ಒಟ್ಟು 34 ಕಡೆಗಳಲ್ಲಿ , 8 ದಾಸರು , 30 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಕೂಡಿ ಸಾಧು ಸಂಗ ಮಾಡಿ ಭೇದಾಭೇದೀಡ್ಯಾಡಿ ಧ್ರುವ ಮರಹು ಮರಿಯ ನೀಗಿ ಅರವ್ಹಿನೊಳಗಾಗಿ ಕುರುಹ್ಹದೋರಿಕೊಡುವ ಗುರು ಬ್ರಹ್ಮಾನಂದಯೋಗಿ 1 ತಿರುಗಿನೋಡಿ ನಿಮ್ಮ ಅರಿತು ನಿಜವರ್ಮ ಪಾರಗೆಲಿಸುವದಿದು ಗುರುಪಾದ ಧರ್ಮ 2 ಕಣ್ದೆರೆದು ನೋಡಿ ತನ್ನೊಳು ಬೆರೆದಾಡಿ ಧನ್ಯವಾದ ಮಹಿಪತಿ ಗುರುಪಾದ ಕೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲುಸೂಕ್ಷ್ಮ ಗುರು ಗೂಢವಿದ್ಯ ನೆಲೆವಂತಗಿದು ನಿಜವಾಗುದು ಸಾಧ್ಯ ಧ್ರುವ ಕಣ್ಣಿನ ಕೊನೆ ಮುಟ್ಟಿನೋಡಿ ನಿಜಖೂನ ಉನ್ಮನವಾಗಿ ಬೆರೆದಾಡುವ ನಿಜಸ್ಥಾನ ಚೆನ್ನಾಗ್ಯಾದಾನಂದ ಘನ ಭಿನ್ನವಿಲ್ಲದೆ ಮಾಡಿ ನಿಜಗುರು ಧ್ಯಾನ 1 ಜಾಗ್ರ ನಿದ್ರೆಯ ಮಧ್ಯ ಅರವಿನೊಳು ನಿಜಗೂಡಿ ಶೀಘ್ರ ಸಿದ್ಧಾಂತನುಭವಿಸಿ ತಾಂ ನಿಜಮಾಡಿ ಅಗ್ರ ಗುರುಪಾದವನು ಕೂಡಿ ಶುಕ ಮುನಿಗಳಿಗಿದೆ ನೋಡಿ 2 ಶಿರದಲಿ ಕರವಿಟ್ಟು ನೋಡಿ ನಿಜವರ್ಮ ಹರಿಸಿ ಅನೇಕ ಜನ್ಮಾಂತರದ ದುಷ್ಕರ್ಮ ತರಳಮಹಿಪತಿಗಿದೆ ಸುಬ್ರಹ್ಮ ಗುರು ಭಾಸ್ಕರಸ್ವಾಮಿ ಶ್ರೀಪಾದ ಧರ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಿಟ್ಟು ಬರಲಾರಳಮ್ಮಯ್ಯಪಟ್ಟಮಂಚವ ಭಾವೆಬಿಟ್ಟರೆ ರುಕ್ಮಿಣಿ ಕೃಷ್ಣನ ಬೆರೆದಾಳೆಂಬೊ ಅಂಜಿಕೆಯಿಂದ ಪ. ಪಾದ ಸಿಕ್ಕಿತೋ ಸಿಗದೆಂದುಚಿಕ್ಕ ಚನ್ನಿಗಳ ಕೈವಶಚಿಕ್ಕ ಚನ್ನಿಗಳ ಕೈವಶವಾಗದಂತೆಜಪ್ಪಿಸಿಕೊಂಡು ವಟವಾದಳೆ 1 ಶಂಬರಾರಿ ಪಿತನ ತಂಬುಲಸಿಗದೆಂದು ಚುಂಬನದ ಸಮಯ ಚಿಗಿಳೀತುಚುಂಬನದ ಸಮಯ ಚಿಗಿಳೀತು