ಒಟ್ಟು 22 ಕಡೆಗಳಲ್ಲಿ , 17 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿನರಸಿಂಹನೆ ಕರಿಗಿರಿ ನಿಲಯನೆ ಶಿರಬಾಗಿ ನಮಿಸುವೆ ಭಕ್ತಿಯಲಿ ಪ ಕರುಣಾಸಾಗರ ನಿನ್ನ ಚರಣ ಕಮಲದಲಿ ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ. ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು ಸುಲಲಿತವಲ್ಲವು ಸಾಧನವು ನಳಿನನಾಭನೆ ಎನ್ನ ಕುಲದೈವ ನಾರಸಿಂಹ ಒಲಿದು ನೀನಾಗಿಯೆ ಸಲಹುವುದು 1 ಅತ್ತಿತ್ತ ಓಡುವ ಚಿತ್ತವ ನಿಲಿಸುವ ಶಕ್ತಿಯು ಎನಗಿಲ್ಲ ಲವಲೇಶವು | ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು ಭಕ್ತಿಯ ಕರುಣಿಸೋ ತವ ಪಾದದಿ 2 ನೆಲದ ಮೇಲಲೆವಾಗಯಲರುಣಿ ಗಮನವು ಹಲವು ರೀತಿಯಲಿ ವಕ್ರವಲೆ ಘಳಿಲನೆ ತನ್ನಯ ಬಿಲದೊಳು ಪೋಪಾಗ ಸಲೆ ನೇರವಲ್ಲವೆ ಸಿರಿವರನೇ 3 ವನ ವಿಷಯಗಳಲದಲಿ ಬರಲಾರವು ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು ಮನವ ನೀ ಮಡಿ ಮಾಡು ಘನಮಹಿಮ 4 ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು | ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ 5
--------------
ವರಾವಾಣಿರಾಮರಾಯದಾಸರು
ಹತ್ತಿಲಿಹÀ ವಸ್ತುನೋಡೊ ಮನವೆ ನಿತ್ಯ ನಿಜನಿರ್ಗುಣವ ಕೂಡೊ ಮನವೆ ಧ್ರುವ ಅತ್ತಲಿತ್ತಲಾಗದಿರು ಮನವೆ ಚಿತ್ತ ಚಂಚಲ ಮಾಡದಿರೆನ್ನ ಮನವೆ ಉತ್ತುಮ ಸುಪಥ ನೋಡು ಮನವೆ ನೆತ್ತಿಯೊಳಿಹ ಸುವಸ್ತು ಕೂಡೊ ಮನವೆ 1 ಹೋಕಹೋಗದಂತೆ ಎನ್ನ ಮನವೆ ಏಕರಸವಾಗಿ ಕೂಡೊ ಎನ್ನ ಮನವೆ ನಾಲ್ಕು ಶೂನ್ಯವ ಮೆಟ್ಟಿ ನೋಡು ಮನವೆ ಜೋಕೆಯಿಂದ ಜ್ಯೋತಿರ್ಮಯ ಕೂಡೊ ಮನವೆ 2 ಧನ್ಯವಿದು ರಾಜಯೋಗಮನವೆ ಭಿನ್ನವಿಲ್ಲದೆ ಬೆರೆದು ಕೂಡೊ ಮನವೆ ಚೆನ್ನಾಗಿ ಚಿನ್ಮಯ ನೋಡು ಮನವೆ ಅನ್ಯಪಥವಿನ್ಯಾತಕ ನೋಡು ಮನವೆ 3 ಗರ್ವಗುಣ ಹಿಡಿಯದಿರು ಮನವೆ ನಿರ್ವಿಕಲ್ಪನ ತಿಳಿದು ನೋಡು ಮನವೆ ಪೂರ್ವಪುಣ್ಯಹಾದಿ ಇದು ಮನವೆ ಸರ್ವರೊಳು ವಸ್ತುಮಯ ಒಂದೆ ಮನವೆ 4 ದೃಷ್ಟಿಸಿ ಆತ್ಮನ ನೋಡು ಮನವೆ ಪುಷ್ಟವಾಗಿ ಘನದೋರುವದು ಮನವೆ ಭ್ರಷ್ಟವಾಗಿ ಬಾಳಬ್ಯಾಡ ಮನವೆ ನಿಷ್ಠನಾಗಿ ನಿಜನೆಲೆಯಗೊಳ್ಳ ಮನವೆ 5 ಏರಿ ಆರುಚಕ್ರ ನೋಡು ಮನವೆ ಪರಮಾನಂದ ಸುಪಥ ಕೂಡೊ ಮನವೆ ಆರು ಅರಿಯದ ಹಾದಿ ಮನವೆ ತೋರಿಕೊಡುವ ಸದ್ಗುರು ಎನ್ನ ಮನವೆ 6 ಹರಿಭಕ್ತಿಯೊಳಗಿರು ಮನವೆ ಸಿರಿ ಸದ್ಗತಿ ಸುಖವ ಕೂಡೊ ಮನವೆ ಗುರುವಾಕ್ಯ ನಂಬಿ ನಡೆ ಮನವೆ ಪರಲೋಕಕ್ಕೆ ಸೋಪಾನವಿದು ಮನವೆ 7 ಪರದ್ರವ್ಯಗಲ್ಪದಿರು ಮನವೆ ಪರಸತಿಯ ನೋಡದಿರೆನ್ನ ಮನವೆ ಪರರ ನಿಂದ್ಯ ಮಾಡದಿರು ಮನವೆ ದಾರಿ ಹೋಗದಿರು ದುಷ್ಟರ ನೀ ಮನವೆ 8 ಸಜ್ಜನರ ಸಂಗ ಮಾಡೊ ಮನವೆ ಹೆಜ್ಜೆವಿಡಿದು ಪರಲೋಕ ಕೂಡೊ ಮನವೆ ಭೆಜ್ಜರಿಕೆ ಹಿಡಿಯೊ ಎನ್ನ ಮನವೆ ದುರ್ಜನರ ಸಂಗ ಮಾಡಬ್ಯಾಡೊ ಮನವೆ 9 ಕಂಗಳ ತೆರೆದು ನೋಡು ಮನವೆ ಮಂಗಳಾತ್ಮನ ಶ್ರೀಪಾದ ಕೂಡೊ ಮನವೆ ಹಿಂಗದಂತೆ ಕೂಡೊ ಬ್ಯಾಗೆ ಮನವೆ ಗಂಗೆಯೊಳು ಜಲಬೆರೆದಂತೆ ಮನವೆ 10 ಭೇದ ಬುದ್ಧಿಯ ಮಾಡಬ್ಯಾಡ ಮನವೆ ಸಾಧುಸಂತರ ಸುಬೋಧ ಕೇಳು ಮನವೆ ಭೇದಿಸಿ ತಿಳಿದುನೋಡು ಮನವೆ ಸದಮಲ ಬ್ರಹ್ಮ ಸೂಸುತಿದೆ ಮನವೆ 11 ಯುಕ್ತಿ ನಿನಗಿದು ನೋಡು ಮನವೆ ಭಕ್ತವತ್ಸಲ ಸ್ಮರಿಸು ಮನವೆ ಮುಕ್ತಿಯಿಂದಧಿಕಸುಖ ಮನವೆ ಭಕ್ತಿರಸದೊಳು ಮುಳಗ್ಯಾಡು ಮನವೆ 12 ಲೇಸು ಲೇಸು ಮಹಿಪತಿ ಸು ಮನವೆ ದಾಸನಾಗಿರುವ ವಾಸುದೇವನ ಮನವೆ ಭಾಸಿ ಪಾಲಿಪನ ಕೂಡೊ ಎನ್ನ ಮನವೆ ಭಾಸ್ಕರ ಮೂರ್ತಿಯ ನೋಡು ಮನವೆ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗೆಲಿಸು ಭವವಗುರುಹನುಮಂತಖಳಜಲಧಿ ವಡವಾನಳ ಬಲವಂತ ಪ.ದಾಶರಥಿüಯ ಪದವನೆ ನಂಬಿ ಇತರಾಶೆಯಿಲ್ಲದೆ ಭಕ್ತಿರಸತುಂಬಿತೋಷವೃತ್ತಿಗೆ ಕಡೆಮೊದಲಿಲ್ಲ ಕ್ಷುದ್ರದೇಶ ಕೋಶದೆಣಿಕೆ ನಿನಗಿಲ್ಲ 1ಅಂಧಕಾತ್ಮಜ ತೃಣಸುರಧೇನುಗೋವಿಂದಾಂಘ್ರಿಬಿಸಜಮಧುಪನೀನುಸಂಧಕಾಯನ ಸದೆದ್ಯೈ ದೇವ ದಯಾಸಿಂಧುವೈಷ್ಣವಜನ ಸಂಜೀವ2ಶ್ರೀ ಸತ್ಯವತಿಜನ ನೇಮದಲಿಹರಿದ್ವೇಷಿಗಳನು ಗೆದ್ದೆ ಭೂಮಿಯಲಿಶ್ರೀಸುಖತೀರ್ಥಭೀಮ ಕಪಿವರದ ಸ್ವಾಮಿಪ್ರಸನ್ನವೆಂಕಟೇಶ ಭೃತ್ಯಗಣಮುದದ 3
--------------
ಪ್ರಸನ್ನವೆಂಕಟದಾಸರು
ಜಯ ಜಯ ಶ್ರೀಹರಿಪ್ರಿಯೆ ಮಹಾ-ಭಯಹರೆ ಜಗದಾಶ್ರಯೆಲಯವರ್ಜಿತ ನಿತ್ಯಾತ್ಮೆ ಚಿನ್ಮಯೆಜಯಶೀಲೆ ನಿರಾಮಯೆ 1ನಿತ್ಯಮುಕ್ತಿ ನಿರ್ವಿಕಾರೆ ನಿಜ-ಭೃತ್ಯನಿಚಯ ಮಂದಾರೆಪ್ರತ್ಯಗಾತ್ಮ ಹರಿಭಕ್ತಿರಸಪೂರೆಸತ್ವಾದಿಗುಣವಿದೂರೆ 2ಲಕ್ಷ್ಮೀನಾರಾಯಣಿ ಹರಿ-ವಕ್ಷಸ್ಥಲವಾಸಿನಿಅಕ್ಷರರೂಪಿಣಿ ಬ್ರಹ್ಮಾಂಡಜನನಿಸುಕ್ಷೇಮಪ್ರದಾಯಿನಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತೇಲಿಸೊ ಇಲ್ಲ ಮುಳುಗಿಸೊ- ನಿನ್ನ-|ಪಾಲಿಗೆ ಬಿದ್ದೆನೊಪರಮದಯಾಳೊಪಸತಿ-ಸುತ-ಧನದಾಶೆ ಎಂತೆಂಬ ಮೋಹದಿ |ಹಿತದಿಂದ ಅತಿನೊಂದು ಬಳಲಿದೆನೊ ||ಗತಿಯನೀವರ ಕಾಣೆ ಮೊರೆಯ ಲಾಲಿಸೊ ಲಕ್ಷ್ಮೀ-|ಪತಿನಿನ್ನ ಚರಣದ ಸ್ಮರಣೆಯಿತ್ತೆನ್ನ1ಜರೆರೋಗ ದಾರಿದ್ರ್ಯ ಕಶ್ಮಲವೆಂತೆಂಬ |ಶರಧಿಯೊಳಗೆ ಬಿದ್ದು ಮುಳುಗಿದೆನೊ ||ಸ್ಥಿರವಲ್ಲ ಈ ದೇಹ ನೆರೆನಂಬಿದೆನು ನಿನ್ನ |ಕರುಣಾಭಯವನಿತ್ತು ಪಾಲಿಸೊ ಹರಿಯೆ 2ದೋಷವುಳ್ಳವ ನಾನು ಭಾಷೆಯುಳ್ಳವ ನೀನು |ಮೋಸ ಹೋದೆನೊ ಭಕ್ತಿರಸವ ಬಿಟ್ಟು ||ದಾಸರ ಸಂಗವಿತ್ತು ಪಾಲಿಸೊ ಹರಿಯೆ 3
--------------
ಪುರಂದರದಾಸರು
ಸತ್ಸಂಗವಿಡಿದು ಸರ್ವೋತ್ತಮನೆ ಗತಿಯೆಂದುನೆಚ್ಚಿ ಅರ್ಚಿಸು ಗಡ ಮನುಜ ಪ.ವಿರಹ ಶಬ್ದಗಳ ಮೈಯ್ಯೊಲಿದೊಲಿದುಕೇಳಿಸತಿಯರ ಧ್ವನಿಗೆ ಮಗುಳೆ ಮೋಹಿಸುತಹರಿಣ ಘಂಟಾರವಕೆ ಬಲೆ ಬೀಳುವಂತಾಗದಿರುಹರಿಕಥೆಯಕೇಳಿಬಾಳು1ಅರಿಯದರ್ಭಕನು ಕೆಂಡವ ಮುಟ್ಟಿ ಅಳುವಂತೆಪರಸ್ತ್ರೀಯ ಸರಸಕೊಳಗಾಗಿನರಕದೊಳು ಬೀಳ್ವ ಪಾಮರನೆ ಹರಿಚರಣಾಬ್ಜಸ್ಪರುಶ ದೊರಕುವುದೆಂತೊ ನಿನಗೆ 2ದೀಪ ಕಾಶಕೆ ಪತಂಗವು ಕೆಡೆವ ಪರಿಯು ಸಲ್ಲಾಪವು ಪರಸತಿಯರೊಡನೆಶ್ರೀಪತಿಯ ಮೂರುತಿಯ ಕಂಡೆರಗು ಮೂಢಮತಿಪಾಪ ಬುದ್ಧಿಗಳನ್ನುಜರಿದು3ಶಸ್ತ್ರ್ತಧಾರೆಯ ಮಧುವ ಬಯಸುವಂತನ್ಯೋತ್ತಮ ಸ್ತ್ರೀಯರಧರಸುಧೆಬಯಸಿಚಿತ್ತವ್ಯಸ್ತವ ಮಾಣದೊಮ್ಮೆಗಾದರೆಹರಿಭಕ್ತಿರಸವೀಂಟಿ ಸುಖಿಯಾಗು 4ವನಜವನವಂ ಬಿಟ್ಟು ಅಳಿವೃಂದ ಚಂಪಕದನನೆಗೈದಿ ಪ್ರಾಣ ಬಿಡುವಂತೆವನಿತೆಯರ ವಾಸನೆಯೆ ನಿರಯದೌತಣವೆಂದುವನಜಾಕ್ಷ ನಿರ್ಮಾಲ್ಯ ಸೂಡು 5ಇಂತೆಂಬ ಪಂಚಭೌತಿಕದೇಹದಾಸೆಯೊಳುಸಂತತದಿಲಂಪಟನೀನಾಗಿಅಂತ್ಯದೊಳುಜರೆಕಾಡುವಾಗ ಕಫ ವಾತವೆಮುಂತಾದ ವ್ಯಥೆ ಬೆನ್ನ ಬಿಡವು 6ಭಸ್ಮಕ್ರಿಮಿಕೀಟವಾಗಿ ಪೋಪ ಕಾಯಕೆ ನಂಬಿವಿಸ್ಮರಣೆ ಬೇಡ ಹರಿಪದಕೆಕಶ್ಮಲಾನ್ವಿತವಾದ ಯೋನಿಗಳ ಬರವರಿತುವಿಸ್ಮರಣೆ ಬೇಡ ಹರಿಪದಕೆ 7ಬಲ್ಲಿದರ ಸಿರಿಯ ಸೈರಿಸಲಾರೆನೆಂದೆಂಬಕ್ಷುಲ್ಲಕರ ನುಡಿಯನಾಡದಿರುಎಲ್ಲಿ ಭಾಗವತರ ನಿಕೇತನಾಜೆÕಯ ಕೇಳೆಅಲ್ಲಿ ಮಧುಕರವೃತ್ತಿತಾಳು8ಹರಿದಾಸರ ವಿಲಾಸವೆ ಎನ್ನ ಸಿರಿಯೆಂದುಹರಿದಾಸರಡಿಗೆ ಮಗುಳೆರಗಿಹರಿದಾಡುವ ಮನಕೆ ಸೆರಯಿಕ್ಕಿ ಹರಿಯನೆ ನೆನೆದುಹರುಷ ಪುಳಕಿತನಾಗಿ ಬಾಳು 9ದಶಇಂದ್ರಿಯಂಗಳಿಗೆ ವಶವಾಗದಿರು ಏಕಾದಶಿ ವ್ರತಕೆ ವಿಮುಖವಾಗದಿರುದಶಶಿರಾರಿಯ ನಾಮದಶನವೆಭುಂಜಿಸುದಿಶೆಯರಿತೂ ಕಾಣನಾಗದಿರು 10ಪದ್ಮನಾಭನ ಪಾದಪದ್ಮವೆ ಗತಿಯೆಂದುಪದ್ಮಜನ ಪದಕೆ ಪೋಗುವನಪದ್ಧತಿಯವಿಡಿದುವರಪದ್ಮಪತಿ ವಾಸ ತ್ರೈಸದ್ಮನಿಗೆ ಉದ್ಯೋಗಮಾಡು11ಕಡು ಬಂಧುಬಳಗ ಸತಿಸುತರುಂಟು ವೃತ್ತಿಯೊಳುಕಡಿಮಿಲ್ಲವೆಂಬ ಪಾಶವನುಕಡಿದು ಕಡಲೊಡೆಯನೆ ಸಲಹೆಂದು ಗರ್ಜಿಸಲುಕಡೆಹಾಯಿಸಬಲ್ಲದಿದು ನಿನಗೆ 12ಆವಾಗೆ ಜಗಕೆ ಸರ್ವೋತ್ತಮನೆ ಹರಿಯೆಂದುಜೀವೋತ್ತಮನೆ ವಾಯುವೆಂದುಭಾವಶುದ್ಧಿಗಳಿಂದ ಬಯಲುಡಂಬಕಬಿಟ್ಟುಜೀವಿಸಲು ಸ್ವರೂಪ ಸುಖವಾಹುದು 13ವರಊಧ್ರ್ವಪುಂಡ್ರಹರಿಮುದ್ರೆಯನಲಂಕರಿಸುಶಿರಿ ತುಲಸಿ ಪದ್ಮಸರ ಧರಿಸುಸ್ಮರನ ಶರಕಂಜದರಿಯಾರುವರ್ಗವನೊದೆದುಹರಿದು ಬಹ ದುರಿತಗಳ ಸದೆದು 14ಏಸುಜನ್ಮದಿ ಬಂದು ನೊಂದೆ ಭವಾಟವಿಯೊಳುಮೋಸ ಹೋಗದಿರಿನ್ನು ತಿಳಿದುಬೇಸರದೆ ಉರಗಾದ್ರಿವರದ ಪ್ರಸನ್ವೆಂಕಟೇಶನಂಘ್ರಿಯ ಬಿಡದೆ ಭಜಿಸು 15
--------------
ಪ್ರಸನ್ನವೆಂಕಟದಾಸರು
ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು |ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ಪ.ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು |ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ 1ಭಕ್ತಿರಸದಲಿ ತನ್ನ ಚಿತ್ತಪರವಶನಾಗಿ |ಅಚ್ಯುತನ ನಾಮವನು ಬಚ್ಚಿಟ್ಟು ಕೊಂಡವಗಲ್ಲದೆ 2ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ |ಆನಂದ ಪೂರ್ಣ ಪುರಂದರವಿಠಲನ ನೋಡಿದವಗಲ್ಲದೆ 3
--------------
ಪುರಂದರದಾಸರು