ಒಟ್ಟು 20 ಕಡೆಗಳಲ್ಲಿ , 10 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇಣುಧರ ವಿಠಲಾ | ನೀನೆ ಪೊರೆ ಇವಳಾ ಪ ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿಯೆ ಅ.ಪ. ಸ್ವಾಪದಲಿ ಗುರುರೂಪ | ರೂಪ ಸಮ್ಮುಖದಲ್ಲಿಗೋಪಕೃಷ್ಣಾಕೃತಿಯ | ಪಡೆದಿಹಳು ಇವಳುಶ್ರೀಪತಿಯೆ ನಿನ್ನೊಲಿಮೆ | ಆಪಾರವಿರುತಿರಲುಪ್ರಾಪಿಸುತ ಅಂಕಿತವ | ಒಪ್ಪಿಸಿಹೆ ನಿನಗೇ 1 ಪಥ ತೋರೋ ಹರಿಯೇ2 ಪತಿ ಸುತನೆ | ಕಾರುಣ್ಯ ತೋರಿ ಆ-ಪಾರ ದುಷ್ಕರ್ಮಗಳ | ಪಾರಗಾಣಿಪುದೋ |ಮಾರುತನ ಮತದಲ್ಲಿ | ಧೀರೆ ಎಂದೆನಿಸಿ ಸಂ-ಸಾರ ಸಾಗರವನ್ನು | ದಾಟಿಸೋ ಹರಿಯೇ 3 ಸೃಷ್ಟಿ ಸ್ಥಿತಿ ಲಯ ಕರ್ತ | ಕೃಷ್ಣಮಾರುತಿ ದೇವಅಷ್ಟಸೌಭಾಗ್ಯಗಳ | ಕೊಟ್ಟು ಕಾಪಾಡೋವಿಷ್ಟರಶ್ರವ ಹರಿಯೆ | ನಿಷ್ಠೆ ಆಚಾರದಲಿಕೊಟ್ಟು ಕೈಪಿಡಿ ಇವಳ | ಜಿಷ್ಣುಸಖ ಹರಿಯೇ 4 ಸರ್ವದಾ ತವ ಮಹಿಮೆ | ಶ್ರವಣ ಸುಖ ಸಾಧನವಹವಣೀಸಿ ತವನಾಮ | ವಜ್ರಾಂಗಿ ತೊಡಿಸೀಭವವನುತ್ತರಿಸತ್ಕಿ | ಬಿನೈಪೆ ಶ್ರೀ ಹರಿಯೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸುಶಿಲೇಂದ್ರತೀರ್ಥರ ವೈಭವವನು ನೋಡ ಬನ್ನಿರೆ ಜನರು ಹೊಸರಿತ್ತಿ ಧೀರೇಂದ್ರರ ಬಳಿಯಲಿ ಹಸನಾಗಿರುವವರು ಪ. ವರದಾ ತೀರದಿ ನೆಲಸುತ ಹರುಷದಿ ವರಗಳ ಕೊಡುತಿಹರು ಪರಿಪರಿಯಿಂದಲಿ ಸೇವಿಪ ಭ- ಕ್ತರ ಕರುಣದಿ ಪೊರೆಯುವರು 1 ವೃಂದಾವನದಲಿ ದ್ವಾದಶ ವರ್ಷಗ ಳಿಂದಲಿ ನಿಂದಿಹರು ಕುಂದದೆ ಶ್ರೀ ರಾಘವೇಂದ್ರರ ದಯವನು ಚಂದದಿ ಪಡೆದಿಹರು 2 ಕುಷ್ಟಾದಿಗಳನು ದುಷ್ಟ ಗ್ರಹಗಳ ಥಟ್ಟನೆ ತೊಲಗಿಪರು ಇಷ್ಟ ಭಕ್ತರನು ಸಲಹುವ ಗೋಪಾಲಕೃಷ್ಣವಿಠ್ಠಲ ಪ್ರಿಯರು 3
--------------
ಅಂಬಾಬಾಯಿ
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಹ್ಯಾಗೆ ಕಾಂಬೆನು ಹಂಸಯೋಗಗಮ್ಯನೆ ನಿನ್ನ ವಾಗೀಶಪಿತ ದಯವಾಗೋ ಮೋಹನ ಪ. ಮನವು ನಿನ್ನಯ ಸೇವೆಗನುವಾಗಿ ನಿಲದು ಸ- ಜ್ಜನ ಸಂಗ ಸಲ್ಲಾಪವನು ಮಾಡಗೊಡದು ಘನಮೋಹಕೊಳಗಾದ ತನುವ ಪಿಡಿವುದು ಶ್ರೀ- ವನಿತೆಯರಸ ನಿನ್ನ ನೆನವೆಂತು ಬಹುದೊ 1 ಹಂಚಿ ದುರ್ವಿಷಯಕ್ಕೆ ವಂಚನೆಗೊಳಿಸಿ ಪ್ರಪಂಚದೋಳಿರಿಸಿ ಪಂಚಬಾಣನ ಶುಕಚುಂಚುವೇದದಿ ತ್ವಂಚ ಹಂಚಗೊಳಿಸಿ ಮೋಹ ಮಿಂಚಿಕೊಂಡಿಹುದೊ 2 ದೀರ್ಘಾದಿ ಸಹಿತಾದಿ ವರ್ಗಗಳನು ಗೆಲುವ ಮಾರ್ಗ ಕಾಣದೆ ದುಸ್ಸಂಸರ್ಗದಿ ಸಿಲುಕಿ ಭರ್ಗ ವಂದ್ಯನೆ ಗುಣಸರ್ಗದ ಬಲೆಯಿಂದ ನಿರ್ಗಮಗೊಂಡಪವರ್ಗವೆಂತಹುದೊ 3 ದಿನದಿನದೊಳಗಾಹತನುವ ನೋಡಲು ಮುಂದಿ ನನುಭವವನು ಕಾಂಬದನು ನಾನೇನರಿಯೆ ಜನರ ರಕ್ಷಾದಿಕರ್ತನೆ ನೀನೆ ಬಲ್ಲಿ ಮುಂ- ದಿನ ಕಾರ್ಯವಹದೆಂತೊ ವನಜಲೋಚನನೆ 4 ಸತಿ ಸುತಾದಿಗಳೆಲ್ಲ ಹಿತರೆಂದು ಗ್ರಹಿಸುವ ಮತಿಹೀನ ಜನಕೆ ದುರ್ಗತಿಯು ತಪ್ಪುವದೆ ಅತುಳ ಮಹಿಮ ಭಕ್ತಹಿತನಾದ ವೆಂಕಟ ಪತಿ ನೀನೆ ಎನಗೆ ಸದ್ಗತಿ ತೋರೊ ಹರಿಯೆ 5
--------------
ತುಪಾಕಿ ವೆಂಕಟರಮಣಾಚಾರ್ಯ