ಒಟ್ಟು 20 ಕಡೆಗಳಲ್ಲಿ , 14 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇಳುವುದು ಬೇಡ | ಜನರ ನುಡಿ ಕೇಳದಿರಲೋ ಮೂಢ ಪ ಶ್ರೀಲೋಲನ ಕಿಂಕರರ ಬಾಗಿಲಲಿ ಬೀಳುನಾಯಿಯಂದದಲಿ ಕೆಲಕಾಲ ಅ.ಪ ದ್ರವ್ಯದಾಸೆಗಾಗಿ | ನಾರಕೀ ಭವಿತವ್ಯರಲ್ಲಿಗೆ ಹೋಗಿ ಕಾವ್ಯನಾಟಕ ಸ್ತುತಿ ಪದ್ಯಗಳನು 1 ನಾನು ಯೋಗ್ಯನೆನ್ನುತ | ತೋರಿಸಿ ಮಾನವಾಗಿದಿರದಲ್ಲಿ ನಿನಗೆ ದುರಭಿ- ಮಾನಿಯಾಗಿ ನೀ ಕೆಡುವೆಯೊ ನಿಜ ನಿಜ 2 ಕೊಂಚ ಬೇಡಬೇಕು ವಂಚನೆಯಿಲ್ಲದೆ ಭಜಿಸು ರಹಸ್ಯವ 3
--------------
ಗುರುರಾಮವಿಠಲ
ಹ್ಯಾಗಿದ್ದರೂ ಸುಖವೇ ಜ್ಞಾನಿಯಾದವಗೆ ಪ ನಳಿನ ನಂಬಿರುವಗೆ ಅ.ಪ ಹಿಂದುಮುಂದಿಲ್ಲದೆ ತಾನೊಬ್ಬನಾದರು 1 ಹೊನ್ನು ಹೆಣ್ಣು ಮಣ್ಣು ಹೊಂದಿಕೊಂಡಿದ್ದರು ಅನ್ನಕಿಲ್ಲದೆ ತಾ ನರಳುವಂತಾದರು 2 ಬೇಡಿದರೊ ಹೊಟ್ಟೆ ತುಂಬ ದೊರಕದಿದ್ದರು 3 ಯೋಗ್ಯನೆನ್ನುತ ಜನರು ಶ್ಲಾಘ್ಯವ ಮಾಡಿದರು ಭಾಗ್ಯಹೀನನಿವನೆಂದು ಬೈಯ್ಯತಲಿದ್ದರು 4 ಕೊಟ್ಟಷ್ಟರಲ್ಲೆ ತೃಪ್ತಿಪಟ್ಟು ಶ್ರೀ ಗುರುರಾಮ- ವಿಠ್ಠಲನ ಮನಮುಟ್ಟ ಭಜಿಸುವಗೆ5
--------------
ಗುರುರಾಮವಿಠಲ
ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ ಪಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ ತಾಯಿ ನಡುಗಿ ಬಿಸುಟೀ ||ತನುವು ನಿನ್ನದು ಸೋಂಕೆ ನಗವೊಡೆದು ಶತಶೃಂಗ- |ವೆನಿಸಿಕೊಂಡಿತೋ ದ್ವಾಪರದಿ ಬಲವಂತ 1ಲೋಕದೊಳು ಮನುಜರಾ ಶಿಶುಗಳಂದದಿ ಬೆಳೆದು |ಪಾಕಶಾಸನಿ ಯಮಜ ಯಮಳರ ಜನನೀ |ಯಾ ಕೂಡಿಕೊಂಡು ಇಭಪುರಿಗೈದಿ ಮೋದದಲಿ |ಸಾಕಿಕೊಂಡೆಯಂಬಿಕೆಯ ಮಗನಿಂದಾ 2ಚಿಕ್ಕವರೊಡನೆ ಚಂಡು ಬುಗುರಿ ಈಸಿರೆ ಓಟ |ತೆಕ್ಕೆ ಮುಷ್ಟಿ ಮರಗಳನೇರುವಲ್ಲಿ ||ಸೊಕ್ಕಿದವನಿವನೆಂದು ಆವಾಗಲೆಲ್ಲರಿಗೆ |ಬಿಕ್ಕಿ ಬಾಯ್ದೆರೆವಂತೆ ಮಾಡಿ ತೋರಿಸಿದೆ 3ಅಹಿತರಾದವರು ನೀರೊಳಗೆ ಕೆಡಹಲು ಎದ್ದೆ |ಅಹಿಗಳಿಂ ಕಟ್ಟಿಸಲು ನೋಯದಿದ್ದೆ ||ಸಹಿಸದಲೇ ವಿಷಹಾಕಿ ಬದುಕಲ್ಕೆ ಹೊರಘಾಕೆ |ಮಹಮೋಸ ಮಾಡೆ ಗೆದ್ದು ಧರಿಯೊಳು ಮೆರೆದೆ 4ಸೋಕಿಯಸುರಿಯ ಮಗನ ಪಡೆದು ಖಲನನು ತರಿದು |ಏಕಚಕ್ರ ನಗರದಲ್ಲಿದ್ದು |ಬೇಕೆಂದು ನೀನಾಗಿ ಪೋಗಿ ಬಕನನು ಕೊಂದೆ |ಈ ಕುಂಭಿಣೀಯೊಳು ನಿನಗಿದಿರಾರು ದೇವಾ 5ಪಾಂಚಾಲಿಯನು ಗಳಿಸೆ ಕೋಪದಿಂ ಬಂದಹರಿ|ವಂಚಕರ ದರ್ಪವ ಭಂಗಿಸಿ ಲೀಲೆಯಿಂ |ಮಿಂಚುವಾ ಗದೆಲಿಹ ನಿಶ್ಚಿಂತ ಬಲವಂತ |ಮುಂಚಿನಜ ಪ್ರಣತ ಸುರಭೂಜ ರವಿತೇಜ 6ಈ ಪರಿಯಿಂದ ಕೆಲಕಾಲವಲ್ಲೆಲ್ಲ |ಕಾಪಾಡಿ ವಜ್ರಿಪ್ರಸ್ಥಕೈ ತಂದು ||ಪಾಪಿ ಜರಿಜನ ಕೊಂದು ರಾಜಸೂಯವ ಮಾಡಿ |ನೀಂ ಪಾಲಿಸಿದೆಯವನಿ ಸದ್ಧರ್ಮದಿಂದ 7ದ್ಯೂತವಾಡಿದ ಸಮಯದಲ್ಲಿ ದ್ರೌಪದಿಯಳನು |ಪಾತಕಿವಸವೆಳೆಯೆ ಕೋಪದಿಂದ ||ಘಾತಿಸುವೆನೆಂದಬ್ಬರಿಸಿ ಪಲ್ಗಡಿದು ಲಕ್ಷ್ಮೀ |ನಾಥನಿಚ್ಛೆಂಗೆ ಈಗೇಂದು ಕೈಮರೆದೇ 8ತಮೋ ಯೋಗ್ಯನಾ ಪಾಪಪೂರ್ಣದಾಹದಕೆ ಬ- |ಹು ಮಿತಿಯಿಂದ ವನವಾಸ ಪತ್ಕರಿಸಿದೆ ||ಸಮರಾಂಗಣದೊಳಿವರ ಹೀಗೆ ಸವರುವೆನೆಂದು |ಸುಮನಸಾರಾಧ್ಯ ಬಾಹುಗಳೆತ್ತಿ ನಡೆದೆ 9ಕಾನನದಿ ಕಿರ್ಮೀರನಂ ಕೊಂದು ಋಷಿಯಿಂದ |ಮಾನವಂ ಕೈಕೊಂಡು ಮತ್ತೆ ಮುಂದೆ ||ಆ ನಗದಿ ಬಹುಕಾಲ ಸೇರಿಕೊಂಡಿದ್ದಂಥ |ದಾನವರ ಮಡುಹಿ ಸೌಗಂಧಿಕವ ತಂದೆ 10ನಿನ್ನೊಳಗೆ ನೀಂ ಲೀಲೆ ಮಾಡಿದ್ಯಾ ಸಮಯದಲಿ |ಚಿನ್ನದೋಪಮ ಪುಷ್ಪವೊಂದು ಬೀಳೆ ||ನಿನ್ನರಸಿಯಿದು ಎನಗೆ ಇಷ್ಟವೆನಲವಳ ನುಡಿ |ಮನ್ನಿಸುತೆ ಪೋಗಿ ಮಣಿಮಂತನೊಂಚಿಸಿದೆ 11ದ್ವೈತ ವನದೊಳು ಬಂದುಮೃಗಬೇಟೆಯಾಡೆ ಪುರು |ಹೂತ ಪದವಾಳ್ದವನು ಮೆಯ್ಯ ಸುತ್ತಲ್ ||ನೀತವಕಬೀಳದೆ ಅವನ ಪುನೀತನ ಮಾಡಿ |ಖ್ಯಾತಿ ತಂದಿತ್ತೆಯಂತಕನ ಸುತಗಂದು 12ಮತ್ಸ್ಯ ದೇಶಾಧಿಪನ ಮನೆಯಲ್ಲಿ ಇದ್ದಾಗ |ಹೆಚ್ಚಿನಾ ಬಲದ ಮಲ್ಲನ ಕೆಡಹಿದೆ ||ಅಚ್ಚ ಪಾಪಾತ್ಮ ಕೀಚಕನನ್ವಯ ತಂದೆ |ಅಚ್ಯುತನ ನಿಜದಾಸ ಭಕ್ತರಘನಾಶ 13ಎಂಟೈದು ವರುಷ ಈ ರೀತಿಯಲಿ ಕಳೆದು ವೈ- |ಕುಂಠಪತಿ ದಯದಿಂದ ಉಪಪ್ಲಾವ್ಯದಿ ||ಗಂಟು ಹಾಕಿದಿ ದುರಾತ್ಮನ ಕೂಡ ಸಂಗರಕೆ |ಕಂಠೀರವರವದಿಂ ತಲೆದೂಗಿ ನಡೆದೆ 14ಮುತ್ತೆ ಭೀಷ್ಮಗೆ ವಂದು ಸ್ವಲ್ಪಮಾತ್ರಕೆಮಾನ|ವಿತ್ತಂತೆ ತೋರಿ ಎಲ್ಲರ ರಥವನೂ |ಕತ್ತರಿಸಿ ಹಿಂದಕ್ಕೋಡಿಸಿದೆ ನಿನ್ನಾರ್ಭಟಕೆ |ಹತ್ತು ದಿಕ್ಕಿನೊಳೊಬ್ಬರಿದಿರಾಗಲಿಲ್ಲ 15ಪ್ರಹ್ಲಾದನವತಾರ ಬಾಹ್ಲೀಕನನು ಗೆದ್ದು |ಮಹೀಜಸುತನಾನಿಮಸ್ತಕಶೀಳಿದೆ ||ಬಹುಖೋಡಿಧಾರ್ತರಾಷ್ಟ್ರರ ಕೊಂದು ಹರೆಬಿಟ್ಟ |ಅಹಿಯಂತೆ ರಣರಂಗದಲ್ಲಿ ಸಂಚರಿಸಿದೆ 16ಕಡು ಕೋಪದಿಂದ ಹೂಂಕರಿಸಿಯುರಿಯುಗುಳುತಲಿ |ಪೊಡವಿ ನಡುಗಿಸಿನಭಬೇಯಿಸುತ್ತಲಿ ||ಪಿಡಿದು ದುಶ್ಶಾಸನನ ತೊಡೆಯಲ್ಲಿ ನೆರೆಗೆಡಹಿ |ಒಡಲ ಛೇದಿಸಿ ರಕ್ತಮಜ್ಜನವಗೈದೆ 17ಕರುಳ ದಂಡೆಯ ಮಾಡಿ ಅರಸಿ ಮಂಡೆಗೆ ಮುಡಿಸಿ |ಖರೆಯ ಮಾಡಿದೆ ಉಭಯತರ ಶಪಥವ ||ಕರೆದೆ ಕುರು ಪಾಂಡವರ ಬಿಡಿಸ ಬನ್ನೀರೆಂದು |ಮರುಳಗೊಂಡರೆಲ್ಲ ನಿನ್ನರೂಪನೋಡುತಲಿ 18ಸ್ವಾಮಿ ಪ್ರಾಣೇಶ ವಿಠಲನ ಆಜೆÕಯ ವಹಿಸಿ |ಭೂಮಿ ಭಾರಿಳುಹುದಕೆ ಅವತರಿಸಿದೆ ||ನಾ ಮಾಡುವೆನೆ ಪೂರ್ತಿ ನಿನ್ನ ಮಹಿಮೆಯ ಸಮರ |ಭೀಮಕರಪಿಡಿದು ಸಲಹುವದೋ ಪ್ರತಿದಿನದಿ 19
--------------
ಪ್ರಾಣೇಶದಾಸರು
ಶ್ರೀ ಗುರುವಿನ ನೆನದು ಸುಖಿಯಾಗು ಮನವೇ ನೀನುದುರ್ಗುಣ ಪಾಪಹರಿದು ಛೇದಿಸು ಜನನವಪನಾನಾ ಜನ್ಮದಿ ತೊಳಲಿ ನೀ ಬಂದುನರಮನುಷ ಜನ್ಮವ ತಾಳಿ ಮರತ ಕಂಡ್ಯಾ ತನುವಿನಲಿಧ್ಯಾನಿಸುಸದಾಕಾಲದಿ ದುರ್ಜನ ಬುದ್ಧಿಮಾಣಿಸು ಪರಂಜ್ಯೋತಿಯನೆನೆದು ನೆನೆದು ದೃಷ್ಟಿಸಿ ಕಾಣುಗುಣಜÕನ ಕರುಣಪ್ರಾಜÕನ ಜ್ಞಾನ ಸಿದ್ಧನ ಗುರುವ ಸಿದ್ಧನಮಾನಸ ರೂಪನ ಮೂಜಗ ವ್ಯಾಪನದೀನರನಾಥನ ವಾಙ್ಮಯಾತೀತನ1ಸುಜನರ ಸಂಗವ ಮಾಡದೆ ಸಾಯುತಲಿಹೆಕುಜನರ ಸಂಗದಿಂದ ಕರುಣವೆಂಬುದು ಮರೆತೆತ್ಯಜಿಪುದು ನಿನಗೆ ನೀತಿಯೆ ಥೂ ನಿನಗೆ ಬುದ್ಧಿಯೇಭಜಿಸು ಪರಾತ್ಪರವ ನೆನೆದು ದೃಷ್ಟಿಸು ಮನವೇತ್ರಿಜಗವಂದ್ಯನ ತ್ರಿಗುಣಕೆ ಮಾನ್ಯನೆಸುಜನವ್ರಾತನ ಸುಪ್ರಭಾತೀತನಭಜಕರ ಭಾಗ್ಯನ ಬಹುಗುಣ ಯೋಗ್ಯನಸರ್ವಬೇಧಜÕನ ನಯಸರ್ವಜÕನ2ಇರುವೆ ಮೊದಲುಗಜಕಡೆಯಾದ ಎಂಭತ್ತನಾಲ್ಕುತಿರುವಿನ ಲಕ್ಷಜೀವದಿ ಜನಿಸಿ ಜನಿಸಿ ಪುಟ್ಟುವಪರಿಯನೆಲ್ಲವ ಛೇದಿಪ ಉಪಾಯವ ತಿಳಿವಚಿರಕಾಲ ನೆನೆಯೋ ಕಂಡ್ಯಾ ಚಿದಾನಂದಾವಧೂತನಪರಮಪರೇಶನಪಂಡಿತಪುರುಷನ ಶರಣು ಜನಾಂಗನ ಸುಗುಣ ಕೃಪಾಂಗನಕರುಣಾ ಕಟಾಕ್ಷನ ಕಾರಣ ಮೋಕ್ಷನಮರಣ ವಿದೂರನ ಮುನಿಯತಿ ವರನ3
--------------
ಚಿದಾನಂದ ಅವಧೂತರು
ಹೆಸರು ತಂದಿರ್ಯಾ ಭಿಕ್ಷಕೆ |ಹೆಸರು ತಂದಿರ್ಯಾಪಅಸಮವೀರರೆಂಬ ಹೆಸರು |ಕುಶಲಗಾರರೆಂಬ ಹೆಸರುಶಶಿಯಂತೆ ಶೋಭಿಸುವ ಶಿಶುವು |ಕುಲಕೆ ಯೋಗ್ಯನೆಂಬ ಹೆಸರು ||ಹೆಸರು||1ದಾನಶೀಲರೆಂಬ ಹೆಸರು |ಮಾನವಂತರೆಂಬ ಹೆಸರು |ಸಾನುರಾಗದಲ್ಲೂ ಆತ್ಮ |ಜ್ಞಾನಿಗಳೆಂದೆಂಬ ಹೆಸರು2ಹಿರಿಯ ಮನೆತನದ ಹೆಸರು |ಗುರುಗಳಾ ಭಕ್ತಿಯಲಿ ಹೆಸರು |ಪರಮಭಾಗವತರ ತೆರದಿ |ಹರಿಯ ಶರಣರೆಂಬ ಹೆಸರು3ಪುತ್ರವತಿಯರೆಂಬ ಹೆಸರು |ಸತ್ಯಶೀಲೆಯರೆಂಬ ಹೆಸರು |ಪತಿಯ ಸೇವೆಯಲ್ಲಿನಿರತ|ಪತಿವ್ರತೇಯರೆಂಬ ಹೆಸರು4ಸತ್ಯಸಂಧರೆಂಬ ಹೆಸರು |ತತ್ವಜÕರೆಂದೆಂಬ ಹೆಸರು |ಚಿತ್ತ ಶುದ್ಧರೆನಿಸಿ | ಗೋವಿಂದಾನ |ದಾಸರೆಂಬ ಹೆಸರು5
--------------
ಗೋವಿಂದದಾಸ