ಒಟ್ಟು 18 ಕಡೆಗಳಲ್ಲಿ , 13 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ಕೃಪೆಯಿಂದಲಿ ದೊರೆದಿತು ಯನಗೀ ಶಿರಿಕರ ತಂಬೂರಿಪ ನರಹರಿ ನಾಮ ಸ್ಮರಣೆಯಗೈಯುವಾ ನರಂಗೆ ಸಹಕಾರಿ ಅ.ಪ. ತಾಪತ್ರಯವನು ಲೊಪಗೈವ ಸುಖ ರೂಪಿನ ತಂಬೂರಿ ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ 1 ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ ವಾಸುಕಿ ಶಯನ ವಿಲಾಸದ ಕೀರ್ತಿವಿಕಾಸದ ಜಯಭೇರಿ 2 ಅಂಬುಜಭವನ ಕುಟುಂಬಿನಿಯ ಕರಾಲಂಬನ ತಂಬೂರಿ ತುಂಬುರನಾರದ ರಂಬುರುಹಾಕ್ಷನ ಹಂಬಲಿಗನುಸಾರಿ 3 ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ ಸುಂದರಿಯರ ನಲವಿಂದಲಿನುಡಿಸುವಾನಂದ ಸುಗುಣಧಾರಿ 4 ಶ್ರುತಿಯುತ ಮಾಗಲು ಮತಿಯುತರಿಗೆ ಸಮ್ಮತವಹತಂಬೂರಿ ಶ್ರುತಿಹೀನತೆಯಿಂದ ತಿಶಯಮಾಗದು ಕೃತಿಶತವನುಸಾರಿ 5 ಸುಕೃತ ಪರಿಪಾಕದ ತಂಬೂರಿ ಈ ಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖಧಾರಿ 6 ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ 7
--------------
ಸರಗೂರು ವೆಂಕಟವರದಾರ್ಯರು
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು
ಷಷ್ಠಿಯ ದಿವಸ(ಶ್ರೀ ವೆಂಕಟೇಶನ ಅವಭೃಥ ಸ್ನಾನ)ಮುಕುತಿದಾಯಕ ಮೂಲಪುರುಷಗೆ 1ಭೇರಿಶಬ್ದವು ನಗಾರಿಘರ್ಜನೆಮೌರಿತಾಳವು ಮೃದಂಗಶಬ್ದವು 2ಉದಯಕಾಲದಿ ಒದಗಿ ಭಕುತರುಪದುಮನಾಭನ ಪಾಡಿ ಪೊಗಳ್ವರು 3ಭೂರಿಮಂಗಲಕರದ ಶಬ್ದವುಸೇರಿ ಕಿವಿಯೊಳು ತೋರುವುದಲ್ಲೆ 4ನಿದ್ದೆಬಾರದು ನಿಮಿಷಮಾತ್ರಕೆಎದ್ದು ಪೇಳೆಲೆ ಏಣಲೋಚನೆ 5ಸುಮ್ಮನೀನಿರು ಸುಳಿಯಬೇಡೆಲೆಎಮ್ಮುವುದು ನಿದ್ರೆ ಏನ ಪೇಳಲಿ 6ಬೊಮ್ಮಸುರರಿಗು ಪೊಗಳತೀರದುತಿಮ್ಮರಾಯನ ಮಹಿಮೆ ದೊಡ್ಡಿತು 7ನಿನ್ನೆ ದಿವಸದ ನಿದ್ರೆವಿಹುದೆಲೆಕಣ್ಣಿಗಾಲಸ್ಯ ಕಾಂಬುವದಲ್ಲೇ 8ಬಣ್ಣಿಸುವದೆಲೆ ಬಹಳವಿಹುದಲೆಪನ್ನಗವೇಣಿ ಪವಡಿಸೆ ನೀನು 9ಏಳು ಏಳಮ್ಮ ಅಲಸ್ಯವ್ಯಾತಕೆಕಾಲಿಗೆರಗುವೆ ಹೇಳಬೇಕಮ್ಮ 10ಜಯಜಯ ವಾಧಿಶಯನಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ 1ಗಂಧಕಸ್ತೂರಿಪುಣುಗಚಂದನಪನ್ನೀರುಗಳಹೊಂದಿಸಿ ತೋಷದಿ ಮಂದರಧರಗೆ 2ಆಕಾಶರಾಯನ ಮಗಳು ಹರುಷದಿಂದೊಡಗೂಡಿಶ್ರೀಕರ ವೆಂಕಟಪತಿಯು ಸರಸವಾಡಿ 3ಶ್ರೀದೇವಿ ಭೂದೇವಿಮಾಧವಸಹಿತಲಿಸಾದರದಿಂದಲಿ ಸರಸವಾಡಿ 4ಬಡನಡು ಬಳುಕುತಲಿ ಎಡಬಲದಲಿ ಸುಳಿದುಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ 5ಛಲದಿ ಪದ್ಮಾವತಿಯು ಜಲಜನಾಭನ ಮೇಲೆಒಲವಿನಿಂದಲಿ ಬಂದು ಚೆಲ್ಲಿದಳಾಗ 6ಭರದಿ ಶ್ರೀದೇವಿಯು ಸರಸಿಜಮುಖದಲ್ಲಿಪರಮಸುಸ್ನೇಹದಿ ಬೆರಸಿದಳಾಗ7ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆಮೋದದಿಂದಲಿ ಬಂದು ಚೆಲ್ಲಿದಳಾಗ 8ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯುವೃತ್ತಕುಚವ ನೋಡಿ ಚೆಲ್ಲಿದನಾಗ 9ಝಣಝಣಾಕೃತಿಯಿಂದ ಮಿನುಗುವಾಭರಣದಧ್ವನಿಯ ತೋರುತ ಬಲು ಸರಸವಾಡಿ 10ಓಕುಳಿಯಾಡಿದ ನೀರಾನೇಕಭಕ್ತರು ಮಿಂದುಏಕಮಾನಸರಾಗಿ ಪೊರಟರು ಕಾಣೆ 11* * *ಆಡಿದರೋಕುಳಿಯ ಶರಣರೆಲ್ಲಆಡಿದರೋಕುಳಿಯ ಪ.ಕಾಡುವ ಪಾಪವ ಓಜಿಸಿ ಹರಿಯೊಳ-ಗಾಡಿನಿತ್ಯಸುಖಬೀಡಿನ ಮಧ್ಯದಿ1ಅಬ್ಬರದಿಂದಲಿ ಉಬ್ಬಿ ಸಂತೋಷದಿಒಬ್ಬರ ಮೈಗಿನ್ನೊಬ್ಬರು ಚೆಲ್ಲುತ 2ಚೆಂಡು ಬುಗರಿನೀರುಂಡೆಗಳಿಂದಲಿಹಿಂಡುಕೂಡಿ ಮುಂಕೊಂಡು ಪಿಡಿಯುವರು3ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ-ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ 4ರಂಭೆ : ನಾರಿ ಕೇಳೀಗ ಭೂರಿಭಕುತರುಶ್ರೀರಮಾಧವ ಸಹಿತ ಬಂದರು 1ಭಾವಶ್ರೀಹರಿ ಪ್ರತಿರೂಪದೋರುತದೇವ ತಾನೆ ನಿದ್ರ್ವಂದ್ವನೆನ್ನುತ 2ಹೇಮಖಚಿತವಾದಂದಣವೇರಿಪ್ರೇಮಿಯಾಗುತ ಪೊರಟು ಬರುವನು 3ವಲ್ಲಭೆಯರ ಕೂಡಿ ಈ ದಿನಫುಲ್ಲನಾಭನು ಪೊರಟನೆತ್ತಲು 4ಊರ್ವಶಿ : ನಾರಿ ನೀ ಕೇಳಿದರಿಂದ ಈಗಭೂರಿಭಕುತರಾನಂದಶ್ರೀರಮಾಧವ ಮಿಂದ ನೀರಿನೊಳಾಡುತ್ತಓರಂತೆ ತುಳಸಿಮಾಲೆಯ ಧರಿಸುತ್ತಭೇರಿಡಂಕನಗಾರಿಶಬ್ದ ಗಂ-ಭೀರದೆಸಕವ ತೋರಿಸುತ್ತ ವೈ-ಯಾರದಿಂದಲಿ ರಾಮವಾರ್ಧಿಯತೀರದೆಡೆಗೆಲೆ ಸಾರಿ ಬಂದರು 1ವರದಭಿಷೇಕವ ರಚಿಸಿ ಬಕು-ತರ ಸ್ನಾನವನನುಕರಿಸಿಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡುತ್ವರಿತದಿ ನಗರಾಂತರಕನುವಾದನುಬರುತ ದಿವ್ಯಾರತಿಗೊಳ್ಳುತಚರಣಸೇರಿದ ಭಕ್ತರಿಷ್ಟವನಿರುತ ಪಾಲಿಸಿ ಮೆರೆವ ಕರುಣಾ-ಕರಮನೋಹರ ಗರುಡವಾಹನ2ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆಕರವಮುಗಿಯುತ್ತಕೈಯ ತೋರುತ1ಪರಮಪುರುಷ ಗೋವಿಂದ ಎನುತಲಿಹೊರಳುತುರಳುತ ಬರುವದೇನಿದು 2ಭಂಗಿಪ ಸೇವೆಯೆಂಬುದನುಅಂಗಜಪಿತಚರಣಂಗಳ ರಜದಲಿ 1ಹೊಂಗಿ ಧರಿಸಿ ಲೋಟಾಂಗಣ ಎಂಬರುರಂಗನಾಥನ ಸೇವೆಗೈದ ಜ-ನಂಗಳಿಗೆ ಭಯವಿಲ್ಲವದರಿಂ-ದಂಗವಿಪ ಲೋಲೋಪ್ತಿ ಕೋಲಾ-ಟಂಗಳನು ನೀನೋಡುಸುಮನದಿ2* * *ಕೋಲು ಕೋಲೆನ್ನಿರೊ ರನ್ನದಕೋಲು ಕೋಲೆನ್ನಿರೊ ಪ .ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದಲೀಲೆಗಳಿಂದ ಜನಜಾಲಗಳೆಲ್ಲರು 1ಗುಂಗಾಡಿತಮನನ್ನು ಕೊಂದು ವೇದವ ತಂದುಬಂಗಾರದೊಡಲನಿಗಿಟ್ಟನು ನಮ್ಮ ದೇವ 2ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತುಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ 3ರೂಢಿಯ ಕದ್ದನ ಓಡಿಸಿ ತನ್ನಯದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ 4ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದುಬಂಗಾರಕಶ್ಯಪುವಂಗವ ಕೆಡಹಿದ 5ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ-ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ 6ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದುಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ 7ಬೆಟ್ಟಗಳೆಲ್ಲ ತಂದೊಟ್ಟಿಸಿ ಶರಧಿಯಕಟ್ಟಿದೈತ್ಯರ ತಲೆ ಕುಟ್ಟಿದ ನಮ್ಮ ದೇವ8ಚಂಡಗೊಲ್ಲತಿಯರ ಹಿಂಡುಗಳೊಳು ಕೂಡಿಉಂಡ ಪಾಲ್‍ಬೆಣ್ಣೆಯ ಪುಂಡ ಗೋಪಾಲನಮ್ಮ 9ಯುವತಿಯರ ವ್ರತವ ತವಕದಿ ಖಂಡಿಸಿಶಿವನ ರಕ್ಷಿಸಿ ತ್ರಿಪುರವನು ಕೆಡಹಿಸಿದ 10ಕುದುರೆಯ ಮೇಲೇರಿ ಕುಮತಿ ಮ್ಲೇಂಛರನೆಲ್ಲಸದೆಬಡಿಯುವ ನಮ್ಮ ಮಧುಕೈಟಭಾರಿ ದೇವ 11ಕಲಿಯುಗದೊಳು ಬಂದು ನೆಲೆಯಾಗಿ ತಿರುಪತಿ-ಯೊಳಗೆ ಭಕ್ತರನೆಲ್ಲ ಸಲಹುವ ನಮ್ಮ ದೇವ 12ದುಷ್ಟರ ಬೇಗ ಕಂಗೆಟ್ಟು ಓಡುವ ಭಕ್ತ-ರಿಷ್ಟವ ಕೊಡುವರೆ ದೃಷ್ಟಿಗೋಚರನಾದ 13ತಪ್ಪದೆ ಸ್ವಪ್ನದಿ ಬಪ್ಪೆನೆನ್ನುತ ಪೇಳಿಸರ್ಪಪರ್ವತದಿಂದ ಒಪ್ಪಿಲ್ಲಿ ಬಂದನಮ್ಮ 14ಸೃಷ್ಟಿಯೊಳುತ್ತಮ ಶ್ರೇಷ್ಠ ಕಾರ್ಕಳದಲ್ಲಿಪಟ್ಟದರಸ ತಿಮ್ಮ ಸೆಟ್ಟಿಯೆಂದೆನಿಸಿದ 15ಊರ್ವಶಿ :ನಾರೀರನ್ನಳೆ ಕೇಳಿದ್ಯಾ ಶ್ರೀಹರಿನಿತ್ಯಭೂರಿಸೇವೆಗೆ ಸಾನ್ನಿಧ್ಯತೋರುತ ಆರತಿಯ ಶೃಂಗಾರದೋರುತ ಕಾಣಿಕೆಯ ಕಪ್ಪುವು ಸೇರಿತುಸೇರಿದಾನತಜನರ ಮನಸಿನಕೋರಿಕೆಗಳನ್ನಿತ್ತು ಸಲಹುವವೀರವೆಂಕಟಪತಿಯ ಸದನ-ದ್ವಾರ ದಾಟುತ ಸಾರಿಬಂದನು 1ಬಳಿಕಲ್ಲಿ ತುಲಾಭಾರದ ಹರಕೆಯನ್ನು ಕೈ-ಗೊಳುತಲೀಪರಿ ಮೋದವನಲವಿನಲಿ ಮಂಗಲದ ವಿಭವದಗೆಲುವಿನಲಿ ವಿಧಕಲಶ ವೇದದನಲವಿನಲಿ ಸುಲಲಿತಭಿಷೇಕವನು ಕೊಳುತಲಿಜಲಜನಾಭನು ಸುರಚಿರದ ನಿ-ಶ್ಚಲಿತ ಸಿಂಹಾಸನದಿ ಮಂಡಿಸಿಒಲಿದ ವಂದಿತ ಜನರ ಭಕ್ತಿಗೆ 2ವಲ್ಲಭೆಯರ ಸಹಿತ ಸಮರ್ಪಿಸಿ-ದೆಲ್ಲ ಸ್ವೀಕರಿಸಿ ಮತ್ತಾಪಲ್ಲವಪಾದಗಳ ತೋರಿಸಿಎಲ್ಲವ ರಕ್ಷಿಸಿ ದಯಾರಸವುಳ್ಳವಫುಲ್ಲನಾಭನು ಪೂರ್ಣಕಾಮ ಶ್ರೀ-ವಲ್ಲಭನು ನರನಾಟಕದಿ ಜಗ-ಎಲ್ಲ ರಕ್ಷಿಸಿ ಮೆರೆವ ಭಕ್ತರಸುಲ್ಲಭನು ಸುಮನೋನುರಾಗನು 3ಶರದಿಯೇಳರ ಮಧ್ಯದ ಧಾರಿಣಿಯೊಳುಮೆರೆವ ಹೇಮಾಚಲದಸ್ಫುರಿತದಾ ಮಹಾಜಂಬುದ್ವೀಪ ವಿ-ಸ್ತರಿತದಾ ಭರತಾಖ್ಯ ಖಂಡದಿಹರುಷದಿ ನಿರುತ ತೌಳವದೇಶಮಧ್ಯದಿಮೆರೆವ ಕಾರ್ಕಳಪುರವರವೆ ಪಡುತಿರುಪತಿಯು ಎಂದೆನಿಸಿ ಭಕುತರನೆರವಿಯನು ಪರಿಪಾಲಿಸುವನೆಲೆ 4ಈಪರಿವಿಭವದಲಿ ಪ್ರತಿವರುಷಕೆಶ್ರೀಪರಮ್ಮಾತನಲ್ಲಿವ್ಯಾಪಿಸಿ ಭಕ್ತರನುಕಾವನಿ-ರೂಪಿಸಿ ಸೇವೆಯನು ಕೈಕೊಂಡೊಪ್ಪಿಸಿಪಾಪವೆಲ್ಲವ ಪರಿಹರಿಸಿ ಚಿ-ದ್ರೂಪನಂದದಿ ಹೊಳೆವ ಪರತರ-ರೂಪಕರುಣಾಲಾಪ ಸದ್ಗುಣ-ದೀಪ ಚಪ್ಪರ ಶ್ರೀನಿವಾಸನು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