ಒಟ್ಟು 26 ಕಡೆಗಳಲ್ಲಿ , 16 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಮೈಮರೆದೆ ನೀನು ಪ. ಯಾಕೆ ಮೈಮರೆದೆ ಶ್ರೀ ಹಯವದನನ ಪಾದವನುಬೇಕೆಂದು ಬಿಡದೆ ಭಜಿಸೊ ನಿನ್ನಕಾಕು ವ್ಯಸನಗಳ ತ್ಯಜಿಸೊ ಈ ದೇಹತಾ ಕಂಡ ಕನಸೋ ಸ್ಥಿರವಲ್ಲ ಇನ್ನುನೀ ಕೇಳದಿರೆ ನಿನ್ನ ಮನಸೋ ಪ್ರಾಣಿ ಅ.ಪ. ಪರಹೆಣ್ಣುಗಳ ನೋಡಿ ಪಾತಕಿಗಳ ನೀಡಾಡಿಹರಿದೆದ್ದು ಕಡೆಗೆ ಕರೆವೆ ಎಲೆಮರುಳೆ ಹರುಷದಿಂದವಳ ನೆರೆವೆ ಅಕಟಕಟದುರುಳ ಜೀವನೆ ನಿನಗೆ ತರವೆ ಮತ್ತೊ-ಬ್ಬರಿಗೆ ಬರಿದೆ ನೀ ಹೇಳುವೆಲ್ಲೊ ಶಾಸ್ತ್ರಗಳನೊರದೊರದು ಕೇಳ್ವೆಯಲ್ಲೊ ನೀ ಹೋಗಿನರಕದೊಳು ಬೀಳ್ವೆಯಲ್ಲೊ ಪ್ರಾಣಿ 1 ಧನವ ಕೂಡಿಸಿಕೊಂಡು ದಾನ ಧರ್ಮವ ಮಾಡ-ದೆನಗಾರು ಸಾಟಿಯೆಂಬೆ ಇಷ್ಟಜನರ ಬಿಟ್ಟೊಬ್ಬನುಂಬೆ ಎಲೊ ಎಲೊಮುನಿದು ಸಕಲರ ಮುನಿಯಗೊಂಬೆ ಆಧನವು ಮನಶುದ್ಧವಾಗಿ ಇಹುದೆ ಅದು ಸಾವದಿನದೆ ಸಂಗಡ ಬಾಹುದೆ ಕುಬೇರನಬಿಟ್ಟು ಕಡೆಗೆ ಹೋಹುದೆ ಪ್ರಾಣಿ 2 ಅಳೆವ ಕೊಳಗದ ಮಾಟ ಆತ್ಮನಿನ್ನೋಡಾಟ ಸರ-ಕಳೆದ ಬಳಿಕ ನೋಡೊ ದೇಹ ತಾ-ನುಳಿಯದು ಹಮ್ಮು ಮಾಣೊ ಎಲೆ ಮರುಳೆಗಳಿಸಿರೋ ಧರ್ಮಗಳ ವ್ಯರ್ಥ ಕೆಡಬ್ಯಾಡೊ ದಿನಮಾನಗಳ ಕಳೆಯದಿರು ನಿತ್ಯವಲ್ಲ ಇದಕೆಉಳಿದರ್ಥ ಕೆಲಸಕಿಲ್ಲ ಹಿಂದೆಉಳಿದವರೊಬ್ಬರಿಲ್ಲ ಪ್ರಾಣಿ 3 ಕೊಲೆ ದೋಷವೆಂದರಿಯೆ ಕೊಸರು ಒಬ್ಬನ ಜರೆವೆಇಳೆಯೊಳದಾವನೀತ ನಿನಗೆ ನೀತಿಳಿದುಕೊ ನಿನ್ನಮಾತ ನೀಖಿಲಗೊಳಬೇಡ ಆಭಾಸ ಸೂಚಿಸಿ ಜರೆವರೆಕೊಲೆಗೆ ಗುರಿಯಾದೆ ಕಾಣೊ ಈ ಕೋಪಹೊಲೆಗೆ ಸರಿಯಲ್ಲವೇನೊ ನಿನ್ನಹುಳುಕು ಬುದ್ಧಿಯನು ಮಾಣೊ ಪ್ರಾಣಿ 4 ಮರೆದು ಕಳೆ ಕ್ರೋಧವನು ಮಾಡದಿರು ಲೋಭವನುಗುರುಹಿರಿಯರಾದವರಿಗೆರಗೂ ಅನಾ-ಥರಿಗೆ ಚೆನ್ನಾಗಿ ಮರುಗೊ ಇದೆಪರಮಗತಿಯ ಸೆರಗೊ ಭಕ್ತರಿಗೆಸಿರಿಯರಸ ಹಯವದನನೊಡೆಯ ಲೋಕಪರನಿಂದಕರಿಂಮುಕ್ತಿಪಡೆಯೊ ಭಜಿಸಿದುರಿತ ಸಂಕಲೆಯ ಕಡಿಯೊ ಪ್ರಾಣಿ 5
--------------
ವಾದಿರಾಜ
