ಜಯ ಜಯ ಶ್ರೀ ಸದ್ಗುರುನಾಥ
ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ ಧ್ರುವ
ಸ್ವಯಂಭು ಸ್ವತಂತ್ರ ಸ್ವಪ್ರಕಾಶ
ಸ್ವಯಂಜ್ಯೋತಿಸ್ವರೂಪ ಸ್ವವಿಕಾಸ
ದ್ವೈತಾದ್ವೈತಕೆ ಸಹಿತ ಸ್ವವಿಲಾಸ
ಶ್ರೇಯ ಸುಖದಾಯಕನಹುದೋ ನೀ ಪರೇಶ 1
ಸ್ವಭಾವ ಸ್ವಸಿದ್ಧ ಸರ್ವಾಧಾರ
ಸ್ವಭಾಸ ಸ್ವತೇಜ ಸಹಜ ನಿರ್ಧಾರ
ಸ್ವಬೋಧ ಸ್ವಬ್ರಹ್ಮ ಸಾಕ್ಷಾತಾರ
ಸ್ವಭಕ್ತಜನರಿಗೆ ನೀನೆ ಸಹಕಾರ 2
ಸ್ವಾನಂದ ಸದೋದಿತ ಸ್ವಯಂ ಭಾನು
ಸ್ವಾನಭವಲಾದಯ್ಯ ತಾನೆ ತಾನು
ಅನುದಿನ ಭೋರ್ಗರೆವ ನೀ ಕಾಮಧೇನು
ದೀನಮಹಿಪತಿ ಸ್ವಾಮಿ ನೀನೆ ನೀನು 3