ಒಟ್ಟು 25 ಕಡೆಗಳಲ್ಲಿ , 15 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ ನಾಗಶಯನನವ ಕೂಗದೆ ಬಾರನೆ ಅ.ಪ ಪೂತನಿ ಶಿಶುಗಳ ಫಾತಿಸುತಿಹಳೆಂಬ ಮಾತನವಗೆ ಪೇಳೆ ಭೀತಿಯತೋರಿ ಆತುರದಿಂದವ ಐತರುವನೆ ಸಖಿ ಪ್ರೀತಿಯೊಳೀವೆನೀ ರತುನದ ಹಾರವ 1 ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಮೊರೆಯಿಡುವುದ ಹೇಳೆ ಭರದಲಿ ಬರುವ ಉರಗನ ಗರಳದಿ ಕರುತುರು ನೋಯುವ ಪರಿಯ ಬಿತ್ತರಿಸಿ | ಮುರಳೀಧರಗೆ 2 ಸಂಗಡ ಬರದಿರೆ ಭಂಗಿಸುವರು ಗೋ ಪಾಂಗನೆಯರು ಎಂದು ರಂಗಗೆ ಹೇಳೇ ಇಂಗಿತಜ್ಞನು ನಮ್ಮ ಮಾಂಗಿರಿಯರಸನು ಸಂಗಡ ಬರುವನು ಸಂದೇಹವಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುರಳೀ ಲೋಲನ ಪ್ರೇರಿಸುವಳು ರಾಧೆ ಪ ಒಲಿವಲಿ ನಲಿವಲಿ ಉಲಿವಲಿ ನಿಲುವಲಿ ಮಲಿನವ ಕಳೆವಲಿ ಲೀಲೆಗಳಲಿ ರಾಧೆ ಅ.ಪ ಕಂಗಳ ನೋಟದಿ ಸಂಗರದಾಟದಿ ಅಂಗ ಸೌಂದರ್ಯದಿ ಮಂಗಳ ವೇಷದಿ 1 ಮುರಳಿಯ ರವದಲಿ | ಕೊರಳಿನ ಸರದಲಿ ಕರುಣೆಯ ಮನದಲಿ | ಪರಿಮಳ ಭರದಲಿ2 ಮಾಂಗಿರಿ ಶೃಂಗದಿ | ರಂಗನ ವೇಷದಿ ಮಂಗಳನಾದದಿ | ಹೊಂಗೊಳಲೂದಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೆನ್ನ ಎದುರಲಿ ನಿಲ್ಲುವುದಿಲ್ಲೋ ಯಾಕೆನ್ನಯ ಕರೆ ಕೇಳುವುದಿಲ್ಲೋ ಪ ಯಾಕೆನ್ನ ಅರ್ಚನೆಗೊಲಿಯುವುದಿಲ್ಲೋ ಯಾಕೆನ್ನೊಳು ದಯಮಾಡುವುದಿಲ್ಲೋ ಅ.ಪ ತರಳ ಧೃವನ ಮೊರೆ ಕೇಳಿಸಿತಲ್ಲ ಕರಿ ಎತ್ತಿದ ಸುಮ ಕಾಣಿಸಿತಲ್ಲ ಅರಿ ಅನುಜನ ಸೇವೆ ಹಿರಿದಾಯ್ತಲ್ಲಾ ಕರುಣ ಎನ್ನೊಳಗೇಕೆ ಬರದೋ ಕೃಷ್ಣಯ್ಯ 1 ಅಗಣಿತ ಗೋಪಿಯರೆಡೆಯಲಿ ನಲಿದೆ ನಗಧರನಾಗಿ ಗೋಪಾಲರ ಪೊರೆದೆ ಖಗನಿದ್ದೆಡೆಗೇ ಭರದಲಿ ನಡೆದೆ ನಗುಮೊಗದರಸ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಖಿ ಬಾರೆ ಬಾರೆ ಬೆಡಗತೋರೆ ನಡೆದು ಬಾರೆಲೆ ಸುಖದ ಸುಗ್ಗಿಯಿದೆಂದು ಸಾರೆ ಭ್ರಮರಕುಂತಲೆ ಪ. ಜಲಜಮುಖಿಯೆ ನಲಿದುಬಾರೆ ಕೋಲವಾಡುವ ಕಲಕೀರಕಂಠದಿಂದ ನಾವು ನಲಿದು ಪಾಡುವ 1 ಇಳೆಯ ಸುಖದ ಗೆಳೆಯ ಬಂದ ಬಳಿರೆ ಬಾಪುರೆ ಬೆಳಗುತಿರ್ಪ ದೀಪಾವಳಿಯೆ ಬಲಿಯ ಕೀರ್ತಿಯೆ 2 ವಿಜಯಯಾತ್ರೆಗೆಂದು ಹರಕೆಯೆತ್ತಿ ಭರದಲಿ ಅಜಸುರಾರ್ಚಿತಾಂಘ್ರಿಯುಗನ ಭಜಿಸಿಮುದದಲಿ 3 ನೀರನೆಮಗೆ ಮಾರತಾತನೆಂದು ಸಾರುವಾ ಶಾರದಾಗಮ ಸಮಯವಿದನು ಸಾರಿಯಾಡುವಾ 4 ಶೇಷಶೈಲಶಿಖರ ಧಾಮನೆಮ್ಮ ಮೆಚ್ಚುವೋಲ್ ಮೀಸಲೆತ್ತಿಯೊಸಗೆ ಪೇಳಿ ಪೊಸತಿದೆನ್ನುವೋಲ್ 5
--------------
ನಂಜನಗೂಡು ತಿರುಮಲಾಂಬಾ
ಸಾರಿದ ಸಿರಿವರ ಸಡಗರದಿಂದಲಿ ಕೌರವಪುರಕೆ ಪ ಧೀರ ಪಾಂಡವರ ಕೋರಿಕೆ ಸಲ್ಲಿಸಲು ಸಾರಸ ನಯನನು ಅ.ಪ. ಪ್ರಾತರಾಹ್ನೀಕವ ತಾ ತೀರಿಸಿ ವರ ಪೀತ ವಸನ ಧರಿಸಿ ವೀತರಾಗ ಸಂಪ್ರೀತಿಯಲಿ ಫಾಲದಿ ತಾ ತಿಲಕವ ಧರಿಸಿ ಹೇಮ ಮಕುಟೋತ್ತಮಾಂಗದಿ ಧರಿಸಿ ಜ್ಯೋತಿರ್ಮಯಗತಿ ಪ್ರೀತಿಯಿಲಿ ತರುಣಿರಾ ರುತಿ ಬೆಳಗಲು ತಾ ಸುಮುಹೂರ್ತದಿ 1 ಅಂಡಜಾಧಿಪನು ಪ್ರಕಾಂಡ ಪೀಠನುದ್ದಂಡರಥವ ತರಿಸಿ ಚಂಡಗದಾ ಕೋದಂಡಾದ್ಯಾಯುಧ ಬಂಡಿಗೆಯೊಳಗಿರಿಸಿ ಮಾರ್ತಾಂಡನಂತೆ ಮೆರೆಸಿ ಹಿಂಡುಬಳಗಗಳ ಕಂಡಾದರಿಸುತ ಪಾಂಡುಸುತರ ಬೀಳ್ಕೊಂಡು ಭರದಲಿ 2 ಸುಖದಿ ಪ್ರಯಾಣ ಬೆಳಸಿ ಪ್ರಕಟ ಪಥದಿ ಮುನಿನಿಕರಂಗಳ ಮನವಿಕಸಿತಗೊಳಿಸಿ ಶುಕಪಿಕಾದಿ ಖಗಪಿಕರಂಗಳರವ ಸುಖವ ಮನದಿ ನಿಲಿಸಿ ಸಕಲಾಂತರ್ಗತ ಕರಿಗಿರೀಶ ತಾ ಯುಕುತಿಯಿಂದ ಸಂಧಾನವ ನಡೆಸಲು 3
--------------
ವರಾವಾಣಿರಾಮರಾಯದಾಸರು
ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳಂ ಮಾರಣಮಣಗೆಮಂಗಳಂ ಪ.