ವಾಸುದೇವನ ಭಜಿಸೊ ಪ ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ ತುದಿಮೊದಲಿಲ್ಲದ ದೋಷಕೆ ಗುರಿಯಾಗಿ ಸದಮಲನೆಂದರೆ ಸರ್ವರು ನಗರೇನೊ 1 ದುರಿತ ಪರಿಹರವೆಂದು ಆಡುತಲಿದೆ ಶೃತಿಯು ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ ಕಾರಣ ಬಾಯಿಂದ ನುಡಿದರೇನಾಯಿತು2 ಪಂಚಸದ್ವರ್ಣಾವು ಪರಮಾತ್ಮನ ನಾಮ ವಂಚನೆ ಇದರೊಳಿಲ್ಲಾ ಸರ್ವರು ನುಡಿವರು ಗರ್ವವೇತಕೆ ನಿನಗೆ 3 ಕಾಲಕಾಲಕೆ ಹರಿಯೋಲಗವ ಮಾಡಿ ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ- ಲೋಲನ ಕಂಡ ಕಂಡಲಿ ಸ್ಮರಣೆಗೈದೂ 4 ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು ಪರರಿಗೆ ಹಿತವ ತೋರು ಗುರುರಾಮವಿಠಲನು ಕರುಣದಿ ಕೈಪಿಡಿದು ಪರಮಸೌಖ್ಯವನೀವ ನಿಜಭಕ್ತನಾದರೆ 5
--------------
ಗುರುರಾಮವಿಠಲ
ಶ್ರೀರಾಮ ರಾಮನ ಭಜಿಸೊ ಮನದಲಿ ಶ್ರೀಕೃಷ್ಣನ ಸ್ಮರಿಸೊ ಪÀರಾಭವಾರೂರ್ವು ಪವಾಸಗಳಿಂದ ಪತಿತಪಾವನ ಶ್ರೀಗೋವಿಂದ ಪ ತಾರಕ ರಘುವೀರಾ ಶರಾದಿಬಂಧಿಸಿ ಸೈನ್ಯವು ನಡೆಸಿ ತ್ವರಾ ಲಂಬಿಣಿ ಬೇಧಿಸಿ ಸರಾಗ ದಿಂ-------ಪುರಾದಿ --------ಸರಾಗೆಲ್ಲರನೊಯ್ದಡಿಕ್ಕಿ ಪುರಾಧಿಪತಿ ಮಹಾ----ರಾವಣನ ಶಿರಾಗಳ್ಹತ್ತನೆ ಛಂಡಿಸಿ ಹರೆದನಾ 1 ಶರಾಣೆಂದು ಬಂದರು ನಗಾನಂದ ಕರುಣಿಸು ಚಂದಾ ಸ್ಥಿರಾ ಲಂಕೆ ಪಟ್ಟ ಹರುಷದಲಿಕೊಟ್ಟ ಯಾರು ಎಂದ್ಹೇಳಿದಿರಾ ವೀರಾಧಿವೀರ ಶೌರ್ಯ ಶೂರ ಪ್ರಚಂಡರು ಧೀರ ಹನುಮದೇವರು ಆರಾಮದಲಿತ್ತ ಆರಾಮಿಯಾರಥನೇರಿ ಶಿಕಾರ ತಂದೆ ಕಾಂತೆ ಜಗನ್ನಾಥ 2 ರಾಮಾಯೆಂದು ಭಯ ಭಕ್ತಿಯಿಂದಾ ಸ್ಥಿರಚಿತ್ತದಿಂದಾ ಸ್ಮರಣೆ ಮಾಡುತ ಶ್ರೀಹರಿಯು----------ತ ನಿರಾಳ ಮನ ಕವಿತ ಇರುತಲಿಪ್ಪವರಿಗೆ ಸಂಪತ್ಕರವು ಧರೆಯೋಳ್ ಹೆನ್ನತೀರವಾಸನ ಧೊರೆ 'ಹೆನ್ನ ವಿಠ್ಠಲ’ ರಾಯನ 3
--------------
ಹೆನ್ನೆರಂಗದಾಸರು
