ಒಟ್ಟು 18 ಕಡೆಗಳಲ್ಲಿ , 12 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲದಲ್ಲಿ ಪಸರಿಸಿದ ಪಾಲಮೇಲೊರಗಿದ್ದಹಳೆಯ ಹಾವ ಕಂಡೆನದರಲದ್ಭುತವ ಕಂಡೆ ಪ.ನಡುಗಡಿದ ಸಿಂಗಡಿಯ ಬಿಲ್ಲ ಕಂಡೆನದರಮೇ-ಲ್ಗಡೆಯಲಧೋಮುಖದ ತುಂಬಿಗಳ ಹಿಂಡ ಕಂಡೆಮಡುವೆರಡ ಕಡೆಯಲ್ಲಿ ಒಂದೊಂದು ಮಕರಿಯ ಕಂಡೆಕಡೆದ ಶಂಖ ಚತುರ್ವೇದಕೊದಗುವುದ ಕಂಡೆ 1ಪದುಮದೆಸಳ್ಗಳಿಗೆ ಮೂರು ವಿಧದ ಬಣ್ಣವ ಕಂಡೆಮೃದುವಾದ ಕೂರ್ಮಗಳ ಬೆನ್ನಸೊಬಗ ಕಂಡೆಮಧುರ ಪವಳೊಳಗೆ ಪುಟ್ಟ ಕರಡಿಗೆಯ ಕಂಡೆಅಧೋಮುಖದ ಸಂಪಿಗೆಗೆರಡು ವಿವರವ ಕಂಡೆ 2ನೇಲುತಿದ್ದ ಲತೆಗಳ ತುದಿಯ ಜಾಲವ ಕಂಡೆ ವಿ-ಶಾಲವಾದ ನೀಲಮಣಿಯ ಹಲಗೆಯಲಿ ಹೆಣ್ಣ ಕಂಡೆಏಳು ಲೋಕಗಳೊಳಗೆ ಪುಟ್ಟ ಕರಡಿಗೆಯ ಕಂಡೆಈ ಲೋಕವ ಮೋಹಿಸುವ ಮೂರು ಚಿನ್ನದಕೋಲಕಂಡೆ3ಬಾವಿಯೊಳು ಪುಟ್ಟಿಕೊಂಡ ಸ್ಥೂಲ ಪದ್ಮವ ಕಂಡೆಭಾವಿಸೆ ಕರಿಯಿಲ್ಲದ ಕುಂಭಸ್ಥಳವ ಕಂಡೆಆವಾಗಳಿವಿಲ್ಲದಕದಳಿಕಂಬಗಳ ಕೆಳಗೆಈ ವಸುಧೆಯ ಮೋಹಿಸುವೆರಡು ಕನ್ನಡಿಗಳ ಕಂಡೆ 4ಬೆಳೆದೆರಡು ಗಜದಂತಗಳ ಕಂಡೆ ನಳನಳಿಪನಳಿನಯುಗ್ಮವ ಕಂಡೆನದರೆಸಳುಗಳಲ್ಲಿತೊಳೆದ ಹತ್ತು ಮುತ್ತುಗಳ ಕಂಡೆ ಬೇಗದಲಿ ಶ್ರೀ-ಲಲನೆಯಾಳ್ದ ಹಯವದನನಾಳ್ಗಳೆ ಬಲ್ಲರೈಸೆ 5
--------------
ವಾದಿರಾಜ
ಮಂಗಳಾನನ ರಂಗ ಕರುಣಾಪಾಂಗವೆಂಬ ಪತಂಗದಿಂದಘತುಂಗತಿಮಿರವಿಭಂಗ ಭಕ್ತರ ಇಂಗಿತವನೀವುದುಪ.ಮಾರನ ಮನೋಹರ ಮದ ಅಂಧಕಾರ ಕವಿಯಲು ಕ್ರೂರವಿಷಯವಿಕಾರ ಭವವೆಂಬಪಾರಾಂಬುಧಿಯೊಳು ದಾರಿದೊಡಕಿದೆ ನಾಆರೆನಾರದತಾತಕರುಣಾಳುತೋರಿ ನಿನ್ನಯಚಾರುಮೂರುತಿಯಘೋರಕಲುಷವಿದೂರಮಾಡುಮಂದರಧರಮುಕುಂದ1ಪ್ರಿಯ ಮನಮುನಿಗೇಹಮಲೆತಇಂದ್ರಿಯಗಳಿಗೆ ಸಹಾಯವಾಗಿದೆಹೇಯವಿಲ್ಲದ ನಾಯಿಮನವೆನ್ನ ನೋಯನೋಯಿಸುತಿದೆಕಾಯಬೇಕೆಲೆಜೀಯಕರಿಮಕರಿಯ ಬಾಧೆಗೆ ಬಾಯಿ ತೆರೆಯೆ ಪೊರೆಯಬೇಕೆಂದು ಕೆಲದೆ ಎಸೆದಿರಲು ತಾಯಿಪಿತನಾರೆಂದು 2ಮನ್ಮಥಪಿತಚಿನ್ಮಯಾತ್ಮಕಮುನ್ನಸಂಚಿತಘನ್ನಕರ್ಮವುಬೆನ್ನ ಬಿಡದು ದುರ್ಜನ್ನ ಸಂಗದಿ ಖಿನ್ನನಾದೆ ನಾಉನ್ನತಗುಣಪೂರ್ಣಎಂದೆಂದುನಿನ್ನ ದಾಸರನ್ನು ಕೂಡಿಸುಪನ್ನಗಾದ್ರಿ ಪ್ರಸನ್ನವೆಂಕಟರನ್ನ ಜಗಜೀವನ್ನ 3
--------------
ಪ್ರಸನ್ನವೆಂಕಟದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು