ಒಟ್ಟು 21 ಕಡೆಗಳಲ್ಲಿ , 11 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವರತ್ನ ಖಚಿತ ಮಾಣಿಕ್ಯದ ಮಂಟಪದಿನವವಿಧದ ಹಂಸತೂಲಿಕ ತಲ್ಪದಲಿಭುವನಮೋಹನ ಶ್ರೀಹರಿಪವಡಿಸಿರಲುಕವಿಗಳು ಪೊಗಳಿ ಪಾಡುವರು ಶ್ರೀಹರಿಯೆಏಳಯ್ಯ ಬೆಳಗಾಯಿತು 1ನಾಗಶಯನನೆ ಏಳು ನಾಗಾರಿವಾಹನನೆನಾಗಸಂಪಿಗೆ ಪಾರಿಜಾತವರಳುತಿದೆಬೇಗದಲಿ ಭಾಗೀರಥಿ ಉದಕವನೆ ತಂದುನಾಗಕನ್ನಿಕೆಯರು ಕಾದು ನಿಂತಿಹರುಏಳಯ್ಯ ಬೆಳಗಾಯಿತು 2ಅತ್ರಿ ವಸಿಷ್ಠ ಭಾರದ್ವಾಜ ಗೌತಮರುಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆಏಳಯ್ಯ ಬೆಳಗಾಯಿತು 3ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳುಕುಕ್ಷಿಯೊಳು ಜಗವನಿಂಬಿಟ್ಟವನೆ ಏಳುರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳುಈಕ್ಷಿಸಿ ಭಜಕರನುದ್ದರಿಸಲೇಳುಏಳಯ್ಯ ಬೆಳಗಾಯಿತು 4ಕಮಲಮಲ್ಲಿಗೆ ಜಾಜಿಕುಸುಮಮಾಲೆಗಳನ್ನುಕಮಲಾಕ್ಷಿಗರ್ಪಿಸುತ ಹರುಷದಿಂದಕಮಲನಾಭ ವಿಠ್ಠಲ ಸಲಹು ಸಲಹೆಂದೆನುತಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆಏಳಯ್ಯ ಬೆಳಗಾಯಿತು 5ಏಳು ಧೃವವರರೂಪ ಏಳು ನರಹರಿರೂಪಏಳುನಗಧರರೂಪಏಳಯ್ಯ ಹರಿಯೆಏಳಯ್ಯ ಬೆಳಗಾಯಿತು
--------------
ನಿಡಗುರುಕಿ ಜೀವೂಬಾಯಿ
ನಾರಾಯಣ ನರಸಿಂಹ ಲ-ಕ್ಷ್ಮೀರಮಣನೆ ಪರಬ್ರಹ್ಮ ಪ.ಸಾರಭೋಕ್ತನೆ ಸ್ವತಂತ್ರನೆ ದೋಷವಿ-ದೂರ ಪರಿಪೂರ್ಣಕಾಮ ಅ.ಪ.ಸತ್ವಾದಿಗುಣಾತೀತ ವಿತತ ಸ-ರ್ವೋತ್ತಮ ನಿರುಪಮ ಮಹಿಮಪ್ರತ್ಯಗಾತ್ಮ ನಿಗಮಾಗಮವೇದ್ಯ ಸು-ಹೃತ್ತಮ ಮಂಗಲಧಾಮ 1ವಿಧಿಭವೇಂದ್ರಾದಿ ವಿಬುಧಾಶ್ರಿತಪದ-ಪದುಮ ನೀಲಾಂಬುದಶ್ಯಾಮಹೃದಯಾಬ್ಜಮಧ್ಯಸದನ ಸಾಮಜವ-ರದ ಯದುವಂಶಲಲಾಮ 2ಮಾಯಾತೀತ ಮಹೋನ್ನತ ಸುರಜನ-ಪ್ರಿಯ ದ್ಯೆತ್ಯೇಯನಿರ್ನಾಮವಾಯುವಾಹನ ಜನಾರ್ದನ ಲಕ್ಷ್ಮೀನಾ-ರಾಯಣ ತೇ ನಮೋ ನಮಃ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಣ್ಣಿಸಲಮ್ಮೆ ನಾನು ಪ.ಬಣ್ಣಿಸಲಮ್ಮೆ ನಾ ಬಹಳ ಮಹಿಮ್ಮನಚಿನ್ಮಯ ನಗಾಧಿಪ ಚೆಲುವ ತಿಮ್ಮಪ್ಪನ ಅ.ಪ.ಇಳೆಯ ಮಾನವರೊಳು ಈಕ್ಷಿಸಿ ಕೃಪಾಳುಒಲಿದು ಕರುಣದಿಂದ ವೈಕುಂಠಪುರದಿಂದಇಳಿದು ಮಂಗಳದೇವಿಯನು ಕೂಡಿಕೊಂಡು ವಿಮಲ ಸ್ವಾಮಿಪುಷ್ಕರ ಮಹಾತೀರ್ಥದ ತೀರದಲಿ ನಿಂತು ಬೇಕಾದ ಧನಧಾನ್ಯ ಸಂಪದಹಲವು ಕಾಮ್ಯವನೀವ ಹೊಗಳಿದವರಕಾವಸುಲಭರೊಡೆಯನ ಕಂಡು ಹಸಿದ ಕಂಗಳಹಬ್ಬ ದಣಿಯಲುಂಡು ಬಹುತೋಷತುಳುಕುವ ಸುಜನವಿಂಡು ವಾರಂವಾರ 1ಪೇಳಲೇನಯ್ಯನ ಪರಿಸೆಯ ಸೊಬಗು ನಾಆಲಯದಿಂ ಗಡಾ ಜನಿಜನ ಸಂಗಡಚೋಳ ಚಪ್ಪರಮೊತ್ತ ಛತ್ರ ಚಾಮರ ಪತಾಕಾಳಿ ಸೀಗುರಿ ಢಕ್ಕೆ ಕೊಂಬು ಕಹಳೆ ಡೆಂಕೆಮೇಳೈಸಿ ಮಹಿಮರು ಮಹದಾನಂದದವರುಗೋಳಿಡುವರು ಹರಿಗೋವಿಂದ ಎನುವರುಕಾಲಾಟದಲ್ಲವರು ಕೀರ್ತಿಪ ಗೀತತಾಳ ದಂಡಿಗೆಯವರು ಬೆಳಗುವಸಾಲು ಪಂಜಿನವರು ವಾರಂವಾರ 2ವಾಂಛಿತಫಲಗಳು ಒದಗಲು ಹರಿಯೊಳುವಂಚನೆಯಿಲ್ಲದೆ ಒಂದೊಂದು ಬಗೆಯದೆಕಾಂಚನ ಮುಡುಪಿಲಿ ಕರಬದ್ಧಾಂಜಲಿಯಲಿಮಿಂಚುವ ಭಕ್ತಿಲಿ ಮಧುಕರ ವೃತ್ತಿಲಿಪಂಚಾಬ್ದಾದ್ಹಸುಳರು ಪ್ರಾಯದ ಅಬಲೇರುಹಿಂಚಾದ ವಯಸಾದ ಹಿರಿಯರು ಹರುಷದಿಸಂಚಿತಹರಕೆಯವರು ತೊಟ್ಟಿಲು ಮನೆಮಂಚವ ಹೊತ್ತವರು ದೇಶಗಳಿಂದಾಕಾಂಕ್ಷೆವಿಡಿದು ಬಂದವರು ವಾರಂವಾರ 3ಸ್ವಾಮಿ ವರಾಹಪಾದ ಸರಸಿಜಾಂಬುಸ್ವಾದತಾಮಹತ್ಯಂಕದ ಶಾತಕುಂಭಾಂಕದವೈಮಾನವಾಸನವಿಧಿಭವೇಂದ್ರೇಶನಕಾಮನ ಪಿತನ ಕಲಿಭಯಛಿತ್ತನಸೋಮಸೂರ್ಯಾಕ್ಷನಸಾಮಜಪಕ್ಷನಜೀಮೂತಗಾತ್ರನ ಜಿತಶತ್ರು ಸೂತ್ರನನೇಮದಿ ಕಂಡೆರಗಿ ಮೈಯೊಳುರೋಮ ಪುಳಕಿತರಾಗಿ ಭಕ್ತರಸ್ತೋಮವು ಮುಕ್ತರಾಗಿ ವಾರಂವಾರ 4ಗಿರಿಯೊಳಮಲಂತರ್ಗಂಗೆ ಪಾಪಾಂತೆವರಪಾಂಡುತೀರ್ಥ ಬಿಲ್ವಾಂಬು ಕಚ್ಛಪತೀರ್ಥಸಿರಿವರಾಹ ಮಚ್ಛಸಲಿಲಪಾವನಲಕ್ಷ್ಮಿಸರ ನಾರದೀಯ ಸರಸ್ವತೀಯ ತೋಯಮೆರೆವ ತುಂಬುರ ಜಲ ಮೊದಲಾದ ಸ್ಥಳಗಳಸರವ ಸನ್ನಿಧಪೂರ್ಣ ಸ್ವಾಮಿ ಪುಷ್ಕರಿಣಿಯನೆರಕೊಂಡು ಪೂತಾಂಗರು ಹರಿಪಾದಸರಸಿಜರತ ಭೃಂಗರು ಜ್ಞಾನೋನ್ಮತ್ತಭರಿತಾಂಗ ಮತ್ತಾಂಗರು ವಾರಂವಾರ 5ನಳಿನಾಕ್ಷ ಪದವಾರಿನಿತ್ಯಸೇವಿಸಿಸಿರಿತುಲಸಿ ತುದಿಯ ಪೊನ್ನತಳಗಿಯದಧ್ಯನ್ನಬಲುರುಚಿ ಅನ್ನವಾಲು ಬಕುಳನ್ನ ಪೊಂಗಲುಸಲೆ ಮೃದು ಗಾರಿಗೆ ಸುಕಿನುಂಡೆ ಗುಳ್ಳರಿಗೆಪುಳಿ ತಿಕ್ತ ಮಧುಮಿಶ್ರ ಪಲಸು ಪಾಲಿನ ದೋಸೆಪಲವು ಪರಿಯ ಘೃತವು ಪಕ್ವ ಪಂಚಾಮೃತಪಾಲ ತೈಂತೊಳೆ ಮನೋಹರ ಪ್ರಸಾದುಂಡುಕಳೆಯೇರುವರು ಮನೋಹರ ಅಲ್ಲಿಗಲ್ಲಿನಲಿವ ದಾಸರ ಮೋಹರ ವಾರಂವಾರ 6ಪೂವಿನಂಗಿಯ ಚೆನ್ನ ಪುಳಕಾಪುಮಜ್ಜನನವ್ಯೋತ್ಸಾಹದಲ್ಲಿಹ ನರಮುನಿಸುರಸಹಸೇವ್ಯಾನಂದನಿಲಯ ಸಾಮಗಾಯನ ಪ್ರಿಯದಿವ್ಯ ರತ್ನಾಭರಣ ದೀಧಿತಿ ಸಂಕೀರ್ಣಹವ್ಯಾಸದನುದಿನ ಹನುಮಗರುಡಯಾನಸವ್ಯಾಪಸವ್ಯ ಭವಭೂಷಿತ ಸ್ಥಿತಸೂರ್ಯಾರೂಢನ ಮೂರ್ತಿಯ ಭೂವೈಕುಂಠಸುವ್ಯಕ್ತವಹ ವಾರ್ತಿಯ ಪ್ರಸನ್ವೆಂಕಟವ್ಯಾಕೃತನ ಕೀರ್ತಿಯ ವಾರಂವಾರ 7
--------------
ಪ್ರಸನ್ನವೆಂಕಟದಾಸರು