ಹಿಂಗದೆ ಮನದಣಿಯ ರಂಗನ ಭಜಿಸೊ ಪ ರಂಗನ ಭಜಿಸೊ ಕೃಷ್ಣನ ಭಜಿಸೊ ಅ ಯಾತಕೆ ಸುಮ್ಮನಿರುವೆಪಾತಕ ಹೆಚ್ಚಿ ಮೆರೆವೆನೀತಿಯ ತಪ್ಪಿ ನೀನಿರುವೆಭೂತಳ ಭೋಗ ಸ್ಥಿರವೆ 1 ಗೆಜ್ಜೆಯ ಕಟ್ಟಿ ಆಡೊಲಜ್ಜೆಯ ಬಿಟ್ಟು ಪಾಡೊಮುಜ್ಜಗನ ಕೊಂಡಾಡೊಸಜ್ಜನರ ಜೊತೆಗೂಡೊ2 ಪನ್ನಗರಾಜ ಶಯನನಪನ್ನಗಭೂಷಣ ನುತನಉನ್ನಂತ ಗುಣದವನಚೆನ್ನಾದಿ ಕೇಶವನ3
--------------
ಕನಕದಾಸ
ನೆಚ್ಚಬೆÉೀಡ ಭಾಗ್ಯವನು ಹುಟ್ಟುಗೊಂಡ ಮನುಜಾವೆಚ್ಚವಾಗಿ ಹೋಗುವುದು ಏಸೊಂದು ಬಗೆಯಲಿ ಪ.ಮುತ್ತು - ಮಾಣಿಕ - ನವರತ್ನದ ಗದ್ದುಗೆಯುಎತ್ತ ನೋಡಲು ಸಿರಿಕೋ ಎನುತಲಿಸತ್ಯ ಹರಿಶ್ಚಂದ್ರ ಮತ್ತೆ ಸುಡುಗಾಡಿನಲ್ಲಿಎತ್ತುವ ಹಣೆಯಕ್ಕಿ ಹಾಗದ ಕಾಸ 1ದೇವತೆಗಳ ಕೈಯ ಸೇವೆಯ ಕೊಳುತಿರ್ದರಾವಣನ ಬದುಕು ಮತ್ತೇನಾಯಿತು?ಜೀವದ ಪರಿಯರಿತು ನಾವು ದೊರೆಯೆಂಬುವುದೆಸಾವಿನ ಮನೆಹೊಕ್ಕು ಸಾಹಸ ಪಡಲೇಕೆ 2ಹದಿನೆಂಟುಕೋಟಿ ಧನ ಉದಯಕೆ ಬರುತಿರಲುಒದಗಿತೆ ಆ ರಾಶಿ ದಿನ ಕರ್ಣಗೆ ?ತುದಿ ಮಧ್ಯಾಹ್ನಕ್ಕೆ ದರಿದ್ರನೆನಿಸುವಇದರಿಂದ ಕಡೆಗಂಡರಾರು ಜಗದೊಳಗೆ ? 3ಬೆಳ್ಳಿಯ ಗಿಣಿಲು ಬಂಗಾರದಹರಿವಾಣಕುಳಿತಲ್ಲಿ ಕನಕದ ರಾಶಿಗಳುಗಳಿಗೆಗೆ ಈ ಭಾಗ್ಯ ಕಾಳಬೆಳುದಿಂಗಳುಉಳಿದವು ನಾ ಕಾಣೆ ಚಿರಲಕ್ಷ್ಮಿಯೆನಲು 4ಇಂತು ಈ ಪರಿಯಲನಂತರು ಹೋದರುಎಂತು ಪೇಳಲಿಅವರ ಪೆಸರುಗಳ ?ಚಿಂತಾಯತ ಶ್ರೀ ಪುರಂದರವಿಠಲನಸಂತತ ಪಾದಕಮಲವ ಭಜಿಸೊ ಮನುಜಾ 5
--------------
ಪುರಂದರದಾಸರು
ಸೈಶಬಾಸ ಗಬರು ದರೋಡೆ ಬರತದಅಬಬ್ಬ ನೋಡಿದರೆ ಆರ್ಭಟಸಬಬ ಐತಿದು ಸಾಧುರ ಪುಣ್ಯಶುಭನುಡಿಯುತದ ಶಕುನದ ಹಕ್ಕಿಪಐದು ಮಂದಿ ನೆಲೆಗಳ್ಳರು ಕೂಡಿಊರ ಆತ್ಮದಲಿ ಸೇರುವರುಐಕ್ಯದಿಂದ ಶ್ರೀ ಗುರುವಿನ ಕೂಡಿಐದು ಮಂದಿ ಬಿಟ್ಟೋಡುವರು1ಎಂಟು ಹತ್ತು ಮಂದಿ ಬಂಟರು ಕೂಡಿಮುತ್ತಿಗೆ ಹಾಕಿ ನಿನ್ನ ಕೆಡಿಸುವರುಸತ್ಯನಾದ ಶ್ರೀ ಗುರುವಿನ ನೆನೆದರೆಹತ್ತು ಮಂದಿ ಬಿಟ್ಟೋಡುವರು2ನೋಡಿ ಬಗೆಯೋ ನಿನ್ನ ಕಾಡವು ಹುಲಿಗಳುಬೇಡಿದ ಪದಾರ್ಥ ದೊರಕುವುದುಕೂಡಿ ಭಜಿಸೊ ಶ್ರೀ ಚಿದಾನಂದನಮೂಲ ಮಂತ್ರಪ್ರಣವದೊರಕುವುದು3
--------------
ಚಿದಾನಂದ ಅವಧೂತರು