ಒಟ್ಟು 20 ಕಡೆಗಳಲ್ಲಿ , 14 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮನ ಮನೆಯವರು ನಾವೆಲ್ಲರು ಹನುಮನ ಮನೆಯವರು ಪ ಅನುಮಾನಪಡದೆಲೆ ಸ್ಥಳವ ಕೊಡಿರಿ ಎಮಗೆ ಅ.ಪ ಊಧ್ರ್ವ ಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ ಹೃದ್ಗತವಾದೆಮ್ಮ ತತ್ವಗಳನೆ ನೋಡಿ ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ 1 ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು ಉತ್ತಮ ನೀಚರೆಂಬುವ ಭೇದ ಬಲ್ಲೆವು ಸುತ್ತಲು ಕಂಡು ಕಾಣದೆ ಇಹ ಎಲ್ಲಕೂ ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು 2 ಹಲವು ಲೋಕಗಳುಂಟೆಂಬುದ ಬಲ್ಲೆವು ಹಲವು ಯೋನಿಗಳಲ್ಲಿ ಜನ್ಮಗಳೊಲ್ಲೆವು ಅಲವಭೋಧರು ನಮ್ಮ ಕಳುಹಿದರಿಲ್ಲಿಗೆ ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ 3
--------------
ವಿದ್ಯಾಪ್ರಸನ್ನತೀರ್ಥರು
ಹರಿಯೆ ನಿನ್ನದ್ಭುತ ಚರಿಯವನರಿವುದು ವರಗುರಿಯಿಂದಹರೆ ಕರುಣಿಸೆನ್ನೊಳು ದೊರೆಯೆ ಪ. ನಾನಾ ಯೋನಿಗಳಲ್ಲಿ ಪೋಗುವ ಸೂನುಗಳಿಂತು ಮಾಳ್ಪ ಶಿವ ಭಾನು ನಾಮಗಳಿಂದಲಿ ಸಾನುರಾಗದಿ ಕೊಂಡು ಸಕಲಪಿತರುಗಳಿಗಾನಂದ ಪಾಲಿಸುವಿ 1 ಬುದ್ಧಿಪೂರ್ವಕವಾಗಿ ಮಾಡುವ ಕರ್ಮವ ಶುದ್ಧಭಾವಗಳಿಂದಲಿ ತದ್ದಿನ ಕಾಲದಿ ನಡೆಸುತ ತಾನೆಂಬ ಬದ್ಧಹಂಕೃತಿ ತಾಳದೆ ವಾಸುದೇವ ನೀನುದ್ಧರಿಸೆನ್ನನುತ ತಿದ್ದಿ ಸಮರ್ಪಣೆ ಗೈದವರೆಲ್ಲ ಸರಿ ಶುದ್ಧ ಮಾಡುವ ವಿತತ 2 ಈ ವಿಧದಲಿ ಕರ್ಮಕೋವಿದರಾಡಿದ ಭಾವವೆ ನಿಜವೆನ್ನುತ ಸಾವಧಾನದಿ ನಿನ್ನ ಪಾದಕಂಜವೆ ಭವನಾವೆವೆಂಬೆನು ಸತತ ಶ್ರೀವರ ಶೇಷಾದ್ರಿ ಶಿಖರಾದ್ರಿವಾಸ ಪರಾಪರಗಣ ವಿನುತ ಕಾವಾತ ನೀನೆ ಕರ್ಮಗಳ ಕುಂದುಗಳಿಂದ ಪಾವನಾತ್ಮಕ ಸ್ವರತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೆ ನಾನಿನ್ನು ಧನ್ಯನಹೆನೊಎಂದಿಗೆ ನಿನ್ನ ಚಿತ್ತಕೆ ಬಹೆನೊ ಅಚ್ಯುತನೆ ಪಪುಲು ಮರವು ಗಿಡ ಬಳ್ಳಿ ಕುಲದಲಿಪ್ಪತ್ತು ಲಕ್ಷಜಲ ಜೀವದೊಳಗೆ ಒಂಬತ್ತು ಲಕ್ಷ ||ಅಳಲಿ ಏಕಾದಶ ಲಕ್ಷ ಕ್ರಿಮಿ ಕೀಟದಲಿತೊಳಲಿ ಬಳಲಿದೆನಂಡಜದೊಳು ದಶಲಕ್ಷ 1ಚರಣನಾಲ್ಕರಲಿ ಮೂವತ್ತು ಲಕ್ಷ ಜೀವಿಸಿನರನಾಗಿ ಚರಿಸಿದೆನು ನಾಲ್ಕು ಲಕ್ಷ ||ಪರಿಪರಿಯ ಭವದಿಂದ ಬಲು ನೊಂದೆನೈ ನಿನ್ನಸರಸಿಜಸಂಭವನ ಕಲ್ಪದಲ್ಲಿ2ಎಂಬತ್ತು ನಾಲುಕು ಲಕ್ಷಯೋನಿಗಳಲ್ಲಿಅಂಬುಜನಾಭ ನಿನ್ನ ಲೀಲೆಗಾಗಿ ||ಕುಂಭಿನಿಯೊಳು ಬಂದು ನೊಂದೆನಯ್ಯಾ ಸ್ವಾಮಿಕಂಬುಕಂಧರಸಿರಿಪುರಂದರವಿಠಲ3
--------------
ಪುರಂದರದಾಸರು
ಕೊಡು ಕಂಡೆಯಾ ಹರಿಯೆ-ನಿನ್ನ ನಾಮ-|ಕೊಡು ಕಂಡೆಯಾ ಹರಿಯೆ ಪಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪಒಡಲುತುಂಬದು ಎಂದು ಬಳಲಿಸೆ ಬರಲಿಲ್ಲ |ಸಡಗರದಿಂ ಭಾಗ್ಯ ಬೇಡಲಿಲ್ಲ ||ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ 1ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |ನಾನಾಯೋನಿಗಳಲ್ಲಿ ಬಳಲಿ ಬಂದೆ ||ದೀನರಕ್ಷಕ ನೀನೆ ದಯದಿಂದಲೆನಗಿನ್ನು |ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ 2ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |ಅಲಸಿ ಕೋಟಲೆಯ ಸಂಸಾರದಿಂದ |ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |ಸಲಹೊ ದೇವರ ದೇವಪುರಂದರವಿಠಲ3
--------------
ಪುರಂದರದಾಸರು
ಪ್ರಹ್ಲಾದ ವರದ ಭಯಗಜಕೆ ಸಿಂಹಪರಮಆಹ್ಲಾದಪದವಿತ್ತು ಪೊರೆಯೊ ನರಸಿಂಹÀ ಪ.ಹಿಂದೆ ಹಿರಣ್ಯಕನುದರದಲಿ ಜನಿಸಿ ಪ್ರಹ್ಲಾದನೊಂದವನ ಬಾಧೆಯಲಿ ಮರಳಿ ಮರಳಿಇಂದಿರೇಶ ಸಲಹೆನಲು ಗಡಾ ಸ್ತಂಭದಲೊದಗಿಬಂದವನುರವ ಬಗಿದು ರುಧಿರವನು ಸವಿದೆ 1ಅಸುರ ಕೆಡೆದದ ಕಂಡು ಅತಿ ಹರುಷದಿಂದ ತ್ರಿದಶರಂಬರದಿ ಪೂಮಳೆಗರೆಯಲುಶಿಶುವೇಕ ಮಾನಸದಿ ಮರೆಹೊಕ್ಕು ಪೊಗಳುತಿರೆಬಿಸಜಾಕ್ಷ ಕರುಣದಿಂದವನ ಸಲಹಿದೆಯಾಗಿ 2ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯನಳಿನಾಕ್ಷ ನಿಮ್ಮ ಗುರುತವ ಕಾಣದೆಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದವಿಡಿದೆಗೆಲಿಸು ಭವದುರಿತವ ಪ್ರಸನ್ವೆಂಕಟ ನೃಸಿಂಹ 3
--------------
ಪ್ರಸನ್ನವೆಂಕಟದಾಸರು