ಒಟ್ಟು 21 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು, ಬರೆದೆಯೊ ಬ್ರಹ್ಮ ಎಂತು ನಿರ್ದಯನು-ಅಭಿ |ಮಾನವನು ತೊರೆದು ಪರರನು ಪೀಡಿಸುವುದ ಪಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು |ಸೊಲ್ಲುಸೊಲ್ಲಿಗೆಅವರಕೊಂಡಾಡುತ ||ಇಲ್ಲ ಈ ವೇಳೆಯಲಿ ನಾಳೆ ಬಾ-ಎನಲಾಗಿ |ಅಲ್ಲವನೆ ತಿಂದ ಇಲಿಯಂತೆ ಬಳಲುವುದ 1ಗೇಣೊಡಲ ಹೊರೆವುದಕೆ ಹೋಗಿ ನರರೊಳು ಪಂಚ-|ಬಾಣ ಸಮರೂಪ ನೀನೆಂದು ಪೊಗಳೆ ||ಮಾಣು ಎನ್ನಾಣೆ ನೀ ನಾಳೆ ಬಾ ಎಂದೆನಲು |ಗಾಣತಿರುಗುವ ಎತ್ತಿನಂತೆ ಬಳಲುವುದ2ಹಿಂದೆ ಬರೆದಾ ಬರೆಹ ಏನಾದರಾಗಲಿ |ಮುಂದೆನ್ನ ವಂಶದಲಿ ಪುಟ್ಟುವರಿಗೆ ||ಸಂದೇಹಬೇಡ ಶ್ರೀಪುರಂದರವಿಠಲನೇ |ಕಂದರ್ಪನಯ್ಯ ಉಡುಪಿಯ ಕೃಷ್ಣರಾಯ 3
--------------
ಪುರಂದರದಾಸರು
ಚಿಹಿಹಳಿ- ಥೂಖೋಡಿಪಾಪಿ ಮನವೇ ಇಂಥ-|ಕುಹಕಬುದ್ಧಿಯ ನೀ ಬಿಡು ಕಾಣೋ ಮನವೇಪಬಣ್ಣದ ಬೀಸಣಿಕೆಯಂತೆ ಹೆಣ್ಣು ತಿರುಗುವುದು ಕಂಡು |ಕಣ್ಣ ಸನ್ನೆಮಾಡಿ ಕೈಯ ಹೊನ್ನ ತೋರಿಸಿ ||ತಣ್ಣೀರು ಹೊಯ್ದ ಹೊಸ ಸುಣ್ಣದಂದದಿ ಕುದಿದು ಕುದಿದು |ಕಣ್ಣಿನೊಳು ಮಣ್ಣ ಚೆಲ್ಲಿ ಕೊಂಬರೇ ಮನವೆ 1ಪಗಡೆ ಚದುರಂಗ ಲೆತ್ತವನಾಡೆ ಕರೆದರೆ |ನಿಗುರಿದುವು ಕರ್ಣಗಳು ಮೊಚ್ಚೆಯಂತೆ ||ಜಗದೀಶ್ವರನ ದಿನದಿ ಜಾಗರಕೆ ಕರೆದರೆ |ಮುಗಿಲ ಹರಿದು ಧರೆಗಿಳಿದಂತೆ ಮನವೇ 2ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ |ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ||ಆ ಸಮಯದಲೊಬ್ಬ ಕಾಸು ಕೊಡಲು ಅವನ |ದಾಸಿಯ ಮಗನಂತೆ ಬೆಂಬಿಡದೆ ಮನವೇ 3ನೆರೆಮನೆ ಹೊರಮನೆ ಪ್ರಸ್ತವಾದರೆ ಅವರು |ಕರೆಯದ ಮುನ್ನವೆ ಹೊರೆಹೊರಟೆ ||ಬರಿಗಂಟು ಬರಿಮಾತು ಸುಳ್ಳುಸುದ್ದಿಯ ಹೇಳಿ |ಹಿರಿಯ ಮಗನಂತೊಡಲ ಹೊರಕೊಂಬೆ ಮನವೆ 4ಬಿಂದು ಮಾತ್ರವೆ ಸುಖ-ದುಃಖ ಪರ್ವತದಷ್ಟು |ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ||ಎಂದೆಂದಿಗೂ ನಮ್ಮ ಪುರಂದರವಿಠಲನ |ಹೊಂದಿಹೊಂದಿ ನೀ ಸುಖಬಾಳೊ ಮನವೆ 5
--------------
ಪುರಂದರದಾಸರು
ನಾರಾಯಣ ಎನ್ನಿರೊ - ಶ್ರೀ ನರಹರಿ |ನಾರಾಯಣ ಎನ್ನಿರೊ ಪ.ನಾರಾಯಣನೆಂದು ಅಜಮಿಳಕೈವಲ್ಯ |ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪಚೋರರ ಭಯ ಎಲ್ಲವೊ - ಇದಕೆ ನೋಡೈ - |ದಾರರಂಜಿಕೆ ಇಲ್ಲವೊ ||ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||ಘೋರ ಪಾತಕವೆಲ್ಲ ಹಾರಬಿಡುವುದಿದು 1ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |ಬೇಸತ್ತು ತಿರುಗಲೇಕೆ |ವಾಸುದೇವನ ನಾಮ ವರ್ಣಿಸಿದವರಿಗೆ |ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |ಮೌನ ಮಂತ್ರಗಳೇತಕೆ ||ದೀನರಕ್ಷಕ ಬೆಟ್ಟದೊಡೆಯನಾದವನ |ಧ್ಯಾನಕೆ ಸಮವುಂಟೆ ಪುರಂದರವಿಠಲನ 3
