ಒಟ್ಟು 25 ಕಡೆಗಳಲ್ಲಿ , 15 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧುರಾಪುರದಿಂದ ಎಂದಿಗೆ ಬರುವಿಯೊ ಕೃಷ್ಣಾ ಮಧುರಾಪುರದ ಬಾಲೆಯರು ಬಲು ಮೋಸಗಾರರು ಪ. ಗೋಕುಲದ ನಾರಿಯರು ನಾವು ಏಕವಾಗಿ ಬರುವೆವು ಅನೇಕ ಬಗಿಯ ಸುಖದಿಂದಾ ಗೋಪಿಯ ತಂದಾ ಅ.ಪ. ಯೆಂದಿಗೆ ನಿನ್ನ ಮುಖಾರವಿಂದವ ನೋಡುವೆವೋ ಅಂದಿಗೆ ಸುಖವೋ ಮಾಧವ ಮಂದರೊದ್ಧರನೆ ಮಾವ ಕಂಸನ ಕೊಂದು ಸಿಂಧುರನಯನನೆ ನೀ ಬೇಗ ಬರಬೇಕೆಂದು ನಾವು ಬೇಡುವೆವು ಬಂದು 1 ಮಧುವನದಲ್ಲಿ ನಿನ್ನಾ ಮಧುರ ಸ್ವರವನ್ನು ಕೇಳಿ ಮದನ ತಾಪಕೆಮ್ಮ ಮರುಳು ಮಾಡಿಸಿ ಮುರಲಿ ನುಡಿಸಿ ಆಧರಾಮೃತ ಪಾನವನ್ನೇ ಮಾಡಿಸಿದ ನಿನ್ನ ಮಹಿಮೆಯನ್ನು ತೋರಿದಿ2 ಯೆಷ್ಟು ಮೊರೆ ಪೊಕ್ಕಾರು ಒಂದಿಷ್ಟು ದಯವ್ಯಾಕೆ ಬಾರದೊ ನಿನ್ನ ಬಿಟ್ಟು ಒಂದರಘಳಿಗಿರಲಾರೆವು ನಾನು ಪ್ರಾಣನಾಯಕನೇ ಎನ್ನ ಪ್ರಾಣದೊಲ್ಲಭನೆ ಕೇಳೊ ಸರ್ವಪ್ರಾಣಿಗಳಿಗೆ ಪ್ರೇರಕನೆ ನಮ್ಮ ಕಾಳಿಮರ್ಧನ ಕೃಷ್ಣನು 3
--------------
ಕಳಸದ ಸುಂದರಮ್ಮ
ಮಾನಿನಿ ಭೃಂಗ ಪಾಡಿ ಪಾವನವಾದ ಬಗಿಯ ಪ. ಹಿಂಡು 1 ಏಳು ಸುತ್ತಿನ ಕೋಟೆಬಾಳೆ ನಿಂಬೆÉ ದಾಳಿಂಬ ವನ ಎಲೆತೋಟದಾಳಿಂಬವನ ಎಲೆ ತೋಟದೊಳಗಿನ್ನುಸೀಳಿ ಕುಣಿಯೋ ಕಪಿಹಿಂಡು2 ಕಾಣಿ ಧರೆಮೇಲೆ3 ಆಲ ಅಶ್ವತ್ಥ ಪಲಾಶ ಬಾರಿಯ ವೃಕ್ಷಸಾಲು ಮಂಟಪವು ಸೊಬಗಿಲೆಸಾಲು ಮಂಟಪವು ಸೊಬಗಿಲೆ ರಂಗಯ್ಯವಾಲಗೈವ ವನವಿದು4 ನೀಲ ಮೇಘಶಾಮ ಬಾಲಿಕೆರಿಂದಲಿಲೀಲೆ ಮಾಡುವ ಸರೋವರಲೀಲೆ ಮಾಡುವ ಸರೋವರರಮಿಯರಸು ಲಾಲಿ ಆಡುವ ಮಣಿಗಳು5
--------------
ಗಲಗಲಿಅವ್ವನವರು
ಹರಿ ನಿನ್ನ ನಾಮದ | ಸ್ಮರಣೆಯ ನಾನು || ನಿರುತವು ಮಾಡುವೆ | ಪೊರೆಯೆನ್ನ ನೀನು ಪ ಶರಣರ ಪೊರೆವ| ಪರಮ ಪಾವನನು | ಕರುಣಾಳು ನಿನ್ನಯ | ಶರಣನಾಗಿಹೆನುಅ.ಪ ಕರಿರಾಜಗಿತ್ತೆ ನೀ | ವರ ಮುಕ್ತಿಪಥವ || ತರಳನಿಗೊಲಿದಿತ್ತೆ | ವರಧ್ರುವಪದವ 1 ಹರಿಯನು ತೋರೆಂದು | ಗರ್ಜಿಸಿ ಜರೆದ|| ದುರುಳನ ಬಗಿಯುತ್ತ| ತರಳನಿಗೊಲಿದ 2 ಕಾಮಿತಾರ್ಥವನಿತ್ತೆ| ಪ್ರೇಮದೊಳನಿಶ 3 ಮರಣದ ಸಮಯದಿ | ಕರೆದಜಾಮಿಳಗೆ|| ಪರಮಪದವನಿತ್ತು | ಕರುಣದಿ ಪೊರೆದ 4 ಅರಿತಾದರು ಮನ| ಕ್ಕರಿಯದೆ ಗೈದ || ದುರಿತಂಗಳಿರೆ ಪರಿ| ಹರಿಸೆಂದು ಸತತ 5 ನೀನಲ್ಲದೆನ್ನನು | ಪೊರೆಯುವರಿಲ್ಲ || ನಿನ್ನ ಸೇವೆಯ ಮಾಡ | ಲರಿಯೆ ನಾನಲ್ಲ6 ಇಹಪರಸುಖವಿತ್ತು | ಮುಕ್ತಿಯನೀವ || ಮಹಿಮನೆಂದರಿತಿಹೆ | ಭಕ್ತಸಂಜೀವ 7
--------------
ವೆಂಕಟ್‍ರಾವ್
ಹರಿಹರರಿಬ್ಬರು ಒಲಿದು ಮಾತಾಡಲು ಕೊಳವ ಕಂಡಲ್ಲಿ ಎಲೆತೋಟ ಕೊಳವ ಕಂಡಲ್ಲಿ ಎಲೆತೋಟದೊಳಗಾಡುವ ಹೆಣ್ಣಿನ ಕಂಡು ಹರ ಮರುಳಾದ ಪ. ತೆಂಗಿನ ತಿಳಿಗೊಳ ನಿಂಬೆ ಕಿತ್ತಲೆ ಬಾಳೆ ಹೊಂಬಾಳೆ ಅಡಿಕೆ ಬನಗಳು ಹೊಂಬಾಳೆ ಅಡಿಕೆ ಬನದೊಳಗಾಡುವ ರಂಭೆಯ ಕಂಡು ಹರ ಮರುಳಾದ 1 ಅರಿಸಿನ ತಿಳಿಗೊಳ ಹಲಸು ಕಿತ್ತಲೆ ಬಾಳೆ ಬೆರಸಿ ಮಲ್ಲಿಗೆಯ ಬನದೊಳು ಬೆರಸಿ ಮಲ್ಲಿಗೆಯ ಬನದೊಳಗಾಡುವ ಸರಸಿಜಾಕ್ಷಿಯ ಕಂಡು ಹರ ಮರುಳಾದ 2 ಮೊಲ್ಲೆ ಮಲ್ಲಿಗೆ ಜಾಜಿ ಅಲ್ಲೆ ಪಾರಿಜಾತ ನಿಲ್ಲದೆ ನುಡಿವೊ ಗಿಳಿಗಳು ನಿಲ್ಲದೆ ನುಡಿವೊ ಗಿಳಿಗಳು ನುಡಿಗಳ ಚೆಲುವೆಯ ಕಂಡು ಹರ ಮರುಳಾದ 3 ಸೋಗೆ ನವಿಲುಗಳು