ಒಟ್ಟು 26 ಕಡೆಗಳಲ್ಲಿ , 15 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೃಂದಾವನಾನಂದ ಬಾ | ಬೃಂದಾರಕಾನಂದ ಬಾ ಪ ಮಂದಾಕಿನೀಪಾದ ಗೋಪೀಜನಾನಂದ ನಂದಾತ್ಮ ಗೋವಿಂದ ಬಾ ಅ.ಪ ನಂದನ ವನದಲ್ಲಿ ಬೆಳೆದ ಮಂದಾರಾ ಸುಂದರಿಯ ತಲೆಯ ಜಡೆಯ ಬಂಗಾರ ಮಂದಮಾರುತನಿಂದ ನಲಿವು ಶೃಂಗಾರ ಸಾರ 1 ಕತ್ತಲೆಯಲಿ ಹೊಳೆವ ರನ್ನದ ದೀಪ ಮತ್ತಗಾಮಿನಿಯರ ಸರಸ ಸಲ್ಲಾಪ ಎತ್ತೆತ್ತ ಸಡಗರ ಸೊಗದ ಪ್ರತಾಪ ತಾಪ 2 ಗೋಪಾಲ ಘನಲೀಲ ಬಾ ಮುರಹರ ತಾಪತ್ರಯಕಾಲ ಬಾ ಪರಂಧಾಮ ದಿತಿಸುತಭೀಮಾ ಆಪತ್ಸಖಾ ಭಕ್ತಪಾಲಾ ಮಾಂಗಿರಿನಾಥ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಧವ ಗೋವಿಂದಾ ಹರೆ ಮುಕುಂದ ಕೇಶವ ಗೋವಿಂದಾ ಪ ಮುರಾರಿ ನರಹರಿ ಗೋವಿಂದಾ ಹರೆ ಖರಾರಿ ನಗಧರ ಗೋವಿಂದಾ ಅ.ಪ ಶ್ರೀಶ ಪರೇಶಾ ಗೋವಿಂದಾ ಹರೆ ಕ್ಲೇಶ ವಿನಾಶಾ ಗೋವಿಂದಾ ಈಶ ರಮೇಶಾ ಗೋವಿಂದಾ ಹರೆ ಕೇಶ ಕುಲೇಶಾ ಗೋವಿಂದಾ 1 ಬೃಂದಾರಕಾನುತ ಗೋವಿಂದಾ ಹರೆ ಮಂದಾಕಿನೀ ಪಿತ ಗೋವಿಂದಾ ನಂದಕುಮಾರಾ ಗೋವಿಂದಾ ಹರೆ ಮಂದರಗಿರಿಧರ ಗೋವಿಂದ 2 ಹರಣ ಗೋವಿಂದಾ ಹರೆ ಶಿವಸುತ ಚರಣಾ ಗೋವಿಂದಾ ಭುವನಾಭರಣಾ ಗೋವಿಂದಾ ಹರೆ ಪವನಜ ಕರುಣಾ ಗೋವಿಂದಾ 3 ಪರವೋತ್ತುಂಗಾ ಗೋವಿಂದಾ ಹರೆ ಗರುಡ ತುರಗಾ ಗೋವಿಂದಾ ಧರಿತರಥಾಂಗಾ ಗೋವಿಂದಾ ಹರೆ ಮಾಂಗಿರಿ ರಂಗಾ ಗೋವಿಂದಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಸುವೆ ಸುಂದರಾಂಗ ನಿಜಸೌಂದರ್ಯಜಿತಾನಂಗ ಬೃಂದಾರಕಾದಿ ಮುನಿ ಬೃಂದವಂದಿತ ಮುಕುಂದ ಗೋವಿಂದ ನಂದ ಮೂರುತಿ ಹರೆ ಪ ದೇವಾದಿ ಜೀವ ಸುಪ್ರಭಾವ ಭಾಸಿತ ಮುಖ ದೇವಕೀ ವಸುದೇವ ಭಾವನಾ ಗೋಚರ 1 ಹಾರಕುಂಡಲ ಮನ ಮಾಲಾವಿರಾಜಿತ ಕ್ಷೀರಾಬ್ದಿ ಕನ್ಯಕಾ ಲೋಲಾ ಮುರಾಂತಕ2 ಧೇನುನಗರ ಪರಿಪಾಲಕ ವೇಂಕಟೇಶ ಸಾನುರಾಗದಿ ಪೊರೆ ಗಾನವಿನೋದ ಹರೆ 3
--------------
ಬೇಟೆರಾಯ ದೀಕ್ಷಿತರು
ವೇಣುಗೋಪಾಲನಿಲಯೇ ವೀಣಾವಿನೋದವಲಯೇ ಪ ವಾಣಿ ಗೌರಿನುತೆ ತಾಯೆ | ಪ್ರಾಣತ್ರಾಣದಾತೆ ಸದಯೆ ಅ.ಪ ಬೃಂದಾವನ ವನವಾಸಿನಿ ಮಂದಾಕಿನಿ ಪ್ರಿತಮೋಹಿನಿ ಮಂದಾತ್ಮಜ ಸಹಚಾರಿಣಿ ಬೃಂದಾರಕ ಸುಖವರ್ಧಿನಿ 1 ಇಂದೀವರ ಸುಮಭೂಷಿಣಿ ವಂದೇ ಮಾಂಗಿರೀಶ ತೋಷಿಣಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶುಭ ವೀರಾಂಜನೇಯಾಯ ಜಯ ಮಂಗಳಂ ಪ ಮಣಿ ಪುಂಜ ರಂಜಿತಾಯ ಶುಭಾಂಗಯ ಮಂಜುಳಾಯ 1 ಲಕ್ಷ್ಮಣ ಪ್ರಾಣ ಸಂರಕ್ಷಣಾಯ ಪಕ್ಷೀಂದ್ರ ಗಂಧವಹ ಗತಿ ಲಕ್ಷಿತಾಯ 2 ಪಂಚಾನನಾದಿ ಮುಖ ಪಂಚಕಾಯ ಪಂಚತಾಪ ಹರಾಯ ಪÀಂಚಾಕ್ಷರಾಯ 3 ಕಂದರ್ಪ ನವವರವ್ಯಾಕರಣ ನವಪಂಡಿತಾಯ ನವಪಂಚಕೋಟಿ ಯೂಧಪ ಸೇವಿತಾಯ 4 ಮಹಾಕಾಂಡ ಬೃಂದಾರಕಾಯ ಗಂಧರ್ವವೇದೇಷು ಘನ ಪಂಡಿತಾಯ 5 ಸರ್ವಮಂತ್ರಾವಳೀ ಸನ್ನುತಾಯ ಸರ್ವಭೀತಿ ಹರಾಯ ಸರ್ವಾತ್ಮಕಾಯ 6 ಶತಕೋಟಿ ಭಯವರ್ಜಿತಾಯ ಬೇಟೆರಾಯಾಖ್ಯ ದೀಕ್ಷಿತ ರಕ್ಷರಾಯ 7 ಪರಯಂತ್ರ ವಿದ್ವಂಸಕಾಯ 8
--------------
ಬೇಟೆರಾಯ ದೀಕ್ಷಿತರು
ಶೌರಿ ಪ ಬೃಂದಾರಕವರದಿಂದ ಶೌರಿಯಾನಂದವ ಸೇವಕ ಬೃಂದಕೆ ತೋರಿ ಅ.ಪ. ಕುಂದಮುಕುಳದಿಂದಾ ಕುಮುದಸು ಗಂಧಿಯಗಳಿನಿಂದಾ ರಚಿಸಿಸೊಗಸಿಂದಲಿ ಮೆರೆಯುವ 1 ಸುತ್ತಿರೆ ಹಸ್ತಿಗಳೂ-ಕೂರ್ಮನು ಪೊತ್ತಿರೆ ಮಧ್ಯದೊಳು ಮತ್ತೆಫಣೀಂದ್ರನ ಮಸ್ತಕದಲ್ಲಿರೆ ಸ್ವಸ್ತಿಕಾದಿಬಹು ಚಿತ್ರದಿ ಶೋಭಿಪ 2 ಪಂಕಜ ಚಿಹ್ನೆಗಳಾ-ಸೂರ್ಯಶ-ಶಾಂಕ ಸುರೇಖೆಗಳಾ ಬಹುಬಿಂಕದೊಳೆಸೆಯುವ3 ಕೋಟೆಯ ತೆನೆಗಳಲಿ ದಿವ್ಯವಧೂಟಿಯರೊಲವಿನಲಿ ಬಹುದೀಟಿಲಿ ತೋರುವ 4 ಶಾರದಾಭ್ರನೀಲ-ಶರೀರದಿ- ಹೈರಣ್ಮಯಚೇಲಾ ಜೀರಭೂಷಣೋದಾರ ವಿಹಾರ 5 ಮಂಗಳರವದೊಳಗೆ-ಶಂಖಮೃದಂಗ-ಧ್ವನಿಮೊಳಗೆ ನಾಟ್ಯಂಗಳರಚಿಸಲು6 ವರ ವಿಪ್ರರು ಪೊಗಳೆ-ಛತ್ರಚಾಮರಗಳ ನೆಳಲೊಳಗೆ ವರದವಿಠಲನು ವರಗಳ ಬೀರುತ 7
--------------
ಸರಗೂರು ವೆಂಕಟವರದಾರ್ಯರು
ಶ್ರೀ ರಾಮಚಂದ್ರ ಧುರ ಧೀರಾವನೀಂದ್ರವರ ಕಾರುಣ್ಯ ರೂಪ ರಘು ರಾಮ ರಾಮ ರಾಮ ಪ ಲೋಕೈಕ ಪಾಲಕ ನಾಕಾಧಿಪತಿನುತ ರಾಮ ರಾಮ ರಾಮ 1 ಸುಂದರ ರೂಪಶ್ರೀ ಮಂದಾರ ಪದನುತ ಬೃಂದಾರಕಾ ಸೀತಾ ರಾಮ ರಾಮ ರಾಮ 2 ಪಾವನ ಚರಿತನೆ ಭಾವಜ್ಞ ನರಹರಿ ಶ್ರೀವತ್ಸ ಲಾಂಛನ ರಾಮ ರಾಮ ರಾಮ 3 ದೂರ್ವಾಪ್ರರೇಶನೆ ದೂರ್ವಾಸವಂದಿತ ಸರ್ವೇಶ ಕೇಶವ ರಾಮ ರಾಮ ರಾಮ 4
--------------
ಕರ್ಕಿ ಕೇಶವದಾಸ
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು
ಬಂದಳು ಸಿರಿಲಕುಮಿಯು ನಮ್ಮ ಮನೆಗೆತಂದಳೈಶ್ವರ್ಯಂಗಳ ಪಇಂದಿರೆಹರಿಯುರ ಮಂದಿರ ನಿತ್ಯಾನಂದನಿಲಯಭವಬಂಧ ವಿಮೋಚನಿಅ.ಪಸುಂದರಾಂಗಿ ಸುಗುಣಾಸಿಂಧುಜಗಜ್ಜನನೀಇಂದುಸೋದರಿ ಪೂರ್ಣೇಂದು ಬಿಂಬಾನನೆ 1ಯೆಂದಿಗೆ ಸಂಪದಕುಂದಬರವ ಹಾಂಗೆನಿಂದುಪಾಲಿಸುವನೆಂದು ದೀಕ್ಷೆಯು ಮಾಡಿ2ಬೃಂದಾರಕಸಂಕ್ರಂದನವಂದಿತೆಮಂದಹಾಸದಿ ರಘು ನಂದನ ಸುಪ್ರಿಯೆ 3ಕಂದ ತುಲಸಿದಾಸನೆಂದು ಸಂಭ್ರಮದಿ ಮುಚುಕುಂದವರದ ಪಾದದ್ವಂದ್ವ ಭಕ್ತಿಯು ಕೊಡಲು 4
--------------
ತುಳಸೀರಾಮದಾಸರು
ಶ್ರೀಮಾಧವ ದಾಮೋದರ ನಾಮಾರ್ಚಿತಕಾಮಾಸೋಮಾನನದಾಮಾ ರಿಪುಭೀಮಾ ಎಚ್ಚರಿಕೆ ಪಬೃಂದಾರಕಬೃಂದಾರ್ಚಿತ ವಂದಿತ ಮುಚುಕುಂದಸುಂದರ ರಥ ವಂದಿತ ನವಕುಂದಾ ಎಚ್ಚರಿಕೆ 1ಗಂಗಾಪದರಂಗೇಶ ಭುಜಂಗಾರಿತುರಂಗಶೃಂಗಾರ ಶುಭಾಂಗ ಭವಭಂಗ ಎಚ್ಚರಿಕೆ 2ಮಾರಾರಿಸಮಾಧಿತವಾರಾಸಿಗಭೀರಸೂರ ಸುಕುಮಾರಾ ರಣಧೀರಾ ಎಚ್ಚರಿಕೆ 3ಶೇಷಾಚಲ ಭೂಷಾಹತದೋಷಾ ಮೃದುಭಾಷಾಭಾಷಾಪತಿಪೋಷಾ ದಶವೇಶಾ ಎಚ್ಚರಿಕೆ 4ಶ್ರೀಮದಖಿಲಾಂಡಕೋಟಿ ಬ್ರಹ್ಮಾಂಡನಾಯಕಆದಿಮಧ್ಯಾಂತರಹಿತ ಘನಸಾರವಿಲಸನ್ಭ್ರೂಮಧ್ಯಕಸ್ತೂರಿ ತಿಲಕೋಜ್ವಲಾ ದಿವ್ಯ ಪೀತಾಂಬರಧಾರೀಶ್ರೀಯಲಮೇಲ್‍ಮಂಗಾ ಮನೋಹರಶ್ರೀಭಾರ್ಗವಾಸರ ಭಜನೋಲ್ಲಾಸಾಶ್ರೀಚಾಮರಾಟ್ಪಾಲಿತ ಸತ್ಸಂಪ್ರದಾಯ ಸುಜ್ಞಾನಬೋಧಿನೀ ಸಮಾಜೋದ್ಧಾರಕಾ ಎಚ್ಚರಿಕೆ 5
--------------
ತುಳಸೀರಾಮದಾಸರು
ಸೋದಾಪುರದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯಾ ಪಭೂಧರಹÀಯಮುಖ ಪಾದವ ಭಜಿಸುವxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ವಾದಿಗಜಕೆ ಮೃಗರಾಜ ಕಾಣಮ್ಮ ಅ.ಪಅಂಚೆವಾಹನ ಪ್ರಪಂಚದಿ ಪೊಳೆವ ವಿ -ಸಂಚಿತಕರ್ಮವ ಕುಂಚಿಸಿ ಭಕ್ತರಮುಂಚಿಗೆ ಪ್ರಾಣವಿರಿಂಚಿಕಾಣಮ್ಮಾ1ಬೃಂದಾರಕಪ್ರತಿಸುಂದರ ಯತಿವರಇಂದುಮುಖಿಯೆ ಈತ ಗಂಧವಾಹÀನನಾಗಿಮಂದಜಾಸನಪದವೈದುವ ನಮ್ಮಾ2ಖ್ಯಾತಮಹಿಮ ಮಾಯಿವ್ರಾತ ವಿ -ದಾತಗುರುಜಗನ್ನಾಥವಿಠಲನವೀತಭಯಪುರುಹೂತಪ್ರಮುಖನುತಭೂತನಾಥನ ಪಿತ ಮಾತರಿಶ್ವನಮ್ಮಾ 3
--------------
ಗುರುಜಗನ್ನಾಥದಾಸರು