ಭಕ್ತರೆಂದರೆ ನೈಜ ಭಕ್ತರವರು ಪ.ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.ಅಧಿಯಾತ್ಮ ತಾಪಗಳುಅಧಿಭೂತ ಕ್ಲೇಶದನುಭವಅಧಿದೈವದಟ್ಟುಳಿಯನೆಣಿಸರತಿ ಬಲವಂತರ್ಮಧು ಮಥನಗಲ್ಲದರ ಬಗೆಗಂಜರು 1ವೇದತಂತ್ರವಾಕ್ಯದಿಂದುಪದೇಶಮಾಡಿದರೆ ಮೋಹನಕೊಳಗಾಗರುವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲುಕದಲದಂತಃಕರಣದ್ಹರಿದಾಸರು 2ಬದಿಗೆ ಬಂದಡಲಾವದುರಿತಕೋಟಿಗಳನ್ನುತುದಿಗಾಲಿಲೊದ್ದು ಸಲೆ ತಲೆವಾಗರುಹುದುಗೊಂಡು ಷಡುವರ್ಗ ರಿಪುಗಳನು ಗೆದ್ದುಹರಿಪದಲಂಪಟ ಜ್ಞಾನಾಂಬುಧಿಗಳು 3ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯಸುದಯಾರಸನುಂಬುವ ಬೋಧನವರುಸದಮಲ ಗುಣಾನಂತ ಪ್ರಸನ್ವೆಂಕಟಪತಿಯಹೃದಯವಲ್ಲಭರೆನಿಪಅಚಲಮತಿಯವರು4
--------------
ಪ್ರಸನ್ನವೆಂಕಟದಾಸರು
ಮಂಜುಳ ವೇಣುಗಾನವ ಮಾಡಿ ಮೋಹಿಪ ಜಗವಕಂಜಜನಯ್ಯ ಮುರಾರಿ ಕಾಮಿನಿಯರಿಗುಪಕಾರಿ ಪ.ಯಮುನೆಯ ಪುಲಿನದಿ ಯದುಕುಲ ಚಂದ್ರ ಹೊಂದೆರಮಣೀರ್ವಕ್ಷ ಮಧ್ಯದಿ ರಾಜಿಸುತ ಕುಲಾಂಬುಧಿ 1ಪೂರ್ಣ ಪೀಯೂಷಕರನು ಪೂರ್ವಾಚಲಕೆ ಸಾರ್ದನುಪೂರ್ಣಾನಂದ ಮುಕುಂದ ಪವನ ಸಂಚಾರದಿಂದ 2ಕುಂದನೀಲೋತ್ಪಲ ಜಾಜಿಕಮಲಮಲ್ಲಿಗೆ ಜುಜಿ( ?)ಮಂದಾರಪುನ್ನಾಗಭುಜಮೂಲದಿ ಗೋಪಾಲರಾಜ3ಕುಸುಮಾಕರಕುಂಜದಿ ಕುಶಲಕ್ರೀಡಿತನಾದಿಸುಸಪ್ತ ಸ್ವರದಿಂದ ಸುಖದಾನಂದ ಮುಕುಂದ 4ಕತ್ತಲೆವಿರಿ ಸಂಪಿಗೆಕಮಲಮೊಲ್ಲೆ ಮಲ್ಲಿಗೆಸುತ್ತಿದ ಎಳೆಪಲ್ಲವ ಮಾರನಂತಹ ಚೆಲುವ 5ಮುತ್ತಿನ ಚೊಲ್ಲೆಯಲ್ಲಿಯ ಮುಂಗುರುಳಲ್ಲಿ ವಲಯಕಸ್ತೂರಿ ತಿಲಕ ಒಪ್ಪೆ ಕವಿದಡರ್ವದ್ವೀರೇಫೆ 6ಕಡೆಗಣ್ಣಿನ ನೋಟದಿ ಕುಡಿಹುಬ್ಬಿನ ಮಾಟದಿಮಡದೇರ್ಗೆ ಮಾರಶರ ಮೂಡಿಸುತತಿ ಸುಂದರ 7ಮುಗುಳುನಗೆಮೊಗದ ಮಣಿಕುಂಡಲ ಕರ್ಣದಯುಗ ಕರ್ಣಾಕರ್ಣಿಕರಾಯತ ನಟ ನರಾಕಾರ 