ಒಟ್ಟು 174 ಕಡೆಗಳಲ್ಲಿ , 29 ದಾಸರು , 121 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ ದೃಷ್ಟಿನಿಲ್ಲಿಸಿಮೇರು ಶಿಖರವ ನೋಡುವತನಕ ಪ ಚಕ್ರವಾರ ಮೆಟ್ಟಿನಿಂತು ಚಂಚಲಿಸದಂತೆ ದೃಷ್ಟಿಯಿಟ್ಟುವಿಕ್ರಮದಲಿ ಬ್ರಹ್ಮರಂದ್ರ ಪೊಕ್ಕು ತೇಜ ಕಾಣುವತನಕ 1 ದೃಢಚಿತ್ತದಲಿದ್ದು ಮಾರುತನ ಮೇಲಕೆ ಊದಿಒಡನೆ ಕೂಡಿಸಿ ವಾಯುಮನವನು ಅಸುವನು ಕಾಣುವತನಕ2 ಓಂಕಾರ ಧ್ವನಿಯ ಕೇಳಿ ಒತ್ತೊತ್ತು ಬೆಳಗಿನೊಳುಶಂಕರನೆನಿಪ ಚಿದಾನಂದ ಬ್ರಹ್ಮವನೆ ಕಾಣುವ ತನಕ 3
--------------
ಚಿದಾನಂದ ಅವಧೂತರು
ಈಗ ಶಾಸ್ತ್ರಗಳನ್ನು ಎರಗಿ ಪೇಳುವೆ ನಾನು ಯೋಗೇಶ ಪ್ರತಿಗ್ರಹಿಸುಆಗುಮಾಡಿದೆ ನೀನು ಅಖಿಲಾಗಮಂಗಳನುಭಾಗಿಸಿ ಬಹುವಾಗಿ ಬಗೆಗಳನು ಪಹದಿನಾಲ್ಕು ಸೂತ್ರಗಳು ಹುದುಗಿದ ವೃತ್ತಿಗಳು ವೊದಗಿ ಶಬ್ದವ ಬೋಧಿಸಿಅದರ ದೋಷಗಳನ್ನು ಅಟ್ಟಿ ಶುದ್ಧಿಯ ಮಾಳ್ಪುದಿದು ತಾನೆ ಮೊದಲಾಗಿ ುೀ ಶಾಸ್ತ್ರವಿರಲು 1ಎರಡನೆಯದು ತರ್ಕವೆಲ್ಲಾ ಜೀವರ ಬಗೆಯನರುಹಿಸಿ ಕೊಡುತಿಹುದುಪರಿಕಿಸಿ ಹದಿನಾರು ಪರಿ ಪದಾರ್ಥಗಳನ್ನುನೆರಹಿಸಿುರೆ ನೀನುನಿನಗೊಪ್ಪಿಸುವೆನು 2ಈ ಸಾಧನಗಳಿಂದಲೇಕ ವಸ್ತುವ ತಿಳಿದುತಾ ಸಾಧಿಸುವ ಬಗೆಯಮೋಸವಿಲ್ಲದ ಹಾಗೆ ಮುಕ್ತಿ ತೋರ್ಪುತ್ತರ ಮೀಮಾಂಸೆ ಯೆಂದೆಂಬುದೆ ನಿಜ ಶಾಸ್ತ್ರ ವಾಗೆ 3ಕರ್ಮ ಬ್ರಹ್ಮವೆಯೆಂದು ಕೊಂಡಾಡಿ ಜನರನ್ನುಧರ್ಮಮಾರ್ಗದಿ ನಿಲಿಪಮರ್ಮದೋರುವ ಪೂರ್ವ ಮೀಮಾಂಸೆ ಯೆಂಬುದನಿರ್ಮಿಸಿುರೆ ನೀನು ನಿರ್ಣೈಪುದಾಗಿ 4ಪರಿಕಿಸಿ ನಿನ್ನುವನು ಪಡೆÉುಸಿ ಪ್ರಾಣಗಳನ್ನುಪರಮಾನಂದದಿ ನಿಲಿಸಿಮೆರೆವ ಶ್ರೀ ತಿರುಪತಿ ವರದ ವೆಂಕಟರಮಣಚರಣಸೇವೆಗೆ ಯೆನ್ನ ಚಲಿಸದಂತಿರಿಸು 5
--------------
ತಿಮ್ಮಪ್ಪದಾಸರು
ಎಂಥ ಮಾತನಾಡಿದಿ ಎಲಾ ನೀನು | ಛೀ | ಸಂತನಾದ ಮೇಲೆ ಮುಂಚಿನದೇನೊ ಪ ಊರ ಮುಂದಿನ ಕೆರೆ ಭಾವಿಯ ನೀರು |ಊರೆಲ್ಲ ಬಳಕಿಗೆ ತಾವು ತರುವರು | ಪಾರಮಾರ್ಥಿಕರ ಪಾದೋದಕ ಮಾಡಲು | ನೀರೆಂದು ಅದಕಿನ್ನು ದಾರಾಡುವರು ? 1 ಕಲ್ಲಲ್ಲಿ ಲಿಂಗವ ಮಾಡಿದರೇನೊ | ಲಿಂಗವಲ್ಲದೆ ಕಲ್ಲು ಎಂಬುವರೇನೊ | ಬಲ್ಲ ಸತ್ಪುರುಷರ ಬಗೆಯನರಿತು | ತನ್ನಲ್ಲಿ ಬ್ರಹ್ಮವ ಕಂಡವನೀಗ ನರನೇನೊ 2 ಕಾಮರ ಅಡವಿಯೊಳಿರುವದಾ ತಂದು | ಕಾಮಿಸಿ ಪಾದುಕ ಮಾಡಲು ಎಂದು | ಸ್ವಾಮಿ ಸದ್ಗುರು ಭವತಾರಕ ಮೆಟ್ಟಲು | ಭೂಮಿ ಜನರಡ್ಡ ಬೀಳ್ವರಿದೇನೋ 3
--------------
ಭಾವತರಕರು
ಎಂದೆಂದು ಕಂಡುದಿಲ್ಲಮ್ಮಎಂದೆಂದು ಕಂಡುದಿಲ್ಲಮ್ಮ ಗುರುಇದೀಗ ತೋರಿದ ನಮ್ಮ ಮನಸಂದೇಹವು ಹರಿಯಿತಮ್ಮ ನೀನೇಎಂದೆನೆ ಹರುಷಾದೆ ನಮ್ಮ ಬ್ರಹ್ಮವನಮ್ಮ ಪ ರೂಪುನಾಮವು ಅದಕ್ಕಿಲ್ಲವಮ್ಮ ಅದುಹೋಗುವುದಿಲ್ಲ ಬರುವುದಿಲ್ಲಮ್ಮ ಎಲ್ಲವ್ಯಾಪಕವಾಗಿಹುದಮ್ಮ ದೀಪವೆ ತುಂಬಿಹುದಮ್ಮ ಬ್ರಹ್ಮವದಮ್ಮ1 ಕಾಯದ ಒಳಗೆ ಹೊರಗಮ್ಮ ಗುರುರಾಯನ ದಯವಾಗಬೇಕಮ್ಮ ತನ್ನಮಾಯೆ ಬಿಟ್ಟರೆ ತೋರುವುದಮ್ಮ ಬ್ರಹ್ಮವದಮ್ಮ 2 ಮಂದಿರ ಮನೆ ಪಶುರೂಪವಮ್ಮ ಜಗವೊಂದೆ ಅಖಂಡವಿಹುದಮ್ಮತಂದೆ ತಾಯಿ ಮಕ್ಕಳು ತಾನೆ ಅಮ್ಮಚಿದಾನಂದನೆ ತಾನೆಂದ ನಮ್ಮ ಬ್ರಹ್ಮವನಮ್ಮ 3
--------------
ಚಿದಾನಂದ ಅವಧೂತರು
ಎನೊ ಎಂತೊ ತಿಳಿಯದು ತಿಳಿಯದು ಸ್ವಾನಂದದ ಸುಖದಾಟ ಧ್ರುವ ಒಳಗೊ ಹೊರಗೊ ಬೈಗೊ ಬೆಳಗೊ ಕಾಳೊ ಬೆಳದಿಂಗಳವೊ ಮಳಿಯೊ ಮಿಂಚೊ ಹೊಳವೊ ಸಳವೊ ತಿಳಿಯದ ಕಳೆಕಾಂತಿಗಳು 1 ಉದಿಯೊ ಅಸ್ತೊ ಆದ್ಯೊ ಅಂತ್ಯೊ ಮಧ್ಯೋ ತಾ ತಿಳಿಯದು ತುದಿಮೊದಲಿಲ್ಲದೆ ಸದಮಲ ಬ್ರಹ್ಮವು ಉದಿಯವಾಗಿಹ್ಯದು ನೊಡಿ 2 ಜೀವೋ ಭಾವೋ ಶಿವೊ ಶಕ್ತೋ ಆವದು ತಾ ತಿಳಿಯದು ಘವಘವಿಸುವ ಅವಿನಾಶನ ಪ್ರಭೆಯಿದು ಮಹಿಪತಿ ವಸ್ತುಮಯವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು ಬ್ರಹ್ಮನು ಎಂಬೆಎಂಬೆನು ವಿವೇಕ ಮನುಜಗೆ ಇಲ್ಲದಿರೆ ಕತ್ತೆಯಮರಿಯದು ಎಂಬೆ ಪ ವೇದದ ನಿಜ ಅರ್ಥವ ತಿಳಿದಡೆ ಉತ್ತಮೋತ್ತಮನು ಎಂಬೆಕ್ರೋಧದಿ ತರ್ಕದಿ ಕಾದಾಡುವವನು ಕೋಳಿಯ ಹುಂಜನು ಎಂಬೆನಾನಾರೆನುತಲಿ ನಿಜವನು ತಿಳಿವನ ನಾರಾಯಣನು ಎಂಬೆನಾದದ ತಿಳಿವನು ನಿಂದಿಸುವಾತನ ಸರಸವಾಡೋ ಪಶು ಎಂಬೆ 1 ಮತಿಯ ವಿಚಾರದಿ ಜಗ ಬ್ರಹ್ಮವೆಂಬನ ವಿಚಾರವಾದಿಯು ಎಂಬೆಯತಿಗಳು ಬರೆ ಕುಳಿತೇಳದ ಮನುಜನಎಮ್ಮೆಯ ಮಗನವನೆಂಬೆಸುತ್ತಮುತ್ತಂಗನೆ ಮೋಹವ ತೊರೆದನ ಯೋಗಪುರುಷ ತಾನೆಂಬೆಗತಿಮತಿ ತೊರೆದಿಹ ನರನನು ಈಗಲೆ ಎಂಜಲು ತಿಂಬುವ ನಾಯೆಂಬೆ 2 ಪರಮಾರ್ಥದಿ ಶಮದಮದಿಂದಿಹನನು ಪಂಡಿತನೀಗಲು ಎಂಬೆಹಿರಿಯರ ಕಾಣಲು ಹಲ್ಲನೆ ಕಿರಿವನ ಹಿರಿಯಮುಸುವನು ತಾನೆಂಬೆಗುರಿಯನು ತಪ್ಪದೆ ದೃಷ್ಟಿಸಿ ನಡೆವನ ಗುಣಕೆ ಅತೀತನು ಎಂಬೆಬರಿಯ ಪ್ರತಿಷ್ಟೆಯ ಸಾಧಿಸುತಿರುವನ ಬರಡು ಗೊಡ್ಡು ಎಂದೆಂಬೆ 3 ನಾದದ ಧ್ವನಿಯನು ಕೇಳುತಲಿಹನನು ಜಗಜೀವನನು ಎಂಬೆನಾದದ ಸುಖವನು ಅರಿಯದ ನರನನು ಜೀನುಗಾರನು ಎಂದೆಂಬೆದಿನಕರ ಕೋಟಿಯ ತೇಜದಿ ಹೊಳೆವನ ದಿವ್ಯ ಮೂರುತಿ ಎಂದೆಂಬೆವನವನ ಅಲೆಯುವ ಬರಡು ಮುನಿಯನುವನಕೆಯ ತುಂಡದು ತಾನೆಂಬೆ4 ಆತ್ಮದ ಕಳೆಯನು ಅರಿತವನಿದ್ದರೆ ದೃಢದಲಿ ಬ್ರಹ್ಮನು ಎಂಬೆಸತ್ವಶಾಲಿ ಆ ಮಹಿಮರ ಜರೆವರ ಗುಡ್ಡದ ಗೂಗೆಯಮರಿ ಎಂಬೆಚಿನುಮಯ ಚಿನ್ಮಾತ್ರನೆ ತಾನಾದವನನು ಚಿದಾನಂದ ಗುರುವೆಂಬೆಕರೆಕರೆ ಎನಿಸುವ ಸಾಧು ವೇಷವನು ದೂರಕೆ ನೀ ನಿಲ್ಲೆಂಬೆ5
--------------
ಚಿದಾನಂದ ಅವಧೂತರು
ಎರಿ ಮುಂಡೆ ಇವನೆರಿ ಮುಂಡೆ ಏನುಅರಿಯದೆ ಒದರುವ ಎರಿಮುಂಡೆ ಪ ತನ್ನ ನಿಜವ ತಾನು ಅರಿಯದೆ ತತ್ವದಕುನ್ನಿಯಂತೆ ಒದರುವ ಎರಿಮುಂಡೆಭಿನ್ನ ಬುದ್ಧಿಯಲಿದ್ದು ನಾ ಬ್ರಹ್ಮವೆಂಬುದನುಚೆನ್ನಾಗಿ ಅರಿಯದ ಎರಿಮುಂಡೆ 1 ಯೋಗವ ತಿಳಿಯದೆ ಯೋಗವ ಹಳಿವನುಈಗ ಹೇಳಿವನೀಗ ಎರಿಮುಂಡೆಆನಿಹೆ ಬ್ರಹ್ಮವು ನಾನೆಂದು ಎತ್ತೆತ್ತೆನುಡಿವನು ಎರಿಮುಂಡೆ 2 ಕೋಟಿ ಸೂರ್ಯರ ತೇಜ ಪಾಟಿಸಿ ಕಾಣದೆಬೂಟಕ ನುಡಿವವ ಎರಿಮುಂಡೆದಾಟಿ ಸಹಸ್ರಾರ ಬ್ರಹ್ಮರಂಧ್ರದ ನಾಳ ಕೇಳದ ನರನಾಗ ಎರಿಮುಂಡೆ 3 ಮಾತರಿಯದೆ ಜ್ಞಾನ ನುಡಿಯಿದ್ದುದಕಳೆದು ಮಣ್ಣು ಹೋಯ್ಯೆಂಬುವ ಎರಿಮುಂಡೆಮಾತಿಲಿ ಬ್ರಹ್ಮವು ಆಗಬೇಕಾದರೆ ಮಹಾಸಾಧನವೇಕೆ ಎರಿಮುಂಡೆ 4 ಒಂದು ಹೋಗಲಿಲ್ಲ ಒಂದೇ ನಾನೆಂಚಿನುಇಂದು ಕೇಳುವನೀಗ ಎರಿಮುಂಡೆಸುಂದರ ಚಿದಾನಂದ ಸ್ವರೂಪ ತಿಳಿಯದೆ ಸುಲಭ ಎಂದೆಂಬುವ ಎರಿಮುಂಡೆ 5
--------------
ಚಿದಾನಂದ ಅವಧೂತರು
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ ಪ ಭಾನುವ ನೋಡಲು ಒಳಕಂಡಿಯ ಹಂಗ್ಯಾಕೆನೀನು ನಿನ್ನರಿವುದಕೆ ಯೋಗಗಳ ಸಾಧನ ಬೇಕೆ 1 ನಳಿನ ಸಖನ ನೋಡುವುದಕೆ ಬೆಳಕನು ಕೋರಲುಬೇಕೆಬಲು ನಿನ್ನನು ಕಾಣುವುದಕೆ ಸಾಧಕರ ಸಾಧನ ಬೇಕೆ 2 ಯೋಗಗಳೆಂಬುವುದಿನ್ನು ಜೀವ ಭ್ರಾಂತಿಯೆನ್ನುಈಗಲು ಇತರರಿಲ್ಲೆನ್ನು ಚಿದಾನಂದ ಸದ್ಗುರು ತಾನೆ ಎನ್ನು 3
--------------
ಚಿದಾನಂದ ಅವಧೂತರು
ಎಲ್ಲಿ ಗತಿಯು ನಾರಿಯ ಕೂಡಿದವಗೆಎಲ್ಲಿ ಗತಿಯು ತಿಳಿಯೋಬಲ್ಲವನಾದರೆ ಸತಿಯ ಬಿಟ್ಟು ಸದ್ಗುರು ಹೊಂದಲು ಮನೆಯು ಪ ಮೊದಲೇ ಕೋತಿಯು ಮದ್ಯವನುಕುಡಿಸೆ ಮನೆಗೆ ಬಹುದೇಅದರ ತೆರೆದಿ ಪಾಮರನಿಗೆ ಸ್ತ್ರೀಯಕೂಡಿಸಬಹುದೇ 1 ಕಣ್ಣೆಯಿಲ್ಲದವನೀಗಕುಣಿಯ ಬೀಳುವನಲ್ಲಕಣ್ಣು ಎರಡು ಇದ್ದವನುಬೀಳೆ ಪಾಪವಲ್ಲವೆ 2 ಮುಕ್ತಿ ಬೇಕಾದರೆ ತನಗೆ ಸು-ದತಿಯ ಬಿಡಬೇಕುಶಕ್ತಿ ಚಿದಾನಂದ ಶುದ್ಧ ಬ್ರಹ್ಮವನೀತ ಕೂಡಲಿಬೇಕು 3
--------------
ಚಿದಾನಂದ ಅವಧೂತರು
ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇಏಕ ಬ್ರಹ್ಮಾಸ್ತ್ರ ದೇವತೆಯ ಹೊಂದಿ ಜನ್ಮ ಕಳೆಯಬಾರದೆ ಪ ಬಿಸಿಲೊಳು ಬಳಲುವರ ಕಂಡು ನೆರಳಿಗೆ ಕರೆಯಬಾರದೆತೃಷೆಯಿಂದ ನಾಲಗೆ ಒಣಗುತಲಿರೆ ನೀರನೆರೆಯಬಾರದೆಹಸಿದು ಬಂದವರಿಗೆ ಇದ್ದದ್ದರೊಳಗೆ ಅನ್ನವ ನೀಡಬಾರದೆಹುಸಿನುಡಿಯ ಬಿಟ್ಟು ಸತ್ಯವಾಕ್ಯವನೀಗ ಆಡಬಾರದೆ1 ಸತಿ ಸುತರು ಸ್ವಾರ್ಥ ಮರೆತು ಮುಕ್ತ ಮನದಿ ಧರ್ಮ ಮಾಡಬಾರದೆಹಿತದವರು ಒಬ್ಬರಾದರೂ ಹಿಂದೆ ಬರುವರೇ ನೀನೇ ನೋಡಬಾರದೆಮತ ಅಭಿಮಾನ ಮರೆತು ಆತ್ಮಾಭಿಮಾನವ ಮರೆಯಬಾರದೆ 2 ನಂಟರ ಮೇಲೆ ಚಿಂತೆಯಿದ್ದಂತೆ ಗುರುವಿನ ಮೇಲೆ ಇರಬಾರದೆಕುಂಠಿಣಿ ಮನೆಗೆ ಹೋಗುವಂತೆ ಮಠಕೆ ಹೋಗಬಾರದೆಒಂಟೆಯಂದದ ಮೋರೆಯನೀಗ ಹಿರಿಯರ ಕಂಡು ತಗ್ಗಿಸಬಾರದೆ 3 ಸಾಧುಗಳು ಕಾಣೆ ಭಕ್ತಿಯಲೆದ್ದು ಚರಣಕೆ ಎರಗಬಾರದೇವ್ಯರ್ಥವಾದದ ಮಾತನು ಬಿಟ್ಟು ಸುಮ್ಮನೆ ತಾನಿರಬಾರದೆಕ್ರೋಧದ ಬೇರನು ಮೊಳಕೆಯಸಹಿತ ಕೀಳಬಾರದೆಮಾರ್ಗದಿ ಕಲ್ಲುಮುಳ್ಳುಗಳಿರೆ ಕಡೆಗೆ ತೆಗೆದೆಸೆಯಬಾರದೆ4 ನಾನಾರು ಎಂದು ವೇದಾಂತ ವಾಕ್ಯದಲಿ ನಿನ್ನ ಅರಿಯಬಾರದೆವಾದವ ಬಿಟ್ಟು ಚಿದಾನಂದನ ಚರಣದಿ ಹೊರಳಬಾರದೆಮೇದಿನಿ ಪೂರ್ಣ ಸರ್ವಬ್ರಹ್ಮವೆಂದು ತಾನು ಅರಿಯಬಾರದೆಭೇದಾ ಭೇದಕೆ ಹೊರಗಾದ ಬಗಳೆಯ ಕೂಡಬಾರದೆ 5
--------------
ಚಿದಾನಂದ ಅವಧೂತರು
ಏತರಿಂದ ಬ್ರಾಹ್ಮಣಿಕೆ ಪರಮಾತ್ಮನೆತಾನೆಂದು ತಿಳಿಯದ ನರನಲಿ ಪ ಜನಿವಾರ ನೋಡಿ ಬ್ರಾಹ್ಮಣ ನೆಂದರೆ ಸು-ಮ್ಮನೆ ಮರಕೆ ಬಳ್ಳಿ ಸುತ್ತಿಲ್ಲವೆಹಣೆಯ ಬಟ್ಟದ ನೋಡಿ ಬ್ರಾಹ್ಮಣ ನೆಂದರೆಹಾದಿ ಕಲ್ಲಿಗೆ ಸುಣ್ಣ ಬರೆದಿಲ್ಲವೆ1 ಜುಟ್ಟು ನೋಡಿ ಇವ ಬ್ರಾಹ್ಮಣ ನೆಂದರೆಜುಟ್ಟಿನ ಗುಬ್ಬಿಯು ತಾನಿಲ್ಲವೆಉಟ್ಟ ಧೋತ್ರವ ನೋಡಿ ಬ್ರಾಹ್ಮಣ ನೆಂದರೆಉಟ್ಟುದಿಲ್ಲವೆ ಮನೆಯ ನಡುಗಂಬ 2 ಬ್ರಾಹ್ಮಣನಾದರೆ ಬ್ರಹ್ಮ ಸರ್ವವು ಆಗಿಬ್ರಹ್ಮವಖಂಡದಿ ಭೇದವಿಲ್ಲದೆಬ್ರಹ್ಮ ಚಿದಾನಂದ ಗುರುನಾಥನಾಗಿಯೆಬ್ರಹ್ಮವ ಕಂಡವನೀಗ ಬ್ರಾಹ್ಮಣ3
--------------
ಚಿದಾನಂದ ಅವಧೂತರು
ಏನು ನಡತೆಯೋ ಏಕೆ ಕೆಡುವೆಯೋಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ ಹಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ 1 ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡುಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನುಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದುಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ 2 ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದುನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡುನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲುಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ 3
--------------
ಚಿದಾನಂದ ಅವಧೂತರು
ಏನು ಭಯ ನನಗೆ ಏನು ಭಯತಾನೆಯಾದ ಪರಬ್ರಹ್ಮ ತಾನೆಯಾಗಿ ತಾನಿಹಗೆ ಪ ಕಾಮಿಸಿ ಸುತರು ಸೊಸೆಯು ಕೊನೆಯಿಲ್ಲದ ಬಯಕೆಯಾಗೆಕಾಮನನ್ನು ಕಾಲಲೊದ್ದು ಕಸಕೆ ಮಾಡಿದವಗೆ 1 ಇಹಪರ ವಾಸನೆಯನೆಲ್ಲ ಲೋಕ ವಾಸನೆಯದಹಿಸಿ ಬೂದಿಯನ್ನೆ ಮಾಡಿ ಧೂಳಿಪಟ ಮಾಡಿದವಗೆ 2 ಬಣ್ಣ ಬಣ್ಣದ ಕ್ರೋಧಮದಗಳ ಬಳಿದು ಶೋಕ ಮೋಹವನುಣ್ಣಗೆ ಮಾಡಿ ಎಲ್ಲವ ನುಂಗಿ ನೀರು ಕುಡಿದವಗೆ 3 ಕ್ಲೇಶ ದುಷ್ಟಗುಣ ವೆಂಬುದೆಲ್ಲವಹೊಟ್ಟು ಮಾಡಿ ಹಾರಲೊದ್ದಿಹ ದಿಟ್ಟ ಮಾನವಗೆ4 ಕಪಟ ಮೋಹ ಮೊಳೆಯ ಕಿತ್ತುಬಯಲು ಚಿದಾನಂದ ಸದ್ಗುರು ಬ್ರಹ್ಮವಾಗಿ ತೂಗುವಗೆ 5
--------------
ಚಿದಾನಂದ ಅವಧೂತರು
ಒಂದೇ ಬ್ರಹ್ಮವು ಮತ್ತೊಂದಿಲ್ಲವುಇದ್ದುದು ಬ್ರಹ್ಮವು ಒಂದೇಒಂದನು ಎರಡಾಗಿ ಮಾಡುವುದೆಂತೈಮಾಡಲು ಕೆಡುವನು ಮುಂದೆ 1 ಕನಕದಿಂದ ಒಡವೆ ಬಹಳಾಗಲು ಒಡವೆಗೆಲ್ಲಕನಕವೊಂದೇ ಘನ ಬ್ರಹ್ಮದಿಂದ ನಾನಾ ಜೀವವಾಗೆನಾನಾ ಜೀವಕೆ ಬ್ರಹ್ಮವೊಂದೇ2 ಲೋಹಗಳಿಂದಲಿ ಅನೇಕ ವಿಧವಿರೆಅನೇಕ ವಿಧಕೆ ಲೋಹವೊಂದೇಮಹಾಬ್ರಹ್ಮಾದಿ ಮಹತ್ತು ಅಣುವಿರೆಮಹತ್ತು ಅಣುವಿಗೆ ಬ್ರಹ್ಮವೊಂದೇ 3 ಬೀಜದಿಂದ ಬೀಜವನೇಕವಾಗಲುಅನೇಕ ಬೀಜಕೆ ಬೀಜವೊಂದೇತೇಜ ಚಿದಾನಂದ ಬ್ರಹ್ಮವು ಸರ್ವವುಆ ಸರ್ವಕೆ ಬ್ರಹ್ಮವು ತಾನೊಂದೆ 4
--------------
ಚಿದಾನಂದ ಅವಧೂತರು
ಒರೆವೆ ಹಿತವನೆ ಕೇಳು ಎಲೆ ಮರುಳ ಮೂಢಾಒರೆವೆ ಹಿತವನೆ ಕೇಳೊಇರುವೆನು ಎಲ್ಲಿ ಎಂದೆನ್ನುವೆ ಏಕೆತೆರಳುವೆನೆಲ್ಲಿಗೆ ಎನ್ನು ಶಿವನಹೆ ಪ ಸತಿಸುತರ ನಂಬಬೇಡ ಯಮಧರ್ಮನಮನೆಯ ಸೇವಕರು ನೋಡಾ ಮಕ್ಕಳ ಒಡಗೂಡಾಮಿತಿಯಿಲ್ಲದೆ ಮೋಹವು ಹೆಚ್ಚಿಗತಿಗೆಡಿಸೆ ಒಪ್ಪಿಸುವರು ನಿನ್ನ 1 ಇಂದು ನಿನಗೆ ವಸತಿ ಸ್ಥಳವುಎಲ್ಲಿ ದೇವರು ಬಂದು ತುಳಿದಾಡುವರಿಂದುಬಲ್ಲವನಾದರೆ ಸತ್ಯವಿದೆನ್ನುತಎಲ್ಲರ ಆಸೆಯ ಮನದಲಿ ತ್ಯಜಿಸು2 ಸುಂಟರಗಾಳಿಯು ರವದಿ ತಿರುಗಿದವೊಲುಉಂಟು ಅನಂತಕಾಲದಿ ಜನನ ಮರಣಗಳುಅಂಟಿಯೆ ಕಾಲವ ಮರುಳದು ಬೇಡಅಂಟಿಯೆ ಹೊಂದು ಚಿದಾನಂದ ಬ್ರಹ್ಮವ 3
--------------
ಚಿದಾನಂದ ಅವಧೂತರು