ಒಟ್ಟು 42 ಕಡೆಗಳಲ್ಲಿ , 21 ದಾಸರು , 40 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೀತಾಂಬರಧರ ದಶರಥಬಾಲಾ ಸೀತಾ ಮನೋಹರ ದಶಶಿರಕಾಲಾ ಪ ಭೀತಜನಾಶ್ರಯ ಮಣಿಮಯ ಮಾಲಾ ಶೀತಕರೋಪಮ ವದನವಿಶಾಲಾ ಅ.ಪ ಗೌತಮ ಮುನಿಸಂಪೂಜಿತ ಚರಣಾ ಖ್ಯಾತ ವಿಭೀಷಣ ಪರಮಾಭರಣಾ ಪಾತಕಹರ ದಾನವ ಸಂಹರಣಾ ವಾತಾತ್ಮಜಸಂಸೇವಿತ ಚರಣಾ1 ಮಂಗಳಮೂರ್ತಿ ಗರುಡ ತುರಂಗ ಸಂಗರಭೀಮ ಶುಭಾಂಗ ಕೃಪಾಂಗ ಗಂಗಾಧರನುತ ದಿವ್ಯರಥಾಂಗ ಮಾಂಗಿರಿರಂಗ ಮೋಹನಾಂಗ ನೀಲಾಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರೈ ಭೂಶಿರಿವರ ವೆಂಕಟದೊರೆಯೇ | ಕರಿವರದ ಶ್ರೀ ಹರಿಯೇ | ದೋರೈ ಶ್ರೀಕರ ಶುಭಸುರ ಕುಲದೊರೆಯೇ | ಪರತರ ನರಹರಿಯೇ ಪ ಅರುಣಾ ವಾರಿಜಪರಿಚರಣಾ | ಚರಣಾ ಶರಣಾಗತ ಕರುಣಾ | ಕರುಣಾ ಕೋಟ್ಯರುಣಪತಿಯ ಹಿಮಕಿರಣಾ | ಕಿರಣ್ಹೊಳೆವ ಸುವರಣಾ | ವರಣಾ ಪೀತಾಂಬರ ಮಂದರೋದ್ದರಣಾ | ಧರಣಾಗತ ಕರುಣಾ | ಕರುಣಿಸೋ ನಿರುತರ ಕೌಸ್ತುಭಾಭರಣಾ | ಮೊರೆ ಹೋಗುವೆನು ಶರಣಾ 1 ಮಂಗಳ ಮಹಿಮಶಯನ ಭೂಜಂಗಾ | ಜಂಗಮಾ ಅಂತರಂಗಾ | ರಂಗಾ ಲೀಲಾವಿಗ್ರಹ ತುರಂಗಾ | ವಿಹಂಗ | ಶುಭ ಅಂಗಾ | ಅಂಗಾ ಜಯಸು ಸಂಗಾ | ಸಂಗಾರಹಿತ ದೇವತೆಗಳ ಶೃಂಗಾ ಭವ ಭಂಗಾ 2 ಸುಂದರಿಂದಿರಾ ರಮಣಾನಂದಾ | ನಂದ ಗೋವೃಂದಾ | ವೃಂದಾರ ಕಾದಿಹ ರಕ್ಷಕಚಂದಾ | ಚೆಂದದಿ ಆನಂದಾ | ನಂದಾ ಸುನಂದ ನಮಿತ ಪದದ್ವಂದ್ವಾ | ದ್ವಂದ್ವಾ ಮುಕ್ಕುಂದಾ | ಕುಂದರ ವದನಾ ಗುರುಕೃಷ್ಣನ ಕಂದಾ | ನೊಡೆಯ ಗೋವಿಂದಾ 3 ಅಂಕಿತ-ಗುರುಕೃಷ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೈಯ್ಯಾ ಗೋವಿಂದಾ ನಂದಾ | ಶ್ರೀವಧು ಲೋಲಾ ಸುರಜನ ಪಾಲಾ | ಸುಮನಾಮಾಲಧರ ಘನ ನೀಲಾ 1 ಭುವನಾಧಾರ ಭೂಬಯ ಹಾರಾ | ದುರಿತ ನಿವಾರಾ 2 ದಾನವ ಮಥನಾ ಕೌಸ್ತು ಭಾಭರಣಾ | ಘನಗುರು ಮಹಿಪತಿ ನಂದನ ಪ್ರಾಣ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ಮೋಹನಾ | ಶ್ರೀದೇವಾ ಪ ವೃಷಭಾನು ಜಾನನ ಸರಸಿಜ ಬೃಂಗಾ | ಶಶಿಧರ ವಂಶಾಭರಣಾ1 ನಿರ್ಜರ ತುಂಗಾ | ದನು ಚಾವಳಿ ಮದಹರಣಾ2 ಮಹಿಪತಿ ಸುತ ಪ್ರಭು ಜಗದಂತರಂಗಾ | ಇಹಪರದಾಯಕ ಕರುಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ವಾರಿಜ ಚರಣಾ ಪ ಭೂರಿ ದುರಿತ ಹರಣಾ 1 ಕ ರುಣಾ 2 ದ್ವಿಜರಾಜ ಕುಲಾಭರಣಾ 3 ಸುರಪಾರಿ ನಂದನನ ಕಾಯಿದೇ ಹರಿಣಾ | ಸುರಪಾದಿ ಮುನಿ ಸ್ಪುರಣಾ 4 ಗುರು ಮಹಿಪತಿ ಸುತ ಪ್ರಭು ಕೇಯೂರಾಭರಣಾ | ಇಹಪರಾನಂದ ಪೂರಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭವ ಭಾವಿಸುವೊದು ಸೂಚನಾ | ಪಾವನರಂಗಾ | ಜೀವಾಂತರಂಗ | ಜೀವ ತುರಂಗಾ | ಹೃದ್ದಾವರೆಯಲಿ ನಿಲ್ಲು | ಆವಾವ ಬಗೆ ಸು | ರೂಹ | ಆವಾಗ ತೋರುತ ಪ ನಂದನಂದನಾ ಆನಂದಾ | ನಾಗನಾ | ಬಂಧಾ | ಬೀಡಾದೆಕ್ಕೆಂದಾ | ದಾ ಖಳನ ಕೊಂದೆ | ನಂದವ್ರಜದ ಗೋವಿಂದಾ | ಯಶೋದೆ ಕಂದಾ | ಮಂದನು ನಾನು | ಇಂದೀಗ ನೀನು | ಬಂದು ಸುರಧೇನು | ಪೊಂದು | ಇನ್ನೇನು | ಮುಂದಣ ಇಹಸುಖ | ಒಂದು ವಲ್ಲೆನು ಸಖ | ಕಂದ ನಂದದಿ ನೋಡು | ಕುಂದದ ವರವ ಕೊಡು | ಎಂದೆಂದಿಗೆ ಪದದ್ವಂದಾರವಿಂದಕೆ | ವಂದಿಸುವೆನು ಬಾ | ಲೇಂದು ವದನ ಪೊರಿಯೋದೆ ಲೋಕದ ತಂದೆ 1 ಮಂದರಧರ ಮಾಧವಾ | ಮಹದಾದಿ ದೇವಾ | ಬೋವಾ | ಇಚ್ಛೈಸಿದರೆ ಕಾವಾ | ವಾಸುದೇವ | ನಿಂದು ಕರೆವೆನು ಒಂದೆ ಮನಸನು | ತಂದು ವೇಗಾನು | ಸಂಧಿಸೆಂಬೆನು | ಚಂದ ಚಂದದಿ ನಿನ್ನನಂದಕೆ ಹಿಗ್ಗುವೆ | ಪತಿ | ಬಂಧು | ಅತಿ ದಯಾಸಿಂಧು || 2 ಶ್ರೀಲತಾಂಗೀಯ ರಮಣಾ ಶೃಂಗಾರ ಚರಣಾ | ಮಾಲಾ ಕೌಸ್ತುಭಾ ಭರಣಾ | ಶೀಲಾ ಸದ್ಗುಣಗಣ ಸಿದ್ಧಸವ್ಯಾಕಾರಣ | ನೀಲಲೋಹಿತ ಪಾಲಿಪನೆ ಪ್ರೀತ | ಮೂಲೋಕದ ದಾತಾ | ಲಾಲೀಸಿ ಮಾತಾ | ಪಾಲ ಸಾಗರಶಾಯಿ ಪತಿತ ನರನ ಕಾಯಿ | ಮೇಲುಗಿರಿಯಲಿಪ್ಪಾ | ಮೇಲಾದ ತಿಮ್ಮಪ್ಪಾ ವಾಲಗ ವೆಂಕಟ | ಶೈಲಾ ವಿಜಯವಿಠ್ಠಲಾ | ನೀಯೋ ಗೋಪಾಲಾ 3
--------------
ವಿಜಯದಾಸ
ಭೀಮ ಲಾಲಿ ಭಾರತ ಕುಲಾಂಬುಧಿ ಸೋಮ ಗುಣನೆ ಲಾಲಿ ಪ ಲಾಲಿ ಯಾದವ ಪದಾಂಭೋಜ ಮಧುಕರನೆಲಾಲಿ ಮುನಿವರತನಯ ಸುತನ ಗೆಲಿದವನೆಲಾಲಿ ಕರೆವೆನು ಬಾರೋ ಮಧ್ವ ಮುನಿವರನೆ ಲಾಲಿ ಅ.ಪ. ಲಾಲಿ ಕಾಲ್ಗಡಲರುಳಿ ಕುಣಿತ ನಿಜಚರಣಾಲಾಲಿ ಮಧ್ಯದೊಳುಟ್ಟ ಕನಕಮಯ ವಸನಾಲಾಲಿ ಕೊರಳೊಳಗಿಟ್ಟ ಹಾರಗಳ ಸದನಾಲಾಲಿ ಕಿವಿಯೊಳು ಹೇಮಕುಂಡಲಾಭರಣಾ ಲಾಲಿ 1 ಲಾಲಿ ಕರಯುಗ ಶೋಭಿತ ಕಂಕಣಾಭರಣಾಲಾಲಿ ಲೋಕವ ಮೋಹಿಸುವ ಮಂದಹಾಸನಾಲಾಲಿ ತರುಣಿರೂಪ ಶೃಂಗಾರ ಸದನಾಲಾಲಿ ತಾಂಬೂಲರಸಭಾಸ ನಿಜವದನಾ ಲಾಲಿ 2 ಲಾಲಿ ನರ್ತನಾ ಕೃತಾಲಯ ಚರಣಗಮನಾಲಾಲಿ ನಿಜ ಕಾಮಿನಿ ಸಂಕಟ ಹರಣಾಲಾಲಿ ಕೀಚಕಲಾಲಿ ಇಂದಿರೇಶ ಮಾಧವನ ತೋರಿದನ ಲಾಲಿ 3
--------------
ಇಂದಿರೇಶರು
ಮಾಧವ ಗೋವಿಂದಾ ಹರೆ ಮುಕುಂದ ಕೇಶವ ಗೋವಿಂದಾ ಪ ಮುರಾರಿ ನರಹರಿ ಗೋವಿಂದಾ ಹರೆ ಖರಾರಿ ನಗಧರ ಗೋವಿಂದಾ ಅ.ಪ ಶ್ರೀಶ ಪರೇಶಾ ಗೋವಿಂದಾ ಹರೆ ಕ್ಲೇಶ ವಿನಾಶಾ ಗೋವಿಂದಾ ಈಶ ರಮೇಶಾ ಗೋವಿಂದಾ ಹರೆ ಕೇಶ ಕುಲೇಶಾ ಗೋವಿಂದಾ 1 ಬೃಂದಾರಕಾನುತ ಗೋವಿಂದಾ ಹರೆ ಮಂದಾಕಿನೀ ಪಿತ ಗೋವಿಂದಾ ನಂದಕುಮಾರಾ ಗೋವಿಂದಾ ಹರೆ ಮಂದರಗಿರಿಧರ ಗೋವಿಂದ 2 ಹರಣ ಗೋವಿಂದಾ ಹರೆ ಶಿವಸುತ ಚರಣಾ ಗೋವಿಂದಾ ಭುವನಾಭರಣಾ ಗೋವಿಂದಾ ಹರೆ ಪವನಜ ಕರುಣಾ ಗೋವಿಂದಾ 3 ಪರವೋತ್ತುಂಗಾ ಗೋವಿಂದಾ ಹರೆ ಗರುಡ ತುರಗಾ ಗೋವಿಂದಾ ಧರಿತರಥಾಂಗಾ ಗೋವಿಂದಾ ಹರೆ ಮಾಂಗಿರಿ ರಂಗಾ ಗೋವಿಂದಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾರಜನಕ ಕರುಣಾಭರಣಾ ಪ ವಾರಣೋದ್ಧಾರಣ ಪೂರಿತ ಶುಭಗುಣ ಶೂರದೈತ್ಯರಣಧೀರ ನಾರಾಯಣ ಅ.