ಎಂತೆಂಬೊಹಂಬಲದಿ ಒಳಗೆ ಕುಳಿತಳೆ2 ನಲ್ಲೆ ರಂಗಯ್ಯನ ಎಲ್ಲೆಲ್ಲಿ ಬಿಡಲೊಲ್ಲೆಎಲ್ಲ ನಾರಿಯರ ನೆರವಿಕೊಂಡುಎಲ್ಲ ನಾರಿಯರ ನೆರವಿಕೊಂಡು ಮನೆಯೊಳುನಿಲ್ಲಗೊಡರೆಂಬೊ ಭಯದಿಂದ3 ಒಗೆತನ ನಗೆಗೀಡಾಯಿತು ನೋಡೆ ಈ ಬಗೆ ಎಲ್ಲೆ ಕಾಣೆ ಜಗದೊಳು ಈ ಬಗೆ ಎಲ್ಲೆ ಕಾಣೆ ಜಗದೊಳು ರುಕ್ಮಿಣಿ ತಗಿ ನಿನ್ನನಡತೆ ತರವಲ್ಲ4 ಅನಂತ ಮಹಿಮಗೆ ಇನ್ನೆಂಥ ಕಾವಲತನ್ನ ನಿಜರೂಪ ಅವರಲ್ಲಿತನ್ನ ನಿಜರೂಪ ಅವರಲ್ಲಿ ರಮಿಸೋದುತನ್ನ ಮನದಲ್ಲಿ ನಿಜ ಮಾಡಿ5 ಸಾಗರಶಾಯಿ ಮನಕೆ ಹ್ಯಾಂಗೆ ಬಂದೀತುಎಂದು ಹೀಗೆ ಕೈ ಮುಗಿದು ತಲೆಬಾಗಿಹೀಗೆ ಕೈ ಮುಗಿದು ತಲೆಬಾಗಿ ರುಕ್ಮಿಣಿಆಗೊಂದು ಮನದ ಬಯಕೆಲ್ಲ6 ಎಷ್ಟು ಜಪಿಸಿ ನೀನು ಠಕ್ಕಿಸಿ ಕೃಷ್ಣನ ಇಟ್ಟಾನೆ ರಮಿಯ ಎದಿಮ್ಯಾಲೆ ಇಟ್ಟಾನೆ ರಮಿಯ ಎದಿಮ್ಯಾಲೆ ರುಕ್ಮಿಣಿ ಇಷ್ಟರ ಮ್ಯಾಲೆ ತಿಳಕೊಳ್ಳ7
--------------
ಗಲಗಲಿಅವ್ವನವರು
ಬೇಡಿದೆನು ಕೊಡುಕಂಡ್ಯ ಬೇಡಿದೆನು ಕೊಡುಕಂಡ್ಯಬೇಡಿದೆನು ನೀ ನೀಡು ಕಂಡ್ಯಾ ಪ ನಿನ್ನ ಹಾಡನು ಹಾಡಿ ನಿನ್ನ ನಿಜದೊಳಗಾಡಿನಿನ್ನನೇ ಕಾಡಿ ನಿನ್ನನೇ ಬೇಡಿನಿನ್ನ ಓಲಗವ ಮಾಡಿ ನಿನ್ನ ನಿಟ್ಟಿಸಿ ನೋಡಿನಿನ್ನ ಲೀಲೆಯೊಳು ನಾನಿರುತಿಹುದದನಾ 1 ನೋಟದೊಳಗಿನ ನೋಟ ಕೂಟದೊಳಗಿನ ಕೂಟಆಟದೊಳಗಿನ ಆಟ ಇಂಥ ಆಟನೀಟದೊಳಗಿನ ನೀಟ ನಿನ್ನಲ್ಲಿ ಬೆರೆದಾಟಪಾಟ ಮಾಡಿಯೆ ಎನಗೆ ಪಾಲಿಸುವುದನ2 ಶರೀರದಿಚ್ಚೆಯನುಳಿದು ಶರೀರ ವಾಸನೆ ಕಳೆದುಶರೀರ ವಿಷಯದ ಹೊಲಬೆಲ್ಲ ಬಳಿದುಶರೀರದ ನೆಲೆಯು ತಿಳಿದು ಶರೀರದೊಳೊಬ್ಬನನುಳಿದುಶರೀರದ ಸಂಗ ದೊರಕದಿಹದದನಾ 3 ನಾದಲಕ್ಷಿಸಿ ಹಿಡಿದು ನಾದ ಸಂಗವ ಪಡೆದುನಾದಾಮೃತವ ಕಿವಿತುಂಬ ಕುಡಿದುನಾದ ದಾರಿಯ ನಡೆದು