ಒಟ್ಟು 24 ಕಡೆಗಳಲ್ಲಿ , 17 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀಸಪದ್ಯ ಸುಂದರಾಂಗನ ಪಾದಕೊಂದಿಸುತ ಭಕ್ತಿಯಲಿ ಮಂದರೋದ್ಧಾರ ಮುಚುಕುಂದ ವರದ ನೆಂದು ಸ್ತುತಿಸುವ ಭಕ್ತವೃಂದವನು ರಕ್ಷಿಸುವ ಕುಂದನೆಣಿಸದಲೆ ನಾರಸಿಂಹ ಹರಿಯು 1 ಇಂದಿರಾರಮಣಗೆ ಜಯ ಗೋವಿಂದ ಗೋಪಕುಮಾರ- ನೆಂದವರ ಬಂಧನವ ಬಿಡಿಸಿ ಕಾಯ್ವ ಕಂದರ್ಪಜನಕ ಕಮಲಾಕ್ಷ ಹರಿ ಗತಿ ಎನುತ ಬಂದವನ ಕೈ ಬಿಡನು ಇಂದಿರೇಶ 2 ದುಂದುಭಿ ವತ್ಸರದಿ ಸುಜನರೆಲ್ಲ ತಂದೆ ಕಮಲನಾಭ ವಿಠ್ಠಲನೆನುತ ಒಂದೆ ಮನದಲಿ ಭಜಿಸಿ ಸ್ತುತಿಪ ಜನರ ಚಂದದಲಿ ಕಾಯ್ವ ನಾರಸಿಂಹ ಹರಿಯು3
--------------
ನಿಡಗುರುಕಿ ಜೀವೂಬಾಯಿ
ಸುಖವಿಲ್ಲ ಆತ್ಮಕೆ ಈ ದೇಹದಿಂದ |ಸುಖವ ಪಡೆವುದು ದೇಹ ಈ ಆತ್ಮದಿಂದ ಪ ಕರ್ಮದೊಳು ಜನಿಸಿ ಬಂದದ್ದು ಈ ದೇಹ |ಕರ್ಮಕ್ಕೆ ಅನುಕೂಲವಾಗುವದು ಈ ದೇಹ |ಕರ್ಮವನು ಕಡೆ ತನಕ ಮಾಡುತಿರುವದು ದೇಹ 1 ನಾಮರೂಪದಲ್ಲಿ ನಿಲಿಸಿಹುದು ಈ ದೇಹ |ನೇಮನೀತಿಯನ್ನು ನಡೆಸುವದು ಈ ದೇಹ ||ಕಾಮ ಕ್ರೋಧದಲ್ಲಿ ಕುಂದಿ ಕುಂದಿ ಬೆಂದು |ಪ್ರೇಮದಲಿ ವೈರಾಗ್ಯ ತೊರೆ ತೊರೆದು 2 ಹಿಂದೆ ಬಂದಿದ್ದು ಈ ದೇಹ ಮುಂದೆ ನಿಂತಿದ್ದು ಈ ದೇಹ |ಎಂದೆಂದೂ ಬಿಡನು ಜೀವನು ಈ ದೇಹ ||ತಂದೆ ಗುರು ಭವತಾರಕನ ಪಾದಾರವಿಂದವ |ಹೊಂದಿದವರಿಗೆ ಇಲ್ಲೋ ಈ ನಾಲ್ಕು ದೇಹ 3
--------------
ಭಾವತರಕರು
ಹಿಡಿ ಹಿಡಿರಿಂದು ಸಿಕ್ಕಿದ ಕಳ್ಳನಾ ಬಿಡಬ್ಯಾಡಿರೆಂದಿಗೆ ಹಜ್ಜೆನೆಲಿಗೆ ತಾರನಾ | ಮೈಯ್ಯ ದೋರನಾ ಪ ಹೃದಯದೋಳಗಿನಾ ಗಂಟವ ಬಿಡುತಾ ಮುದದಿಕುಳ್ಳಿರಲಲ್ಲಿ ಬಂದು ನೋಡುತಾ ಇದರ ಚಿತ್ತ ಪೇಠಾರಿಗೆ ಕೈಯ್ಯಾನೀಡುತಾ ಒದಗಿಕದ್ದೊಯ್ದತಿರಗದೆ ಧನಿ ಮಾಡುತಾಧನಿ ಮಾಡುತಾ 1 ಖೂನ ತನ್ನಯ ಬಲ್ಲಾಸಾಧುಜನವಾ ಕಾಣುತಾರ್ಜಿತ ಶೆಳೆದು ಕೊಂಡು ಧನವಾ ಏನ ಹೇಳಲಿ ಬಿಡನು ಅವರ ಪ್ರಾಣವಾ ವನವಾಕೊಂಡು ಗೋಧನವಾ 2 ಅಡದಾರಿಯಾ ನಡದು ಹೋಗಿ ಬಿದ್ದನಾ ನಡುವೆ ತೊಳಲಿಸುವನು ವಿರುದ್ಧನಾ ಹಿಡಿ ಗುರು ಮಹಿಪತಿ ಪ್ರಭು ಪ್ರಸಿದ್ಧನಾ ಬಿಡದೆ ಭಂಡಾರಕಾಯಲಿಡುವ ಪ್ರಬುದ್ಧನಾ ವಾಜಿಲಿದ್ದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ |ಹೆಮ್ಮೆಯಿಂದ ಈ ಶರೀರ ನಂಬಬೇಡಿ ಕಾಣಿರೊ ಪ.ಅಟ್ಟ ಅಡಿಗೆ ಉಣಲು ಕೊಡನು ಕೊಟ್ಟಸಾಲ ಕೇಳಗೊಡನು |ಪೆಟ್ಟಿಗೆ ತುಂಬ ಹಣವು ಇದ್ದರೆ ಕೊಟ್ಟೆನೆಂದರೆಬಿಡನು ಯಮನು 1ಮಾಳಿಗೆ ಮನೆಯ ಇರಲು ಜಾಳಿಗೆ ತುಂಬಹೊನ್ನು ಇರಲು |ಆಳುಮಂದಿ ಕುದುರೆ ಇದ್ದರೆ ಬೀಳುಗೊಡದೆಯಮನು ಬಿಡನು 2ವ್ಯರ್ಥವಾದ ಈ ಶರೀರ ಸತ್ಯವೆಂದು ನಂಬಬೇಡಿ |ಕರ್ತುಪುರಂದರವಿಠಲರಾಯನ ಭಕ್ತಿಯಿಂದ ನೆನೆಯಿರೊ3
--------------
ಪುರಂದರದಾಸರು
ನಂಬಿರೈ ಕರುಣಾಂಬುಧಿ ಕೋಮಲಕಂಬುಕಂಧರಹರಿಯಪ.ಯೋಗಿಮನಮುದ ರಾಗ ಮೂರುತಿಯ ದೊರೆಯಪಾಲಿತ ಕೌಂತೇಯಭಾಗವತತನಕಾಗಿ ತಾ ದಯವಗೈದ ಭರದಿಂದ ತೋರ್ವಯೋಗ ಮಾಯಾಧೀಶ ಸತ್ಸಕಲಾಗಮಾರ್ಚಿತಭೋಗಿಶಯನಸ-ರಾಗಕಪ್ಪನಿಯೋಗಿಸುವರೆ ಮಹಾಗಿರಿಯಿಂದಲಿ ಸಾಗಿ ಬಂದನ 1ಮಂದವಾರದಿ ಮಿಂದು ಮಡಿಗಳನು ಉಟ್ಟು ಕಾಣಿಕೆಯನಿಟ್ಟುಮಂದರಾಧರ ನೀನೆ ಗತಿಯೆಂದು ಬಂದು ಕೈಮುಗಿದುನಿಂದುವಂದಿಸುತ ಬಲ ಬಂದು ಚರಣದ್ವಂದ್ವಸೇವೆಯ ಕುಂದದರ್ಚಿಸಿದಂದುಗವ ಬಿಡಿಸೆಂದು ಪೇಳ್ದರೆ ಮಂದಹಾಸಾನಂದವೀವನು 2ಕಾಸುವೀಸದ ಬಡ್ಡಿ ಭಾಷೆಯನು ಬಿಡನು ನಮ್ಮೊಡೆಯನುದೇಶದೇಶದಿ ಕಷ್ಟ ತರಿಸುವನು ತಾನು ಭಕ್ತರ ಕಾಯುವನುಘಾಸಿಯಾಗದೆ ಧನಿಯ ಹಣವನುಸೂಸಿ ಕರುಣಾರಾಸ ರಾಜ್ಯದವಾಸವಾಗಿಹ ಒಕ್ಕಲಿಗರೆಂಬೀ ಸುಮನದಿಂ ಕೇಶವನ ಪದವ 3ಕಷ್ಟವಿಲ್ಲದೆ ಇಷ್ಟ ದೊರಕುವದು ನೆನೆದುಸುಖದಿಂ ಬಾಳುವದುದೃಷ್ಟಿಯಿಂದಲಿನೋಡುನಮ್ಮ ದೊರೆಯ ಹರಿಯಪರಿಯ ನೀನರಿಯಾಸಿಟ್ಟುಮಾಡುವ ಸ್ವಾಮಿನಿನ್ನೊಳಗಿಟ್ಟುಕೊಂಡರೆ ಕೆಟ್ಟು ಹೋಗುವಿಒಟ್ಟುಗೂಡಿಸಿ ತಟ್ಟನೆಲ್ಲ ಮುಂದಿಟ್ಟುಯಿರೆ ಕೈಗೊಟ್ಟು ಕಾಯುವ 4ಮಾನನಿಧಿ ಭಕ್ತರನು ಮನ್ನಿಸುವ ನಲಿವ ಕರುಣವ ಗೈವಭಾನುಕೋಟಿಪ್ರಕಾಶದಿಂದಿರುವ ಮೆರೆವ ಮಹಾನುಭಾವಏನನೆಂಬೆನು ಆದಿ ಶ್ರೀಲಕ್ಷ್ಮೀನಾರಾಯಣ ತಾನೆ ಕಾರ್ಕಳಸ್ಥಾನ ರಾಜಧಾನಿಯಲಿ ಮೆರೆವನನವರತದಿ ಶ್ರೀನಿವಾಸನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾಲನ ಮೇಲೆ ನಿನ್ನ ಮೋಹವಮ್ಮ ನಾವುಹೇಳಿದ ಮಾತು ನೀ ಕೇಳೆಯಮ್ಮ ಪ.ಚಿಣ್ಣಗಿಣ್ಣನೆಂಬುವÀ ಬಣ್ಣ ಬ್ಯಾಡೆ ನಮ್ಮಬೆಣ್ಣೆ ಕದ್ದು ಮೆದ್ದ ಕಟವಾಯಿ ನೋಡೆಸಣ್ಣಗಿಣ್ಣವನಿವನಾದರೆ ಪರರ ಚೆಲುವಹೆಣ್ಣಿನೊಳಗಾಡುವನೆ ಕುವರ 1ಪುಟ್ಟಗಿಟ್ಟನೆಂಬುವ ಮಾತು ಬೇಡೆ ನಮ್ಮರಟ್ಟು ಮಾಡುವ ಜನರೊಳು ನೋಡೆಸಿಟ್ಟುಗಿಟ್ಟಿಗೆ ಕೃಷ್ಣ ಅಳುಕನಮ್ಮ ನಮ್ಮಬಟ್ಟ ಕುಚವಿಡಿವ ದಿಟ್ಟನಮ್ಮ 2ಚಿಕ್ಕಗಿಕ್ಕವನೆಂಬುದುರೂಢಿಕಾಣೆ ನಮ್ಮಪಕ್ಕವ ಬಿಡನು ಬಾಲಕಾರ್ಯವೇನೆಅಕ್ಕೊ ಇಕ್ಕೊ ಎಂಬುವನ್ನಕ್ಕ ಕಳ್ಳ ನಮ್ಮಠÀಕ್ಕಿಸೆದ್ದೋಡುವ ಸಿಕ್ಕುವನಲ್ಲ 3ಕಕ್ಕುಲಾತಿತೋರೆ ನಮ್ಮ ಮನೆಗಳ ಪೊಕ್ಕು ಸಣ್ಣಮಕ್ಕಳಾಟವಾಡದೆಮ್ಮ ನೋಡಿ ನಕ್ಕುತಕ್ಕೈಸಿ ಓಡುವ ಮಹಾಮಾಯಗಾರನಮ್ಮದಕ್ಕಲೀಸ ಪತಿವ್ರತಧರ್ಮಜಾರಕೃಷ್ಣ4ಕೂಸುಗೀಸು ಇನ್ನೆನ್ನಬಾರದವಗೆಭವಘಾಸಿಯ ತಪ್ಪಿಸುವ ಎಂದಿಗೆಮಗೆಬೇಸರ ಗೀಸರದೆ ನೆನೆವರ ಒಡೆಯಲಕ್ಷ್ಮೀಶ ಪ್ರಸನ್ವೆಂಕಟ ರಂಗಯ್ಯ 5
--------------
ಪ್ರಸನ್ನವೆಂಕಟದಾಸರು
ಸುಪುತ್ರನು ಎಂಬುವನಿವನುಸುಪುತ್ರನನು ಹೇಳುವೆ ನಾನುಪತಂದೆ ತಾಯಿಗಳ ಪೂಜಿಸುವಬಂಧುಗಳಿಗೆ ಬಹು ಪ್ರಿಯನಾಗಿ ಇರುವಎಂದಿಗೂ ಕೆಟ್ಟದ್ದ ನುಡಿಯ ಆವ-ಬಂದವರಿಗೆಲ್ಲ ಅನ್ನವ ಕೊಡುವ1ಕುಲದ ಆಚಾರವ ತಪ್ಪಿಸನುಹಲವು ವ್ರತಗಳನವ ತಾ ಬಿಡನುಬಲು ತಿಳುವಳಿಕೆಯನು ತಿಳಿದಿಹನುನೆಲೆಯಿಲ್ಲದ ತಪಮಾಡುವನು2ಅಣ್ಣ ಅತ್ತಿಗೆಗೆ ಉತ್ತರಕೊಡನುಪುಣ್ಯ ಕಥೆಯನು ಕೇಳ್ವುದ ಬಿಡನುತನ್ನ ದೇಹವ ಪೋಷಣೆ ಮಾಡನುಭಿನ್ನ ಬುದ್ಧಿಯನೆಂದಿಗು ತೋರನು3ತತ್ವ ವಿಚಾರವೆಂಬುದೆ ಜೀವನಿತ್ಯಅನಿತ್ಯವ ತಿಳಿದು ಅವನೀವಸತ್ಪುರುಷರೊಳು ಒಡನಾಡುವಎಲ್ಲಮಿಥ್ಯೆಎಂದರಿವ4ಸಂಶಯ ಸಂಕಲ್ಪನೀಗಿಧ್ವಂಸ ಮಾಡಿ ವಾಸನೆಯೆಲ್ಲವಶಿಂಶುಮಾರದ ಚಕ್ರಕೆ ಹೋಗಿಹಂಸ ಚಿದಾನಂದ ಗುರುವಾಗಿ5
--------------
ಚಿದಾನಂದ ಅವಧೂತರು