ಪ ಕುವಲಯ ಘನಶ್ಯಾಮ ನವಮೋಹನಾರಾಮಾ ಅವನಿಜಪ್ರೇಮಾ | ರವಿಕುಲಸೋಮಾ ಭುವನಾಭಿರಾಮಾ | ಮಾಂಗಿರಿವರಧಾಮಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಘುನಂದನ ಬಾರೈ ಹಸೆಗೆ ನಿಗಮಾಗಮಾ ವಳಿಸನ್ನುತ ಪ ಶ್ರೀ ಜಾನಕಿ ಸಹಿತ ಅ.ಪ. ವೈರಿ ಕುಲಭಂಜನ ಪರಮೇಶವರ ಚಾಪಖಂಡನ ಕರುಣಾಕರ ಖರದೂಷಣಾದಿ ಹರನಾಶ್ರಿತ ವರ ಲೋಕಪಾಲ 1 ನವನೀರದಾಭ ನವಸುಂದರ ನವಮೀ ಸಂಜಾತ 2 ಶರಣಾಗತ ಭರಣಾಧೃತ ವರ ರಾಮಚಂದ್ರ 3
--------------
ಬೇಟೆರಾಯ ದೀಕ್ಷಿತರು
ರಾಮ ಸಲಹಯ್ಯ ಪುಣ್ಯನಾಮ | ಶ್ರೀ ರಾಘವೇಂದ್ರಾ ಪೂರಿತಕಾಮಾ ನೇಮಾ | ಶಾಮ ಪರಮಾ ಗುಣರತ್ನ ಧಾಮಾ ಪ ವನಜಾಂಬಕ ಕುಂದರದನಾ | ಅನುಪಮ ಸುಂದರ ವದನಾ | ರಣದಲಿ ಜಿತ ದಶವದನಾ | ಅನಂತವದನಾ ಲಾವಣ್ಯ ಸದನಾ 1 ಕರುಣಾ ಶರಣಾ ಭರಣಾ | ಧರಣಿ ಧರಣೋದ್ಧರಣಾ | ಸ್ಪುರಣ ಕಿರಣ ದೋರಣ ಚರಣಾ | ಅರುಣಾಂಬುಜಾಲಯ ರಮಣಾ 2 ವೀರಾಗುಣ ಗಂಭೀರಾ | ಕ್ರೂರಾಸುರ ಸಂಹಾರಾ | ಶೂರಾ ಜನ್ಮ ವಿದೂರಾ | ಮಹಿಪತಿ ಧೀರಾ ಕೃಷ್ಣನೊಡೆಯ ಉದಾರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವರೇಣ್ಯ ಪ ಶಂಕರಾಭರಣಾದ್ರಿ ವೆಂಕಟ | ಪಂಕಜಾಸನ ವಂದಿತಾಂಘ್ರಿಯೆಶಂಕೆ ಇಲ್ಲದೆ ಭಜಿಪ ಭಕುತರ | ಪಂಕಕಳೆ ಅಕಳಂಕ ಮೂರುತಿ ಅ.ಪ. ನೀರಜ ಮಂದರ ಧೃತ | ಸಿಂಧುಗತ ಹಿರಣ್ಯಾಕ್ಷ ಸಂಹೃತಕಂದನನು ಪಿತನಿಂದ ಸಲಹಿದ | ಇಂದ್ರಗವರಚುಪೇಂದ್ರ ಹರಿಯೇ ||ತಂದೆ ವಚನಕೆ ತಾಯ ಕಡಿದನೆ | ತಂದೆ ನುಡಿಗಡವಿಯನೆ ಸೇರ್ದನೆತಂದೆ ತಾಯ್ಗಳ ಬಂಧಹರ ಮುದ | ದಿಂದ ಮೋಹಕ ತುರಗವೇರ್ದ 1 ಸಿರಿ ಕಾಲ ಕರ್ಮ ಪಾದ ಪಲ್ಲವ | ಓಲೈಪ ಭಾಗ್ಯವ ಪಾಲಿಸೂವುದು 2 ಭವ ಕೂಪಾರ ದಾಟಿಪಧೀರ ಗುರು ಗೋವಿಂದ ವಿಠಲನ | ಅಪಾರ ಕರುಣವ ತುತಿಸಲಾಪನೆ 3