ನಾದ ದೊಳ್ವೆಳ ಗೊಡದುನಾದವನೆ ಮರೆತು ಸುಖಿಸುತಿಹದದನ 4 ನಿನ್ನ ನೀನುಳಿದಿಲ್ಲ ನೀ ದೈವ ಜಗಕೆಲ್ಲನಿನ್ನಂತೆ ಆಪ್ತರಿಲ್ಲ ನಿನ್ನ ನಂಬಿದೆನಲ್ಲನೀ ಕಾಯಬೇಕಲ್ಲ ಚೆನ್ನ ಚಿದಾನಂದನೆನೆಹಂಬತಾತ್ವಿಕ ಹಿನ್ನೆಲೆಯ ಕೀರ್ತನೆಗಳುದದನಾ 5
--------------
ಚಿದಾನಂದ ಅವಧೂತರು
ಶೋಧಿಸಿ ನೋಡಿರೋ ಸದಾ ಬೋಧದ ನಿಜಬೋಧ ಧ್ರುವ ಸಾಧಿಸಿ ನೋಡಿ ಸದ್ಗುರು ಕೃಪೆಯಿಂದ ಸಾಧನಕೆದುರಿಡುವುದು ಆನಂದ ಭೇದಿಸಿ ನೋಡುವದಿದೇ ತನ್ನಿಂದ ಆದಿ ಅನಾದಿದೇ ಸಹಜಾನಂದ 1 ತಂದುವಿಡಿದರಂತತ್ತೆ ನೋಡಿ ಎಂತೆಂತೀಹ್ಯ ನಿಜದಂತೆ ಗೂಡಿ ಅಂತರಾತ್ಮದಲೆ ಅನುಭವ ಬೆರೆದಾಡಿ ಸಂತತ ಸದಮಲ ಸುಖಸೂರ್ಯಾಡಿ 2 ವಿಹಿತಕೆ ವಿಹಿತಾಗುವ ಸುಪಥ ದ್ವೈತಾದ್ವೈತಕಿದೆ ರಹಿತ ಮಹಾಮಹಿಮರ ಆನಂದಭರಿತ ಮಹಿಪತಿ ಮನೋನ್ಮನದ ಸುವಸ್ತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಗುರು ಸೇವೆಯ ಮಾಡಿ ಸಾಯೋಜ್ಯ ಸದ್ಗತಿ ಕೂಡಿ ಧ್ರುವ ಮೂರು ರತ್ನದ ಪ್ರಭೆ ನೋಡಿ ಮೂರು ವಟ್ಟೆಯಾ ಮುರಿಗೂಡಿ ಆರು ಸ್ಥಳವ ಮುಟ್ಟಿನೋಡಿ ಏರಿಸು ಪಥವನು ಕೂಡಿ 1 ತುಟ್ಟತುದಿಯಲೇರಿ ನೋಡಿ ಮುಟ್ಟಿ ಚಿದ್ಘನ ಬೆರೆದಾಡಿ ನಟ್ಟನೆವೆ ಒಡಗೂಡಿ ಗುಟ್ಟುಗುಹ್ಯ ನಿಜವು ಹೇಳಬ್ಯಾಡಿ 2 ಮಹಿಪತಿ ನಿನ್ನೊಳು ನೋಡಿ ಐವರೊಂದಾಗಿನ್ನು ಕೂಡಿ ಪಾದ ಮಾಡಿ ಪಥ ಬೆರೆದಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂದು ಹೋಯಿತೀ ಕಾಲವು ವ್ಯರ್ಥಾ ಒಂದು ಬಾರಿ ಗೋವಿಂದ ಎನದÉ ಮಂದನಾಗಿ ಅತಿಮಾತಿಗೆ ಒಳಗಾಗಿ ಪ ಹುಟ್ಟಿದ ಮೊದಲು ----ಬಹು ಭ್ರಷ್ಟರ ಸಂಗದಿ ಬೆರೆದಾಡುತ ಸೃಷ್ಟಿಗೊಡೆಯ ಶ್ರೀಕೃಷ್ಣನ ಪಾದವ ಮುಟ್ಟಿ ಭಜಿಪರ ಮರದಾಡುತಾ ಕೆಟ್ಟ ಬುದ್ಧಿಯ ಗುರುಹಿರಿಯರ ಕಂಡು ಬೆಟ್ಟನಾಗಿ ಬಹು ಜಗಳಾಡುತಾ ನಿಷ್ಠರ ಕಂಡರೆ ನಿಂದೆಗೆ ಒಳಗಾಗಿ ಕಟ್ಟಕಡೆಗೆ ನರಕ ಘೋರವೇ ಸಿದ್ಧವಾಗಿ 1 ಹರಿಶರಣರ ಕೂಡನುದಿನ ಮನದಲಿ ದುರುಳ ಮಾತಿನಲಿ ದೂಷಿಸುತಾ ಪರಮಾತ್ಮನ ಕೃಪೆ ಪಡೆದ ಸುಜನರಾ ಪಾದಕೆ ಶಿರವೆರಗದೆ ಇರುತಾ ಶರಣರ ದ್ರೋಹದೊಳಿರುಳು ಹಗಲು ಇದು ಶಿಷ್ಟನು ನಾನೆಂದು ಹೇಳಿಕೊಳುತಾ ಗರುವತನದಿ------ ಹೀನನು ಆಗಿ ----------ರತನಾಗಿ ಇನ್ನೂ 2 ಅಂಡಜವಾಹನ ಪುಂಡರಿಕಾಕ್ಷನ ಕೊಂಡಾಡುವರನ ಕು-----ಡಿ ಕಂಡ ಕಂಡ------ನ ಮಹಾಮಹಿಮರನ ಪುಂಡನಾಗಿ ಇನ್ನು ಹೋಗಲಾಡಿ ಮಂಡಲದೊಡೆಯ 'ಶ್ರೀಮಹಾಹೆನ್ನೆವಿಠ್ಠಲನ’ ಕಂಡು ಪೂಜಿಸು----ಒಡನಾಡಿ ಗುಂಡತನದಿ-------ಕಾಲನ ದಂಡನೆಗೊಳಗಾಗಿ----ರಾರಿಯ ಮುಖ----ಗಿ 3
--------------
ಹೆನ್ನೆರಂಗದಾಸರು
ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ ಧ್ರುವ ಕಣ್ಣಿಂದ ಕಡಿಯಲಿಲ್ಲ ಚೆನ್ನಾಗೆಲೆವೆ ನೋಡಿ ಉನ್ನಂಥ ಮಹಿಮ ಪೂರ್ಣ ತಾನೆತಾನಾಗಿಹ್ಯ ಕೂಡಿ ಉನ್ಮನವಾಗಿ ಬ್ಯಾಗ ಘನಸುಖ ಬೆರೆದಾಡಿ ಪುಣ್ಯಕ ಪಾರವಿಲ್ಲ ಖೂನದೋರುದಿದರಡಿ 1 ಸದ್ಬಕ್ತಿಗಿದೇ ಕೀಲ ಸಾಧಿಸುವದೀ ವಿಚಾರ ಸದ್ಗತಿಗಿದೆಮೂಲ ಸಾಧುಜನರ ಸಹಕಾರ ಸಾಧಕರ ಸುಶೀಲ ಬುಧಜನರ ಮಂದಾರ ಸದ್ಫನದ ಕಲ್ಲೋಳ ವಸ್ತುದೋರುವ ವಿವರ 2 ಗುರುದಯದಿಂದ ನೋಡಿ ಇದೆರಿಟ್ಟುವಂತೀ ಖೂನ ಕರುಣಾಳು ಸ್ವಾಮಿ ನಮ್ಮ ತಾನೆದೋರಿದ ಸಾಧನ ತರಣೋಪಾಯಕ ಪೂರ್ಣ ತೋರುದಿದನು ಸಂಧಾನ ತರಳಮಹಿಪತಿಗಿದೆ ಇಹ್ಯ ಪರಕ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ಸುವೃತ್ತಿ ಭೇದಿಸಿಕೂಡಿ ಸುಮುಕ್ತಿ ಧ್ರುವ ಹಿಡಿದು ಸಾರುವ ಶ್ರುತಿ ನಿಜಗೂಡಿ ಗೂಡಿನೊಳಗೆ ಬೆರೆದಾಡಿ ಇಡಾಪಿಂಗಳ ನಾಡಿ ನಡುವಾವಿನ ಜಾಡೆ ಹಿಡಿದು ಘನಗೂಡಿ 1 ಏರಿನೋಡಲು ಆರು ಚಕ್ರತಾಂ ದೋರುತದೆ ಸುಪಥ ತಿರುಗಿನೋಡಲು ತನ್ನೊಳು ತಾ ಅಮೃತ 2 ಹಿಡಿದು ಗುರುಪಾದಾರವಿಂದ ಪಡೆದ ಮಹಿಪತಿ ಅನಂದ ಗೂಢ ಗುರುತವಾಯಿತು ಬಲು ಚಂದ ಕಡಿದ್ಹೋಯಿತು ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡಿ ನಿಜ ಭಾವಬಲಿದು ನೋಡಲಿಕ್ಯದೆ ವಸ್ತು ಸಹಜ ಧ್ರುವ ಹತ್ತಿಲಿದೆ ತಾ ಸರ್ವಕಾಲ ಚಿತ್ತೊಂದೆ ಮಾಡಿ ನೋಡು ಗುರುಪಾದ ಕಮಲ ನೆತ್ತಿಯೊಳಗದೆ ನಿಶ್ಚಲ ಉತ್ತಮೋತ್ತವಾದ ಸದ್ವಸ್ತು ಅನುಕೂಲ 1 ಅತ್ತಿತ್ತಲೆ ನೋಡಲಾಗದು ತುಂಬಿ ತುಳುಕುವದು ಸುತ್ತೆ ಸೂಸ್ಯಾಡುತಲಿಹುದು ಮತ್ತೆ ಉನ್ಮನವಾಗಿ ತನ್ನೊಳು ತಾ ನೋಡುವದು2 ಸಾರವೆ ಅದೆ ಸತ್ಯನೋಡಿ ಮಿಥ್ಯ ಭ್ರಾಂತನೆ ಈಡಾಡಿ ಗುರುಕೃಪೆಯಿಂದ ನಿಜಗೂಡಿ ತರಳ ಮಹಿಪತಿ ಹರುಷಗೈದ ಬೆರೆದಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ ಪರಬ್ರಹ್ಮನೊಲು ಕೂಡಿ ಧ್ರುವ ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ ನಿತ್ಯ ನಿಜಾನಂದ ಸುಪಥವು ಗೂಡಿ 1 ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ ನಿತ್ಯ ಸಾರ್ಥಕದ ಸಾಧನವ ಮಾಡಿ ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ 2 ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ ಭಾನುಕೋಟಿ ತೇಜ ದೀನದಯಾಳು ತಾಂ ನೆನೆವರಿಗನುಕೂಲವಾಗುತಿಹ್ಯ ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸಗುಣ ನಿರ್ಗುಣ ಬಾರಯ್ಯ ಬ್ರಹ್ಮಾನಂದ ಸುಖವು ದೋರಯ್ಯ ಧ್ರುವ ಕಣ್ಣು ಬಡೆಯುತದೆ ನಿಮ್ಮ ನೋಡೇನೆಂದು ಪುಣ್ಯಚರಣ ಸುಪ್ರಭೆದೋರೋ ನೀ ಬಂದು ಧನ್ಯಧನ್ಯಗೈಸುವದೋ ಕೃಪಾಸಿಂಧು ಎನ್ನೊಡೆಯ ನೀನಹುದೋ ದೀನಬಂಧು 1 ಅನುದಿನ ಸುಸೇವೆ ನಿಮ್ಮ ಮಾಡೇನೋ ಕ್ಷಣಕ್ಕೊಮ್ಮೆ ಸ್ವರೂಪ ನಾನೋಡೇನೋ ಘನ ಸುಖದೊಳು ನಾ ಬೆರೆದಾಡೇನೋ ನೆನೆವಂಥ ದಾಸರ ನಿಮ್ಮ ಕೂಡೇನೋ 2 ಹೃದಯದೊಳು ನಿಜವಾಗಬೇಕಿಗ ಸದಾಸರ್ವದಾ ಮಾಡೋ ಏನ್ನೊಳೀವ್ಹಾಂಗ ಪಾದಪದ್ಮಕ್ಯೋಗ್ಯ ಮಾಡೋ ಮಹಿಪತಿಗೆ ಇದೆ ಪುಣ್ಯ ನೋಡಯ್ಯ ಕುಲಕೋಟಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುಜ್ಜಿರುಕ್ಮಿಣಿಗೆ ನಾಚಿ ಲಜ್ಜವಗೈಯ್ಯುತಲೆಮುಂದಕ್ಕೆ ಹೆಜ್ಜೆ ಹಾಕಲೊಲ್ಲಿ ಯಾಕೆಅರ್ಜುನನ ರಾಣಿ ಮುದ್ದು ಅರ್ಜುನನ ರಾಣಿ ಪ.ಒಬ್ಬರಿಗಿಂತ ಒಬ್ಬರ ಚಲ್ವಿಕೆಗೆ ಉಬ್ಬಿಹಳುಐವರ ನಿರ್ಭಯದಿ ನಾಚಿಕೆಯ ಬಿಟ್ಟುಒಬ್ಬಳೆ ಬೆರೆದಾಳು ದ್ರೌಪತಿಒಬ್ಬಳೆ ಬೆರೆದಾಳು 1ತರುಳ ರೈವರ ಚಲ್ವಿಕೆಗೆ ಮರುಳುಗೊಂಡಳುಸಭೆಯೊಳು ಅರಳು ಮಲ್ಲಿಗೆಯ ಮಾಲೆಯನುಕೊರಳಿಗೆ ಹಾಕಿದಳುಐವರ ಕೊರಳಿಗೆ ಹಾಕಿದಳು 2ಪಂಚ ಪಾಂಡವರ ನೋಡಿ ಚಂಚಲಾಗಿಹಳುನಾಚಿ ಹಂಚಿಕೆ ಹಾಕುವಾಗಜಾಣಿ ಮಂಚದಲ್ಲಿಹಳುದ್ರೌಪತಿ ಮಂಚದಲ್ಲಿಹಳು 3ಸರಿಕ ಸರಿಕ ನಾರಿಯರೆಲ್ಲಕರವಹೊಯ್ದರುಹೊರಗೆ ಬರಲ್ಹಾಂಗೆಂದು ಹೋಗಿಒಳಗೆ ಸೇರಿದಳು ದ್ರೌಪತಿಒಳಗೆ ಸೇರಿದಳು 4ಇಂದುರಾಮೇಶನ ಮಡದಿಯರುಬಿದ್ದು ನಗುವಂತೆನಾಚಿಸೆಂದು ಸೇರಿದಳೆ ಹೋಗಿಚಂದಾಗಿ ಆಕಾಂತೆ 5
--------------
ಗಲಗಲಿಅವ್ವನವರು
