ಒಟ್ಟು 19 ಕಡೆಗಳಲ್ಲಿ , 11 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲ್ಲುಸಕ್ಕರೆ ಕೊಳ್ಳಿರೊ - ನೀವೆಲ್ಲರು |ಕಲ್ಲುಸಕ್ಕರೆ ಕೊಳ್ಳಿರೊ ಪ.ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು |ಫುಲ್ಲನಾಭಕೃಷ್ಣನ ದಿವ್ಯನಾಮವೆಂಬಅ.ಪಎತ್ತ ಹೇರುವುದಲ್ಲ ಹೊತ್ತು ಮಾರುವುದಲ್ಲ |ಒತ್ತೊತ್ತಿ ಗೋಣಿಯ ತುಂಬುವುದಲ್ಲ ||ಎತ್ತ ಹೋದರು ಮತ್ತೆ ಸುಂಕವು ಇದಕಿಲ್ಲ |ಹತ್ತೆಂಟು ಸಾವಿರಕೆ ಬೆಲೆಯಿಲ್ಲದಂತಹ 1ನಷ್ಟಬೀಳುವುದಲ್ಲ ನಾಶವಾಗುವುದಲ್ಲ |ಕಟ್ಟಿ ಇಟ್ಟರೆ ಮತ್ತೆ ಕೆಡುವುದಲ್ಲ ||ಎಷ್ಟು ದಿನವಿಟ್ಟರೂ ಕೆಟ್ಟು ಹೋಗುವುದಲ್ಲ |ಪಟ್ಟಣದೊಳಗೊಂದು ಲಾಭವೆನಿಸುವಂಥ 2ಸಂತೆಪೇಟೆಗೆ ಹೋಗಿ ಶ್ರಮಪಡಿಸುವುದಲ್ಲ |ಎಂತು ಮಾರಿದರದಕಂತವಿಲ್ಲ ||ಸಂತತ ಪುರಂದರವಿಠಲನ ನಾಮವ |ಎಂತು ನೆನೆಯಲು ಪಾಪ ಪರಿಹಾರವಲ್ಲದೆ 3
--------------
ಪುರಂದರದಾಸರು
ಮನುಜ ಶರೀರವಿದೇನು ಸುಖ - ಇದನೆನೆದರೆ ಘೋರವಿದೇನು ಸುಖ ? ಪ.ಜನನ - ಮರಣ ಮಲಕೂಪದಲ್ಲಿದ್ದುಅನುಭವಿಸುವುದು ಇದೇನು ಸುಖ ?ತನುವಿದ್ದಾಗಲೇ ಹೃದಯದ ಶೌಚದಸ್ತನಗಳನುಂಬುವುದೇನು ಸುಖ ? 1ದಿನವು ಹಸಿವುತೃಷೆಘನ ರೋಗಂಗಳಅನುಭವಿಸುವುದು ಇದೇನು ಸುಖನೆನೆಯಲುನಿತ್ಯ ನೀರ್ಗುಳ್ಳೆಯಂತಿಪ್ಪತನುಮಲಭಾಂಡವಿದೇನು ಸುಖ ? 2ಪರಿಪರಿ ವಿಧದಲಿ ಪಾಪವ ಗಳಿಸುತನರಕಕೆ ಬೀಳುವುದೇನು ಸುಖ ?ಪುರಂದರವಿಠಲನ ಮನದಿ ನೆನೆದು ಸದ್ಧರುಮದೊಳ್ ನಡೆದರೆ ಆಗ ಸುಖ 3
--------------
ಪುರಂದರದಾಸರು