ಒಟ್ಟು 25 ಕಡೆಗಳಲ್ಲಿ , 15 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕಮಾತೆಯೆ ದಯಮಾಡೆ ತಾಯೆ ಪರಿ ಪೂಜಿಪೆ ಶ್ರೀಪತಿಯ ಸತಿಯೆ ಪುಲ್ಲನಾಭನ ಕೂಡಿ ಮೆಲ್ಲಡಿ ಇಡುತಲಿ ಉಲ್ಲಾಸದಿಂದಲಿ ಬಂದು ಕಾಯೆ ತಾಯೆ 1 ನಿತ್ಯ ಮಂಗಳನಾಗೆ ಅಚ್ಚುತನರಾಣಿ ನಿಚ್ಚದಿ ಭಕ್ತಿ ಜ್ಞಾನವಿತ್ತು ಕಾಯೆ ತಾಯೆ 2 ವಕ್ಷಸ್ಥಳದಲಿ ನಿಂತೂ ಕಾಯೆ ತಾಯೆ ಪಕ್ಷಿವಾಹನ ರುಕ್ಮಿಣೀಶ ವಿಠಲನ ರಾಣಿ 3
--------------
ಗುಂಡಮ್ಮ
ಶಾರದೆ ಪೊರೆಯೆನ್ನಾ - ಮಾತೆಯೆತೋರಿಸಿ ತವ ಚರಣಾ ಪ ಶಾರದೆ ತವ ಪದ | ಸಾರಿ ಭಜಿಸುವೆನುದೊರಗೈವುದೆನ್ನ | ಭಾರಿ ಅಜ್ಞಾನವ ಅ.ಪ. ವೀತ ದುರಿತೆ ಖ್ಯಾತೇ | ಶಿವಮಾತೆಯೆ ಸದ್ಗುಣ ಗಣ ವ್ರಾತೇ ||ಶಾತಕುಂಭೋಧರ | ಪ್ರೀತಿ ವಿಷಯ ಜಗನ್‍ಮಾತೆಯೆ ಹರಿಗುಣ | ಗಾಥೆಯ ಗೀತೆಯೆ 1 ಹಯಾಸ್ಯ ಪದದಲಿ 2 ಈಶಾಹಿ ವಿಹಗೇಂದ್ರಾ | ಸ್ವರ್ಗಾಧೀಶಾಧಿಪರು ಛಂದಾ ||ಮೀಸಲು ಮನದಲಿ | ಕ್ಲೇಶಗಳಿಲ್ಲದೆತಾಸು ತಾಸಿಗೆ ನಿನ್ನೆ | ಸೂಸಿ ಭಜಿಸುವರು 3 ನರಹರಿ ಗುರುಭಕ್ತೀ | ಬ್ರಾಹ್ಮೀಸರಸ್ವತಿ ಗಾಯಿತ್ರೀ ||ಅರ ವಿದೂರ ನರ | ಹರಿಯನು ಭಜಿಸುವಸುರ ಚಿರ ವಾಣಿಯ | ಕರುಣಿಸು ವಾಣೀ 4 ಪರ ಬೊಮ್ಮಾ |ಭಾವಜ ಪಿತ ಗುರು | ಗೋವಿಂದ ವಿಠಲನಓವಿ ಭಜಿಸುವಂಥ | ಭಾವವ ನೀಯೇ 5
--------------
ಗುರುಗೋವಿಂದವಿಠಲರು
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು
ಸೀತಾದೇವಿಯೆ ಶ್ರಿತ ಸಂಜೀವಿಯೆ ಪ ಮಾತೆಯೆ ಪಾಲಿಸು ಮೊರೆಯನು ಲಾಲಿಸು ಅ.ಪ ಜನಕರಾಯನ ಪುತ್ರಿ ಜಗದೇಕ ಪವಿತ್ರಿ ಜನನಿ ಜನಯಿತ್ರಿ ಘನ ಶೋಭನ ಗಾತ್ರಿ 1 ದುರ್ಜನ ದೈತ್ಯವಿದಾರೆ ದೂರೀಕೃತ ಸಂಸಾರೆ2 ಸಮ್ಮತದೊಳಿರಿಸು ದುರ್ಮತವ ಬಿಡಿಸು ಸು | ಬ್ರಹ್ಮ ಜ್ಞಾನವ ಪಾಲಿಸು ಮರ್ಮವನು ಬೋಧಿಸು3 ವನಜದ ಸೇವೆ ಸದಾ ಎನಗೀಯೆ ತಾಯೆ 4 ಕಲುಷ ಪರಿಹಾರಿಣಿ ಕಮಲಪಾಣಿ ರುಕ್ಮಣಿ ಜಲಜಾಕ್ಷ ಗುರುರಾಮ ವಿಠಲನ ಪಟ್ಟದ ರಾಣಿ5