ಗಿಳಿಹಿಂಡು ತುರುಗಳು [ಕೋಗಿಲೆ ನಲಿಯೊ ಪಂಸೆಗಳು] [ಕೋಗಿಲೆ ನಲಿಯೊ ಪಂಸೆಯೊಳಾಡುವ] ಸೊ- ಬಗಿಯ ಕಂಡು ಹರ ಮರುಳಾದ 4 ಚೆಲುವ ಚರಣಗಳು ಜಂಘೆ ಜಾನೂರು ಕಟಿ ವಳಿಪಂಙÂ್ತ ಜಠರ ವಕ್ಷಸ್ಥಳವು ವಳಿಪಂಙÂ್ತ ಜಠರ ವಕ್ಷಸ್ಥಳಗಳ ಹೆಣ್ಣಿನ ಸ್ತನವ ವರ್ಣಿಸಲಾರಿಗಳವಲ್ಲ 5 ಕಾಲುಂಗುರ ಅಕ್ಕಿ ಪಿಲ್ಯ ಜೋಡುಮೆಂಟಿಕೆಗಳು ವೀರಮುದ್ರಿಕೆಯು ಕಿರುಪಿಲ್ಯ ವೀರಮುದ್ರಿಕೆಯು ಕಿರುಪಿಲ್ಯ ನಿಟ್ಟಿದ್ದ ಬಾಲೆಯ ಕಂಡು ಹರ ಮರುಳಾದ 6 ನಡು ಬಳುಕಿ ಮುಡಿ ಸಡಲಿ ಉಡಿಗಂಟೆ ಹೊಳೆಯುತ ಕೊರಳ ಪದಕ ಹಾರ ಒಲೆಯುತ ಕೊರಳ ಪದಕ ಹಾರ ಒಲೆಯುತ ಹೆಣ್ಣಿನ ಇರವ ವರ್ಣಿಸಲಾರಿಗಳವಲ್ಲ 7 ಹಸಿರು ಕುಪ್ಪಸಗಳು ಮುಂಗೈನಗಗಳು ನಳಿತೋಳುಬಂದಿ ಬಳೆಗಳು ನಳಿತೋಳುಬಂದಿ ಬಳೆಗಳು ಹೆಣ್ಣಿನ ಥಳುಕು ವರ್ಣಿಸಲಾರಿಗಳವಲ್ಲ8 ಹಾರ ಹೀರಾವಳಿ ಕೇಯೂರ ಕಂಕಣ ತೋಳ ಭಾಪುರಿ ಭುಜಕೀರ್ತಿ ತೋಳ ಭಾಪುರಿ ಭುಜಕೀರ್ತಿನಿಟ್ಟಿಹ ಇಂದುಮುಖಿಯ ಕಂಡು ಹರ ಮರುಳಾದ 9 ಅರಳೋಲೆ ಮೂಗುತಿ ಹಣೆಯ ಹಚ್ಚೆಯ ಬೊಟ್ಟು ಕದಪು ಕನ್ನಡಿಯು ಕುಡಿಹುಬ್ಬು ಕದಪು ಕನ್ನಡಿಯು ಕುಡಿಹುಬ್ಬು ಹೆಣ್ಣಿನ ಬೆಳಕÀ ವರ್ಣಿಸೆ ಹರಗಳವಲ್ಲ 10 ನೊಸಲು ಕಸ್ತೂರಿಗಳು ಎಸೆವ ಬೈತಲೆಗಳು ಕುರುಳು ಕೂದಲುಗಳು ಕುಂತಲಗಳು ಕುರುಳು ಕೂದಲುಗಳು ಕುಂತಲಗಳು ಹೆಣ್ಣಿನ ಜಡೆಯ ವರ್ಣಿಸಲಾರಿಗಳವಲ್ಲ 11 ಕುಂಭಕುಚದ ಮೇಲೆ ಗಂಧವ ಪೂಸಿದಳೆ ಅಂದಕೆ ಹಿಡಿದಳೆ ಕಮಲವ ಅಂದಕೆ ಹಿಡಿದಳೆ ಕಮಲವ ಕಡೆಗಣ್ಣ ಚಂದ ಬಂದ್ಹರನ ಕಂಗೆಡಿಸಿತು 12 ತÉೂೀರ ಕುಚದ ಮೇಲೆ ಸಾದು ಗಂಧವ ಪೂಸಿ ಆಯಕೆ ಹಿಡಿದಳೆ ಕಮಲವ ಆಯಕೆ ಹಿಡಿದಳೆ ಕಮಲವ ಕಡೆಗಣ್ಣ ಢಾಳ ಬಂದ್ಹರನ ಕಂಗೆಡಿಸಿತು 13 ಕಕ್ಕಸ ಕುಚದಮೇಲೆ ಅಷ್ಟಹಾರಗಳು ಹೊಳೆಯೆ ಹಸ್ತಕಟ್ಟುಗಳು ಹೊಳೆಯುತ ಹಸ್ತಕಟ್ಟುಗಳು ಹೊಳೆವುತ್ತ ಹೆಣ್ಣಿನ ದೃಷ್ಟಿ ಬಂದ್ಹರನ ಕಂಗೆಡಿಸಿತು 14 ಅಮ್ಮಾಲೆ ಆಡೋಳು ಒಮ್ಮೊಮ್ಮೆ ನೋಡೋಳು ತÀನ್ನೊಳಗೆ ತಾನು ನಗುವೋಳು ತÀನ್ನೊಳಗೆ ತಾನು ನಗುವೋಳು ಬೊಮ್ಮನ ಮಗನ ಮರುಳು ಮಾಡಿ ನಡೆದಳು 15 ನೋಡಳು ನುಡಿಯಳು ಹರನ ಕೂಡೆ ಮಾತಾಡಳು ಓಡುತ್ತ ಚೆಂಡ ಹೊಯ್ವಳು ಓಡುತ್ತ ಚೆಂಡ ಹೊಯ್ವವೇಗವ ಕಂಡು ಮೂರುಕಣ್ಣವನು ಮರುಳಾದ 16 ಕೆದರಿದ ಕೆಂಜೆಡೆ ಕೊರಳ ರುದ್ರಾಕ್ಷಿ ಕರದಿ ತ್ರಿಶೂಲ ಹೊಳೆಯುತ ಕರದಿ ತ್ರಿಶೂಲ ಹೊಳೆಯುತ ಹೆಣ್ಣಿನ ನುಡಿಸುತ್ತ ಹಿಂದೆ ನಡೆದನು 17 ರೂಢಿಗೊಡೆಯನ ಕೂಡೆ ಆಡುವ ವನಿತೆ ನೋಡೆ ನೀ ಎನ್ನ ಕಡೆಗಣ್ಣ ನೋಡೆ ನೀ ಎನ್ನ ಕಡೆಗಣ್ಣ ಹೆಣ್ಣಿನ ಕಾಡುತ ಹಿಂದೆ ನಡೆದನು 18 ಪೀತಾಂಬರದ ಮುಂಜೆರಗನು ಕಾಣುತ್ತ ಸೋತೆ ಬಾರೆಂದು ಕರೆದನು ಸೋತೆ ಬಾರೆಂದು ಕರೆದ ಧ್ವನಿಯ ಕೇಳಿ ಕಾಂತೆ ಬನದೊಳು ಮರೆಯಾದಳು 19 ಮಂಗಳ ಮಹಿಮಗೆ ಅಂಜಿಕೆ ಇಲ್ಲದೆ ಗಂಗೆ ಪೊತ್ತವನ ತಿರುಗಿಸಿದ ಗಂಗೆಪೊತ್ತವನ ತಿರುಗಿಸಿದ ತನ್ನಯ ಮುಂದಣ ಅಂದವೆಲ್ಲ ಇಳುಹಿದ 20 ಸೃಷ್ಟಿಯನೆಲ್ಲ ಹೊಟ್ಟೆಯೊಳಿಂಬಿಟ್ಟು ವಟಪತ್ರ ಶಯನನಾಗಿ ಮಲಗಿದ ವಟಪತ್ರ ಶಯನನಾಗಿ ಮಲಗಿದ ಉಡುಪಿನ ಕೃಷ್ಣನೆಂದ್ಹರನು ತಿಳಿದನು 21 ಭೂಮಿಯನೆಲ್ಲ ಈರಡಿ ಮಾಡಿದ ಆಲದೆಲೆ ಮೇಲೆ ಮಲಗಿದ ಆಲದೆಲೆ ಮೇಲೆ ಮಲಗಿದ ಶ್ರೀಹಯ- ವದನನೆಂದು ಹರ ತಿಳಿದನು 22
--------------
ವಾದಿರಾಜ
ಮೀಸಲ ಗುಣದೆಯರನೆಲ್ಲ ಮೋಸಗೈಸಿ ಕೊಳಲನೂದಿರಾಸಕ್ರೀಡೆ ಮಾಡಿದಾಭಾಸಬಹಳಯ್ಯಾ ಪ.ನೀನೆ ಎಂದವರೆದೊಡ್ಡ ಕಾನನದಿ ಬಿಟ್ಟು ಒಬ್ಬಮಾನಿನಿಯಜರಿದುನಡೆದಿ ಇನ್ನೇನು ಉಚಿತವಯ್ಯ ಕೃಷ್ಣ1ಎಳೆಯಬಳ್ಳಿ ಗಿಳಿಪಕ್ಷಿನಳಿನನಾಭನ ಕಂಡಿರೇನನಳಿನಮುಖಿಯರೆಲ್ಲ ತಿರುಗಿ ಬಳಲಿ ನಿಂತಾರೊ ಕೃಷ್ಣ2ಸೂಸು ಮಲ್ಲಿಗೆ ಸಂಪಿಗೆ ಜಾಜಿ ಹಾಸಿಕೆಯ ಮಾಡಿ ಅವಳಸೋಸುಪೂರೈಸುವ ಬಗಿಯು ಶ್ರೀಶ ರಮಸಿದಿಯೋ ಕೃಷ್ಣ3ಚಂದ್ರವದನೆಗೆ ಅಂಗದಲ್ಲಿ ಗಂಧ ಕಸ್ತೂರಿ ಕುಂಕುಮವಿಟ್ಟುಮಂದಾರಮಲ್ಲಿಗೆಯ ಮುಡಿಸಿ ಆನಂದ ಬಡಿಸಿದಿಯೊ ಕೃಷ್ಣ4ಇಂದಿರೇಶನ ಕಾಣದಲೆ ನೊಂದವರ ಮ್ಯಾಲೆ ಪರಿಮಳತಂದು ಹಾಕಿದ ವಾಯು ಪಾಪಿ ಎಂದು ಬಯ್ಯುತ ಕೃಷ್ಣ 5ತಂದು ಕನ್ನಡಿ ನಿಲ್ಲಿಸಿ ಒಳಗೆ ಚಂದ್ರನ್ಹೊಗಿಸಿಮ್ಯಾಲೆಕಲ್ಲುತಂದು ಹಾಕಿ ಅವನ ನಾವು ಕೊಂದರೆ ಪಾಪಿಲ್ಲ ಎನುತ6ಬೆಂದವರ ಮ್ಯಾಲೆ ಪರಿಮಳ ಚಂದ್ರನುಡಿಸಿದ ಕಂದನಿವನುಹಿಂದಿನ ವೈರವೇ ಸವತಿ ಇಂದಿನವನೆಂದು ಭವಿತ 7ಮಲ್ಲಿಗೆ ಸಂಪಿಗೆ ಜಾಜಿ ಚಲ್ವ ತುಳಸಿ ಯಮುನಾದೇವಿಫುಲ್ಲನಾಭನ ಕಂಡಿರೇನ ನಲ್ಲೆಯರು ಹಲಬುತ ಕೃಷ್ಣ 8ನೋಡುನೋಡುಕೆಳದಿ ಇಲ್ಲೆ ಜೋಡು ಹೆಜ್ಜಿ ತೋರುತಾವಮಾಡಿ ಕಪಟದಿ ರಂಗನ ಒಬ್ಬಳು ಓಡಿಸಿ ಒಯ್ದಾಳೆ ಎನುv 9ನಗಧರಒಬ್ಬ ಬಾಲೆಯಳ ಜಿಗಿದು ಎತ್ತಿದ ಹೆಜ್ಜೆ ನೋಡಿಸಿಗಲಿ ಅವಳು ರಂಗನ ಬೆರೆದ ಬಗಿಯ ತೋರೆನುತ ಕೃಷ್ಣ 10ಹಿಂಡುನಾರಿಯರೆಲ್ಲ ಕೂಡಿಕೊಂಡು ಅವಳ ಮಂಡೆಕುಕ್ಕಿಪುಂಡರಿಕಾಕ್ಷನ ತೋರೆದಿಂಡೆಮನುಜಳೆ ಎನುತ11ಇಷ್ಟು ನಾರಿಯರೊಳು ರಾಧೆ ಶ್ರೇಷ್ಠಳೆಂದು ಗರುವಿಸ್ಯಾಳುಅಷ್ಟರೊಳಗೆ ಅವಳ ನೀನು ಬಿಟ್ಟು ಪೋಗಿದ್ಯೊ ಕೃಷ್ಣ 12ಗಲ್ಲಕುಕ್ಕಿ ಅಂಜಿ ಅವಳು ಎಲ್ಲ ನಾರಿಯರಿಗೆ ಎರಗಿಫುಲ್ಲನಾಭಮಾಡಿದಪಾಟನಎಲ್ಲಿ ಉಸಿರಲೆ ಎನುತ13ವಿಧಿಗೆ ದಯವಿಲ್ಲ ನಮ್ಮ ಚದುರ ರಂಗನ ಅಗಲಿಸಿತುಮದನಬಾಣ ನೆಟ್ಟಿತೆಂದು ಸುದತೆಯರು ಹಲಬುತ ಕೃಷ್ಣ14ಶ್ರೀಶ ರಾಮೇಶನ ಯಾವ ದೇಶದಲ್ಲಿ ಹುಡುಕಲೆಂದುಕ್ಲೇಶಬಡಲು ಕೆಲದೆಯರೆಲ್ಲ ಸರ್ವೇಶ ಬಂದೆಂದ ಪಾರ್ಥ15
--------------
ಗಲಗಲಿಅವ್ವನವರು
ಶ್ರೀಕಾಂತೊಲಿದ ದಾಸ | ರೀ ಕಲಿಯುಗದಲ್ಲಿ |ಲೇಖಾಂಶರಹುದೇ ತಂಗೀ ||ಶೋಕಬ್ಯಾಡೆಲೆ ನರಲೋಕ ಉಳಿದರೆಂದು |ಈ ಕಂಭದೊಳಗಿಹರೇ ಹೇ ನೀರೇ ಪಆ ಸೇತೂ ಮೊದಲಾದ ಹಿಮಾಶೈಲಪರಿಯಂತ|ಸೂಸಿಹದಿವರ ಕೀರ್ತಿ ||ಯೇಸು ಬಗಿಯಲಿಂದ ಸೋಸಿ ನೋಡಿದರನ್ನ |ಪಾಸಟಿ ಯನಿಸದಲ್ಲೇ | ಯೇ ನಲ್ಲೇ 1ನರಮೋಹನಾರ್ಥವಾದರು ಲೌಕೀಕೆಂಬುದೂ |ಅರಿಯಾರು ಸ್ವಪ್ನದಲ್ಲೀ ||ಧರಿಯೊಳಖಿಲ ಸಜ್ಜನರು ಪರೀಕ್ಷಿಸಿಹರು |ಬರಿದೆ ಸ್ತವನವಲ್ಲಾವೆ | ಕೇಳಲವೇ2ಹರಿಕೃಪಿನೋಡುಇವರಿಗೆ ಜನರು ಎಷ್ಟು |ಜರಿದಾರು ಮನ್ನಿಪರೂ ||ಕರಣತ್ರಯದ ಶುದ್ಧರೆರಡು ಮಾರ್ಗವ ಬಲ್ಲ |ವರು ನಿತ್ಯಾಚರಿಸಿದರೂ | ಹಿರಿಯಾರೂ 3ಇವರಂದ ನುಡಿಯನು ಭವಕೆ ತಂದರೆ ಲೇಶ |ಭವದುಃಖವಾಗದಲ್ಲಾ ||ಜವದೊರವದು ಮುಕ್ತಿ ಜವನ ಬಾಧಿಲ್ಲಾಶು |ಕವಿಕುಲ ತಿಲಕರಿಗೇ | ನೀ ಯರಗೇ 4ಖಳಹ ಪ್ರಾಣೇಶ ವಿಠ್ಠಲನ ಚರಿತೆ ಪದಗಳಲಿ ಬಣ್ಣಿಸಿ ಸಂತತೀ |ನಿಲಸಿ ಜ್ಞಾನಿಗಳನ್ನು ತಲಿ ತೂಗಿಸಿದರು ಪೇ |ಳಲು ಎನ್ನ ಮತಿ ಸಾಲದೂ | ಸತ್ಯವಿದೂ 5
--------------
ಪ್ರಾಣೇಶದಾಸರು