ಒಟ್ಟು 24 ಕಡೆಗಳಲ್ಲಿ , 13 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಮರಾಯ ಪೇಳ್ದ ದೂತರಿಗೆ ಲಕ್ಷ್ಮೀ ರಮಣನ ದಾಸರಿದ್ದೆಡೆಗೆ ಪೋಗದಿರೆಂದು ಪ ವೇದ ವ್ಯಾಕರಣ ಶಾಸ್ತ್ರಗಳೋದಿ ಶ್ರಾದ್ಧವೇ ಕಾದಶಿ ದಿನದಿ ಮಾಡುತಲಿಪ್ಪರಾ ಭೇದಮತವ ಮಿಥ್ಯವೆನುತಲಿಪ್ಪ ಮಾಯ ವಾದಿಗಳೆಳ ತಂದು ನರಕದೊಳಿಡಿರೆಂದು 1 ತಿರಿಪುಂಡ್ರವನಿಟ್ಟು ಭಸ್ಮದೇಹಕೆ ಪಟ್ಟೆ ಕೊರಳಿಗೆ ರುದ್ರಾಕ್ಷಿ ಸರವ ಕಟ್ಟಿ ಕುರಿಗಳ ಕೊಯ್ದು ಯಜ್ಞವ ಮಾಳ್ಪೆವೆನುತಲಿ ಹರಿಹರರೊಂದೆಂಬರೆಳತನ್ನಿರೆಂದು 2 ಶಿವನೆ ತಾನೆಂದು ಜಾನ್ಹವಿ ತೀರದಲಿ ಪಾ ರ್ಥಿವ ಲಿಂಗನ ಪೂಜಿಪ ಅವಿವೇಕರಾ ಶಿವರಾತ್ರಿಗಳಲಿ ಆಹಾರ ಬಿಡುವವರ ಉ ರವ ನರಕದೊಳ್ಪವಣಿ ಬಿಡಿಸಿರೆಂದು 3 ಮಳೆ ಚಳಿ ಬಿಸಿಲು ಕತ್ತಲೆಯೊಳು ಬರಲು ನ ಮ್ಮಿಳೆಯದೊಳು ಸ್ಥಳವಿಲ್ಲೆಂಬರ ಕಳವಿಲವರ ದ್ರವ್ಯಗಳನಪಹರಿಸುವ ಬಲು ನೀಚರ ಪಿಡಿದೆಳೆದು ತನ್ನಿರೋ ಎಂದು 4 ಶ್ರೀ ತುಳಸಿಯ ಬಿಟ್ಟು ಹಲವು ಪುಷ್ಪದಿ ಜಗ ನ್ನಾಥವಿಠಲನ ಪೂಜಿಸುತಿಪ್ಪರಾ ಮಾತನಾಡಿ ವೇದಮಂತ್ರ ಬಿಡುವರ ಯಾತನ ದೇಹವ ಕೊಟ್ಟು ಬಾಧಿಸಿರೆಂದು 5
--------------
ಜಗನ್ನಾಥದಾಸರು
ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1 ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ ಕಾಕುಯುಕುತಿಗಳನ್ನು ತಾರರೋ ಮನಕೆ ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2 ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ ಬಂಡುಣಿಯಂದದಿ ನಾಮಾಮೃತವ ಸವಿವರೋ ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3 ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4 ಜಯಾಜಯ ಲಾಭಾಲಾಭ ಮಾನಾಪಮಾನಾ ಭಯಾಭಯ ಸುಖದುಃಖ ಲೋಷ್ಟ ಕಾಂಚನಾ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5 ಈಶಿತವ್ಯರೆಂಬರೋ ಏಕಾಂತ ಭಕ್ತರೋ ದೇಶಕಾಲೋಚಿತ ಧರ್ಮ ಕರ್ಮಾಸಕ್ತರು ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ಈ ಸುಜನರೇವೆ ಶಾಪಾನುಗ್ರಹ ಶಕ್ತರು 6 ನಗುವರೋ ರೋದಿಸುವರೊ ನಾಟ್ಯವಾಡೋರೊ ಬಗೆಯರೋ ಬಡತನ ಭಾಗ್ಯ ಭಾಗವತರು ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7
--------------
ಜಗನ್ನಾಥದಾಸರು
ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು
ವರಾಹಾವತಾರ ಜಯ ಜಯ ಯಜ್ಞವರಾಹ ಚಿನ್ಮಯ ಮೋದಾತ್ಮಕ ದೇಹ ಭಯವ ಪರಿಹರಿಸೀಗ ಆಲಯವನು ನಿಲಿಸುವ ರಾಗ ಪ. ಬ್ರಹ್ಮನ ನಾಸಿಕದಿಂದ ಪರಬೊಮ್ಮನು ಕಿಟಿಯಾದಂದ ಹಮ್ಮಿನ ದೈತ್ಯನ ಕೊಂದ ಈ ಕ್ಷಮ್ಮೆಯ ಸುಲಭದಿ ತಂದ 1 ಶಿಖಾಮಣಿ ರನ್ನ ಶ್ರೀ ಯಜ್ಞವರಾಹನೆ ನಿನ್ನ ಸುಜ್ಞತೆ ನಂಬಿದೆ ಮುನ್ನ ಸನ್ನøಗ್ಯನೆ(?) ನೀ ಸಲಹೆನ್ನ 2 ಶ್ರೀಪತಿ ವೆಂಕಟರಮಣ ಮಹದಾಪದ್ಗಣ ಹರಚರಣ ಭೂಪತಿ ತೋರಿಸು ಕರುಣ ಸಂತಾಪ ಬಿಡಿಸು ಸಚ್ಚರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸದ್ಗತಿಗೆ ಅನ್ಯ ಸಾಧನ ಹೋಕು ಪ ತನ್ನ ತೋರುವಂತೆ ನಿಜವಾಗೀ | ಮನಸಿನ್ನ ಕದಡು ಗಳಸುವನು ಯೋಗೀ 1 ಓದಿ ಕೇಳಿ ತಿಳಿದರೇನು ಭೇದಿಸದು ನಿಜ ಸುಖ | ಸಾಧಿಸಿ ಬಯಲ ಗಂಬಾರನಲ್ಲಿ | ಮುತ್ತು ಇದ್ದರೇನು ಯಜ್ಞವಾಗದಲ್ಲಿ | ಅದಕ ಸಾಧು | ಜೋಹರೆನೆವೆ ಬುದ್ಧಿಯಲ್ಲಿ 2 ಗರಡಿಲಿಟ್ಟು ಹುಳುವ ತನ್ನ ಗುರುತ ತೋರುವದು ಭ್ರಂಗೀ | ಅರಿಯದೇನು ಜನಾ ಗಾದಿಯಲ್ಲಾ | ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ | ಇದು ಸಾರಿದನು ಮಹಿಪತಿ ಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಮವೇದವ ಶ್ರುತಿಗೊಳಿಪೆ ಪೂರ್ಣಕಾಮನೆ ಪರಮೇಶ ನೀ ವೇದರೂಪಿಸ್ವರವೆತ್ತಿ ಕರೆವದು ಸಾಮ ಅಗ್ನಿಬರಬೇಕು ಅಧ್ವರಕೆಂಬುದು ನೇಮಬರುವನಗ್ನಿಯು ದೇವಸ್ತೋಮ ಬಂದುಬರುಹಿಯಲಿಹನೆಂಬ ಬಿರಿದು ನಿಃಸೀಮ 1ತರತರದಲಿ ವೇದಗಳನೂ ನೀನುಸುರಿಯೆ ಸಹಾಯವ ಮಾಡಿ ಯಜ್ಞವನುಧ್ಧರಿಸಿದೆ ಧರ್ಮವರ್ಧನನು ಮೂರುಬೆರಸಲು ನಿಗಮವು ಮುಖ್ಯವೆಂದಿದನು 2ಮೂರು ಶ್ರುತಿಗಳೇಕದಲ್ಲಿ ಕ್ರತುವಪೂರಿತವನು ಮಾಡಿ ಕಾಲಕಟ್ಟಲೆಯಲಿಸೇರಿಸಿ ತಿರುಪತಿಯಲ್ಲಿ ನೀನೆತೋರಿದೆ ವೆಂಕಟಗಿರಿವರದಲ್ಲಿ 3ಓಂ ತ್ರಿಭಂಗಿನೇ ನಮಃ
