ಬಹು ಮರಳಾದೆ ಹರಿಯೆ | 9ಜ್ವರದ ಮೇಲತಿಸಾರ ಬಂದಂತೆ ಯೌವನದಿ |ತರುಣಿಯೊಡನಾಡಿಕೂಡಿದವಿಷಯದಿ ||ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ 10ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |ಹತ್ತು ಇಂದ್ರಿಯದ ಬಹುರೋಗದಿಂದ ||ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ 11ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |ಕಟ್ಟಿಕಾದಿಹರು ಮುಪ್ಪಡಸಲಾಗ ||ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |ಮುಟ್ಟಿನೋಡರು ಸರಕುಮಾಡರೈ ಹರಿಯೆ 12ಎಷ್ಟವಜೆÕಯ ಮಾಡೆ ಮತ್ತವನಿಗಳಲುತಿರೆ |ಕಟ್ಟಳೆಯ ದಿನತುಂಬಿಮೃತನಾಗಲು ||ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |ಮುಟ್ಟದಲೆ ಹೆಣನೆಂದು ದೂರದೊಳಗಿಹರು 13ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ 14ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |ಬನ್ನವನು ಪಡಲರೆ ಭವಭವದೊಳು ||ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |ಸನ್ಮತಿಯೊಳಿರಿಸೆನ್ನ ಪುರಂದರವಿಠಲ 15
--------------
ಪುರಂದರದಾಸರು