--------------
ಗುರುರಾಮವಿಠಲ
ಸೂರೆಮಾಡೆ ವರಗಳ ಹೊಸೂರ ದೇವತೆ ತೋರೆ ನಿನ್ನ ದಯವ ತುಂಬಿಕೊಂಡು ನಾ ಪೋಗುವೆನು ಮನೆಗೆ ಪ ಶೀಘ್ರದಿಂದ ನಿನ್ನ ಸಾಲಿಗ್ರಾಮವುಳ್ಳ ನೇತ್ರದಿಂದ ಅ- ನುಗ್ರ (ಹ) ಮಾಡಿ ನೋಡೆ ಎನ್ನ ಶಿರಬಗ್ಗಿಸ್ವಂದನೆ ಮಾಡುವೆನು 1 ರೇಣುಕಾಂಬ ನಿನ್ನ ಪಾದರೇಣು ತೋರೆ ಕರುಣದಿಂದ ಕಾಣೆ ನಿನ್ನ ಸರಿ ಲೋಕದೊಳಗೆ ಪಾಣಿ ಹಿಡಿಯೆ ಪಾಲಿಸೆನ್ನ 2 ಸತ್ಯವಂತೆ ಕಳೆಯೆ ಈ ತಾಪತ್ರಯ ದಾರಿದ್ರ್ಯ ದೋಷ ನಿತ್ಯದಲಿ ನಾ ನಿನ್ನ ಭಾಳ ಭಕ್ತಿಯಿಂದ ಬೇಡಿಕೊಂಬೆ3 ಬಾಳೆದಂಡಿಗೆ ಪಾಯಸ ನಿನ್ನ ಭಾಳ ಮಹಾತ್ಮ್ಯಗಳನೋಡಿ ಅ- ಕುಸುಮ ಕುಂಕುಮ ಬೇಡುವೆ ಪ್ರಸಾದವನ್ನು 4 ಜಮದಗ್ನಿಸತಿಯೆ ನೀ ಭೀಮೇಶಕೃಷ್ಣನಾದ ಭಾರ್ಗವ- ರಾಮನ ಮಾತೆಯೆ ಕರುಣದಿ ಕಾಮಿತಾರ್ಥವ ಕೊಟ್ಟು ಕಾಯೆ 5
--------------
ಹರಪನಹಳ್ಳಿಭೀಮವ್ವ
ಹಸೆಗೆ ಬಾರೆ ಸುಂದರಿ ಓ ಪ ಬಿಸಜಾಲಯೆ ಜನಕ ಕುಮಾರಿ ಅ.ಪ ಮುತ್ತು ಮಾಣಿಕದ ಪೀಠವಂ ಭಕ್ತಿಯಿಂದ ಅಲಂಕರಿಸಿ ಮಿತ್ರೆಯರೆಲ್ಲರು ಕರೆವರು 1 ಸುತ್ತ ಜ್ಯೋತಿಯು ಬೆಳಗಲು ಮತ್ತೆ ಮೆಲ್ಲಡಿಯಿಡುತಲಿ ಓ ಬಿಸಜಾಲಯೆ 2 ಭೂಮಿಜೆ ಲೋಕಮಾತೆಯೆ ಕಾಮಿತಪ್ರದೆ ಶ್ರೀ ಗುರುರಾಮ ವಿಠಲನರಸಿಯೆ 3
--------------
ಗುರುರಾಮವಿಠಲ
ಶ್ರೀ ಪ್ರಸನ್ನ ಶ್ರೀನಿವಾಸ ಕಲ್ಯಾಣ (ಅಣು)34ಮೇರು ಸುತ ಗಿರಿವಾಸ |ಶರಣಾದೆ ನಿನ್ನಲಿ ವಿಶ್ವಜನ್ಮಾದಿಕರ್ತನಿರ್ದೋಷ|||ಶ್ರೀ ಶ್ರೀನಿವಾಸ ||ವಿಷ್ಣು ಸರ್ವೋತ್ತಮ ಸಾಕ್ಷಾತ್ |ರಮಾದೇವಿ ತದಂತರಾ |ತದಧೌವಿಧಿವಾಣ್ಯೌಚ ತತ್ವವನು ಪ್ರತ್ಯಕ್ಷ ಭೃಗುಗೆ |ತಿಳಿಸಿ ಲಕ್ಷ್ಮಿಯ ಇಳೆಯ ಜನರಿಗೆ ಒಲಿಯೆ ಕಳುಹಿಸಿ |ವ್ಯಾಳಗಿರಿವಲ್ಮೀಕಪೊಕ್ಕಿ ಶ್ರೀವತ್ಸಶರಣು |ಶರಣು ಹೇ ಸರ್ವ ಹೃದ್ಗುಹಾಂತಸ್ಥವಿಶ್ವ ಪವೃಷಭಅಂಜನಶೇಷ|ವೇಂಕಟಾದ್ರಿಯ ನೆನೆಯೆ ಪಾಪವಿನಾಶ |ಶ್ರೀಸ್ವಾಮಿತೀರ್ಥದ ದಕ್ಷಪಾಶ್ರ್ವಪರೇಶ ||| ಶ್ರೀ ಶೇಷಾಚಲೇಶ ||ಅರ್ಚಿಪರ ಸಂರಕ್ಷಿಪುದು ನಿನ್ನಪಣವು ಆದುದರಿಂದ ಗೋಪಾನ |ಆಸಿಯತಲೆಯಲಿ ತಡೆದು ಗೋವನು ಕಾಯ್ದ _ಕರುಣಿಯೆ ಭಕ್ತವತ್ಸಲ |ತುಚ್ಛಗೋಪನು ಭಯದಿ ಅಸುಬಿಡೆಚೋಳರಾಯಗೆ ಶಾಪವಿತ್ತು |ಅಚ್ಚುತನೆ ನೀದೇವ ಗುರುವಿನ ಸೇವೆಕೊಂಡು ನಿನ್ನರೂಪ |ಸ್ವಚ್ಛಚಿನ್ಮಯ ಭೂವರಾಹನ ಸಹವಿನೋದ ಲೀಲೆಮಾಡಿ |ಪ್ರೋಚ್ಚನಂದದಿ ಕ್ಷೇತ್ರ ಸಹಬಕುಳಾ ಯಶೋದೆಯ -ಪಾಕಕಾಗಿ ಸ್ವೀಕರಿಸಿ ಹೇ ದಯಾನಿಧೇ ನಿತ್ಯತೃಪ್ತ 1ಅಸಮ ಸತ್ಯವಾಗೀಶ |ಜಗನ್ಮಾತೆಯೆಂದು ಪೇಳಿದಂತೆ ಆಕಾಶ |ಕಂಡಪದ್ಮದಿ ಪದುಮ ಸುಮುಖವಿಲಾಸ |ಶಿಶುವಕೊಂಡಳು ಧರಣಿ ಬಹು ಸಂತೋಷ ||| ದಿಂದ ವಿಹಿತ ಆಶ ||ಧರಣಿದೇವಿ ಆಕಾಶರಾಜನ ಸುತೆಪದ್ಮಾವತಿಯೆಂಬ ನಾಮದಿ |ಪುರಿಯ ಹೊರಗೆ ಪುಷ್ಪವನದಲಿ ಸಖಿಯರೊಡನೆ ಆಡುವಾಗ |ನಾರದನು ಬಹು ವೃದ್ಧರೂಪದಿ ಬಂದು -ಹಸ್ತರೇಖೆ ನೋಡುತ |ಶ್ರೀರಮಾಲಕ್ಷಣವ ಕಾಣುತ ಬ್ರಹ್ಮದೇವನ ತಾಯಿ ಅಂಗಿಯು |ಮಾರಜನಕನೆ ಪತಿಯು ಎಂದು ಪೇಳಿತೆರಳೆ ಶಿರಿಯ ಸ್ಮರಿಸುತ |ಏರಿ ಕುದುರೆಯ ವನದಿ ಪದ್ಮಾವತಿ ಸಂಗಡ -ಆಟವಾಡಿದಿ ಹೇ ದಯಾನಿಧೇ ಶ್ರೀಶಸ್ವರಮಣ 2ಧರಣಿಯೊಡನೆ ಸಂವಾದ |ಮಾಡೆ ಬಕುಳಾ ಪೋಗೆ ನೀನು ಪುಳಿಂದ |ವಿಧಿವತ್ಸರುದ್ರನು ದಂಡ ಗುಲ್ಮಬ್ರಹ್ಮಾಂಡ |ಹಾರ ಗುಂಜಾಕಂಬುವೇಷದಿ ಪೋದಿಯೋ ಮುದದಿಂದ ||| ಕಣಿಪೇಳ್ವ ಚೆಂದ ||ಧರಣಿಪದ್ಮಗೆ ಕಣಿಯಪೇಳಿ ಮದುವೆ ನಿಶ್ಚಯಮಾಡಿ ಬಂದೆಯೋ |ಭರದಿಶುಕಆಕಾಶರಾಜ ಲಗ್ನಪತ್ರವಕೊಡಲು ಬ್ರಹ್ಮ-ಗರುಡಶೇಷಶಿವಾದಿಸುರ ಮುನಿಜನರ ಬಕುಳಾ ಲಕ್ಷ್ಮೀಸಹ ನೀ |ಪೊರಟುಮಾರ್ಗದಿ ಶುಕಮುನಿಯ ನೈವೇದ್ಯ ಉಂಡು ಜನರತೃಪ್ತಿಸಿ |ಸೇರಿಪುರಿಯ ಅಜರ ಮಂದಿರ ಪೋಲ್ವ -ಮನೆಯಲಿ ಪದ್ಮಾವತಿಗೆ ಮಾಂಗಲ್ಯ ಧರಿಸಿದಿ |ಸರಸಿಜಾಸನತಾತಪ್ರಸನ್ನ ಶ್ರೀನಿವಾಸನೆವಿಶ್ವಪಾಲಕ ಹೇ ದಯಾನಿಧೇ ಶರಣು -ಶರಣು ಹೇ ಸೌಭಾಗ್ಯದಾತಾ ಪ. 3||ಶ್ರೀ ಪ್ರಸನ್ನ ಅಣು ಶ್ರೀನಿವಾಸ ಕಲ್ಯಾಣ ಸಂಪೂರ್ಣ||
--------------
ಪ್ರಸನ್ನ ಶ್ರೀನಿವಾಸದಾಸರು