ತಾಯೆ ಕೇಳೆನ್ನ ಬಿನ್ನಪವ ಬಲು
ಮಾಯ ಕಾರನು ಕೃಷ್ಣ ಮಾಡಿದೊಳಿಗವ ಪ
ಮಕ್ಕಳೂಳಿಗವ ತಾಯ್ಗಳಿಗೆ ಹೇಳ
ತಕ್ಕುದು ನೀತಿ ಕೇಳವ್ವ ನಿಮ್ಮಡಿಗೆ
ಠಕ್ಕನ ದೆಸೆಯಿಂದ ದಣುಕೊಂಬುದೆಮಗೆ 1
ಬೆಳಗು ದೋರದ ಮುನ್ನ ಬರುವ ಕೃಷ್ಣ
ನೆಲುವಿನ ಪಾಲ್ಬೆಣ್ಣೆಗಳ ಕದ್ದು ಮೆಲುವ
ನಿಲುಕದಿದ್ದರೆ ಕಲ್ಲಲಿಡುವ
ಒಳ ಹೊರಗೆಲ್ಲ ಕ್ಷೀರ ಸಮುದ್ರವ ಕರೆವ 2
ಉಂಡುದ ಕಳಲುವರಲ್ಲ ನೆಲನುಂಡು ಕೆಟುದು
ಪಾಲು ಬೆಣ್ಣೆಗಳೆಲ್ಲ ಮೊಸರ
ಬಾಂಢವೆಂದರೆ ಬರಲೊಲ್ಲ ಇವನ
ಕಂಡೆನೆಂದರೆ ಸುಳುಹನೆ ಕಾಣಲಿಲ್ಲ 3
ಹೆಣ್ಣ ಮಕ್ಕಳನಿರಗೊಡನು ಬಲು
ಬಣ್ಣಿಸಿ ಕರೆದು ಮುದ್ದಿಸಿ ಆಡುತಿಹನು
ಚಿಣ್ಣರಂದದಿ ಕಾಣುತಿಹನು ತೊಂಡೆ
ವೆಣ್ದಟಿಯ ನಗಲಿಸಿ ನೋಡಿ ನಸುನಗುತಿಹನು 4
ಆಸೆ ನಮಗೆ ಊರೊಳಿಲ್ಲ ಪರ
ದೇಶಕ್ಕಾದರೂ ಹೋಗಿ ಜೀವಿಪೆವೆಲ್ಲ
ಬೇಸರಾಯಿತು ನಿಮಗೆಲ್ಲ ನಮ್ಮ
ಪೋಕ್ಷಿಸುತಿಹ ಲಕ್ಷ್ಮೀರಮಣನೆ ಬಲ್ಲ 5