ನೀರೊಳು ಮುಳಗಿನಿಗಮ ತಂದವಗೆ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಘೋರರೂಪದಿ ಕಂಬದೋಳ್ ಬಂದವಗೆ 1ಪೊಡವಿಯನೀರಡಿ ಮಾಡಿದ ದೇವಗೆಕೊಡರಿಯ ಕರನಾಗಿ ಜನಿಸಿದವಗೆಮಡದಿ ಸಹಿತ ವನವಾಸದೊಳಿದ್ದವಗೆಬಿಡದೆ ಪಾಂಡವ ಭೃತ್ಯನಾದವಗೆ 2ಭರದಲಿ ಸತಿಯರ ವ್ರತಗೆಡಿಸಿದವಗೆಧುರದಲಿ ತುರಗವನೇರಿದವಗೆಗಿರಿಜಾಪುರದೊಳು ವಾಸವಿದ್ದವಗೆವರದ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ವೀರೆಯ ನೋಡಿರೋ ಅಸುರರ ಮಾರಿಯ ನೋಡಿರೋಶೂರಾದಿ ಶೂರರ ದಾರಿಯ ಹಚ್ಚಿಸಿಮುರಿದ ಮಹಿಷಾಸುರನ ತರಿದಪರಿಶಿಲೋಮನು ಶಕ್ತಿಯ ಪಡೆದು ನಡೆದು ಕಣ್ಕೆಂಪಿಡಿದುಮಸಗುತಲಿಡಲು ಶಕ್ತಿಯ ದೇವಿಯು ಹಿಡಿದೆ ಹಲ್ಲನು ಕಡಿದೆಕೊಸರಿಯೆ ಇಟ್ಟಳು ಅಸುರನ ಎದೆಗೆ ಹೊಯ್ದು ರಕ್ತದಿ ತೊಯ್ದುಬಸವಳಿಯುತ ರಿಶಿಲೋಮನು ಭೂಮಿಗೆ ಬೀಳೆ ಬಹು ಹುಡಿಯೇಳೆ1ವರರುದಗ್ರನು ಗದೆಯನು ಹೊತ್ತು ಬರಲು ದೇವಿಗೆರಗಲುಶರದಿಂದಲಿ ತಲೆಯುರುಳಿಸಿ ಶಿರ ಬೊಬ್ಬಿರಿದು ಡಿಂಬವು ನಡೆದುಭರದಲಿ ಹೊಯ್ದುದು ಗದೆಯಲಿ, ಶರ ಸೋನೆಯ ಸುರಿದು ಖಡ್ಗವಹಿರಿದು ಪರಮೇಶ್ವರಿ ಭಾಪೆನಲು ನಡೆದು ಬಿತ್ತು ಪ್ರಾಣ ಹೋಗಿತ್ತು2ದಳಪತಿಯಹ ಚಿಕ್ಷುರಗೆ ಸಮನೆ ತ್ರಿಣಯನ ಕಾಣೆನು ಎಣೆಯನಹೊಳಕಿದ ನಾನಾಪರಿಆಯುಧದಿ ಮುಂದೆ ಧಿರುಧಿರು ಎಂದೆಒಳ ಹೊಕ್ಕಿರಿದನು ದೇವಿಯ ಶೂಲದಿ ಎದೆಯ ಶೌರ್ಯ ಶರಧಿಯಬಳಿಯದ ದೇವಿಯು ತಪ್ಪಿಸಿ ಶೂಲದಿ ತಿವಿಯೆ ಕಂಗಳ ಮುಗಿಯೆ3ದುಷ್ಟ ಬಿಡಾಲನು ಶರಗಳ ಸುರಿದನು ಮುಚ್ಚೆ ಸುರರೆದೆ ಬಿಚ್ಚೆಎಷ್ಟನು ಹೇಳಲಿ ಮಾಯದಿ ಮುಸುಕಿ ಇರಿದ ಬಹು ಬೊಬ್ಬಿರಿದಮುಷ್ಟಿಯಲಿ ತಿವಿದನು ದೇವಿಯ ಕೋಪವು ಹೆಚ್ಚಿ ತಾನವುಡುಗಚ್ಚಿಬಿಟ್ಟನು ದೇಹವ ದೇವಿಯು ಶೂಲದಿ ತಿವಿಯೆ ರಿಪುಭವವಳಿಯೆ4ಎಡಬಿಡದಲೆ ರೌದ್ರದಿ ಮಹಿಷಾಸುರನೊತ್ತೆ ದೇವಿಯು ಮತ್ತೆಕಿಡಿಕಾರುತ ಹೊಕ್ಕೊದೆದಳು ಬೀಳಲು ಕವಿದು ಶೂಲದಿ ತಿವಿದುಕಡಿದಳು ಕೊರಳನು ತಲೆಯನು ಮೆಟ್ಟಿ ಓಡಿತು ಭಯ ಹಿಮ್ಮೆಟ್ಟಿಮೃಡಚಿದಾನಂದನು ತಾನಾದ ಬಗಳ ಕರುಣಿ ಭಕ್ತರಭರಣಿ5
--------------
ಚಿದಾನಂದ ಅವಧೂತರು