ಹಂಚಿನ ಇದಿರಲಿ ಹಲ್ಲನು ತೆಗೆಯಲುಮಿಂಚುವ ಕನ್ನಡಿಯಾದೀತೆ ? ಪ.ಮಿಂಚಿನ ಬೆಳಕಲಿ ದಾರಿಯ ನಡೆದರೆಮುಂಚುವ ಊರಿಗೆ ಮುಟ್ಟೀತೆ ? ಅಪಬಾಲರ ಭಾಷೆಯ ನಂಬಿ ನಡೆದರೆಶೀಲದ ಕೆಲಸಗಳಾದೀತೆ ?ಜೋಲುವ ಹೋತಿನ ಮೊಲೆಗಳ ಹಿಂಡಲುಹಾಲಿನ ಹನಿಯದು ಹೊರಟೀತೆ ?ಕಾಲುವೆ ಬಚ್ಚಲಕುಣಿ ನೀರಿಗೆ -ಘನಬಾಳೆಯ ತೋಟವು ಆದೀತೆ ?ಮೇಲುಬಣ್ಣಾದಾ ಆಲದ ಹಣ್ಣುನಾಲಿಗೆಸವಿಯನು ಕೊಟ್ಟೀತೆ ? 1ಭಾಷೆಯ ನುಡಿಗಳಿಗಾಸೆ ಮಾಡೆ ಮನದಾಸೆಯ ಕಾರ್ಯಗಳಾದೀತೆ ?ದೋಸೆಯ ಛಿದ್ರದಿ ಆರಿಸೆ ಕಾಳಿನರಾಶಿಯು ಹಸನವು ಆದೀತೆ ?ಕಾಸಿ ಕಬ್ಬಿಣವ ಗಟ್ಟಿ ಕೂಡಿಟ್ಟರೆಮಾಸದ ಮನೆ ಬದುಕಾದೀತೆ ?ಕಾಸಾರದೆದುರಿಗೆ ಹರಿಕಥೆ ಹೇಳ್ದರೆಸೋಸಿ ಕೇಳ್ದು ತಲೆದೂಗೀತೆ ? 2ಮಿಥ್ಯಾವಚನಿಯ ಮಾತನು ನಂಬಲುಹೊತ್ತಿಗೆ ಅದು ಬಂದೊದಗೀತೆ ?ಸತ್ತವನೆದುರಿಗೆ ಸುತ್ತಲು ಕುಳಿತುಅತ್ತರೆ ಆ ಹೆಣ ಕೇಳೀತೆ ?ನಿತ್ಯನಪುಂಸಕನೈದಲು ತರುಣಿಗೆಚಿತ್ತ ಸುಖವು ಸೂರಾದೀತೆ ?ಕುತ್ತಿಗೆಗೊಯ್ಕನ ಕಾಲು ಹಿಡಿದರೆಹತ್ಯದೊಳ್ಹೇಸಿಕೆಹುಟ್ಟೀತೆ ?3ಬೋರಗಲ್ಲಿನ ಮುಂದೆ ಬಡತನ ಹೇಳಲುಸಾರಸುಖಕ್ಕನುವಾದೀತೆ ?ಚೋರನು ಚಂದ್ರಗೆ ಕೈಮರೆ ಮಾಡಲುಚೌರ್ಯಕೆ ಕತ್ತಲು ಒದಗೀತೆ ?ನೀರಿಲ್ಲದ ಕೆರೆಯೊಳಗೆ ಮತ್ಸ್ಯದಾಹಾರಿಗೆ ಮೀನವು ದೊರಕೀತೆಕಾರಣವಿಲ್ಲದ ಲೌಕಿಕ ಕಥೆಯಿಂಘೋರನರಕ ಭಯ ತಪ್ಪೀತೆ ?4ಬೆಟ್ಟಕೆ ಕಲ್ಲನು ಹೊತ್ತೊಯ್ದೊಗೆಯಲುಹೊಟ್ಟೆಗೆಓದನ ಸಿಕ್ಕಿತೆ ?ಹುಟ್ಟು ಬಂಜೆಗೆ ಹಡೆಯುವ ವ್ಯಥೆ ಹೇಳಲುಹೊಟ್ಟೆಯಲಿ ಕಳವಳ ಹುಟ್ಟೀತೆ ?ಕೆಟ್ಟ ಬಯಸುವರಿಗೆ ಮೃಷ್ಟಾನ್ನವುಣಿಸಲುಕೆಟ್ಟ ಮಾತು ಅದು ಬಿಟ್ಟೀತೆ?ದಿಟ್ಟ ಪುರಂದರವಿಠಲರಾಯನಬಿಟ್ಟರೆ ಸದ್ಗತಿಯಾದೀತೆ? 5