ಒಟ್ಟು 22 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲ ಭೂತಗಣಕಧಿನಾಥ ನೀನೆ ಪಥ ತೋರುವ ಮಹ ಮಹಿಮ ನೀನೆ ಪ ಗರಳ ಕುಡಿದವ ನೀನೆ ಸರಸಿಜಾಕ್ಷನ ಪರಮ ಸಖನು ನೀನೆ ವರ ಭಗೀರಥನುತಿಸೆ ಸುರನದಿಯನು ನಿಜ ಸಿರಿಮುಡಿಯೊಳ್ಧರಿಸಿದಾತನು ನೀನೆ 1 ಸಿರಿರಾಮ ಮಂತ್ರವನು ಗಿರಿಜೆಗುಸುರಿದವ ನೀನೆ ವರ ಪಾಶುಪತ ಶರವ ನರನಿಗಿತ್ತವನು ನೀನೇ ವರ ಮಾರ್ಕಂಡಗೆ ವರವನಿತ್ತವ ನೀನೆ ಕರಿಚರ್ಮ ಧರಿಸಿರುವ ಪರಮ ವೈರಾಗಿಯೂ ನೀನೆ 2 ಕೋರಿದನು ಕೊಡಲುಳ್ಳ ಕರುಣಪೂರ್ಣನು ನೀನೆ ಶ್ರೀ ರಜತಗಿರಿಯಲಿ ಮೆರೆಯುವಾತನು ನೀನೆ ನೀರಜಾಕ್ಷ ಶ್ರೀ ರಂಗೇಶವಿಠಲ ಪರನೆಂದು ಸಾರುತಲಿ ಪೊಗಳುವ ಪರಮ ಭಾಗವತನು ನೀನೆ 3
--------------
ರಂಗೇಶವಿಠಲದಾಸರು
ಜಯತು ಜಯತು ಶ್ರೀ ಗಂಗಾದೇವಿಯೆಜಯತುಪಂಕಜಗಂಧಿಯೇಬಹು ಜಯತು ಶ್ವೇತಾಂಗ ರೂಪೆಯೆಜಯತು ವಕ್ರ ಸವಾರಿಯೆ ಜಯತು ಜಯತೂ 1ಪಾಹಿಶ್ರೀಹರಿ ಪಾದನಂದನೆಪಾಹಿಶಿವ ಶಿರವಾಸಿನಿಪಾಹಿಶ್ರೀಜಹ್ನುಮುನಿ ಹೃದಯ ಶೋಭಿತೆಪಾಹಿಧಾರುಣಿ ಪಾಲಿತೆಪಾಹಿಪಾಹಿ 2ಶರಣು ಭಗೀರಥ ಕುಲ ಉದ್ಧಾರಳೆಶರಣು ವರುಣನಮಾನಿನಿಶರಣು ಗೋವಿಂದನ ದಾಸನೊಡ
--------------
ಗೋವಿಂದದಾಸ
ಪಾಲಿಸು ಭಕ್ತವತ್ಸಲನೇ ನಿನ್ನಬಾಲಕನಂತೆನ್ನ ಸಲಹೋ ಶ್ರೀವರನೇ ಪಬಾಲ ಪ್ರಹ್ಲಾದ ಧ್ರುವನು ಚಂದ್ರಹಾಸಮೇಲಾದ ಮುಚುಕುಂದನಂತೆನ್ನ ಸತತ ಅ.ಪಸುರರುನಾರದರು ಕಿನ್ನರರುಮುನಿವರರು ವಸಿಷ್ಠ ವಾಲ್ಮೀಕಿ ಗೌತಮರುಗರುಡ ಗಂಧರ್ವ ಗಾಯಕ ಯಕ್ಷವಾಸುಕಿತರಣಿನಂದನ ಆಂಜನೇಯ ಜಾಂಬವರಂತೆ 1ನಳ ನಹುಷ ಸಗರಂಬರೀಷ ನಿನ್ನ ಒಲಿಸಿಭಗೀರಥ ಬಲಿಯುನಾಕೇಶಸಲಹೆಂದು ಹರಿಶ್ಚಂದ್ರರುಕ್ಮಾಂಗದ ವಿಭೀಷಣಗೊಲಿದಧರ್ಮಜ ಪಾರ್ಥ ಕರಿರಾಜನಂತೆ 2ಚರಣದಿ ಅಹಲ್ಯೆಯನು ಕಾಯ್ದೆ ನೀನುಪೊರೆದೆ ಶಬರಿಯನ್ನು ಕುಬುಜೆಯನೆನದೆಹರುಷದಿ ಎರಡೆಂಟು ಸಾವಿರ ತರುಣಿಯರೊಡಗೂಡಿಸೆರಗಿಗೆ ವರವಿತ್ತೆ ದ್ರುಪದನಂದನೆಗೆ 3ಸಿಂಧುಶಯನ ನಿನ್ನ ಕರುಣ ಎನ-ಗೆಂದಿಗೆ ತೋರುವೆ ಶ್ರೀಲಕ್ಷ್ಮೀರಮಣಮಂದರಧರಅರವಿಂದವದನಹರಿನಂದನ ಕಂದ ಗೋವಿಂದನೆ ದಯದಿ 4
--------------
ಗೋವಿಂದದಾಸ
ಭಾಗೀರಥಿ ದೇವಿ ನಮೋ ||ಭಾಗೀರಥಿ ದೇವಿ ಭಯ ನಿವಾರಣ ಗಂಗೆ |ಸಾಗರನರ್ಧಂಗೆ ಸುತರಂಗೆ ಪವಾಮನ ವಾಮ ಪಾದಾಂಗುಷ್ಟನಖಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ..... ||ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ... 1ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ.... ||ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ..... 2ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ.... ||ಉನ್ನತಧೃವಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ..... 3ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ.... ||ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ..... 4ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ.... ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದಸ್ಮøತಿಮಾತ್ರದಿಂದಲೀ | ಭಾಗೀ...... 5ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರಧರ ಪದಿ ಶ್ರೀಗಂಗೆ | ಭಾಗೀ...... ||ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆಜಾಹ್ನವಿತ್ರಿದಶೇಶ್ವರಿ | ಭಾಗೀ.... 6ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ.... |ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ.... 7ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ..... ||ಶಮದಮಾದಿಗಳಿತ್ತುಪೊರೆಅನುದಿನದಲ್ಲಿ |ಅಮರವಿನುತಪಾದಪಂಕಜೆ | ಭಾಗೀ.....8ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ...... ||ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ..... 9
--------------
ಪ್ರಾಣೇಶದಾಸರು
ವಾಸವನೆ ಮಾಡಿರೋ ಕಾಶಿಯಲಿ ಪವಾಸವನೆ ಮಾಡಿ ಕಾಶಿಯಲಿ ವಸುಧೆಯ ಜನರು |ಏಸುಜನ್ಮದ ಪಾಪವನೆ ಕಳೆದು ಯಮಪುರಿಯ ||ಹೇಸಿಕೆಯ ರಾಶಿಗಳ ಒದೆದು ಹೆಚ್ಚಳವಾದ |ಮೀಸಲಳಿಯದಪದವಿಸಾರಿರಯ್ಯಅಪಶ್ರೀ ವಿಷ್ಣು ಸಿರಿಸಹಿತ ಗರುಡ ವಾಹನನಾಗಿ |ಜೀವಿಗಳ ಸ್ಥಿತಿಯ ನೋಡುತ ಬರಲು ಮರುಗಿ ಆ |ದೇವಿ ಬಿನ್ನಹ ಮಾಡಲಾಗ ಕರುಣಾಕರನು |ಭಾವಿಸಿದನೀ ಕೃತಿಯನು |ದೇವತ್ರಿಧಾಮನವ ದಿವ್ಯ ವೈಕುಂಠದೊಳು |ಪಾವನಸ್ಥಳವಿದೆಂದೊರೆದ ಧರೆಯೊಳು ಕಾಶಿ |ಶ್ರೀ ವಾರಣಾಸಿ ಪಂಚಕ್ರೋಶಮಿತಿಯಲ್ಲಿಆ ವಿಪುಳ ಮಣಿಕರಣಿಕೆ 1ಬಲಿಯ ಬಳಿ ಮೂರಡಿಯ ಭೂದಾನವನೆ ಬೇಡಿ |ನೆಲನಳೆಯ ಈರಡಿಗೆ ಸಾಲದಿರೆ ಬ್ರಹ್ಮಾಂಡ |ಬಲಪದದ ನಖದಿ ಸೀಳಲ್ಕೆ ಬಹಿರಾವರಣ |ಜಲಸುರಿಯೆ ಅಂಗುಟದಲಿ ||ಸಲೆ ತೀರ್ಥವೆಂದಜ ಕಮಂಡಲದೊಳಗೆ ಧರಿಸಿ |ತೊಳೆದನಾ ಚರಣಗಳ ಬಲು ಗಂಗೆ ಬರಲು ಜಡೆ - |ತಲೆಯೊಳಿಟ್ಟಾ ಶಿವ ಭಗೀರಥನ ಯತ್ನದಿಂ |ದಿಳಿದಿಹಳು ಕಾಶಿಯಲ್ಲಿ 2ಪರಮನಿರ್ಮಲ ಶುಭ್ರತರದ ಭಾಗೀರಥಿಯನಿರಜೆ ನೀಲಾಭೆ ಯಮುನೆಯ ಮಧ್ಯದಲಿ ಕಾರ್ತ |ಸ್ವರವರ್ಣದಿಂದಲ್ಲಿ ಗುಪ್ತಗಾಮಿನಿಯಾದ |ಸರಸತಿಯ ಸಂಗಮದಲಿ ||ಮೆರೆಯುವ ತ್ರಿವೇಣಿಯೆನಿಸುವ ತೀರದಲ್ಲಿ ವಟ - |ತರುಛಾಯೆಯಲ್ಲಿಹುದು ದೇವ ಋಷಿ - ಮೌನೀಗಣ 3
--------------
ಪುರಂದರದಾಸರು