8ವನಮಾಲೆವೈಜಯಂತಿಶ್ರೀವತ್ಸಕೌಸ್ತುಭಕಾಂತಿಮಿನುಗುವಾಮೋದ ಗಂಧಮುಡಿ ತೋರೋ ಶ್ರೀ ಗೋವಿಂದ 9ಹಾರಕೇಯೂರ ಕಂಕಣ ಹೊಳೆವ ಮಧ್ಯಒಡ್ಯಾಣಚಾರುಪೀತಾಂಬರೋತ್ತರಿ ಚೀರದಿಂದೆಸೆವಹರಿ10ವಾಮಬಾಹುವಿಲೊಪ್ಪುವ ವೇಣುವಿನ ಘನರವಬ್ರಹ್ಮ ಗಂಧರ್ವರ ಗಾನ ಬಗೆಗೆ ಮೀರುವ ದೇವ 11ಸುಲಲಿತಂದುಗೆ ಗೆಜ್ಜೆ ಸಂದ್ರೇಖೆ ಶೋಭಿತಹೆಜ್ಜೆಕೆಲದ ಗೋಪಾಂಗನೇರ ಕಾಮಧೇನು ಸಾರೋತ್ತರ 12ಧರೆಗೆರಗಿದ ಜಡೆ ಸಲೆ ಕಾಳಿಂದಿ ಮೇಲಾಡೆ ಸಕಳ ಪಕ್ಷಿಮೃಗವು ಸಂಚರಿಸದೆ ನಿಂದವು 13ಜಡಂಗಳು ಚೇತರಿಸೆ ಜನದ ಚೇಷ್ಟೆ ಥಂಬಿಸೆಕಡುರಸತುಂಬಿತುಳುಕಲಜಭವಾಂಡೊಲಿಯಲು14ವೃಕ್ಷಗಳ ಶೃಂಗಾರಿಯ ವತ್ಸಗಳಾವದೊರೆಯಈಕ್ಷಿಸಿ ತೃಣ ಮೆಲ್ಲದೆಯಿದ್ದವು ಗೀತಕೇಳುತ 15ನೀರಸ ತರುಫಲಾಗೆ ನಿತ್ಯಪ್ರಜÕತೆಗೆನೀರದಗೆ ಸ್ವರಗೈಯೆ ನಿಗಮನಯ್ಯ ಮರೆಯ 16ಮಂಗಳಮೇಘಘರ್ಜನೆ ಮಾಡಿದವು ಮೆಲ್ಲಮೆಲ್ಲನೆರಂಗನ ಮೇಲಮೃತ ಧಾರೆಯವಿತ್ತವರ್ಥಿಯಿಂದ 17ನಂದವ್ರಜದ ವನವು ನಂದನ ಚೈತ್ಯಾಧಿಕವುನಂದಸೂನುವಿನ ಗೀತ ನಾದ ವೇದಾನಂತಾನಂತ 18ಕಮಲಜ ಭವೇಂದ್ರಾದಿಕರು ಭ್ರಾಂತಿಯನೈದಿದರುಅಮರಜನ ನಾರೇರು ಅಂಗಜವಶವಾದರು 19ಗೋಷ್ಠದ ಗೊಲ್ಲ ಗೋಪೇರ ಗೋವರ್ಧನ ಗೋಪಾಲರದೃಷ್ಟಕೆ ಸುರಮುನಿ ಗಂಧರ್ವರು ಪೊಗಳಿದರಾಗ 20ಸುರಭ್ಯಾಗಾರದಿ ಕೃಷ್ಣ ಸಂಚರಿಸಲು ಸರ್ವೇಷ್ಠಪೂರಣವಪ್ಪಿತುಧರೆಪರಮಮಂಗಳ ಸಾರಿ21ಸುರರುಸುಖ ಸಂಭೃತ ಶರಧಿಯೊಳೋಲಾಡುತಸಿರಿಮಂಗಳವ ಹೇಳಿ ಸುರಿದರರಳ ಮಳೆ22ಪ್ರಸನ್ನತರ ಚರಿತ ಪ್ರಸನ್ನಾವ್ಯಾಕೃತಗಾತ್ರಪ್ರಸನ್ನಪೂರ್ಣ ಪ್ರಜೆÕೀಷ್ಠ ಪ್ರಸನ್ನವೆಂಕಟಕೃಷ್ಣ 23
--------------
ಪ್ರಸನ್ನವೆಂಕಟದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು