ಎಂತುನುತಿಪೆ ನಾನು-ಈ ಜಗ | ದಂತರ್ಯಾಮಿಯನು ಪ
ಸಂತತ ವಾಙÁ್ಮನ ಅ.ಪ.
ಸಾಸಿರ ಮುಖದವನ-ಅವಯವ-ಸಾಸಿರವುಳ್ಳವನ
ಸಾಸಿರ ಪೆಸರವನ-ರೂಪಿ ಸಾಸಿರವಾಗಿಹನ
ಮೀಸಲಳಿಯದಂತೀ ಸಚರಾಚರ
ವಾಸಿಯಾದ ಶ್ರೀ ವಾಸುದೇವನು1
ಜಗವನು ನಿರ್ಮಿಸುವ-ಬೊಮ್ಮನು-ಮಗನೆಂದೆನಿಸಿರುವ
ಬಗೆಯುವದೀಜಗವ-ಜಠರದಿ-ನುಸುಳಿಸಿಕೊಂಡಿರುವ
ಮಗುಳಿದ ನಳಿಯುವ
ನಗಚಾಪರಮೊಮ್ಮಗನೆಂಬುವರೀ | ಯಗಣಿತ ಮಹಿಮನ 2
ನಿಗಮವ ಪೆತ್ತವನ-ಬೊಮ್ಮಗೆ-ನಿಗಮವನಿತ್ತವನ
ನಿಗಮೋದ್ಧಾರಕನ-ನಿತ್ಯದಿ-ನಿಗಮಗೋಚರನ
ಬಗೆಬಗೆಯೋಗಿಗಳ ಧ್ಯಾನಕೆನುಗಳಿದ ಶ್ರೀಪದ
ಯುಗಳಾಂಬುಜನನು 3
ಮಾಯಾಧೀಶ್ವರನ-ದೇವನಿ-ಕಾಯಾರಾಧಿತನ
ಕಾಯಜ ಸುಂದರನಾ-ಜೀವನಿ-ಕಾಯಕೆ ಮಂದಿರನಾ
ಮಾಯಾಕಾರನಿವ ನಾಯವ ನರಿಯದೆ
ದಾಯಗೆಟ್ಟರ ನ್ಯಾಯದಿ ಮುನಿಗಳು 4
ಪರಮಪದದೊಳಿಹನಾ
ಪುನರಪಿ- ತರಣಿಯೊಳಿರುತಿಹನ
ಶರನಿಧಿ ಮಂದಿರನಾ-ಶ್ರೀ ಪುಲಿಗಿರಿಯೊಳು ನಿಂದಿಹನ
ನಿರುತವು ತನ್ನಯ ಚರಣವ ನಂಬಿದ
ಶರಣರ ಪೊರೆಯುವ-ವರದ ವಿಠಲನಾ 5