ಪಾಲಯ ಕೃಪ ಆಲಯ ಬಾಲಗೋ
ಪಾಲ ಬೇಗ ಪಾಲಿಸು ಪಿಡಿದೆನ್ನ ಪ
ನಿತ್ಯನಿರ್ಮಲ ಸತ್ಯಚರಿತ ದೇವ
ಸತ್ಯಭಾಮೆಯ ಪ್ರಿಯನಾಥ ಸ್ವಾಮಿ
ನಿತ್ಯನಿಗಮ ವೇದವಿನುತ ಜಗ
ಕರ್ತು ಕಾರುಣ್ಯರಸಭರಿತ ಆಹ
ಭಕ್ತಾಂತರ್ಗತ ಕಾಲಮೃತ್ಯುಸಂಹರ ಸ
ಚ್ಚಿತ್ತಾನಂದ ಹರಿ ಸತ್ಯ ಸರ್ವೋತ್ತಮ 1
ದಿನಮಣಿಕೋಟಿಪ್ರಭಾಕರನುತ
ವನಜಸಂಭವ ಸುರನಿಕರ ದಿವ್ಯಗುಣ
ಘನನಿಧಿಗಂಭೀರ ಜೀಯ
ಅನುಪಮ ಭೂಗಿರಿವರ ಆಹ
ಮನಸಿಜಪಿತ ಮನುಮುನಿಮನಮಂದಿರ
ತನುತ್ರಯದಲಿ ನಿನ್ನ ನೆನಹನು ಪಾಲಿಸು 2
ಶ್ಯಾಮಸುಂದರ ಕೋಮಲಾಂಗ ಭಕ್ತ
ಕಾಮಿತಫಲಪ್ರದಪುಂಗ ದುಷ್ಟ
ಸೋಮಕಸುರಮದಭಂಗ ಪುಣ್ಯ
ನಾಮಕ ಸುಜನತರಂಗ ಆಹ
ತಾಮಸ ಪರಿಹರ ಭೂಮಿಜನಕ ಜಯ
ಕ್ಷೇಮ ಕರುಣಿಸು ಮಮಸ್ವಾಮಿ ಶ್ರೀರಾಮಯ್ಯ3