--------------
ಗುರುಗೋವಿಂದವಿಠಲರು
ವಾಮನಾವತಾರ ವಾಮನನನು ನೆನೆ ಹೇ ಮನವೇ ವಟು ವಾಮನನನು ನೆನೆ ಹೇ ಮನವೇ ಕಾಮಪೂರಣ ಲಕ್ಷ್ಮೀಧಾಮನ ಮರೆಯದೆ ಪ. ಶ್ಯಾಮಸುಂದರ ಸುರ ಪ್ರೇಮದಿ ಕಶ್ಯಪ ಧಾಮವಾ ಬೆಳಗುತ ಬಂದ ಭೂಮಿಯನಳದ ಸುತ್ರಾಮಗಿತ್ತ ನಿ ಸ್ಸೀಮ ಸಾಹಸ ಗೋವಿಂದ ನೀ ಸಲಹೆಂದು 1 ಬಲಿಯ ದೃಢಕೆ ಮೆಚ್ಚಿ ಸಲಹುತ ಮುಂದಿನ ವಲಭಿದಾಗುವೀ ನೀನೆಂದ ಕಲುಷಾಪಹಪದಕಮಲವ ಶಿರದೊಳು ನಿಲಿಸಿ ಬಾಗಿಲೊಳು ನಿಂದವ ನೀನೆಂದು 2 ಶ್ರೀ ಭೂಮಿಯುತ ಮುಕ್ತಾಭರಣಾಶ್ರಿತ ಸೌಭಾಗ್ಯಕರ ಲೀಲಾ ಆಭೀರರ ಕನ್ನೆಯರೊಲಿಸಿದ ಪದ್ಮ- ನಾಭ ವೆಂಕಟಪತಿ ಪರಮ ಪುರುಷನೆಂದು 3
--------------
ತುಪಾಕಿ ವೆಂಕಟರಮಣಾಚಾರ್ಯ
ವಿನತಾನುತ ಮಣಿವರೂಥ ಜನಕಸುತಾ ನಾಥಪ್ರೀತ ಪ ಕನಕಾಂಬರ ಪಾರ್ಥಸೂತ ವನಮಾಲಾ ಮಣಿರಾಜಿತ ಅ.ಪ ಶುಕ ಶೌನಕ ಪರಿಪೂಜಿತ ಸಕಲಾಗಮ ವೇದವಿದಿತ ವಕುಳಸುಮಾಭರಣಾಯತ ಸುಕರಾರ್ಜಿತ ಮೋಕ್ಷದಾತ 1 ಪಾಹಿ ಪಾಹಿ ಪರಮನಾಮ ಪಾಹಿ ಪಾಹಿ ಪೂರ್ಣಕಾಮ ಪಾಹಿ ಪಾಹಿ ದನುಜಭೀಮ ಪಾಹಿ ಪಾಹಿ ಮಾಂಗಿರಿಧಾಮ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶರಣರ ಪರಿಪಾಲಾ ಶ್ರೀಲೋಲಾ ಪರಮ ಸುಂದರ ಬಾಲಾ ಪ. ರುಕ್ಮಿಣಿ ರಮಣಾ ರಕ್ಕಸ ಹರಣಾ ಶಕ್ರಾದಿನುತ ಚರಣಾಭರಣಾ 1 ಮಧ್ವ ಮುನೀಶಾ ಶುದ್ಧ ಪ್ರಕಾಶಾ ಪದ್ಮನಾಭ ಮನಶುದ್ಧಿಯ ನೀಡೋ 2 ಕಾಮಿತ ಫಲದಾ ಕೋಮಲ ಪಾದಾ ಶ್ರೀ ಮನೋಹರ ಸುರ ಕಾಮ್ಯ ಪ್ರದಾತಾ 3 ಮೃಡ ಸುರ ಪ್ರೀಯಾ ಧೃಡಮನ ಕೊಡು ನಿನ್ನಡಿಯಲಿ ಜೀಯಾ 4 ಗೋಪಿಯ ತನಯಾ ನೀ ಪಿಡಿ ಕೈಯ್ಯಾ ಗೋಪಾಲಕೃಷ್ಣವಿಠ್ಠಲ ಹೇ ಜೀಯ್ಯಾ 5
--------------
ಅಂಬಾಬಾಯಿ