ಒಟ್ಟು 98 ಕಡೆಗಳಲ್ಲಿ , 4 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶ್ರೀ ಗುರುಲಿಂಗ ಶರಣು ಮುನಿಜನಸಂಗ ಶರಣುಭವ ಭಯ ವಿಭಂಗಾ ಪ ಪಾವನಿ ಜಾನ್ಹವಿಯ ತೀರದಲಿ ಕಾಶೀ | ಪುರ ವಿಶ್ವನಾಥನೆನಿಸೀ | ಹರುಷದಲಿ ನಿಂದು ಮತ್ತೊಂದು ರೂಪದಲಿ ತೆರಳಿ | ಧರೆಯ ದೇಶವ ನೋಡುತಾ ಬರುತಾ 1 ಮೊದಲೆ ತಾ ಕೃಷ್ಣ - ವೇಣಿ ಮ್ಯಾಲುತ್ತರವಾಹಿನಿ | ಸದಮಲ ಸುಖ ಕಾರಿಣೀ | ಇದ ನರಿತು ನಡಿ ಮಧ್ಯೆ - ಉತ್ತರೇಶ್ವರ ನೆನಸಿ | ಮುದದಿಂದ ಬಂದು ನಿಂದು || 2 ಸಖನ ದರುಶನ ನೆವದಿ ಬರುತಿರಲು ನಾ ನಿಮ್ಮ ಪ್ರಕಟದಲಿ ಕಂಡೆ ನಿಂದು | ಭಕುತಿಯಚ್ಚರ ನೀಡು ಗುರು ಮಹೀಪತಿ ಸ್ವಾಮಿ | ಸಕಲ ಸುರರಾಜ ಮಾದ್ಯ ಧನ್ಯಾ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗುರುವೇ ನೀ ತೋರಿಸೋ ದಯದಿಂದ ಲೆನಗೆ | ಬೇಗದಿ ಬಂದೆನ್ನ ದೇವನೀಗ ಪ ತೈಲ ಯಂತ್ರ ದೊಳಿಪ ಪಶುವಿನಂದದಿ ಜೀಯಾ | ಹಲವು ಜನ್ಮವ ತಾಳಿದೆನಯ್ಯಾ 1 ನಿನ್ನ ಸ್ಮರಣೆ ಮರೆದು ನಾನಾ ಉಪಾಸನೆ ವಿಡಿದು | ಬನ್ನ ಬಟ್ಟೆನೋ ಯಚ್ಚರ ಜರಿದು2 ಭವ ಬಂಧನ ಹರಿವಾ | ಸೂರೆಗೊಳಲಿಲ್ಲಾ ಭಕ್ತಿ ಸುಖವಾ3 ಸರ್ವಾಪರಾಧವಾ ಕ್ಷಮಿಸಿ ಯನ್ನುದ್ಧಾರವಾ | ಉರ್ವಿಲಿ ಮಾಡು ಪಿಡಿದು ಕರವಾ 4 ಇಹಪರ ಸಹಕಾರ ಕರುಣಾಬ್ದಿ ಪಾರಾವಾರಾ | ಮಹಿಪತಿ ಸುತ ಪ್ರಭು ಉದಾರಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತ್ಸಂಗದ ಫಲ ಸದ್ಭಾವಿಯಾದವ ಸೇವಿಸಿಕೊಂಬುವನೈ | ಮತ್ಸರ ಮದದಲಿ ಯಚ್ಚರಗೊಳದಾಧಮ ಬದಿಲಿದ್ದೆ ನೈ ಪ ಬದಿಲಿಹ ಮಂಡೂಕಗೇನೈ | ಶ್ರೀಮಂತರು ಹಾಲವಕರಕೊಂಬರು | ಉಣ್ಣಿಗೆ ಫಲವೇನೈ 1 ಬಿದಿರು ಬೊಬ್ಬುಹಳಿಗೇನೈ | ಆಗಮಜ್ಞರ ವಿದ್ಯಾ ವ್ಯುತ್ಪನ್ನಗಲ್ಲದೇ ಜಡಮತಿಗಳಿಗೇನೈ | 2 ಭೂಗತ ಧನವದು ವಂಶಜಗವಲ್ಲದೇ | ಕಾದಿಹ ಫಣಿಗೇನೈ | ನುಡಿಯಿದು ನಂದನು ಸಾರಿದನೈ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಡು ಸುಡು ಯಾತರ ಬುದ್ಧಿ ಹರಡುವ ಸಲ್ಲಾ ಪ ಸಾಧುರ ಮಹುಮೆಯ ಕಂಡವರಂತೆ | ವಾದಿಸಿ ತಿರುಗುವದಲ್ಲಾ 1 ಕಾಗೆಯು ಕರ್ರಗೆ ರೂಪದಲ್ಲಿದ್ದರೆ | ಕೋಗಿಲೆವಾಗುವದಲ್ಲಾ 2 ಬಕ ಹಂಸನ ಪರಿಯಾದರ ಕ್ಷೀರೋ | ದಕ ಬೇರಾಗುವದಿಲ್ಲಾ 3 ನೌಲ ಕಂಡು ಹಕ್ಕಿಯು ಕುಣಿವಂತೆ | ಹೋಲಿಕಿ ಗುಣ ಬಿಡುಯಲ್ಲಾ 4 ಮಹಿಪತಿ ನಂದನು ಸಾರಿದ ನೆಚ್ಚರ | ಸ್ವಹಿತವ ಪಡೆಯಚ್ಚರಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ಗೋವಿಂದ ಯನಬಾರದೇ ಪ್ರಾಣಿ ಪ ಹರಿ ಹರಿ ಗೋವಿಂದಯನಲು ಭಕುತಿಯಲಿ | ಹರಿಸುವ ಪಾಪೌಘವನು ಸಾರಂಗ ಪಾಣೀ 1 ವೃತ ತಪ ಸಾಧನದಿಂದಲೀ ನಿಲುಕದ ನಿಜಗತಿಯಾ| ಕ್ಷೀತಿಯೋಳು ಸುಲಭದಿ ಕೊಡುವನು ದೀನಾಭಿಮಾನಿ 2 ತಂದೆ ಮಹಿಪತಿ ಕಂದಗ ಸಾರಿದ ಯಚ್ಚರ ನೀ | ಛಂದದಿ ಇಹಪರ ನೀವದು ಯದುರಾಜ ಸ್ಮರಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯಂದೆನ್ನಿ ಪ ಕಪಿಲಾ ಗೋ ಸಹಸ್ರವನು ಸಾಲಂಕಾರದಿ ಸಕಲ | ನಿಪುಣಗ ನೀಡಿದ ಫಲಾ 1 ರಾಜಸೂಯಾಶ್ವಮೇಧ ಮೊದಲಾದ ಯಜ್ಞಗಳು | ತ್ಯಾಜ್ಯದಿ ಮಾಡಿದ ಫಲಾ 2 ಕಾಶಿ ರಾಮೇಶ್ವರದಿ ತೀರ್ಥಂಗಳಾ | ವಾಸದಿ ಮಿಂದ ಫಲಾ 3 ಪರಿ ಪರಿ ಪರಿ ತಪಗಳಾ | ಚರಿಸಿ ತಿರುಗಿದ ಫಲಾ 4 ತಂದೆ ಮಹಿಪತಿ ಪ್ರಭು ಯಚ್ಚರಿಸಿದ ಸ್ವಕೀಲಾ | ಬಂದ ಜನುಮಕ ಸಫಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಹರಿ ಕೊಡು ನಿನ್ನಯಚ್ಚರನು ಶರಣವಾ ಧೃಡದಲಿ ಬಂದೆನಾನು ಪ ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ 1 ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ 2 ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ | ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ 3 ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ | ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ 4 ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಡಿ ಸಾಧು ಸಂತರಾ ಸಂಗೆನ್ನ ಮನವೆ | ಹಿಡಿ ಸಾಧು ಸಂತರ ಸಂಗಾ | ಪೊಡವಿಲಿ ಭವಭಯ ಬಿಡಿಸಿ ಮುಕುಂದನ | ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ ಐದು ವರುಷ ಮಗನೈದಿದ ತಪದಲಿ | ಸಾಧು ಸಂಗನೇ ಹೊರೆಯಿತು | ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ | ಲ್ಹಾದನ ಯಚ್ಚರಿಸಿತು | ಹಾದಿಯೊಳಗ ರಾಹುಗಳ ರಾಯಾಗಾಗಲು | ಸಾಧು ಸಂಗುದ್ಧರಿಸಿತು | ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ | ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ 1 ವನಜಭವನ ಲೋಕದಲಿ ಸಾಧು ಸಂಗವು | ಸನಕಾದಿಕರ ಹೊರೆಯಿತು | ವನದಲಿ ಯದುರಾಯಗಾಗಲು ಸತ್ಸಂಗ | ಅನುಭವ ಸುಖ ದೊರೆಯಿತು | ವಿನಯದಿ ಸತ್ಸಂಗ ದೇಹೂತಿ ಮೊದಲಾದ | ಮುನಿಜನರುದ್ಧರಿಸಿತು | ರಣದಲ್ಲಿ ಅರ್ಜುನಗಾಗಲು ಸತ್ಸಂಗ | ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ 2 ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ | ನಂದನ ಸುಖ ಬಿಡಿಸಿತು | ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ | ಇಂದೆನ್ನ ಧನ್ಯಗೈಸಿತು | ಪಾದ ಪದುಮಸಂಗ | ನಂದನುದ್ಧರಿಸಿತು | ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ | ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು