ಒಟ್ಟು 22 ಕಡೆಗಳಲ್ಲಿ , 14 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸತ್ಯ ಬೋಧರು ನಿಂದಿಸೋರಿಗೆ ನಿಂದೆಯನು ಕೊಡುವಾ ಕೊನೆಕಾಮರಿಗೆ [?] ಕೊನೆಯನು ಕೊಡುವಾ ಘನ ಮಹಿಮಾ ನಮ್ಮ ಸತ್ಯಬೋಧಗುರು ಅನುದಿನ ನೆನೆಯಲಭೀಷ್ಟವ ಕೊಡುವಾ ಪ ರಾಮದೇವಾರ್ಚನೆ ನೇಮದಿಂದಲಿ ಗೈದು ಕಾಮಿತ ಫಲಪ್ರದ ಬಲವೈಯ್ದಿದಾ ಶೀಮಿಶೀಮಿಯೊಳು ಕಾಮನೈಯ್ಯನ ಜನ ಕಾಮಪ್ರದಾನೆಂಬುದೆ ಸಾರಿದಾ ಧೀಮಾನ್ ಶ್ರೀಮಾನ್ ಕಾಮಿತೇಷ್ಟದಾ ಕಾಮನೆಂದು ತಾ ಪೊಗಳಿಸಿದಾ ವಾಮದೆ ವಗುರು ರಾಮಭಕುತನೆಂದು ಭೂಮಿಯೊಳ್ಡಂಗುರ ಹೊಡಿಸಿದಾ 1 ತತ್ವ ತಿಳಿದು ನೋಡಿ ಸತ್ಯ ಸತ್ಯ ಹರಿ ಮತ್ತುವನಿಗೆ ಭೃತ್ಯವಾದ ಸೂನು ಉತ್ತಮರೆಲ್ಲರು ಸತ್ಸಮಯವಂತೆ ಸತ್ಯ ಪ್ರಮಾಣವ ಪೇಳಿದನು ¸ತ್ಯಬೋಧ ರವಿ ಮಿಥ್ಯಾಗತ್ತಲೆಗೆ ತಾ ಕತ್ತರಿಯೆಂದರುಹಿದನು ¸ತ್ಯ ಬೋಧನೆಯನು ಸತ್ವರಿಂಗೆ ಮಾಡಿ ಮತ್ತವರುದ್ಧಾರ ಮಾಡಿದನು 2 ವರಸದ್ಗುಣಗಣ ನಿಲಯನೆನಿಸಿ ತಾ ವರ ಶಿಷ್ಟಾನ್ವಿತ ಮೇಣ್ ವಂದ್ಯನಾದ ಶಿರಿವರ ಪಾದಾನುಗ್ರಹ ಪಡೆದು ತಾ ಹರಿಜನಾರ್ತಿತಯ ಛೇದಿಸಿದಾ ದುರಿತ ತಮರಾಶಿಗಗ್ನಿಯೆನಿಸಿದಾ ಶರಣರ ಸಂಘ ಬೂದಿಗೈದಾ ನರಸಿಂಹವಿಠಲನ ಕರಣವ ಪಡೆದು ತಾ ಗುರುವರ ವರಪ್ರದನೆನಿಸಿದಾ 3
--------------
ನರಸಿಂಹವಿಠಲರು
ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ- ನಾಮ ಸರ್ವಾಂತರ್ಯಾಮಿ ಪ. ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ- ಸ್ತೋಮವಂದಿತ ಭೀಮಬಲ ಗುಣ- ಧಾಮ ವರನಿಸ್ಸೀಮ ಮಹಿಮನೆ ಅ.ಪ. ಅಂತರ್ಬಹಿವ್ರ್ಯಾಪ್ತನೆ ಸತತ ರಮಾ- ಕಾಂತಗೆ ಪರಮಾಪ್ತನೆ ಚಿಂತಿಪ ಭಕ್ತರ ಚಿಂತಾಮಣಿ ನಿ- ಶ್ಚಿಂತನೊಂದೆ ಶಿರದಿ ಸಾಸವೆ- ಯಂತೆ ಲೋಕವನಾಂತುಕೊಂಡಿಹೆ 1 ರಾಮನ ಸೇವೆಗಾಗಿ ಲಕ್ಷ್ಮಣನೆಂಬ ನಾಮವ ತಾಳ್ದ ಯೋಗಿ ಯಾಮಿನೀಚರರ ನಿರ್ನಾಮಗೈದ ವೀರಲ- ಲಾಮ ನಿರ್ಜಿತಕಾಮ ಸಜ್ಜನ- ಪ್ರೇಮ ಭೌಮ ನಿರಾಮಯನೆ ಜಯ 2 ಸಂಕರ್ಷಣ ಸುಗುಣಾ-ಭರಣ ನಿ- ಶ್ಯಂಕ ವೈರಿಭೀಷಣ ಶಂಕರಾದಿಸುರಸಂಕುಲನುತಪಾದ- ಪಂಕಜನೆ ತಾಟಂಕಗೋಪಾ- ಲಂಕೃತಾಂಗ ಶುಭಂಕರನೆ ಜಯ 3 ಸಾರತತ್ತ್ವಬೋಧನೆ ಶರಣುಜನ ವಾರಿಧಿಚಂದ್ರಮನೆ ಘೋರಭವಾರ್ಣವತಾರಕನಮಲ ಪಾ- ದಾರವಿಂದದ ಸೌಂದರ್ಯ ನಿಜ ಭೂರಿ ನೇತ್ರಗಳಿಂದ ಕಾಣುವೆ 4 ಮಂಜುಳ ನಗರೇಶನೆ ಭಕ್ತಭಯ- ಭಂಜನ ಸುವಿಲಾಸನೆ ಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ- ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸಮಾಜ ಚಿಂತನೆ :ನೀತಿಬೋಧನೆ ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡೆ ಜಗಳವೇ ಲೇಸು ಪ ಉಂಬುಡುವುದಕಿಲ್ಲದರಸಿನೋಲಗಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ - ಹರಿಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು1 ಒಡನೆ ಹಂಗಿಸುವನೋಗರವನುಂಬುದಕಿಂತಕುಡಿನೀರು ಕುಡಿದುಕೊಂಡಿರುವುದೇ ಲೇಸುಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತಅಡವಿಯೊಳಗಜ್ಞಾತ ವಾಸವೇ ಲೇಸು2 ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತಹಸನಿಲ್ಲದ ಹಾಳುಗುಡಿಯೇ ಲೇಸುಬಿಸಜಾಕ್ಷ ಕಾಗಿನೆಲೆಯಾದಿಕೇಶವರಾಯವಸುಮತಿಯೊಳು ನಿನ್ನ ದಾಸತ್ವವೇ ಲೇಸು 3
--------------
ಕನಕದಾಸ
ಹರಿದಾಸರ ಸ್ತುತಿ ಆನಂದ ಸಾಗರದ ಸೌಖ್ಯವೇಂ ನುತಿಪೆ ಪ. ಆನಂದ ಶ್ರೀ ಗುರುಗಳತಿ ಕೃಪೆಯೊಳಿತ್ತ ಅ.ಪ. ಗಾನಲೋಲನ ಮಹಿಮೆ ಜ್ಞಾನ ಬೋಧನೆಯಿಂದ ನಾನಾಪ್ರಕಾರದಿಂ ವರ್ಣಿಸುತಲಿ ಮಾನಿನಿಯ ಮನದ ಶೋಕಾಗ್ನಿ ಶಾಂತಿಯಗೈಸಿ ಮಾನಸದಿ ನಲಿವಂತೆ ಮಮತೆಯೊಳು ಪೊರೆದ 1 ರಾಮಚಂದ್ರನ ಮಹಿಮೆ ನೇಮದಿಂದಲಿ ಪಠಿಸೆ ಸೋಮಕಳೆ ಪೌರ್ಣಿಮ ಸ್ಥಿರವಾರದಿ ಕಾಮಧೇನುವು ಎನುತ ಕರೆದು ಮುದವಿತ್ತು 2 ಕಲುಷ ಲಿಂಗದ ಕಳೆಯ ಕಳೆದು ಚಂದ್ರನೊಳಿಟ್ಟು ಅ- ನಿಲ ಭಾರತಿಯರ ವ್ಯಾಪಾರ ತಿಳಿಸಿ ಜಲಜಾಕ್ಷ ಗೋಪಾಲಕೃಷ್ಣವಿಠ್ಠಲ ಮನದಿ ನೆಲಸಿ ಮುಕ್ತಿಯ ಕೊಡುವ ಮಾರ್ಗ ತೋರಿದರು3
--------------
ಅಂಬಾಬಾಯಿ
(ಪಡುಬಿದ್ರೆಯ ಗಣೇಶ)ಮಾಡೆನ್ನೊಳು ಕರುಣ ಗಜಾನನ ಪ.ಮೂರ್ಖನೆನ್ನುತಲೆನ್ನ ಧಿಕ್ಕರಿಸದಿರುಶಕ್ರವಿನುತಚರಣಗಜಾನನ1ಹರಿನಾಭೀ ಕಮಲಾಕಾಶಾತ್ಮನೆಗಿರಿಜಾಂಕಾಭರಣ ಗಜಾನನ 2ಭಾರತಾರ್ಥ ತತ್ವಾರ್ಥ ಪ್ರಬೋಧನೆಸೂರಿಜನೋದ್ಧರಣ ಗಜಾನನ 3ಕಡಲಶಯನ ಲಕ್ಷ್ಮೀನಾರಾಯಣಸಖಪಡುಬಿದ್ರೆನಿಕೇತನ ಗಜಾನನ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆಬೋಧನೆಯ ಮಾಡವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದುಖಂಡ ತುಂಡು ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿಭಂಗಬಿದ್ದು ಗಳಿಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿರೆಂಟೆ ಹೊಡೆದು ಬೆಳೆಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡುಕಷ್ಟಮಾಡಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡುಸೂಳೆಯಂತೆ ಕುಣಿಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿನಾನಾ ವೇಷ ಹಾಕುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡುಕಳ್ಳತನವ ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10ಉನ್ನಂತಪುರಂದರ ರಾಯನ ಧ್ಯಾನವನುಮನಮುಟ್ಟಿ ಮಾಡುವುದುಮುಕ್ತಿಗಾಗಿ ಆನಂದಕಾಗಿ* 11
--------------
ಪುರಂದರದಾಸರು
ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ-ನಾಮ ಸರ್ವಾಂತರ್ಯಾಮಿ ಪ.ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ-ಸ್ತೋಮವಂದಿತ ಭೀಮಬಲ ಗುಣ-ಧಾಮವರನಿಸ್ಸೀಮ ಮಹಿಮನೆಅ.ಪ.ಅಂತರ್ಬಹಿವ್ರ್ಯಾಪ್ತನೆ ಸತತ ರಮಾ-ಕಾಂತಗೆ ಪರಮಾಪ್ತನೆಚಿಂತಿಪ ಭಕ್ತರ ಚಿಂತಾಮಣಿ ನಿ-ಶ್ಚಿಂತನೊಂದೆ ಶಿರದಿ ಸಾಸವೆ-ಯಂತೆ ಲೋಕವನಾಂತುಕೊಂಡಿಹೆ 1ರಾಮನ ಸೇವೆಗಾಗಿ ಲಕ್ಷ್ಮಣನೆಂಬನಾಮವ ತಾಳ್ದಯೋಗಿಯಾಮಿನೀಚರರ ನಿರ್ನಾಮಗೈದ ವೀರಲ-ಲಾಮ ನಿರ್ಜಿತಕಾಮ ಸಜ್ಜನ-ಪ್ರೇಮಭೌಮನಿರಾಮಯನೆ ಜಯ2ಸಂಕರ್ಷಣ ಸುಗುಣಾ-ಭರಣ ನಿ-ಶ್ಯಂಕ ವೈರಿಭೀಷಣಶಂಕರಾದಿಸುರಸಂಕುಲನುತಪಾದ-ಪಂಕಜನೆ ತಾಟಂಕಗೋಪಾ-ಲಂಕೃತಾಂಗ ಶುಭಂಕರನೆ ಜಯ 3ಸಾರತತ್ತ್ವಬೋಧನೆ ಶರಣುಜನವಾರಿಧಿಚಂದ್ರಮನೆಘೋರಭವಾರ್ಣವತಾರಕನಮಲ ಪಾ-ದಾರವಿಂದದ ಸೌಂದರ್ಯ ನಿಜಭೂರಿನೇತ್ರಗಳಿಂದ ಕಾಣುವೆ4ಮಂಜುಳ ನಗರೇಶನೆ ಭಕ್ತಭಯ-ಭಂಜನಸುವಿಲಾಸನೆಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ-ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