ಒಟ್ಟು 24 ಕಡೆಗಳಲ್ಲಿ , 12 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ಶರಣಾಗತನಾದೆನು ಶಂಕರ ನಿನ್ನ ಚರಣವ ಮರೆಹೊಕ್ಕೆನು ಪ. ಕರುಣಿಸೈ ಕರಿವದನಜನಕಾ- ವರಕದಂಬಪೂಜ್ಯ ಗಿರಿವರ- ಶರಸದಾನಂದೈಕವಿಗ್ರಹ ದುರಿತಧ್ವಾಂತವಿದೂರ ದಿನಕರ ಅ.ಪ. ಹಸ್ತಿವಾಹನವಂದಿತ ವಿಧುಮಂಡಲ- ಮಸ್ತಕ ಗುಣನಂದಿತ ಸ್ವಸ್ತಿದಾಯಕ ಸಾವiಗಾನಪ್ರ- ಶಸ್ತ ಪಾವನಚರಿತ ಮುನಿಹೃದ- ಯಸ್ಥಧನಪತಿಮಿತ್ರ ಪರತರ- ವಸ್ತು ಗುರುವರ ಶಾಸ್ತಾವೇಶ್ವರ 1 ಮಂದಾಕಿನೀ ಮಕುಟ ಶಿವ ಶಿವ ನಿತ್ಯಾ- ನಂದಮ್ನಾಯ ಕೂಟ ಚಂದ್ರಸೂರ್ಯಾಗ್ನಿತ್ರಿಲೋಚನ ಸಿಂಧುರಾಸುರಮಥನ ಸ್ಥಿರಚರ- ವಂದಿತಾಂಘ್ರಿಸರೋಜ ಉದಿತಾ- ರ್ಕೇಂದುಶತನಿಭ ನಂದಿವಾಹನ 2 ನೀಲಕಂಧರ ಸುಂದರ ಸದ್ಗುಣವರು- ಣಾಲಯ ಪರಮೇಶ್ವರ ಕಾಲ ಕಪಾಲಧರ ಮುನಿ- ಪಾಲ ಪದ್ಮಜವಂದಿತಾಮಲ- ಲೀಲ ಡಮರು ತ್ರಿಶೂಲಪಾಣಿ ವಿ- ಶಾಲಮತಿವರ ಭಾಳಲೋಚನ 3 ಮಾರಸುಂದರ ಸಂಕರ ಶ್ರೀಲಕ್ಷ್ಮೀ- ನಾರಾಯಣಕಿಂಕರ ಮಾರಹರ ಮಹನೀಯ ಶ್ರುತಿಸ್ಮøತಿ- ಸಾರ ವಿಗತಾಮಯ ಮಹೋನ್ನತ ವೀರ ರಾವಣಮದನಿಭಂಜನ ಪುರಹರ 4
--------------
ತುಪಾಕಿ ವೆಂಕಟರಮಣಾಚಾರ್ಯ
ಶೌರಿ ವಿಮಲಾಂಬರಧರ ಪಾಹಿ ಮುರಾರಿ ಪ ಸುಮನಸನುತ ಪದದನುಜ ಸಂಹಾರಿ ಅ.ಪ ಸರಸಿಜಲೋಚನ ಶರಣಸಂಜೀವನ ಸುರಮುನಿಸೇವನ ಕರುಣಾಸದನ ಅರವಿಂದಾನನ ವರಮಣಿರದನ ದುರಿತವಿಮೋಚನ ನಿರುಪಮ ಗಾನ 1 ಪುರಹರ ವಿನಮಿತ ಪಾವನಚರಿತ ಧರಣಿರಮಾಯುತ ಸುರಮುನಿವಿನುತ ಫಣಿ ಫಣಿಭೂಷಿತ ಮುರಳೀಧರ ಮಾಂಗಿರಿ ಶೃಂಗಸ್ಥಿತ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಹರಿಸ್ತುತಿ ಜೈ ಹರಿ ವಿಠ್ಠಲ ಪಾಂಡುರಂಗ 1 ರಕುಮÁಯೀಧವ ಪಾಂಡುರಂಗ 2 ಸಾಧುಜನಾರ್ಚಿತ ಪಾಂಡುರಂಗ 3 ಕಾಲಾಂತಕಪ್ರಿಯ ಪಾಂಡುರಂಗ 4 ಕರಿರಾಜವರದ ಪಾಂಡುರಂಗ 5 ವನಜಾಸನನುತ ಪಾಂಡುರಂಗ 6 ಕುಟಿಲಾಂತಕಹರೆ ಪಾಂಡುರಂಗ 7 ಭಾವಜಪಿತಹರೆ ಪಾಂಡುರಂಗ 8 ಫಣಿಪತಿಶಯನ ಪಾಂಡುರಂಗ9 ದುರಿತವಿದೂರ ಪಾಂಡುರಂಗ 10 ವನಜನಾಭಹರೆ ಪಾಂಡುರಂಗ 11 ವಾತಾತ್ಮಜನುತ ಪಾಂಡುರಂಗ 12 ಜಗದೋದ್ಧಾರ ಪಾಂಡುರಂಗ 13 ಪುಂಡರೀಕವರದ ಪಾಂಡುರಂಗ 14 ದೀನಮಂದಾರ ಪಾಂಡುರಂಗ 15 ಸಿಂಧುಶಯನಹರೆ ಪಾಂಡುರಂಗ 16 ಶ್ರೀಕರಸೇವಿತ ಪಾಂಡುರಂಗ 17 ನರಕಾಂತಕಹರೆ ಪಾಂಡುರಂಗ 18 ಸಾಮಗಾನಪ್ರಿಯ ಪಾಂಡುರಂಗ 19 ಕ್ಷಾತ್ರಕುಲಾಂತಕ ಪಾಂಡುರಂಗ | ಧಾತ್ರೀರಮಣ ಪಾಂಡುರಂಗ 20 ಕಾಮಿತಫಲದ ಪಾಂಡುರಂಗ 21 ಪಾವನಚರಿತ ಪಾಂಡುರಂಗ 22 ಉತ್ತಮದೇವನೆ ಪಾಂಡುರಂಗ 23 ಸೋಜಿಗಪುರುಷನೆ ಪಾಂಡುರಂಗ24 ಭಾನುಪ್ರಕಾಶ ಪಾಂಡುರಂಗ 25 ಸುರಭಿನಿವಾಸ ಪಾಂಡುರಂಗ 26 ಭಕುತಪೋಷಕ ಪಾಂಡುರಂಗ27 ತ್ರಿಗುಣಾತೀತಾ ಪಾಂಡುರಂಗ 28 ಚಂದ್ರಮೌಳಿಹಿತ ಪಾಂಡುರಂಗ26 ಸುರಮುನಿಸನ್ನುತ ಪಾಂಡುರಂಗ30 ದಾನವಾಂತಕ ಪಾಂಡುರಂಗ 31 ಭೂಸುರವಂದಿತ ಪಾಂಡುರಂಗ32 ಸೃಷ್ಟಿಗೊಡೆಯ ಶ್ರೀ ಪಾಂಡುರಂಗ 33 ಉರ್ವಿರಮಣ ಪಾಂಡುರಂಗ 34 ಶೃತಿತತಿವಿನುತ ಪಾಂಡುರಂಗ 35 ಜೀವೋತ್ತಮನುತ ಪಾಂಡುರಂಗ36 ನಾಕಾಧಿಪನುತ ಪಾಂಡುರಂಗ 37 ಮೋದದಾಯಕ ಪಾಂಡುರಂಗ38 ಭಾಗವತಪ್ರಿಯ ಪಾಂಡುರಂಗ39 ಕರುಣಿಗಳರಸನೆ ಪಾಂಡುರಂಗ40 ತಾಪತ್ರಯಹರೆ ಪಾಂಡುರಂಗ41 ಕರ್ಮಾಧಿಪತೆ ಪಾಂಡುರಂಗ42 ಕಪಟನಾಟಕ ಪಾಂಡುರಂಗ43 ಬಾದರಾಯಣ ಪಾಂಡುರಂಗ44 ಮುಂದೆ ದಾರಿಯೇನೋ ಪಾಂಡುರಂಗ 45 ಪಾಶಪರಿಹರಿಸೊ ಪಾಂಡುರಂಗ 46 ಎಷ್ಟು ಪೊಗಳಲೋ ಪಾಂಡುರಂಗ 47 ಇಷ್ಟದಾಯಕ ಪಾಂಡುರಂಗ 48 ಜನುಮ ನೀಗಿಸೊ ಪಾಂಡುರಂಗ 49 ಘನ್ನಮಹಿಮನೆ ಪಾಂಡುರಂಗ 50 ದೀನವತ್ಸಲನೆ ಪಾಂಡುರಂಗ 51 ಪಾದ ಪಾಂಡುರಂಗ52 ಶುಭಮಂಗಳಹರೆ ಪಾಂಡುರಂಗ 53 ಶ್ರೀಶಕೇಶವ ಪಾಂಡುರಂಗ 54
--------------
ಶ್ರೀಶ ಕೇಶವದಾಸರು
ಸೇವಾಂ ದೇಹಿ ಚಂದ್ರಶೇಖರ ಸೇವಾಂ ದೇಹಿ ಸೇವಾಂ ದೇಹಿ ಸದಾವನತಾಖಿಲ ಜೀವ ದುರಿತಹರ ಪ ಪಾವನಚರಿತ ಸುರಾವಳಿ ಮುನಿಗುಣ ಭಾವಿತಚರಣ ಸುಪಾವಕ ನಯನಾ ಅ.ಪ ತುಂಬುರು ಗಾನವಿಡಂಬನ ಸುರಸರಿ ದಂಬುಕ ಭಕ್ತ ಹೃದಂಬುಜ ಭಾನೋ 1 ಪುರಹರ ಮುರಹರಧರ ಕರುಣಾಕರ ನರ ವರದಾಯಕ ನಿರುಪಮ ಹಿಮವದ್ ಗಿರಿವರಚಾಪ ಕು ಧರಜ್ಯಾಕರುಷಣ ಪರಮಕೃಪಾಳೋ 2 ಶಿವ ಶಿವ ಶಂಕರ ಭುವಿಭೂಧರವರ ಶಿವಗಂಗಾಧಿಪ ಭವ ಗಂಗಾಧರ ಅವ ಮಾಂ ಲಕ್ಷ್ಮೀಧವ ವೆಂಕಟ ಸಖದಿವಿಭವ ವಂದ್ಯಾ 3
--------------
ತಿಮ್ಮಪ್ಪದಾಸರು
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ)ಶ್ರೀನಿವಾಸಾಯ ನಮೋ ಪ.ಶ್ರೀನಿವಾಸಾಯ ಶತಭಾನುಪ್ರಕಾಶಾಯಶ್ರೀನಿವಾಸಾಯ ನಿಜ ಭಕ್ತಜನಪೋಷಾಯಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ.ದೋಷಗಂಧವಿದೂರ ಕೇಶಿಮುಖದಾನವ ವಿ-ನಾಶವಿಧಿಭವಸುಖನಿವಾಸ ವಾಸುಕಿಶಯನವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ-ಭೂಷ ಭೂತಾತ್ಮ ಭವಪಾಶಹರ ಪರತರ ದ-ಯಾ ಸಮುದ್ರ ವಿನಿದ್ರ ಭೂಶಯನ ಭೂರಿಪ್ರದಕೇಶವಾಯ ನಮೋನಮಃ 1ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತನಾರದಾದಿಮುನೀಂದ್ರವಾರಸನ್ನುತಪಾದನೀರರುಹದ್ವಂದ್ವನೆವಾರಿಜಾಸನಮುಖ್ಯಸುರರುತಿಳಿಯರು ನಿನ್ನಭೂರಿಮಹಿಮೆಗಳ ಸಾಕಾರವನು ಬಣ್ಣಿಸುವಧೀರನಾವನು ಮಹಾ ವೀರ ವಿಶ್ವಾಧಾರನಾರಾಯಣಾಯ ನಮೋ 2ವೇದವೇದ್ಯನೆ ದುರಿತಶೋಧನೆ ದೈತ್ಯಗಣ-ಛೇದಕನೆ ಸುರಸುಪ್ರಸಾದಕನೆ ಭಕ್ತಜನ-ಮೋದದಾಯಕ ಸ್ವಗತ ಭೇದವರ್ಜಿತಸಮಾನಾಧಿಕ್ಯರಹಿತ ಸತತಆದಿತ್ಯ ಶತಕೋಟಿತೇಜೋವಿರಾಜ ಮಹ-ದಾದಿಕಾರಣ ಮಧುವಿರೋಧಿ ಮಂಗಲಸುಖಾಂ-ಬೋಧಿ ಪದ್ಮಾಲಯವಿನೋದಿ ರಾಧಾರಮಣಮಾಧವಾಯ ನಮೋನಮಃ 3ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು-ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ-ನಂದ ಭರಿತ ಕಾಳಿಂದೀರಮಣ ರಾಮಚಂದ್ರಸನ್ನುತಮಹೇಂದ್ರವಂದಾರುಜನತ್ರಿದಶಮಂದಾರ ಕೋಮಲಿತವೃಂದಾವನವಿಹಾರ ಕಂದರ್ಪಜನಕ ಬಾ-ಳೇಂದುಶೇಖರಸಖ ಸನಂದನಾರ್ಚಿತ ಶ್ರೀಗೋವಿಂದಾಯತುಭ್ಯಂ ನಮಃ 4ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷಮುಷ್ಟಿಕಾಸುರವೈರಿ ಮುನಿಜನಮನೋಹಾರಿಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆತುಷ್ಟಿಯನು ನೀನಿತ್ತು ಸಲಹೊ ಸಾಮಜವರದಬೆಟ್ಟದೊಡೆಯನೆ ಕೃಪಾದೃಷ್ಟಿಯಿಂದಲಿನೋಡುವಿಷ್ಣವೇತುಭ್ಯಂ ನಮೋ 5ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತಬುಧಜನಪ್ರಿಯ ಭೂತಭಾವನ ಜಗನ್ನಾಥಪದುಮಾಕ್ಷ ಪಾಂಡವಪ್ರತಿಷ್ಠಾಪನಾಚಾರ್ಯಮದನಕೋಟಿಸ್ವರೂಪವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ-ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸವಿಧುಮಂಡಲಸ್ಥ ಸದ್‍ಹೃದಯಪಂಕಜವಾಸಮಧುಸೂದನಾಯ ನಮೋ 6ಅಕ್ರೂರವರದ ಸದತಿಕ್ರಮರ ಗೆಲಿದ ಹಯ-ವಕ್ತ್ರವೈಕುಂಠಾಖ್ಯ ಪುರವಾಸ ಜಗದೀಶಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನುಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ-ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿನಕ್ರಮದಹರನಾದ ಬ್ರಹ್ಮ ಗಂಗಾಪಿತತ್ರಿವಿಕ್ರಮಾಯ ನಮೋನಮಃ 7ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು-ದಾಮಸಖ ಪರಿಪೂರ್ಣಕಾಮ ಕೈರವದಳ-ಶ್ಯಾಮ ಕಲ್ಯಾಣ ನಿಸ್ಸೀಮ ಮಹಿಮನೆಸುಜನಸ್ತೋಮಸುರಕಾಮಧೇನುಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ-ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ-ರಾಮ ವಿಷ್ವಕ್ಸೇನ ವಿಶ್ವತೈಜಸಪ್ರಾಜÕವಾಮನಾಯ ನಮೋನಮಃ8ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ-ರಾಧಭಂಜನ ಭವಾಂಬೋಧಿಕುಂಭಜ ಭಜಕ-ರಾದವರನುದ್ಧರಿಪ ಬೋಧರೂಪನೆಚತುಷ್ಟಾದ ಪಾವನಚರಿತನೆಗಾಧಿಜಾಧ್ವರಪಾಲ ಗರುಡಧ್ವಜ ದಯಾಳುನಾದಬಿಂದು ಕಲಾತೀತ ರುಕ್ಮಿಣಿನಾಥಬಾದರಾಯಣನೆ ನಿರುಪಾಧಿ ಮಾಯಾತೀತಶ್ರೀಧರಾಯ ನಮೋನಮಃ 9ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ-ಕಾಶ ಪಾಲಿತನಿಖಿಳಭೂಸುರವ್ರಜ ಮಂದ-ಹಾಸಮುಖ ನವಕುಂದಭಾಸರದನವಿರಾಜದೂಷಣಾದ್ಯ ಸುರಹರನೆಈಶಪತಿಸೇವ್ಯಾಂಬರೀಶನೃಪವರದ ಪರ-ಮೇಶ ಕೋವಳಪೀತವಾಸ ಕರ್ದಮಶುಕಪ-ರಾಶರಾದ್ಯಮಿತಯೋಗೀಶರಕ್ಷಕಹೃಷೀಕೇಶಾಯ ತುಭ್ಯಂ ನಮೋ 10ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ-ಸಿದ್ಧ ಪೂಜ್ಯ ಪುಂಡರೀಕದಳಾಕ್ಷಬುದ್ಧಬುಧಜನಸುಲಭಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇತದ್ವೀಪವೈಕುಂಠಮಂದಿರತ್ರಯ ಸಾಧು-ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11ಸಾಮಗಾನವಿನೋದ ಸಾಧುಜನಸುಖಬೋಧಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತವ್ಯೋಮಯಾನವರೂಥ ಓಂಕಾರಭರಿತ ರಘುರಾಮಸಮರಂಗ ಭೀಮನಾಮಧಾರಕರ ಪರಿಣಾಮರೂಪಕ ಸುಜನ-ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣಭೌಮಪುರುಷೋತ್ತಮ ನಿಯಾಮಕನೆ ರಕ್ಷಿಸೈದಾಮೋದರಾಯ ನಮೋ 12ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯವೆಂಕಟಾಚಲಸದಾಲಂಕಾರ ಶೇಷಪರಿ-ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತಓಂಕಾರನಿಧನ ಸಾಮಕಭಕ್ತರಾನೇಕಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ13ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದುಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯಸೂಸಿಬಹ ಸಂಸಾರಸಾಗರದಿ ಮುಳುಗಿದೆನುನೀ ಸಲಹೊ ದೇವದೇವಭೂಸಲಿಲಪಾವಕಾಕಾಶಾದಿ ಭೂತಾಧಿ-ವಾಸ ರಾಕ್ಷಸವನಹುತಾಶ ನಾನಾ ರೂಪ-ವೇಷಧಾರಕ ನರಾವೇಶ ಪಾಲಿಸು ಎನ್ನವಾಸುದೇವಾಯ ನಮೋ 14ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ-ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ-ಬದ್ಧಕಮನೀಯರೂಪಸುತಪದುರಾಪಪ್ರದ್ಯುಮ್ನಾಯ ತುಭ್ಯಂ ನಮಃ 15ಉದ್ಧವಾದಿ ಸಮಸ್ತ ಭಾಗವತಜನಕಮಲ-ಮಧ್ಯಚರರಾಜಹಂಸಾಯ ಮಾನಸದಶ್ರದ್ಧೆಯಂ ಕೊಟ್ಟು ರಕ್ಷಿಸು ಧೊರೆಯೆಶ್ರೀಹರಿಯೆ ವೈದ್ಯನಾಥವಿಧಾತನೆಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ-ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆಹೊದ್ದಿದೆನು ಮೈದೋರು ಚಿನುಮಯಾತ್ಮಕನೆಅನಿರುದ್ಧಾಯ ತುಭ್ಯಂ ನಮಃ 16ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷಪರತರಾವ್ಯಯಲೋಕಭರಿತಮಂಗಲರಿತ ಗುರುತಮ ಗುಣಧ್ಯಕ್ಷನೆಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದಶರಭಂಗಮುನಿಪಾಲ ಶಮಿತದಾನವಜಾಲಧುರವಿಜಯ ವಿಜಯಮೈದುನ ಕೃಷ್ಣ ರಕ್ಷಿಸೈಪುರುಷೋತ್ತಮಾಯನ್ನಮೋ 17ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್-ವಿಶ್ವತೋಮುಖ ವಿಶ್ವತೋಬಾಹು ಕರುಣಾಕ-ಟಾಕ್ಷದಿಂ ನೋಡೆನ್ನಮ್ಯಾಲೆದಯಮಾಡು ಶ್ರೀವಕ್ಷಸ್ಥಲನಿವಾಸನೆಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ-ಮೋಕ್ಷದಾಯಕ ಯಜÕಮೂರ್ತಿ ರೂಪತ್ರಯ ಮ-ಹೋಕ್ಷಧ್ವಜನಂ ಮೋಹಿಸಿದ ಮೋಹಕಲ್ಪಅಧೋಕ್ಷಜಾಯ ನಮೋನಮಃ 18ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು-ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ-ಹಾರವಕುಲಿಶ ಶತಕೋಟಿಸದೃಶನಶಿರಪ್ರಕರಧೀರ ಪ್ರಹ್ಲಾದಾಭಿವರದಭೂರೀಕರರೂಪ ಭೂಮಕೀರ್ತಿಕಲಾಪಸಾರವಜ್ರಸ್ತಂಭದಿಂ ಬಂದ ನಂದ ಸುಕು-ಮಾರಮಾರ್ಕಾಂಡೇಯವರದ ಲೋಕಶರಣ್ಯನಾರಸಿಂಹಾಯ ನಮೋ 19ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ-ನ್ನಿಚ್ಛೆಯಿಂದಲಿ ಜಗವ ಪಾಲಿಸುವನಿರ್ಮಿಸುವ ಆಶ್ಚರ್ಯಕೃತಸಲೀಲಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ-ಕಚ್ಛಪನೆ ಕಾಳೀಯಮರ್ದನಮಹಿತಶ್ರೀಮದಚ್ಯುತಾಯ ನಮೋನಮಃ 20ಚೈದ್ಯಮಥನ ಮನೋಜÕಶುದ್ಧಾತ್ಮ ಸರ್ವಜÕಯುದ್ಧದಲಿ ಸೈಂಧವನ ಶಿರವ ಕೆಡಹಿಸಿ ಜಯವಹೊದ್ದಿಸಿದ ಪಾರ್ಥನಿಂಗೆಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ-ವಿದ್ದ ಮಾನಸವ ಪಾದದ್ವಯದೊಳಿರಿಸೈ ದ-ಯಾದ್ರ್ರಚಿತ್ತ ಸ್ವಭಕ್ತಸಂಸಾರಿ ಕಾಯೆಜನಾರ್ದನಾಯ ನಮೋನಮಃ 21ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದನಂದಗೋಪನ ಕಂದನೆನಿಸಿ ಬಾಲಕತನದಚಂದಮಂ ತೋರಿಸಿದ ಕುಬುಜೆಗಂಧಕೆ ಒಲಿದಸುಂದರೀರಮಣ ಜಯತುತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ-ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ-ನಿಂದಾದಿ ದೋಷಗಳ ಮಾಡಿ ಬಳಲುತ್ತಿಹರ್ಉಪೇಂದ್ರಾಯ ತುಭ್ಯಂ ನಮಃ 22ಸ್ಥಿರಚರಾತ್ಮಕ ಧೇನುಚರ ದೇವಕೀಜಠರ-ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥಪರಮತೇಜೋಮಯ ಪುರಾಣಪುರುಷೇಶ್ವರನೆದುರಿತದೂರ ಗಭೀರನೆನಿರತಿಶಯನಿಜನಿರ್ವಿಕಲ್ಪ ಕಲ್ಪಾಂತಸಾ-ಗರದಿ ವಟಪತ್ರಪುಟಶಯನ ಪುಣ್ಯಶ್ರವಣಪುರುಷನಾಮಕ ಪುಷ್ಕರಾಕ್ಷ ಶ್ರೀಕರನೆ ಜಯಹರಯೇ ನಮೋನಮಸ್ತೇ 23ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ-ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ-ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾದುಷ್ಟ ನರಕಾದಿದಾನವರ ಮರ್ದಿಸಿದ ಜಗ-ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ-ಶ್ರೇಷ್ಠನಂ ಘಾತಿಸಿದ ರಾಮಾನುಜನೆಹರೇ ಕೃಷ್ಣಾಯ ತುಭ್ಯಂ ನಮಃ 24ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ-ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು-ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ-ಶಿಕ್ಷಕ ಪರೀಕ್ಷಕನೆ ಪವನವಾಹನಲಕ್ಷ್ಮೀನಾರಾಯಣಾಯ ನಮೋ25
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಏಳು ವಾರಿಜನೇತ್ರ ಏಳು ಚಿನ್ಮಯಗಾತ್ರಏಳು ಪಾಂಡವಪಾಲ ಏಳುಸಿರಿಭೂಲೋಲಏಳು ಪಾವನಚರಿತ ಏಳೆರಡು ಜಗಭರಿತಏಳು ಯದುಕುಲಲಲಾಮಾ ಪ.ಮೂಡುತಿವೆಅರುಣಕಿರಣೋಡುತಿವೆ ತಮದ ಕುಲಬಾಡುತಿವೆ ತಾರಿನನ ಬೇಡುತಿವೆ ಚಕ್ರವಾಕಾಡುತಿವೆಕೀರಬಲು ಪಾಡುತಿವೆತುಂಬಿನಲಿದಾಡುತಿವೆಖಗಸಮೂಹರೂಢಿಯೊಳು ಮುನಿಜನರು ನೋಡಿ ರವಿಗತ ಹರಿಯಷೋಡಶುಪಚಾರಾರ್ಚನೆ ಮಾಡಿ ಮನದಣಿಯೆ ಕೊಂಡಾಡಿ ಕುಣಿದಾಡಿ ಭವಕಾಡನೀಡಾಡಿವರಬೇಡುತೈದಾರೆ ಗಡ ಹರಿಯೆ 1ವಿಷ್ಣುಪದೆ ವೃದ್ಧನದಿ ಕೃಷ್ಣವೇಣ್ಯಖಿಳ ಸಂಹೃಷ್ಟಿಪ್ರದೆ ಕಾವೇರಿ ಇಷ್ಟದಾ ಯಮುನೆಅಘನಷ್ಟಕಾರಣೆ ಭೀಮೆ ಶಿಷ್ಟಾಂಗೆ ತುಂಗೆವರತುಷ್ಟಿದಾಯಕ ನದಿಗಳುಕೃಷ್ಣ ನಿನ್ನಡಿಯುಗಳ ಸ್ಪøಷ್ಟರಾಗುತಲಿ ಉತ್ಕøಷ್ಟ ಪದ ಪಡೆವೆವೆಂದಷ್ಟ ದಿಗತಟದಿಂದಚೇಷ್ಟಿತ ತರಂಗದಿಂ ಸ್ಪಷ್ಟ ಬಂದಿರೆ ಕರುಣದೃಷ್ಟಿಯಿಂದವರ ನೋಡೈ ಹರಿಯೆ 2ಕೇಶನಾಕೇಶ ಕಕುಭೇಶಾದಿ ಅಮರರಾಕಾಶದಲಿ ದುಂದುಭಿಯ ಘೋಷ ಮೊಳಗಿಸಿದರನಿಮೇಷ ಮುನಿ ವೀಣೆಯುಲ್ಲಾಸದಿಂ ಮಿಡಿಮಿಡಿದು ಧನಶ್ರೀ ಭೂಪಾಳಿಯಿಂದಶೇಷಶಯನಖಿಳ ನಿರ್ದೋಷಗುಣಪೂರ್ಣಸರ್ವೇಶ ಮುಕುಂದ ಭಟಕೋಶನೆಂದವರು ನಿನ್ನಬೇಸರದೆ ಪಾಡುತಿಹರು ಶ್ರೀಶ ಪ್ರಸನ್ವೆಂಕಟೇಶನೆ ಒಲಿದುಪ್ಪವಡಿಸೊ ಹರಿಯೆ 3
--------------
ಪ್ರಸನ್ನವೆಂಕಟದಾಸರು
ಬಿನ್ನಪಲಾಲಿಸಯ್ಯ ಭಕ್ತಪರಾಧ-ವನ್ನು ಕ್ಷಮಿಸಬೇಕಯ್ಯ ಪ.ಅನ್ಯಾಯ ಕಲಿಕಾಲಕ್ಕಿನ್ನೇನುಗತಿಸುಪ್ರ-ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತ ಅ.ಪ.ಮಕ್ಕಳ ಮಾತೆಯಂದದಿ ಕಾಯುವ ಮಹ-ದಕ್ಕರದಿಂದ ಮುದದಿಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತುರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನುದಿಕ್ಕಿಲ್ಲದವರ ಧಿಕ್ಕಾರ ಗೈದರೆಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ-ವರ್ಕಳಮಣಿ ನಿನಗಕ್ಕಜವಲ್ಲವುಕುಕ್ಕುಟಧರವರ ಮುಕ್ಕಣ್ಣತನಯ 1ಜಾತಿ ನೀತಿಯನು ಬಿಟ್ಟು ಡಾಂಭಿಕತನದರೀತಿಗೆ ಪ್ರೀತಿಪಟ್ಟುಸೋತು ಹಣವ ಕೊಟ್ಟು ಖ್ಯಾತರೆಂಬುವಗುಟ್ಟುಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿಯಾತುಧಾನರಗುಣಯಾತಕ್ಕರಿಯದುಭೂತೇಶ್ವರಸಂಜಾತ ಸುರನರ-ವ್ರಾತಾರ್ಚಿತ ಪುರಹೂತಸಹಾಯಕನೂತನಸಗುಣವರೂಥಪುನೀತ2ಯಾವ ಕರ್ಮದ ಫಲವೋ ಇದಕಿ-ನ್ಯಾವ ಪ್ರಾಯಶ್ಚಿತ್ತವೋಯಾವ ವಿಧವೊ ಎಂಬ ಭಾವವರಿತ ಪುರುಷಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲದೇವ ಲಕ್ಷ್ಮೀನಾರಾಯಣನಪಾದಸೇವಕನೀ ಮಹಾದೇವನ ಸುತ ಕರು-ಣಾವಲಂಬಿಗಳಕಾವನಮ್ಮಯ ಕುಲ-ದೇವ ವಲ್ಲೀಪತಿ ಪಾವಂಜಾಧಿಪ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶರಣಾಗತನಾದೆನು ಶಂಕರ ನಿನ್ನಚರಣವ ಮರೆಹೊಕ್ಕೆನು ಪ.ಕರುಣಿಸೈ ಕರಿವದನಜನಕಾ-ವರಕದಂಬಪೂಜ್ಯ ಗಿರಿವರ-ಶರಸದಾನಂದೈಕವಿಗ್ರಹದುರಿತಧ್ವಾಂತವಿದೂರದಿನಕರಅ.ಪ.ಹಸ್ತಿವಾಹನವಂದಿತ ವಿಧುಮಂಡಲ-ಮಸ್ತಕಗುಣನಂದಿತಸ್ವಸ್ತಿದಾಯಕ ಸಾವiಗಾನಪ್ರ-ಶಸ್ತ ಪಾವನಚರಿತ ಮುನಿಹೃದ-ಯಸ್ಥಧನಪತಿಮಿತ್ರ ಪರತರ-ವಸ್ತು ಗುರುವರ ಶಾಸ್ತಾವೇಶ್ವರ 1ಮಂದಾಕಿನೀಮಕುಟಶಿವ ಶಿವ ನಿತ್ಯಾ-ನಂದಮ್ನಾಯ ಕೂಟಚಂದ್ರಸೂರ್ಯಾಗ್ನಿತ್ರಿಲೋಚನಸಿಂಧುರಾಸುರಮಥನ ಸ್ಥಿರಚರ-ವಂದಿತಾಂಘ್ರಿಸರೋಜ ಉದಿತಾ-ರ್ಕೇಂದುಶತನಿಭ ನಂದಿವಾಹನ 2ನೀಲಕಂಧರ ಸುಂದರ ಸದ್ಗುಣವರು-ಣಾಲಯ ಪರಮೇಶ್ವರಕಾಲಕಾಲಕಪಾಲಧರ ಮುನಿ-ಪಾಲ ಪದ್ಮಜವಂದಿತಾಮಲ-ಲೀಲ ಡಮರು ತ್ರಿಶೂಲಪಾಣಿ ವಿ-ಶಾಲಮತಿವರ ಭಾಳಲೋಚನ 3ಮಾರಸುಂದರ ಸಂಕರ ಶ್ರೀಲಕ್ಷ್ಮೀ-ನಾರಾಯಣಕಿಂಕರಮಾರಹರ ಮಹನೀಯ ಶ್ರುತಿಸ್ಮøತಿ-ಸಾರವಿಗತಾಮಯ ಮಹೋನ್ನತವೀರ ರಾವಣಮದನಿಭಂಜನಚಾರುತರವರಭಾರಪುರಹರ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