ಒಟ್ಟು 30 ಕಡೆಗಳಲ್ಲಿ , 22 ದಾಸರು , 30 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನವ ಕೊಡು ಹರಿಯೆ | ನಿರಂತರ ಧ್ಯಾನವ ಕೊಡು ಹರಿಯೆ ಪ ನೀನೆ ಗತಿಯೆಂದಾನುಪೂರ್ವಕ ಧ್ಯಾನ ಮಾಳ್ವರ ಜನ್ಮಕರ್ಮಗ ಳೇನು ನೋಡದೆ ಪೊರೆವೆ ನಿನ್ನ ಸುನಾಮವೆ ಸುರಧೇನುವೆಂದು ಅ.ಪ. ನಿನ್ನ ನಾಮವ ನೆನೆದು | ಅಜಾಮಿಳನು ಧನ್ಯನು ತಾನಾದನು ಈ ಭುವನದಿ ತನ್ನ ದೇಹಾತುರದೊಳನ್ಯರ ಬನ್ನ ಬಿಡಿಸುತಲಿದ್ದ ಖಳನು ನಿನ್ನ ನಾಮಸ್ಮರಣೆ ಮಾತ್ರದಿ ಘನ್ನ ಮುನಿಪತಿ ಎನ್ನಿಸಿದನು 1 ದುರುಳ ದುಶ್ಯಾಸನನು | ಸಭೆಯೊಳಗಂದು ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ ಮುರಹರನೆ ಹಾ ಕೃಷ್ಣ ದ್ವಾರಕಾ- ಪುರನಿಲಯ ಪರಮಾತ್ಮ ಭಕ್ತರ ಸುರತರುವೆ ಎಲ್ಲಿರುವೆ ಏತಕೆ ಮರೆವೆ ಎನ್ನುತ ಮೊರೆಯೆ ಪೊರೆದೆಯೊ 2 ನರಕ ಕೂಪದೊಳು ಬಿದ್ದು | ಏಳುತ್ತ ಮುಳುಗುತ ಪರಿಪರಿ ಭಾಷೆಯಲಿ ಮುಂದೋರದೆ ಹೊರಳುತ್ಹೊರಳುತ ಮರುಕಗೊಳುತ ಹರಿಹರಿ ನಾರಾಯಣೆನ್ನಲು ಸುರಲೋಕವನ್ನಿತ್ತು ಸಲಹಿದೆ ವರದ ಲಕ್ಷ್ಮೀಕಾಂತ ಶಾಶ್ವತ 3
--------------
ಲಕ್ಷ್ಮೀನಾರಯಣರಾಯರು
ನಗಬಹುದು ನೀ ಮುಗುಳು ನಗೆಯಾ ಗುರುರಾಯಮಿಗೆ ಕಂಡು ದೇಹಾಭಿಮಾನಿಗಳ ಬಗೆಯಾ ಪತನ್ನ ತಾನರಿಯಲೀಸದ ಮಾಯೆಗೊಳಗಾಗಿಅನ್ಯರೇತೋಜಾತಮಾದ ದೇಹವ ನೋಡಿತನ್ನಿಂದ ತಾ ಕಾಣಪಡುತಿಹುದಿದಲ್ಲವೆಂದೆನ್ನಲಾರದೆ ದೋಷದಿಂದಾಉನ್ನತದ ಮಾಂಸ ರಕ್ತಾಸ್ತಿಮಲ ಮೂತ್ರಂಗಳಿನ್ನೆನೆದುನಾರುವ ನವದ್ವಾರ ಮಾರ್ಗದಿಂತನ್ನ ಮರಸುವದೇಹವೆತನ್ನದೆಂದು ಮರೆದುಣ್ಣುರಿವಾತಗಳ ಕಂಡೂ ಮಾಯೆ ಭಾಪೆನ್ನುತ್ತ ಬೆರಳೊಲದು ಕೊಂಡು ಬಗೆಗಂಡೂ 1ಬಿಟ್ಟ ಮನೆ ಜನ ಧನಂಗಳಲಿ ಮತ್ತೂ ಮನವನಿಟ್ಟು ವಾಂತ್ಯಾಶನವನುಂಬ ನಾಯಂದದಲಿಪಟ್ಟಣಂಗಳಲಿ ತಿರುಗುತ ಪರರ ಬಾಧಿಸುತಕೆಟ್ಟ ಬುದ್ಧಿುಂದ ಧೃತಿಗುಂದಿಕೊಟ್ಟಪುದು ಕರ್ಮವೆಂಬುದ ಮರೆತು ಗೇಣುದ್ದಹೊಟ್ಟೆ ಬಟ್ಟೆಗೆ ದೈನ್ಯ ಬಟ್ಟು ಮೂಢತೆುಂದಕೆಟ್ಟೆನಿನ್ನಾರು ರಕ್ಷಿಪರೆಂದು ಚಿಂತಿಸುವಹೊಟ್ಟೆಹೊರಕರನು ನೋಡುತ್ತಾ ಕಟಕಟಾಕೆಟ್ಟರಿವರೆಂದು ಹಾಸ್ಯವನು ಮಾಡುತ್ತಾ 2ತಾನಾತ್ಮನೆಂಬುದನು ಕೇಳಿದ್ದುದೃಷ್ಟಾನುಮಾನಂಗಳಿಂ ನಂಬಿಗೆಯೆುಲ್ಲದದರಲ್ಲಿಮಾನಾವಮಾನಂಗಳಿಂ ಹರುಷ ಶೋಕಾದಿಹೀನಬುದ್ಧಿಗಳ ಮಾಡುತ್ತಾಜ್ಞಾನಮಾರ್ಗದಲಿ ವಿಶ್ವಾಸವಿಲ್ಲದೆ ತನ್ನ ಕಾಣಲಾರದೆ ಭೇದ ಬುದ್ಧಿುಂ ವ್ರತತೀರ್ಥಸ್ನಾನಾದಿುಂದ ಮುಕುತಿಯ ಪಡೆಯಬೇಕೆಂಬಮಾನವರ ಭ್ರಾಂತಿಯನು ತಿಳಿದೂ ಇವರ್ಗಳಿಗೆಸ್ವಾನುಭವವಿಲ್ಲೆಂದು ಸಮತೆಯಲಿ ನಿಂದೂ 3ರಾಗವನು ಬಿಡಲಾರದಾಶಾಪಿಶಾಚಕೊಳಗಾಗಿ ಸತ್ಸಂಗ ಸತ್ಕಥೆಯ ಕೇಳಿಕೆಗಳನುನೀಗಿ ಧನಿಕರೊಳಿಚ್ಚಿತವನಾಡಿ ಸದ್ಧರ್ಮತ್ಯಾಗಿಯಾಗ್ಯನೃತಕ್ಕೆ ಪೊಕ್ಕೂಹೀಗೆ ತಿರುಗುತ ಪರಾನ್ನಾದಿ ಭೋಗಕ್ಕಾಗಿಕಾಗೆಯಂದದಲಲ್ಲಿಗಲ್ಲಿಗೆ ಸದ್ಗತಿುೀವಯೋಗ ಮಾರ್ಗವ ಬಿಟ್ಟುಭ್ರಾಂತರಾದಿರಿ ಮಹದ್ರೋಗಿಗಳ ಕಂಡು ಬೆಸಗೊಂಡು ಇವರ್ಗೆ ಭವರೋಗ ಬಿಡದೆಂದು ನಿಜಪದದಲ್ಲಿ ನಿಂದೂ 4ಇಂತರಿವ ಜನರಲ್ಲಿ ನಿಂತು ಸನ್ಮತಿುತ್ತುಚಿಂತೆಗಳ ಬಿಡಿಸುತ್ತಲಂತರಾತ್ಮಕನಾಗಿಸಂತಗೋಪಾಲಾರ್ಯ ಗುರುವರ್ಯನಾಗಿ ವೇದಾಂತದರ್ಥವನು ಬೋಧಿಸುತಾಅಂತವಿಲ್ಲದ ನಿಜವ ತೋರಿ ಪಾಲಿಸಿ ಮುದವಂತಾಳ್ದು ಸಕಲ ಸಂಶಯಗಳನು ಪರಿಹರಿಸಿಶಾಂತರಾದಿರಿ ಮೋಹಹೋುತ್ತು ನಿತ್ಯ ಸ್ವಾತಂತ್ರ್ಯವಾುತು ಗೆದ್ದಿರೆನುತಾಸಂತತಾನಂದಕನುಗೈದು ಕೈ ಹೊುದೂ 5
--------------
ಗೋಪಾಲಾರ್ಯರು
ನಂಬಿದೆ ತವ ಚರಣ ಸಲಹೋ | ಅಂಬುಧಿಸುತೆ ರಮಣ ವಿನುತ ಮನ | ದ್ಹಂಬಲವನು ಸಲಿಸೆಂದು ನಿರುತ ನೆರೆ ಪ ತಾವರೆದಳನಯನಾ ಭವಹರಣ ತವಕದಿ ಸುಜ್ಞಾನವಗರೆಯೋ 1 ತಂದೆ ನಾ ಜನಿಸುತ ಭೂಸುರ ಜನ್ಮದಿ ಹಿಂದಿನ ಸುಕೃತದಲಿ ಬಂದೆನೊ ಭುವಿಯೊಳ್ ನೊಂದೆನೋ ಕರುಣಿಸು 2 ಹೇಸಿ ಸಂಸಾರದ ಪಾಶÀವ ಬಿಡಿಸುತ ಶ್ರೀಶಾಮಸುಂದರವಿಠಲನೆ ದೋಷವ ನೋಡದೆ | ಪೋಷಿಸು ಮರೆಯದಲೆ ವಾಸುಕಿಶಯನನೆ 3
--------------
ಶಾಮಸುಂದರ ವಿಠಲ
ನಮ್ಮ ಗುರುರಾಯಾ | ಪೊಡವಿಗೆ ನಡೆ ತಂದನು ಪ ಪೊಡವಿಗೆ ನಡೆ ತಂದನು| ಎಡ ಬಲದಲಿ ಭಾಗವತರ ಮೇಳದಿಂದಲಿ | ಪರಿ ಪರಿಯಾಟವ | ಆಡುತ ಪಾಡುತ ನಲಿದಾಡುತಲಿ 1 ಭವ ರೋಗಿಗಳೆಲ್ಲರು | ತ್ವರಿತದಿ ಬನ್ನಿರೋ ಯನುತಲಿ ಹರಿನಾಮಾ | ಭೇರಿಯ ಹೊಯ್ಸುತ ತತ್ವೋಪದೇಶದ | ಕರದಲಿ ಔಷಧವನೆ ಹಿಡಕೊಂಡು2 ಬಂದವರಿಗೆಲ್ಲ ಬೇಡಿದ್ದು ಕೊಡುತಲಿ | ಮಂದ ಮತಿಗಳವಗುಣವನೆ ಬಿಡಿಸುತ | ಸಾರಥಿ | ಎಂದೆಂದು ಶರಣರಿಗಾಧಾರಿಯಾಗಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು ಕರುಣಿಚನ್ನಕೇಶವ ಶ್ರೀ ವೆಂಕಟಾದ್ರಿನಿಲಯ ಪ ಎನ್ನ ತಪ್ಪುಗಳ ನಾನು ಮರೆಯಲೆಂತು ಎನ್ನಬೆನ್ನ ನೋಡಿಕೊಳ್ಳಲಹುದೆ ಎನ್ನಿಂದ ಅ ಮಂಜು ಮರೆಯಾಗುವುದು ಮಾರ್ತಾಂಡ ಮೂಡೆಕಂಜಲೋಚನ ನಿನ್ನ ಪದಕಮಲ ಸ್ಮರಣೆರಂಜಿಸಿ ಮನವನು ಪಾರಾಗಿಪುದು ಪಾಪಗಳಅಂಜಿಕೆಯ ಬಿಡಿಸುತ ಅನುಗ್ರಹಿಪ ಕರುಣಿ 1 ದಯೆ ನಿನ್ನದಿರೆ ಭಯ ಎನಗಿಲ್ಲ ಹರಿಮಾಯೆ ಮೋಹಗಳಿಗೆ ಮರುಳಾಗಿಹ ಬೊಂಬೆಜಯವಾಗಿಸಿ ಈ ಜನ್ಮ ಕೃತಾರ್ಥವ ಮಾಡುತೋಯಜಾಕ್ಷ ಶ್ರೀ ನೆಲೆಯಾದಿಕೇಶವರಾಯ2
--------------
ಕನಕದಾಸ
ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ ||ಮಂದರ ಧರ ಗೋವಿಂದನು ಹರಿ ಉಪೇಂದ್ರನು ಲಕ್ಷ್ಮೀವೃಂದಾವನ ಗೋಕುಲ ಪ್ರೀಯಾ ಪ ಕುಂಡಲ ಮಂಡಿತ ಪುಂಡರೀಕಾಕ್ಷಾ 1 ತೊಟ್ಟಲಲ್ಲೆ ತಾ ಬಟ್ಟನೆ ಚೀಪುತ | ಧಿಟ್ಟಾ ಕೃಷ್ಣನುತಟ್ಟನೆ ಚುಂಬನವ | ಕೊಟ್ಟಾ ವಿಷವನು ಕೊಟ್ಟವಳಸುವನುಧಿಟ್ಟಿಸಿದಾ ಜಗಜಟ್ಟಿಯು ಕೃಷ್ಣಾ 2 ಬಾಲಕರನು ಹೆಗಲೇರಿಸಿ ಮೇಲಿನ | ನೆಲವಿನ ಬೆಣ್ಣೆಯಕಳವನು ಮಾಡಿ | ಶಾಲಾ ಹುಡುಗರ ಪಾಲಾ ಉಣಿಸುತಲಿವಲಕ್ಷ್ಮೀಲೋಲಾ ರಂಗಯ್ಯಾ 3 ಮಣಿ ಫಣಿ ಫಣಿದಲಿ ಮೆಟ್ಟಿ |ಕುಣಿಕುಣಿದಾಡುತಲಿ 4 ಮಾಧವ | ಮಂಗಲ ಕರತರಂಗನ | ಅರಿತತಿ ಭಂಗವ ಬಿಡಿಸುತ |ಕಂಗಳ ಸದೋದಿತ ರುಕ್ಮ 5
--------------
ರುಕ್ಮಾಂಗದರು
ಮಂಗಳಂ ರಾಮಕೃಷ್ಣಾರ್ಯ ದಿವ್ಯಮಂಗಳ'ಗ್ರಹ ಸದ್ಗುರುವರ್ಯ ಪವಾದಿ ಜನರ ಮನೋಬಾಧೆಯ ಬಿಡಿಸುತಬೋಧೆಯ ಬಲಿಸಿ ಬ್ರಹ್ಮಾನಂದದಹಾದಿಯ ತೋರಿಸಿಯಾದರಿಸಿಯೆ ಕಾಯ್ವಬೋಧ'ಗ್ರಹ ನಿನ್ನ ಪಾದಪದ್ಮಗಳಿಗೆ 1ಭೂರಿ ಜನ್ಮಗಳೆತ್ತಿ ಸೇರಲು ತಡಿಯನುದಾರಿಗಾಣದೆ ಭವ ವಾರಿಧಿಯಹಾರೈಸಿದವರಿಗೆ ತೋರಿ ಜ್ಞಾನದ ನಾವೆಯೇರಿಸಿ ತಡಿಗೈದಿಸಿದ ಮೂರ್ತಿಗೆ 2ಕರುಣದಿಂ ಧರಣಿಯೊಳವತರಿಸಿಯೆ ಭಕ್ತಪರಿಪಾಲನಾರ್ಥದಿ ಯುಗಯುಗಕೂನರಹರಿ ರಾಮ ಶ್ರೀಕೃಷ್ಣ ರಾಮಕೃಷ್ಣಾರ್ಯತಿರುಪತಿ ವೆಂಕಟರಮಣನಿಗೆ3ಓಂ ಲೀಲಾಮಾನುಷ 'ಗ್ರಹಾಯ ನಮಃ
--------------
ತಿಮ್ಮಪ್ಪದಾಸರು
ಮಾತೆ ಸರಸ್ವತಿ ಮಂಜುಳ ಮೂರುತಿ ಚೇತನಾತ್ಮಕಿ ಭಾರತಿ ಪ. ಪ್ರೀತಿಯಿಂದೀವುದು ಪೀತಾಂಬರಧರನ ಸಾತಿಶಯದ ಭಕುತಿ ಅ.ಪ. ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ ಕರುಣಿಸೆನಗೆ ಸನ್ಮತಿ ಪರಮಪಾವನ ವೈಷ್ಣವರ ಪಾದಾಂಬುಜ ಮಧು- ಕರದಂತಿರಲಿ ಮದ್ರತಿ 1 ಮೂರ್ತಿ ತಾರೇಶನಂದದಿ ಹೃದಯಾ- ಕಾಶದೊಳು ಕಾಣುತಿ ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ ಗೈಸಮ್ಮ ಹರಿಯ ಸ್ತುತಿ 2 ಮನುಜರ ರೂಪದಿ ದನುಜರು ಭೂಮಿಯೊಳ್ ಜನಿಸಿದರ್ಜಲಜನೇತ್ರಿ ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ ಜನನಿಯೆ ನೀನೆ ಗತಿ 3 ಭಾರತಿದೇವಿಯ ಸ್ತುತಿ
--------------
ತುಪಾಕಿ ವೆಂಕಟರಮಣಾಚಾರ್ಯ
ವೃಂದಾವನದೊಳು ಶೋಭಿಸುತಿರುವಳು ಸುಂದರ ಶ್ರೀ ತುಳಸಿ ಪ ನಂದನಂದನ ಗತಿ ಪ್ರಿಯಳೆಂದೆನಿಸುತ ಭವ ಬಂಧವ ಬಿಡಿಸುತ ಅ.ಪ ನಿತ್ಯವು ಪ್ರಾತಃಕಾಲದೊಳೆದ್ದು ಪವಿತ್ರ ಚಿತ್ತದಲಿ ಭಕ್ತಿಯಲಿ ಸ್ತೋತ್ರವ ಗೈಯುತ ಸುತ್ತಿ ಪ್ರದಕ್ಷಿಣೆ ಮತ್ತೆ ನಮಿಪರಘ ಬತ್ತಿಸಿ ಸಲಹುತ 1 ತುಳಸಿ ವೃಂದಾವನ ಮಹಿಮೆಯ ಮನದಲಿ ನಿಲಿಸಿ ಸೇವಿಸುವ ಸಜ್ಜನರ ಕಲಿದೋಷಗಳನು ಕಳೆದು ಸತತ ಶ್ರೀ ನಿಲಯನÉೂಳ್ ಭಕ್ತಿಯ ಕೊಡುವೆನೆಂದೆನುತ 2 ತುಳಸಿ ದಳದಿ ಶ್ರೀ ಕರಿಗಿರೀಶನ ವಿಲಸಿತ ಪೂಜೆಯ ಮಾಡುವರ ಸುಲಲಿತ ಸತ್ಪಥದೊಳು ನಡೆಸುತ ನಿ ರ್ಮಲಮತಿ ಕರುಣಿಸಿ ಸಲಹುವೆನೆನ್ನುತ 3
--------------
ವರಾವಾಣಿರಾಮರಾಯದಾಸರು
ವೆಂಕಟೇಶ ನೀ ಕರುಣಿಸಿ ಮಾನಸ ಶಂಕೆಯೆಲ್ಲವ ಓಡಿಸು ವಂಕುಬೂದಿಯ ಬಿಡಿಸುತ ನಿನ್ನಯ ಕಿಂಕರಾಶ್ರಯ ಕೊಡಿಸು ಪ. ಎಷ್ಟು ಬಂದರೂ ತೃಪ್ತಿಯ ಪಡದ ಕ- ನಿಷ್ಟ ಭಾವನೆಯಿಂದಲೀ ಭ್ರಷ್ಟನಾದೆನು ಬಹು ವಿಧವಾಕೃತ ನಿಷ್ಠುರಾಗ್ನಿಯ ಹೊಂದಲಿ ಕೃಷ್ಣ ನೀ ಕರಪಿಡಿವುತ ಕರುಣಾ ದೃಷ್ಟಿಸಂಗತ ಧೀರತೆಯಿಂದಲಿ 1 ಗಾರುಗೊಂಡೆನು ಶ್ರೀಶನೆ ಸೇರಿದುದಂಗದಿ ದಿನ ದಿನ ಮೀರಿತೊ ಗ್ರಹವಾಸನೆ ಮಾರನಂದನ ಎನ್ನ. . . . . .ತಿ ಭಾರವೆ ಭವವಾರುದಿ ಶೋಷನೆ 2 ಸರ್ವದಾ ನಿನ್ನ ಪಾದಾಂಬುಜರತಿ ಇರ್ವರೊಂದನೆ ಪಾಲಿಸು ಮರ್ಮವೆಂದಿಗು ಮನಸಿಗೆ ಘಟಿಸದೆ ನಿವ್ರ್ಯಳೀಕದಿ ಲಾಲಿಸು ಸರ್ವಲೋಕ ಸುಖಾಕರ ಫಣಿಪತಿ ಪರ್ವತಾಲಯ ಪರಮ ಕೃಪಾಕರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶುಭ ಮಂಗಲಂ |ಮಂಜುಕರ ಲಾಲಿತ ಕುರಂಗಗೆ ||ಮಂಗಲ ಮೌನಿ ಮಾನಸ ಸಂಗಗೆ |ಮಂಗಲಂ ಮಂದಿರೀಕೃತ ಶೈಲಶೃಂಗಗೆಮಂಗಲಂ ಮಲ್ಲಿಕಾರ್ಜುನ ಲಿಂಗಗೆ ಪ ಚಾರು ಕಪರ್ದಿಗೆ ಗುಹ ಗಣಾಧಿಪ ಗುರುಗೆ | ಗೋರಾಜ ವಾಹನಗೆ |ಗಿರಿಜಾಂತರಂಗ ವಾರಿಜಭೃಂಗಗೆ 1 ಕರ್ಪೂರ ಗೌರಗೆ ಕಲ್ಪಾಂತವೀರಗೆ | ಕಾಲಾಗ್ನಿ ಕಿಲಕಾಲಿತ ಮಾರಗೆ |ಕಾಕೋಲ ಕಂಧರಗೆ ಕಾಶೀ ವಿಹಾರಗೆ |ಕಾಕೋದರಾಭರಣ ಕಮನೀಯಗೆ 2 ವಿಧು ಶಕಲಾಧಾರಿಗೆ ವಿಶ್ವಹಿತಕಾರಿಗೆ ವಿಯದಟನ ವಿಕಟ ಪುರ ಸಂಹಾರಿಗೆ | ವಿಮಲ ವಿದ್ಯಾನಿಧಿಗೆ |ವಿಧಿವಂದ್ಯ ರುಕ್ಮ ಪಾಡುಕ ಪಾದಗೆ 3 ಮಾಧವ |ಮಂಗಳ ಕರತರಂಗನ | ಅರಿತತಿ ಭಂಗವ ಬಿಡಿಸುತಕಂಗಳ ಸದೋದಿತ ರುಕ್ಮ 4
--------------
ರುಕ್ಮಾಂಗದರು
ಶ್ರೀ ನರಸಿಂಹ ವಿಠಲ | ಕಾಪಾಡೊ ಇವಳಾ ಪ ದೀನ ಜನ ಮಂದಾರ | ಕಾರುಣ್ಯ ಮೂರ್ತೆ ಅ.ಪ. ತೈಜಸನೆ ನೀನಾಗಿ ಯೋಜಿಸಿದ ರೂಪವನುಮಾಜದಲೆ ಇತಿಹೆನೊ | ವಾಜಿ ವದನಾಖ್ಯಮೂಜಗಕ್ಕೊಡೆಯ ಹರಿ | ಗೋಜುಗಳ ಬಿಡಿಸುತ್ತವ್ಯಾಜ ರಹಿತನೆ ಕಾಯೊ | ಭ್ರಾಜಿಷ್ಗು ಮೂರ್ತೇ 1 ಹರಿ ಗುರೂ ಸದ್ಭಕುತಿ | ವರಜ್ಞಾನ ಕರುಣಿಸುತನಿರುತ ಪೊರೆ ಇವಳನ್ನ | ವೈರಾಗ್ಯವಿತ್ತೂ |ದುರಿತ ರಾಶಿಗಳಳಿದೂ | ಕರುಣಿಸೋ ನರಹರಿಯೇಮರುತಾಂತರಾತ್ಮಕನೆ | ಶರಣ ವತ್ಸಲನೇ 2 ಪಾದ ಕಮಲ ಸನ್ನುತ ಗುರೂ | ಗೋವಿಂದ ವಿಠಲಾ3
--------------
ಗುರುಗೋವಿಂದವಿಠಲರು
ಸಾಯವಲ್ಲದೋ ಮನಸು | ಕಾಯದೊಳಗೆ ಕುಳಿತುಕೊಂಡು | ಬಾಯ ಬಿಡಿಸುತಿಹುದು ಜನಕೆ ಪ ಕಾಲಿಲ್ಲದೆ ಆಡುತಿಹುದು | ನಾಲಿಗಿಲ್ಲದೆ ನುಡಿಯುತಿಹುದು |ಕಣ್ಣಿಲ್ಲದೆ ನೋಡುತಿಹುದು | ಕರ್ಣವಿಲ್ಲದೆ ಕೇಳುತಿಹುದು 1 ಎತ್ತ ಹೋದರೆನ್ನ ಬೆನ್ನ | ಹತ್ತಿಬಂದು ಕಾಡುತಿಹುದು |ಕಿತ್ತಿ ಇದರ ಬೇರನೆನಗೆ ಮತ್ತೆ ತೋರಿಸುವವರ ಕಾಣೆ 2 ಇಂದು ಶರಣು ಹೊಕ್ಕು ಅವರ | ಹಿಂದೆ ಕಳೆಯಬೇಕಿದನ 3
--------------
ಭಾವತರಕರು
ಬೇಡುವೆ ವರಗಳ | ಜೋಡಿಸಿ ಕರಗಳ |ನೀಡು | ಕೃಪೆಯೊಳ ಮಾಡದೆ ಮುನಿಸುಗಳ ||ಗೋಪಾಲ||ಬೇಡನು ಮರಗಳ ನೋಡುತ ತಪಗಳ ಮಾಡಲು ವರಗಳ |ನೀಡಿದೆ ಕರುಣದೊಳ್ ||ಶ್ರೀ ಲೋಲ|| 1ಜಪವನು ಮಾಡಲಾರೆ | ತಪವನು ಮಾಡಲಾರೆ |ಉಪವಾಸ ಮಾಡಲಾರೆ ||ಶಪಥವ ಮಾಡಲಾರೆನು || ನಿನ್ನೊಳು ನಾನೂ ||ದ್ರುಪಜೆಯುಟ್ಟ ಸೀರೆ | ಕುಪಿತಾತ್ಮ ಸೆಳೆವರೆ |ಉಪಕರಿಸಿದನ್ಯಾರೆ || ನಿಪುಣ ನೀ ದಯವ ತೋರೆ ||ಮುರಾರೆ 2ಹುಲುನರಜನ್ಮವೆತ್ತೀ | ಹುಲುಗಾವಲೊಳು ಸುತ್ತೀ |ಹುಲು ಗೋವರ್ಧನವೆತ್ತಿ | ಹುಲುಗೈದೆ ಸುರಶಕ್ತೀ ||ಗೊಲ್ಲರೊಳ್ ಅರ್ಥೀ || ಕಲುಷವ ಬಿಡಿಸುತ್ತಿ |ಫಲ್ಗುಣಸಾರಥಿ| ಸಲಹೆನ್ನ ಮನದರ್ಥಿ |ಚೆಲುವ ಗೋವಿಂದ ಮೂರುತಿ | ದಾಸರೊಳ್ ಪ್ರೀತಿ 3
--------------
ಗೋವಿಂದದಾಸ
ಮಾತೆ ಸರಸ್ವತಿ ಮಂಜುಳ ಮೂರುತಿಚೇತನಾತ್ಮಕಿಭಾರತಿಪ.ಪ್ರೀತಿಯಿಂದೀವುದು ಪೀತಾಂಬರಧರನಸಾತಿಶಯದ ಭಕುತಿ ಅ.ಪ.ಗುರುಹಿರಿಯರ ಕಂಡು ಬಿರುನುಡಿ ನುಡಿಸದೆಕರುಣಿಸೆನಗೆಸನ್ಮತಿಪರಮಪಾವನ ವೈಷ್ಣವರ ಪಾದಾಂಬುಜ ಮಧು-ಕರದಂತಿರಲಿ ಮದ್ರತಿ 1ಶ್ರೀಶನಮೂರ್ತಿತಾರೇಶನಂದದಿ ಹೃದಯಾ-ಕಾಶದೊಳು ಕಾಣುತಿದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತಗೈಸಮ್ಮ ಹರಿಯ ಸ್ತುತಿ 2ಮನುಜರ ರೂಪದಿ ದನುಜರು ಭೂಮಿಯೊಳ್ಜನಿಸಿದರ್ಜಲಜನೇತ್ರಿಅನಘಲಕ್ಷುಮಿನಾರಾಯಣನ ದಾಸರಿಗೆಲ್ಲಜನನಿಯೆ ನೀನೆಗತಿ3ಭಾರತಿದೇವಿಯ ಸ್ತುತಿ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