--------------
ತಿಮ್ಮಪ್ಪದಾಸರು
ಸಾರಸ ನಯನ ಶ್ರೀರಾಮಚಂದ್ರನ ಚರಿತೆ ಸಾರ ಹೃದಯ ಶ್ರೀ ಪ ಭವ ಮುಖರರ ಮೊರೆಯ ಕೇಳಿ ಧಾರುಣಿಯೊಳಗವತಾರ ಮಾಡಿದನಮ್ಮಾ ಅ.ಪ. ದಶರಥ ಸುತನೆನಿಸಿ ವಸುಧೆಯೊಳವತರಿಸಿ ಕುಶಿಕಸುತನ ಯಜ್ಞವ ನೆರೆಪಾಲಿಸಿ ಅಶಮವಾಗಿದ್ದ ಅಹಲ್ಯೆಯ ಶಾಪ ಪರಿಹರಿಸಿ ವಸುಧೀಶ ಜನಕನಾಸ್ಥಾನ ಪ್ರವೇಶಿಸಿ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯನೊಲಿಸಿ ಅಸಮ ಭಾರ್ಗವನೊಡನೆ ಸರಸವ ನೆಸಗಿ ಜಗದೊಳು ಲೀಲೆ ತೋರಿದ 1 ಜನಕನಾಜ್ಞೆಯ ತಾಳಿ ಜನಕ ಸುತೆಯ ಸಹಿತ ಅನುಜನೊಡನೆ ಹೊರಟು ವನವಾಸಕೆ ಘನಭಕ್ತಿ ಭರಿತ ಶ್ರೀ ಭರತಗೆ ಪಾದುಕೆ ನೀನು ಕರುಣಿಸಿ ಮುಂದೆ ವನದಂಡಕವ ಪೊಕ್ಕು ದುರುಳ ವಿರಾಧಮುಖರನು ಹನನಗೈದಾ ಬಳಿಕ ಶರಭಂಗ ಮುನಿಗೆ ಸದ್ಗತಿಯಿತ್ತಗಸ್ತ್ಯನ ವಿನುತ ಅಸ್ತ್ರಗಳನು ಪಡೆದನಾ 2 ಪಂಚವಟಿಯೊಳಗೆ ಸಂಚುಗೈಯುತ ಬಂದ ಕಾಂಚನಮೃಗವನು ಪಂಚಕಗೊಳಿಸಿ ಕುಂಚಿತ ಮತಿಯ ದ್ವಿಪಂಚಶಿರನು ಬರಲು ವಂಚನೆಯಿಂದಪರಿಹರಿಸಲು ಸೀತೆಯ ಸಂಚುಕಾಣದೆ ವನವನದೊಳು ಸಂಚರಿಸುತಲಿ ಶೋಕ ತೋರುತ ಪಂಚಶರಹತನಂತೆ ಬಳಲುತ ಪಂಚಶರ ಪಿತ ಬಂದ ಪಂಪೆಗೆ 3 ಮಾರುತಸುತನ ವಿನಯಭರಿತ ವಾಕ್ಯಕೆ ಮೆಚ್ಚಿ ತರಣಿಸುತನ ಕೂಡೆ ಸಖ್ಯವ ಬೆಳೆಸಿ ದುರಿತವಗೈದ ವಾಲಿಯ ನಿಗ್ರಹಿಸಿ ಕಪಿ ವರ ಸುಗ್ರೀವಗೆ ರಾಜ್ಯಕರುಣಿಸಿದಾ ಬಳಿಕ ಪರಮ ವಜ್ರಶರೀರಿ ಪವನಜ ಶರಧಿಯ ಲಂಘಿಸಿ ಧರಣಿತನಯಳಿ ಗರುಹಿ ಕುಶಲವ ಮುದ್ರಿಕೆಯನಿತ್ತು ಉರುಹಿ ಲಂಕೆಯ ಬರಲು ಒಲಿದನು 4 ಭಕ್ತ ವಿಭೀಷಣನಿಗೆ ಇತ್ತು ಅಭಯವನು ಶರಧಿ ಬಂಧಿಸಿ ದಾಟಿ ಹತ್ತು ತಲೆಯವನ ಪುರವ ಪ್ರವೇಶಿಸಿ ದೈತ್ಯಶೂರರನ್ನೆಲ್ಲ ಮೃತ್ಯು ವಶವ ಮಾಡಿ ಮತ್ತೆ ಕುಂಭಕರ್ಣೇಂದ್ರಜಿತ್ ಮುಖ ದೈತ್ಯರನು ಸಂಹರಿಸಿ ರಣದೊಳು ಶತ್ರು ಭಯಂಕರನಾಗಿ ಮೆರೆದನು ಸ್ತುತ್ಯ ಮಹಿಮ ಶ್ರೀ ಕರಿಗಿರೀಶನು 5
--------------
ವರಾವಾಣಿರಾಮರಾಯದಾಸರು
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