ಒಟ್ಟು 20 ಕಡೆಗಳಲ್ಲಿ , 14 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವಾದಿರಾಜರು ಸೋಜಗವೆನಿಸಿ ರಾಜಿಸುತಿದಕೊ ರಾಜರ ಭಾಗ್ಯವಿದು ಪ ಬುಧಜನಕೊಪ್ಪುವ ಪದ ಸುಳಾದಿ ಖಳ ರೆದೆಗಿಚ್ಚೆನಿಸುವ ಚತುರತೆಯಾ ಸದಮಲ ನಾನಾವಿಧ ಗ್ರಂಥದಿ ಹಯ- ವದನನ ಪೂಜೆಯು ಯಜಿಸುವುದೆಲ್ಲ1 ತಮ್ಮಯ ನೇಮವು ಒಮ್ಮಿಗು ಬಿಡದಂ- ತಮ್ಮಯ ಬಿಡದಲೆ ಸಮ್ಮೊಗದಾ ಅಮ್ಮಹ ಶಾಸಖಿ ಬÉೂಮ್ಮಭೂತವನು ಘಮ್ಮನೆ ನಿರ್ಮಿಸಿ ರಮ್ಮಿಪುದೆಲ್ಲ2 ಮೇದಿನಿಯೊಳಗೆ ಶುಭೋದಯಕಾರಕ ಸ್ವಾದೀಸ್ಥಳ ಸರ್ವಾಧಿಕವೈ ಪಾದದ್ವಯದ ಅಗಾಧ ಮಹಿಮನೇ ಶ್ರೀದವಿಠಲನಾರಾಧಿಪುದೆಲ್ಲ 3
--------------
ಶ್ರೀದವಿಠಲರು
ಸಾರಿ ಧ್ಯಾನ ಒಂದಿದ್ದರೆ ಸಾಕೆಲೊ ಸಂ ಸಾರ ತ್ಯಜಿಸುವುದ್ಯಾಕೊ ಪ ಹಿಂಸೆಗುಣಗಳನ್ನು ತ್ಯಜಿಸಿ ಸತತ ಅ ಹಿಂಸೆಯೆಂಬ ಧರ್ಮ ಗಳಿಸಿದರಾಯ್ತೆಲೊ ಅ.ಪ ಜಡಭವತೊಡರನು ಕಡಿದುರುಳಿಸುತ ದೃಢದೆ ಬಿಡದೆ ಕಡುಸತ್ಯ ನುಡಿಯುತ ಅಡಿಗಡಿಗೊಡಲೊಳು ಜಡಜನಾಭ ಜಗ ದೊಡೆಯನಡಿಯ ಧ್ಯಾನಿವಿದ್ದರದೊಂದೆ ಸಾಕೊ 1 ಮೋಸ ಠಕ್ಕು ಕ್ಲೇಶಗುಣ ಕಳೆದು ಭವ ಮೋಸದ ಫಾಸಿಯ ಮೂಲವ ತುಳಿದು ಆಸೆನೀಗಿ ಮನ ಬೆರಿಯದೆ ಜಗ ದೀಶನ ಸಾಸಿರನಾಮ ಧ್ಯಾಸದಿರೆ 2 ಶುನಕನ ಕನಸಿನ ಪರಿಭವನೆನುತ ತನುಮನಧನವೀಡ್ಯಾಡುತ ಅನುದಿನ ಮನಸಿಜನ ಶ್ರೀರಾಮನ ಚರಣವ ಘನತರಭಕುತಿಲಿ ನೆನೆಯುತ ಕುಣಿಯಲು 3
--------------
ರಾಮದಾಸರು
ಶ್ರೀರಾಮ ಜಯರಾಮ ಜಯತುಜಯತು ಸೀತಾರಾಮ ರಾಮ ಚರ-ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ-ಣಾರಿ ನೀನಲ್ಲದೆ ಯಾರಿಲ್ಲಗತಿಜಯ ರಾಮ ರಾಮ1ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ-ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ-ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ-ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ-ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ-ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ-ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4ಮುಖ್ಯ ಸಚಿವ ಮಹಾ ಮುಖ್ಯಪ್ರಾಣನುಸೀತಾರಾಮ ರಾಮ ದುಷ್ಟ-ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ-ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ-ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮವಾಸವಮುಖ್ಯ ವಿಬುಧಾಸುರನುತಸೀತಾರಾಮ ರಾಮ ಸಾಧು-ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ-ಜ್ಞಾನ ಭಕ್ತಿಭಾಗ್ಯ ನೀನಿತ್ತುಪೊರೆಜಯ ರಾಮ ರಾಮಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ-ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮಬತ್ತಿಹೋಗಲಿ ಮೋಹದುತ್ತುಂಗಾರ್ಣವಸೀತಾರಾಮ ರಾಮ ಪರ-ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ-ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ-ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ-ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ-ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ-ಸನ್ನ ನಿನ್ನ ಸ್ಮರಣೆಯನಿತ್ತುಪೊರೆಜಯ ರಾಮ ರಾಮಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣುಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12ನಿತ್ಯನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ-ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ-ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು-ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ-ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14ಅಕುಟಿಲಗುಣಗಳ ಪ್ರಕಟಿಸೆನ್ನೊಳುಸೀತಾರಾಮ ರಾಮ ವಾಯು-ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮಲಕ್ಷುಮಿನಾರಾಯಣ ತ್ರಿಕಣಕುದ್ಧಾಮನೆಸೀತಾರಾಮ ರಾಮ ಬ್ರಹ್ಮಾ-ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹರಿತಾ ದೂರಿಲ್ಲ ದೂರಿಲ್ಲಒರಟು ಮಾತಿನ ಸರಕೆ ಸಲ್ಲ ಪ.ಹರಿದಾಸರ ಸಂಗಕೆ ಸರಿ ಇಲ್ಲ ಗುರುಕೃಪೆಯಿರಲಿ ನಿತ್ಯೆಲ್ಲತರತಮವಿರಹಿತಗೆಲ್ಲಿ ಕೈವಲ್ಯವು ಅ.ಪ.ಧರ್ಮಾಥರ್Àಕಾಮ ಮೋಕ್ಷವನಿಚ್ಛಿಸುವನಿರ್ಮಳ ಮತಿಗಳಿಗಾವಾಗಕರ್ಮದ ಮೋಡಿಗೆ ಸಿಲುಕದವನಗುಣಕರ್ಮನಾಮೋಚ್ಚರಣೆ ಸಾಧನ1ಜ್ಞಾನ ಭಕುತಿ ವೈರಾಗ್ಯ ಹೊಲಬಲಿನಾನಾ ವ್ರತವ ಮಾಡಲು ಬೇಕುಹೀನಕೇಳಿಕೆ ಕಾಳಿಕೆಯನುಳಿದುನಿತ್ಯಶ್ರೀನಿವಾಸನೆಗತಿಎನ್ನಲು2ಸಂತತ ಅಂಗದಿ ಬಲವಿರುವನಕಕಾಂತ ಪ್ರಸನ್ವೆಂಕಟಪತಿಯಅಂತರಂಗದಿ ಚಿಂತಿಸಿ ಕಳೇವರವನುಪ್ರಾಂತಯಾತ್ರೆಗೆ ತ್ಯಜಿಸುವಗೆ 3
--------------
ಪ್ರಸನ್ನವೆಂಕಟದಾಸರು