ಅಮ್ಮಬಾರೆ ನಮ್ಮಮ್ಮನೆ ನೀನಮ್ಮ
ಅಮ್ಮಬಾರೆ ನಮ್ಮಮ್ಮನೆ ಧ್ರುವ
ಅಮ್ಮಬಾರೆ ನಮ್ಮಮ್ಮನೆ ನೀ
ನಮ್ಮ ಬೊಮ್ಮನ ಪಡೆದಮ್ಮ ನೀ ಪರ
ಬ್ರಹ್ಮ ನೀನಹುದಮ್ಮ ನೀನಮ್ಮ
ಅಮ್ಮಬಾರೆ ನಮ್ಮಮ್ಮನೆ 1
ಉಮ್ಮ ಸವಿದೊಮ್ಮೆ ಅಮ್ಮೆ ನಾ ನಿನ್ನ
ಸುಮ್ಮನಿರುವೆ ನಾ ಒಮ್ಮನದಲೆಮ್ಮೆ
ಇಮ್ಮನಡಿಬೇಡೆ ಅಮ್ಮೆ ನಾನ ನಿಮ್ಮ
ಒಮ್ಮೆ ಅಮ್ಮಿಯಾಲಮೃತ್ಯೆರಿ ಅಮ್ಮಾ 2
ಒಮ್ಮೆ ದಯವೆಂಬ ಅಮ್ಮನುಣಿಸಮ್ಮಾ
ನಮ್ಮ ಕರುಣದಾ ಅಮ್ಮನುಣಿಸಮ್ಮಾ
ಒಮ್ಮೊಮ್ಮುಣಿಸ ನಮ್ಮಮ್ಮ ನೀನಮ್ಮಾ
ರಮ್ಮಿಸಿ ಮಹಿಪತಿ ಬಾಲಕಗ ನಿಮ್ಮ 3