--------------
ಪುರಂದರದಾಸರು
ಭಾಷೆ ಹೀನರ ಆಸೆ ಪ್ರಾಣಗಾಸಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇಸತ್ತು ಬೇಲಿ ಮೇಲೊರಗಿದಂತೆ ಪ.ಚಳಿಗೆ ನಡುಗುತ ಹೋಗಿ ಜಲದೊಳಗೆ ಪೊಕ್ಕಂತೆ |ಮಳೆಯ ರಭಸಕೆ ಮರವನೇರಿ ಕುಳಿತಂತೆ |ಹುಳುವನಟ್ಟುಳಿಗಂಜಿ ಹುತ್ತಿನೊಳು ಹೊಕ್ಕಂತೆ |ಎಳೆನರಿಯು ಒಂಟೆಯಾ ತುಟಿಗೆ ಜೋತಂತೆ 1ಹಸಿವೆಗಾರದೆ ಬೆಕ್ಕು ಹತ್ತಿಯನು ತಿಂದಂತೆ |ತೃಷೆಗಾರದವ ತೆವರ ತೋಡಿದಂತೆ ||ಬಿಸಿಲಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ |ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ 2ಹುಸಿಯನಾಡುವರಾಸೆ ಪುರುಷ ನಾರಿಯ ವೇಷಬಿಸಿಲುಗುದಿರೆಯಭಾವ ಒಂದೆ ಕಾಣೊ ||ಬಿಸಜಾಕ್ಷ ವರದ ಶ್ರೀ ಪುರಂದರವಿಠಲನ |ಎಸೆವ ಪಾದದ ಸೇವೆ ಪರಮಸುಖ ಮನುಜಾ 3
--------------
ಪುರಂದರದಾಸರು
ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |ಮಡಿ ಮಾಡುವ ಬಗೆ ಬೇರುಂಟು ಪ.ಪೊಡವಿ ಪಾಲಕನ ಧ್ಯಾನ ಮಾಡುವುದು |ಬಿಡದೆ ಭಜಿಸುಮದು ಅದು ಮಡಿಯಾ ಅಪಬಟ್ಟೆಯ ನೀರೊಳಗಿಟ್ಟು ಒಣಗಿಸಿ |ಉಟ್ಟರೆ ಅದು ತಾ ಮಡಿಯಲ್ಲ ||ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |ಬಿಟ್ಟರೆ ಅದು ತಾ ಮಡಿಯೊ 1ಪರಧನ ಪರಸತಿ ಪರನಿಂದೆಗಳನು |ಜರೆದಹಂಕಾರಗಳನೆ ತೊರೆದು ||ಹರಿಹರಿಯೆಂದು ದೃಢದಿ ಮನದಲಿಇರುಳು ಹಗಲು ಸ್ಮರಿಸಲು ಮಡಿಯೋ 2ಎಚ್ಚರವಿಲ್ಲದೆ ಮಲ ಮೂತ್ರ ದೇಹವ |ನೆಚ್ಚಿ ಕೆಡಲು ಬೇಡಲೊ ಮನವೆ ||ಅಚ್ಚುತಾನಂತನ ನಾಮವ ಮನಗೊಂಡು |ಸಚ್ಚಿಂತೆಯಲಿರುವುದೆ ಮಡಿಯೊ 3ಭೂಸುರರು ಮಧ್ಯಾಹ್ನಕಾಲದಲಿ |ಹಸಿದು ಬಳಲಿ ಬಂದರೆ ಮನೆಗೆ ||ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |ಹಸನಾಗಿ ಉಂಬುವುದು ಅದು ಮಡಿಯೊ ? 4ದಶಮಿ - ದ್ವಾದಶಿಯ ಪುಣ್ಯಕಾಲದಲಿ |ವಸುದೇವ ಸುತನ ಪೂಜಿಸದೆ ||ದೋಷಕಂಜದೆ ಪರರನ್ನು ಭುಜಿಸಿ ಯಮ - |ಪಾಶಕೆ ಬೀಳ್ವುದು ಹುಸಿಮಡಿಯೊ ? 5ಸ್ನಾನ -ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |ಜಾÕನ -ಮಾನ - ಸುಮ್ಮಾನದಿಂದ ||ದೀನವಂದ್ಯನಸುಜನ ಸಂತರ್ಪಣ |ಅನುದಿನಮಾಡುವುದು ಘನಮಡಿಯೊ6ಗುರು ಹಿರಿಯರ ಹರಿದಾಸರ ನೆನೆದು |ಚರಣಕೆರಗಿ ಭಯ ಭಕ್ತಿಯಿಂದ ||ಪರಿಪರಿ ವಿಧದಲಿ ಪುರಂದರವಿಠಲನ |ನೆರನೆಂಬುವುದು ಉತ್ತಮ ಮಡಿಯೊ 7
--------------
ಪುರಂದರದಾಸರು