ನಿತ್ಯಅಂಗ ಸಂಗ ಕೊಟ್ಟನೆ ದೇವಿಚಿತ್ತ ಹರುಷವ ಮಾಡಿ ಇಟ್ಟ£ ಪ.ಶಾಂತ ಧರ್ಮನಲ್ಲೆ ನಿಂತಾನೆನಿಜ ಕಾಂತೆ ರಮಿಸಿ ಸುಖವಂತನೆ 1ಭೀಮ ಕಾಮಿಸಿಯನ್ನ ಬೆರೆದಾನುಅತೀವಾನಂಗ ಸುಖ ಸುರಿದಾನೆ 2ವೀರ ಪಾರ್ಥನಲ್ಲೆ ಇರುವೋನುನಿಜ ನಾರಿಯ ರಮಿಸಿ ಸುಖಿಸುತಿಹನು 3ಸುಂದರ ನಕುಲ ನಲ್ಲಿರುವೋನೆಲೇಶಕುಂದು ಇಲ್ಲದವಳ ಬೆರೆಯೋನು 4ನೀತಿಲೆ ಸಹದೇವನಲ್ಲಿದ್ದನಿಜ ಪ್ರೀತಿ ಬಡಿಸಿದ ನಾರಿಗೆ ಮುದ್ದ 5ಭೀಮನ ಮಹಿಮೆ ಕೇಳುತಲಿದ್ದಜನ ಕಾಮಪೂರ್ಣರಾಗಿ ಹರಿಸಿದ 6ಮತ್ತೆ ಭೀಮ ದ್ರೌಪತಿರತಿಇದಕೆನಿತ್ಯರಾಮೇಶ ಆಗುವ ಬಹು ಪ್ರೀತಿ 7
--------------
ಗಲಗಲಿಅವ್ವನವರು
ರಾಯನ ನೋಡಿರೋ - ಮಧ್ವ - ರಾಯನ ಪಾಡಿರೊ ಪಅಂಜನೆಯಲಿ ಹುಟ್ಟಿ ಅಂಬರಕಡರಿದಹರಿಯೋ - ಸಿಂಹದ - ಮರಿಯೋ |ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂಘಿಸಿದ-ಪುರ- ಸಂಧಿಸಿದಅಂಜದೆ ವನವನು ಕಿತ್ತಿದ ಪುರವನುಸುಟ್ಟ - ತಾ ಬಲು - ದಿಟ್ಟಾ |ಸಂಜೀವನ ಗಿರಿ ತಂದು ವಾನರರಪೊರೆದಾ - ರಾಮನ - ಬೆರೆದಾ 1ಕುಂತಿ ಕುಮಾರನು ಶೀಮೆಗೆ ಹರುಷದಿಬೆಳೆದ - ಖಳರನು - ತುಳಿದ |ಅಂತ ಕೌರವ - ದುಶ್ಯಾಸನರಾ ಶಿರತರೆದಾ - ಚಲವನು - ಮೆರೆದ |ಸಂತಾಪವ ಪಡಿಸಿದ ಕುಜನಕೆ ಭೀಮ -ನಾದ -ಸನ್ನುತ- ನಾದ |ಕಂತುಜನಕಶ್ರೀ ಕೃಷ್ಣನ ಪಾದದಿಬಿದ್ದ - ಮದಗಜ - ಗೆದ್ದ 2ಮುನಿಕುಲದಲಿ ಉದಿಸಿದ ಗುರುಮಧ್ವ ತಾನಾದ - ಧರೆಯಲಿ - ಮೆರೆದ |ಅನಿಮಿಷರೊಡೆಯ ಶ್ರೀವೇದವ್ಯಾಸರಚರಣ-ಅನುದಿನ- ಸ್ಮರಣ |ಕನಸೊಳು ಕಾಣದ ಅದ್ವೈತಂಗಳಮುರಿದ - ತತ್ತ್ವ - ತೋರಿದ |ಘನಮಹಿಮ ಶ್ರೀಪುರಂದರವಿಠಲನದಾಸ - ಪಡೆದ - ಸನ್ಯಾಸ 3
--------------
ಪುರಂದರದಾಸರು