ಒಟ್ಟು 20 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಶನ ಚರಣದಾಸನಾಗಿರ್ದರೆ ಆಶಾಪಾಶ ನೀಗಿರಬೇಕು ಪ ಈಶನರಿತ ಗುರು ಶಿಷ್ಯನಾಗಿರ್ದರೆ ದೂಷಣ ಭೂಷಣ್ಹೋಗಿರಬೇಕು ಅ.ಪ ಹರಿಸರ್ಮಣಾಮೃತ ಸುರಿವನಾಗಿರ್ದರೆ ಧರೆಯ ಭೋಗ ಮೀರಿರಬೇಕು ಪರತತ್ತ್ವದ ಮೂಲರಿತವನಾದರೆ ಮರವೆ ಮಾಯ ಹಾರಿರಬೇಕು 1 ವೇದ ವೇದಾಂತವ ಸಾಧಕನಾದರೆ ವಾದ ವಾಂಛಲ್ಯವ ತೊಡೆದಿರಬೇಕು ಬೋಧ ಪಡೆದು ನಿಜ ಸಾಧುವಾದರೆ ನಾದಶಬ್ದವಡಗಿರಬೇಕು 2 ಮಾನಸಪೂಜೆಯ ಖೂನ ಬಲ್ಲ್ಯಾದರೆ ತಾನು ತನ್ನನು ಅರಿತಿರಬೇಕು ಧ್ಯಾನವಿಡಿದು ನಿಜಜ್ಞಾನಿಯಾದರೆ ಮಾನಭಿಮಾನಕ್ಹೊರತಿರಬೇಕು 3 ಬೋಗದ್ವಾಸನ್ಹಿಂಗಿ ಭಾಗವತನಾದರೆ ಕೂಗಿನ ನೆಲೆ ತಿಳಿದಿರಬೇಕು ಯೋಗ ಬಲಿಸಿ ಮಹಯೋಗಿಯಾದರೆ ರಾಗರಹಿತನಾಗಿರಬೇಕು 4 ಲಿಂಗವ ಧರಿಸಿ ಜಂಗಮನಾದರೆ ಸಂಗರಹಿತನಾಗಿರಬೇಕು ಅಂಗ ಮೂರು ನೀಗಿ ಲಿಂಗ ತಾನಾದರೆ ಲಿಂಗಾಂಗ ಸಮರಸ ತೋರಬೇಕು 5 ಸತ್ಯವರಿತು ಸತ್ಪುರುಷನಾದರೆ ಸತ್ತಂತೆ ಜಗದೊಳಿರಬೇಕು ಮೃತ್ಯುಗೆಲಿದು ಪರಮಾರ್ಥಿಕನಾದರೆ ಮತ್ರ್ಯರ ಗುಣ ಮರ್ತಿರಬೇಕು 6 ಘೋರ ಭವಾಂಬುಧಿ ಪಾರುಗಂಡಿರ್ದರೆ ಪಾರ ಹಾರೈಕೆ ಅಳೆದಿರಬೇಕು ಸಾರಮೋಕ್ಷ ತನ್ನ ಸೇರಬೇಕಾದರೆ ಧೀರ ಶ್ರೀರಾಮನೊಲಿಸಿರಬೇಕು 7
--------------
ರಾಮದಾಸರು
ಸಾಧಕರೊಳು ಸಿದ್ಧನು | ಹರಿಪಾದಕಮಲ ಕಾಣಬೇಕೆಂದು ಬಯಸುವವ ಪ ಭಕ್ತಿಯ ಹಡಗವ ಸಾರಿ ಭವಾಂಬುಧಿ | ಯುಕ್ತಿಲಿ ದಾಟಿ ಮನೋರಥದಾ | ಮುಕ್ತಿಯ ಪಟ್ಟಣದಲ್ಲಿಹ ನಿಜಘನಾ | ಸಕ್ತಿಲಿ ಪಡಕೊಂಡು ಸುಖದಲಿ ಕುಳಿತಾ 1 ಉಣಲಾಡುವಲ್ಲಿ ಸರ್ವ ಅನುಭವದಲಿ ಹರಿ | ನೆನೆಯದೆ ಅರ್ಪಣೆಯಾಗುವದು | ಜನದೊಳು ಅವರವರಂತೆ ಸೋಪಾಧಿಕ | ಯೋಗಿ 2 ಕ್ಷೀರ ನೀರ ಭೇದ ಮಾಡುವ ಹಂಸ ವಿ | ಚಾರದಿ ಸಾರಾಸಾರವ ತಿಳಿದು | ಪ್ರಾರಬ್ಧ ಗತಿಯಲಿ ಸ್ವಾನಂದದಿಂದಿಹ | ಧಾರುಣಿ ಜನರನು ತಾರಿಸುವಾ 3 ಪುಣ್ಯದ ಫಲದಾಶೆಯಾತಕ ಬಾಲಗ | ಹೊನ್ನ ತಾ ಗುಂಬೆಂಬ ತ್ಯರನಂದದಿ | ಪರಿ | ಚೆನ್ನಾಗಿ ತಿಳಿದಿಹ ನಿದ್ವಂದಿಯೋ 4 ಬಲ್ಲವಿಕೆಯ ದೋರಿ ಸೊಲ್ಲಿಗೆ ಬಾರದೆ | ಬೆಲ್ಲಸವಿದ ಮೂಕನಂದದಲಿ | ಪುಲ್ಲನಾಭನು ಇರುವೆಲ್ಲರೊಳಗೆ ನೋಡಿ | ನಿಲ್ಲವ ಗುರು ಮಹಿಪತಿ ಪ್ರಭು ಶರಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದುನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲಇಂದಿರೇಶ ನಿನ್ನ ನೆನೆವ ಮತಿಯ ನೀಡೊ ಮನ್ನಿಸಿ ನೋಡೊ ಪ.ಕುಚ್ಛಿತ ಕರ್ಮವಾಚರಿಸಿ ಕಶ್ಮಲ ಜನ್ಮನುಭವಿಸಿದುಶ್ಚಿತ್ತದಿ ಬಾಳ್ದೆನಯ್ಯ ದೂರಾದೆ ನಿಮಗೆ ದಮ್ಮ್ಮಯ್ಯಅಚ್ಚುತ ನಿನ್ನಿಚ್ಛೆಯಿಂದೆ ಆದಿವರ್ಣದವನಾದೆಸ್ವಚ್ಛಿತ ಭಕ್ತಿಯನಿಲಯ ಸುಜನಬಂಧು ಸುಗುಣಸಿಂಧು 1ಹೊಟ್ಟೆಯ ಹೋರಟೆಗಾಗಿ ಹೊತ್ತಾರೆದ್ದು ತಿರುಗಿ ತಿರುಗಿಕೆಟ್ಟ ವೃತ್ತಿಯನ್ನು ಹಿಡಿದೆ ಕೀಳುಮನುಜರೊಳಾಡಿದೆಬಿಟ್ಟೆ ನಿಮ್ಮ ಪೂಜೆಯನ್ನು ಬಿದ್ದೆ ಭವಾಂಬುಧಿಯನ್ನುವಿಠ್ಠಲ ಎನ್ನುದ್ಧರಿಸೊ ವಿದ್ವದ್ಹøದ್ಯ ವೇದವೇದ್ಯ 2ವೇದಶಾಸ್ತ್ರಾಭ್ಯಾಸವಿಲ್ಲ ವೇದಜÕರರ್ಚಿಸಲಿಲ್ಲಬೋಧವನು ಕೇಳಲಿಲ್ಲ ಬುದ್ಧಿ ಎನ್ನೊಳು ಚೂರಿಲ್ಲಸಾಧನವ ತಿಳಿಯಲಿಲ್ಲ ಸಾಧುಮಾರ್ಗವ ಕಾಣಲಿಲ್ಲಭೇದಜÕರೊಳ್ ಕೂಡಿಸೆನ್ನ ಭೀಮಪಾಲಾಭಿನವಲೀಲ 3ಕಾಂತೇರ ಕುಚೇಷ್ಟೆಗಳಿಗೆ ಕೀಳುಚ್ಚಾರದ ಮಕ್ಕಳಿಗೆಭ್ರಾಂತನಾಗಿ ಸ್ನೇಹ ತೋರ್ದ ಬಲೆಯೊಳ್ ಸಿಲುಕಿದೆಸಂತರಂಘ್ರಿ ಸಖ್ಯವನೊಲ್ಲೆ ಸತ್ಕಥೆಯನಾಲಿಸಲೊಲ್ಲೆಅಂತು ಮದವನಿಳಿಸಿ ಕಾಯೊಅಂಗಜಪಿತನೆ ಅಘರಹಿತನೆ4ಬಳಲಿಸಿದೆ ತನುವನು ಬಯಸಿ ಖಳರಾರ್ಥವನ್ನುನಳಿನಾಕ್ಷ ನಿನ್ನ ಬೇಡದೆ ನಾಸ್ತಿಕರಿಗೆ ಕೈಯನೊಡ್ಡಿದೆಹೊಳೆವ ಸುರಭಿಯ ಬಿಟ್ಟು ಹುಲಿಪಾಲಿಗಾಯಾಸಬಟ್ಟೆಕಳೆದೆನನಘ್ರ್ಯಾಯುಷ್ಯವ ಕುಚೇಲಮಿತ್ರ ಕರುಣನೇತ್ರ 5ವಿಷ್ಣು ತತ್ವವರಿಯದೆ ಧೀರ ವೈಷ್ಣವನೆನಿಸದೆಭ್ರಷ್ಟಮನವ ತೊಳೆಯದೆ ಬಹಿಛ್ಛಿನ್ನದಲ್ಲೆ ಮೆರೆದೆಶಿಷ್ಯ ಗುರುಗಳ ಜರಿದೆ ಶಠರನು ಅನುಸರಿಸಿದೆದುಷ್ಟವೃತ್ತಿಯನು ಬಿಡಿಸೊ ದುರ್ಗುಣಧಾಮನ ದುರಿತಶಮನ 6ಇಂದ್ರಿಯಗ್ರಾಮ ನಿನ್ನದು ಇಷ್ಟ ಬಳಗವು ನಿನ್ನದುಸೌಂದರ್ಯ ಸುಖ ನಿನ್ನದು ಸ್ವರೂಪ ಸ್ವಾತಂತ್ರ್ಯ್ರನಿನ್ನದುಮಂದಮತಿಯಿಂದ ಅಹಂಮತಿಯಲ್ಲಿ ನೊಂದೆ ಬಹುಕುಂದನೋಡದೆನ್ನ ಸಲಹೊ ಕುಂಜರವರದ ಕುಶಲಪದದ7ನಿನ್ನ ಕಥಾಮೃತವು ಕಿವಿಗೆ ನಿನ್ನ [ಕೀರ್ತನೆ ನಾಲಗೆಗೆ]ನಿನ್ನ ಲಾವಣ್ಯವು ಕಣ್ಣಿಗೆ ನಿನ್ನ ಸೇವೆ ಸರ್ವ ಇಂದ್ರಿಯಕ್ಕೆಎನಗೆ ಬೇಗ ಕರುಣಿಸಿ ಎಲ್ಲ ದುರಿಚ್ಛೆಗಳ ನೂಕುಇನ್ನು ದಾಸದಾಸ್ಯವು ಬೇಕೊ ಋಷಿಕುಲೇಶ ಹೃಷಿಕೇಶ 8ಅಚ್ಯುತಾನಂತಗೋವಿಂದ ಆದಿಪುರುಷ ಮುಕುಂದಸಚ್ಚಿದಾನಂದಸರ್ವೇಶ ಸುಚರಿತ್ರ ಕರಿವರದನೆಚ್ಚಿದೆ ತವ ಪಾದಾಂಬುಜ ನಮೊ ಬೊಮ್ಮಾದ್ಯರ ದೇವನಿಚ್ಚಪ್ರಸನ್ವೆಂಕಟ [ನಿನ್ನ ನೆನೆವ ಮ್ಮತಿಯನೀಡೊಮನ್ನಿಸಿ ನೋಡೊ] 9
--------------
ಪ್ರಸನ್ನವೆಂಕಟದಾಸರು
ಬೆದರದಿರೆಲೆ ಆತ್ಮಮಧುಸೂದನನ ಕೃಪೆ ಹೊಂದು ದುಷ್ಕøತಕೆಬೆದರದಿರೆಲೆ ಆತ್ಮ ಪ.ಹರಿಮುಖ್ಯಪ್ರಾಣರ ಸ್ಮರಣೆಯೊಂದಿರಲಿದುರಿತನೊರಜುವಿಂಡು ಉರಿಯ ನುಂಗುವವೆ1ಪರವನಿತೆಗೆ ಚಿತ್ತ ಬೆರೆಯದಲಿರಲಿಮರುಳು ಕೀನಾಶಭಟರ ಊಳಿಗಕ್ಕೆ 2ಭೂತದಯ ವಿನಯ ಮಾತುಗಳಿರಲಿಪಾತಕದಾರಿದ್ರ್ಯಾವ್ರಾತ ಬೊಬ್ಬುಳಿಗೆ3ದ್ವಿಜರಾಜಗಮನನ ದ್ವಿಜಭಜನಿರಲಿಸುಜನಪವಾದ ಶೀಲ ರಚಕ ಸಮೂಹಕೆ 4ವಿಬುಧರು ಬರೆದಿತ್ತ ಅಭಯಪತ್ರಿರಲಿಶುಭಪಥ ತಡೆವ ಅಬುಧಸುಂಕಿಗರ್ಗೆ 5ಸುವೈರಾಗ್ಯಮನೆ ದೃಢ ಕವಟ ಬಲ್ಕಿರಲಿಭವಾಂಬುಧಿ ಗೋಷ್ಪಾದವಹುದು ತಿಳಿಯದೆ 6ಪ್ರಸನ್ವೆಂಕಟೇಶನ್ನ ದಾಸರೆ ರಂಭೆಯರುಹೇಸಿ ನೃಪಾಂಗನೇರು ಎಳೆಸಲಿ ಕಂಗೆಟ್ಟು 7
--------------
ಪ್ರಸನ್ನವೆಂಕಟದಾಸರು
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11
--------------
ಪ್ರಸನ್ನವೆಂಕಟದಾಸರು