ಒಟ್ಟು 21 ಕಡೆಗಳಲ್ಲಿ , 13 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವ ಎನ್ನ ಘಾಸಿಗೊಳಿಸದೆ ನೀ ಸಲಹಲಿ ಬೇಕೊ ಪ. ಈ ಶರೀರದೊಳು ಮಾಯಾಸಹಿತ- ದಿ ಶ್ವಾಸನಾಡಿಯೊಳು ವಾಸವಾಗಿಹ ಅ.ಪ. ಅನಿರುದ್ಧ ನಾಮದಿ ಅನುದಿನ ಸಲಹುತಲಿ ದನುಜನಾದ ಪಾಪಾತ್ಮನ ನಾಭಿಯೊಳ್ ಅನಿಲನಿಂದಲಿ ಶೋಷಿಸುವೆ ಪ್ರದ್ಯುಮ್ನ 1 ಹೃದಯದಿ ರಕ್ತವರ್ಣದಲಿ ನೀನಿರುತಲಿ ಸಂಕರ್ಷಣನೆನಿಸಿ ಪದೋಪದಿಗೆ ಪಾಪಾತ್ಮಕನನು ಸುಟ್ಟು ಸದಮಲ ಹೃದಯವ ಶುದ್ಧಿಗೈಯ್ಯುವ 2 ಮಧ್ಯದಿ ನಾಡಿಯ ಮಧ್ಯದ ಹೃದಯ ಪದ್ಮ ಮಧ್ಯ ಎಂಟು ದಳದಿ ವಿದ್ಯಮಾನನಾಗಿ ಬಿಂಬನೆನಿಸಿ ನಿನ್ನ ಪೊದ್ದಿಹ ಜೀವರ ಭಾವನೆಯಂತೆ ಕಾಂಬೆ 3 ಕೊಳಲನೂದುವ ನಿನ್ನ ಚಲುವರೂಪದ ಕಾಂತಿ ಪೊಳಲೆಲ್ಲ ತುಂಬುವುದೊ ನಳಿನಾಕ್ಷಿಯರ ಕೂಡಿ ಥಳಥಳಪ ನಿನ್ನ ಬಲು ಸಂಭ್ರಮದೊಳು ಸುರರೆಲ್ಲ ಸ್ತುತಿಪರೊ 4 ಸಿರಿ ಸಹಿತದಿ ಇರುವೆ ವರನಾಡಿ ಮಾರ್ಗದಿ ಅರಿತು ಭಜಿಸೆ ಮುಕ್ತಿ ಪೊರೆಯುವ ಬಿರುದುಳ್ಳ ಗೋಪಾಲಕೃಷ್ಣವಿಠ್ಠಲ5
--------------
ಅಂಬಾಬಾಯಿ
ವೆಂಕಟೇಶ ನಿನ್ನ ನಂಬಿದೆ ಎನ್ನ ಸಂಕಟವನು ಪರಿಹರಿಸಯ್ಯ ನೀನು ಪ ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು ದಡವ ಸೇರಿಸೊ ಎನ್ನ ಒಡೆಯ ನೀ ಕಡೆಗು 1 ಅಣುರೇಣು ತೃಣಕಾಷ್ಠದೊಳಗಿದ್ದು ನೀನು ಕ್ಷಣ ಕ್ಷಣ ಆರೈವ ಗುಣ ನಿನ್ನದೇನು ಪ್ರಣವ ರೂಪನೇ ನಿನ್ನ ಚರಣಕ್ಕೆ ನಾನು ಮಣಿವೆನು ಮನ್ನಿಸು ವರ ಕಾಮಧೇನು 2 ನಾರಾಯಣ ನರಹರಿ ಜಗನ್ನಾಥ ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ ಸಾರಿದವರ ಸಂಸಾರದ ದಾತ ಮಾರಿದ ಮನವಕೊಂಬರೆ ನೀನೆ ಪ್ರೀತ 3 ಉತ್ತಮವಾದ ಶ್ರೀಶೈಲ ನಿವಾಸ ಭಕ್ತರ ಸಲಹುವ ಬಿರುದುಳ್ಳ ಈಶ ಚಿತ್ತವು ತಿಳಿದೆನ್ನ ಕಾಯೊ ಸರ್ವೇಶ ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ 4 ವರಾಹತಿಮ್ಮಪ್ಪನು ಒಲಿದೆನ್ನ ಕರೆದು ಆರಿದ ಬÁಯೊಳು ಅಮೃತವನೆರೆದು ದೂರವಾಗದೆ ಅಡಿಗಡಿಗೆನ್ನ ಹೊರೆದು ಏರುಗಂಡಪರಾಧ ಎಲ್ಲವ ಮರೆದು 5
--------------
ವರಹತಿಮ್ಮಪ್ಪ
ಶಿರಬಾಗಿ ಬೇಡ್ವೆ ಎನ್ನನು ಪೊರೆಯೋ ಹರಿಯೇ ಶರಣ ರಕ್ಷಕನೆಂಬೊ ಬಿರುದುಳ್ಳ ದೊರೆಯೇ ಪ ಘನಮಹಿಮನೇ ನಿನ್ನ ಪಾವನ ಚರಣಕಮಲ ಎಂಬೋ ಮನವ ಆಕರ್ಷಿಸುವ ಪಂಜರದಲಿ ವನಜನಾಭನೆ ಎನ್ನ ಮನವೆಂಬ ರಾಜಹಂಸ ನನ್ನ ಲೋಲ್ಯಾಡಿಸೋ ಅನುದಿನದಲಿ 1 ಇಂದಿನ ದಿನವೇ ಸ್ಮøತಿಯಿಂದ ಇರುವಾಗ ಮು- ಕುಂದ ತವ ಸ್ಮರಿಸುವೆÉ ಕೊಡು ಮೋಕ್ಷವಾ ಮುಂದೆ ಅಂತ್ಯದಲಿ ಕಫ ಪಿತ್ತ ಶೀತಾದಿ ಕಂಠ ಗುಂದಿ ವಿಸ್ಮøತಿಯಾಗಿ ಸ್ಮರಣವಹುದೈಯ್ಯಾ 2 ಶ್ರೀಶ ಹನುಮೇಶವಿಠಲನೇ ನಿನ್ನಾಧೀನ ದಾಸನ ಮನದಪೇಕ್ಷವ ಪೂರಿಸೋ ಕೇಶವನೆ ಶಾಸಕನೆಂದು ಆಶಿಸಿ ಬಂದೆ ಬೇಸರ ಮಾಡದಲೆ ಪೋಷಿಸೈ ಸ್ವಾಮಿ 3
--------------
ಹನುಮೇಶವಿಠಲ
ಸಾಧು ಸಜ್ಜನ ಸಂತರ ಸಲಹುವ ಪತಿ ಹರಿ ಯಶೋದ ನಂದನಾ ಪ ಕನಕಾಂಬರಧರ ಕಮಲಸಂಭವ ಪಿತ ಇನಕುಲ ಭೂಷಣ ವೀರಾಧಿವೀರ ಘನಮಕುಟಧರ ಶಿರ ಕಾರುಣ್ಯಸಾಗರ ಅನಿಮಿತ್ತ ಬಂಧು ಜಗದಾದಿ ಪ್ರಿಯ ದಿನಕರ ಕೋಟಿ ತೇಜ ದೇವಾದಿದೇವ ದೀನರಕ್ಷಕ ರಾಮ ಜಾನಕಿ ಪ್ರೇಮಾ ಅನಿಮಿಷ ರೊಡೆಯ ಶ್ರೀ ಆದಿನಾರಾಯಣ ಕನಿಕರಿಸಿ ಎನ್ನಮೇಲೆ ಕೃಪೆ ಮಾಡೋ ಗೋವಿಂದಾ1 ವಾಸುಕಿಶಯನ ಶ್ರೀವಸುದೇವ ತನಯಾ ಸಾಸಿರನಾಮದ ಸರ್ವೇಶಾ ಈಶಾ ವಾಸುದೇವಾಕೃಷ್ಣಾ ವಾರಿಜೋದರ ಶ್ರೀನಿವಾಸ ವೇದೋದ್ಧಾರ ವೈದೇಹಿ ರಮಣ ಭೂಸುರ ವಂದಿತ ಪೂಜಿತ ಸರ್ವತ್ರ ಶ್ರೀಶವೇಣನಾದ ಶೀತ ಜನಪೋಷಾ ಭಾಸುತ ಕೀರ್ತಿ ವಿಶಾಲ ಭಕ್ತವತ್ಸಲ ದಾಸನು ನಾ ನಿನ್ನ ದಯಮಾಡಿ ರಕ್ಷಿಸೆನ್ನ 2 ಸುಂದರ ವದನ ಸುರೇಂದ್ರ ಅರ್ಚಿತ ಪರಮಾನಂದ ಮುಕುಂದ ಮಹಾದೇವನೆ ಹೊಂದಿ ನಿಮ್ಮಯ ಚರಣದ್ವಂದ್ವ ಪೂಜಿಪ ರಂದದಿ ಪುರವಂತ ಬಿರುದುಳ್ಳ ದೇವಾ ಸಿಂಧು ಶಯನನಾದ 'ಶ್ರೀಹೆನ್ನವಿಠ್ಠಲಾ’ ಕರೆದೆನ್ನ ------------------------- ------ ಎನ್ನನ್ನು ಕರುಣಿಸು ಕಾಯೋ
--------------
ಹೆನ್ನೆರಂಗದಾಸರು
ಹೇಮಾಂಬರ ಕದಂಬ ವೆಂಕಟರಾಯಾ ಅ.ಪಎಷ್ಟೆಂದುಸುರೆ ಕೋಟಲೆಗಳಇಷ್ಟ ಮೂರುತಿಯೆ ಅಟ್ಟಿ ಬರುತ 'ಷಹುಟ್ಟು ಹೊಂದುಗಳೆಂಬ ಕಷ್ಟವ ಬಿಡಿಸೊ 'ಶಿಷ್ಟ ವೆಂಕಟರಾಯಾ1ದಂದುಗದಿಂದಾ ಎನ್ನಯಮನ ಕಂದಿಕುಂದುತಿದೆ ಇಂದು ನೀ ಬೆದರದಿರೆಂದಭಯವನಿತ್ತು ಬಂಧವ ಕಳೆಯೆನ್ನತಂದೆ ವೆಂಕಟರಾಯಾ 2ಕಡು ಮನೋವ್ಯಥೆಯಾ 'ಭಾಡಿಸುನುಡಿಯಾಲಿಸಯ್ಯಾ ಬಿಡದೆ ನೀ ಎನ್ನ ಕೈಪಿಡಿದು ಸಂಸøತಿಯೆಂಬ ಕಡಲ ದಾಂಟಿಸೊ ಎನ್ನೊಡೆಯ ವೆಂಕಟರಾಯಾ 3ಗತಿ ನೀನೆಯೆಂದು ಸಾರಿದೆ ನಿನ್ನನತಿ ದೀನ ಬಂಧು ಪತಿತ ಪಾವನ ನೆಂದತಿಶಯದಿಂ ಶೃತಿ ನುತಿಸುತಲಿದೆ ತಿರುಪತಿಯ ವೆಂಕಟರಾಯ 4ಅಪರಾಧ ಶತವಾ ಮಾಡಿದೆ ನಾನುಕೃಪೆುಂದ ಕ್ಷ'ುಸೈ ಜಪತಪವರಿಯದಚಪಲ ಚಿತ್ತನು ನಾನು 'ಮಲಪರಾನಂದನಿಪುಣ ವೆಂಕಟರಾಯಾ 5'ಪ್ರವತ್ಸಲನೆ ಯನಗೆ ನೀನುಸುಪ್ರೀತನಾಗೈ ತಪ್ಪುಗಳೆಲ್ಲವನೊಪ್ಪುಗೊಳ್ಳುತ ಸಲಹಪ್ಪ ನಿಚ್ಚಲು ತಿಮ್ಮಪ್ಪ ವೆಂಕಟರಾಯಾ 6ದುರಿತ ಭಂಜನನೆ ಮಹಾಪುಣ್ಯಚರಿತ ರಾಜಿತನೆ ನೆರೆ ನಂಬಿದರ ಪತಿಕರಿಸುವ ಬಿರುದುಳ್ಳ ಪರಮಾತ್ಮ ಮೂಡಲಗಿರಿಯ ವೆಂಕಟರಾಯಾ 7ವಾರಿಜನಾಭ ಮಹೋನ್ನತವಾರಣಾಧಾರಾ ಗಾರುಗೊಳಿಸುವ ಸಂಸಾರ ದುಃಖವನಿದನಾರಿಗುಸುರುವೆ ಕೊನೇರಿ ವೆಂಕಟರಾಯಾ 8ಮಂಗಳಾತ್ಮಕನೆ ಸೀತಾಕಾಂತಮಂಗಳ ಮ'ಮ ಮಂಗಳಗಿರಿ ನರಸಿಂಗರಾಘವ ರಘುಪುಂಗವ ಅಲಮೇಲುಮಂಗ ವೆಂಕಟರಾಯಾ9
--------------
ತಿಮ್ಮಪ್ಪದಾಸರು
ಏಕೆ ವೃಂದಾವನವು ಸಾಕು ಗೋಕುಲವಾಸ |ಏಕೆ ಬಂದೆಯೊ ಉದ್ಧವಾ? ಪಸಾಕು ಸ್ನೇಹದ ಮಾತನೇಕ ಮಹಿಮನು ತಾನು |ಆ ಕುಬುಜೆಯನು ಕೂಡಿದ-ಉದ್ಧವಾ ಅ.ಪಬಿಲ್ಲು ಬಿಳಿಯಯ್ಯನ ಬೇಟ ನಗೆನುಡಿ ನೋಟ |ಇಲ್ಲದಂತಾಯಿತಲ್ಲ ||ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನವ |ವಲ್ಲಭನ ಒಯ್ದನಲ್ಲ ||ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದು |ಘಲ್ಲನಾಭನ ತಂದು ತೋರೈ-ಉದ್ಧವಾ 1ಅನುದಿನೊಳಾದರಿಸಿ ಅಧರಾಮೃತವನಿತ್ತು |ಇನಿದಾದ ಮಾತುಗಳಲಿ ||ಮನದ ಮರ್ಮವ ತಿಳಿದ ಮನಸಿಜಪಿತನ ಸಖವು |ಮನಸಿಜನ ಕೇಳಿಯಲ್ಲಿ ||ಕನಸಿನಲಿ ಕಂಡ ತೆರನಾಯಿತಾತನ ಕಾಂಬು |ವನಕ ಬದುಕುವ ಭರವಸೆ ಹೇಳು-ಉದ್ಧವಾ 2ಕರುಣನಿಧಿಯೆಂಬುವರು ಕಪಟನಾಟಕದರಸು |ಸರಸ ವಿರಸವ ಮಾಡಿದ ||ಸ್ಮರಿಸಿದವರನು ಕಾಯ್ವ ಬಿರುದುಳ್ಳ ಸಿರಿರಮಣ |ಮರೆದು ಮಧುರೆಯ ಸೇರಿದ ||ಪರಮಭಕ್ತರ ಪ್ರಿಯ ಪುರಂದರವಿಠಲನ |ನೆರೆಗೂಡಿಸೈ ಕೋವಿದ-ಉದ್ಧವಾ 3
--------------
ಪುರಂದರದಾಸರು