ಒಟ್ಟು 69 ಕಡೆಗಳಲ್ಲಿ , 34 ದಾಸರು , 57 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ದೇವದೇವನೆ ಓವುದೆಮ್ಮನು ಶ್ರೀವಧೂವರನೇ ಸಾವಧಾನದಿ ಭಾವಿಸೈ ವಸುದೇವ ಕುವರನೇ ಪ. ನೀಲಮೇಘಶ್ಯಾಮ ರಮಾಲೋಲ ಪಾಲಿಸೈ ಬಾಲಗೋಕುಲಬಾಲ ಶ್ರೀ ವನಮಾಲ ಪಾಲಿಸೈ 1 ಭೋಗಿಶಯನ ಯೋಗಗಮ್ಯ ಸಾಗರಸ್ಥಿತ ಬಾಗಿ ನಮಿಪೆವು ರಾಗದಿಂ ಪೊರೆ ವಾಗಗೋಚರ 2 ಘಳಿಲನೈತಹುದಿಳೆಯ ರಮಣ ತಳುವ ಬೇಡುವೈ ಎಳೆಯರಾವು ಚಲವನರಿಯೆವು ಒಲವನೆರೆವೆವೈ3 ದೇಶದೇಳ್ಗೆಯೊಳಾಸೆಯಿಂದಿಹ ದಾಸರೆಂದು ನೀಂ ಲೇಸ ಪಾಲಿಸು ಆಶೆ ಸಲ್ಲಿಸು ಶೇಷಗಿರೀಶನೇ4
ನಂಬಿದೆನು ಚರಣಗಳ ಪಾಲಿಸೈ ಹರಿಯೇ ನಂಬಿದೆನು ಶ್ರೀ ಚನ್ನಕೇಶವನೆ ದೊರಿಯೇ ಪ ಸರಳೆ ದ್ರೌಪದಿಯಂತೆ ಕರಿರಾಜ ಧೃವರಂತೆ ದುರುಳ ಕನಕಾಸುರನ ನಿಜತನುಜನಂತೇ ಖಗರಾಜ ಕಪಿಯಂತೆ ವರತತ್ತ್ವ ಭೋಧಿಸಿದ ಯತಿಗಣಗಳಂತೇ 1 ಗೌತುಮನ ಸತಿಯಂತೆ ಯಾದವರ ಪಡೆಯಂತೆ ಭೂತಳದಿ ಪೆಸರಾದ ಹರಿದಾಸರಂತೇ ಕೋತಿ ಜಾಂಬವನಂತೆ ಅಮರೇಶ ಸುತನಂತೆ ಆತುರದಿ ನಂಬಿರುವ ಶ್ರೀ ಲಕ್ಷ್ಮೀಯಂತೆ 2 ನಾನಿತ್ತ ಪೂಜೆಯಿಂ ನಾಗೈದ ಭಜನೆಯಿಂ ನಾನಿಂದು ಮಾಡಿದಾ ಹರಿಸ್ಮರಣೆಯಿಂದ ನೀನೊಲಿದೆಯಿಂತೆಂದು ದೃಢವಾಗಿ ನಂಬಿದೆನು ಹೀನನನು ಸಲಹಯ್ಯ ಸ್ವಾಮಿ ಕೇಶವನೇ 3
ನರಹರಿಯೆ ಪಾಲಿಸೈ ಪ ನರಹರಿಯೆ ಪಾಲಿಸೈ ಕರಿವರದನೆ ಕಲುಷಾಂತಕವರ ಅ.ಪ ಕರಚರಣಗಳೆರಡರ ಪರಮೊದಗಿರೆ ಹರಿಹರಿ ನಿನಗಿದ ನೊರೆವೆಹುದೊ 1 ಭಜಿಪ ಭಜಕ ನಿಜದ್ವಿಜಗುಣಮಣಿ ಹಯಧ ಸಾರಥಿ 2 ಸಿರಿಧರ ಮುರಹರ ಮುನಿಜನ ಭಯ ಹರ ಕರುಣ ತುಲಸೀರಾಮಾ ಗುರುವೆ ತಾನಾದ 3
ನಾಮ ನಿಜ ಸುಖ ಪಾಲಿಸೈ ದೊರೆಯೆ ಪ ಧಾಮ ಭುವನ ಸ್ತೋಮ ಮಂಗಲ-|| ಕಾಮಧೇನು ರಮಾವರನೆ ಹರಿ ಅ.ಪ ಸನ್ನುತ ರಾಜೀವ ಸುತೆ ಶ್ರೀಲೋಲ ರಾಘವ 1 ಮುಕುಂದ ರಕ್ಷಿಸು 2 ಕೂರ್ಮ ವರಾಹ ನಿತ್ಯ ಸದಾನಂದಾತ್ಮ ಶ್ರೀಗುರು 3
ನೀಂ ಕಟಾಕ್ಷಿಸೆನ್ನನೊಲವಿಂ ಲೋಕನಾಥ ಪಾಲಿಸೈ ಪ. ಸಂಕಟಂಗಳೆಲ್ಲಮಂ ನಿಷ್ಕಲಂಕ ನೀಂ ನಿವಾರಿಸೈ ಅ.ಪ ತಾತ ನೀನೇ ನಾಥನೇ ಆತ್ಮಜಾತಂ ನೀನೆಲೈ ದಾತ ನಿನ್ನ ನಂಬಿದೀಯನಾಥರಂ ಪ್ರೀತಿಯಿಂ1 ಭಾವಜಾತಜನಕ ಭೂ ದೇವದೇವ ಶ್ರೀಧವ ಭಾವಿಸುವೆನನನ್ಯಭಾವದೆ ಕಾವುದೈ ಶ್ರೀನಿಧೇ 2 ಪರಮಪುರಷ ಶೇಷಶೈಲವರದ ಶ್ರೀಕರ ಪರಿಭವಂಗಳೆಲ್ಲ ಪರಿದು ಪಾಲಿಸೈ ಪರಾತ್ಪರ 3
ನೀನೇ ಸಕಲವೆನಗೆ ಶ್ರೀರಾಮಚಂದ್ರ ನೀನೇ ದೊರೆಯರಸನೊ ಪ ಶ್ರೀನಿಧಿಯೆ ನಿನ್ನವರುಸತತ ಸಾನುರಾಗದ ಬಳಗವಹುದೈ ದೀನಜನಮಂದಾರ ನೇಹಂ ಶ್ರೀನಿಕೇತನ ಸತ್ಯಸಾರ ಅ.ಪ ತಾಮತಿಯು ಶ್ರೀ ಮನೋಹರ ಸಹಜರೆಲ್ಲ ಪ್ರೇಮ ಪಂಚ ರಾಮರೂಪವ ತೋರ್ಪನಾಡಿಯು 1 ಧನ್ಯ ಶರೀರವು ಮಾನ್ಯಗೆ ತಾಮಸದ ಸರೃಹವೂ ಕಣ್ಣನಿದ್ರೆಯು ಯೋಗಮುದ್ರೆಯು ಚಿಣ್ಣನ ಸಂಚರಂಗಳು ಸ್ವಾಮಿ ನಿನಗೆ ಪ್ರದಕ್ಷಿಣೆ 2 ಬಾಲನ ಮಾತುಗಳು ವೇದೊಕ್ತ ಸಶೀಲನ ಸ್ತೋತ್ರಗಳು ಕಾಲಂಕಾಲಗಳಲ್ಲಿ ಗೈಯುವ ಕಾರ್ಯಗಳು ಪರಮಾತ್ಮ ಸೇವೆಯು ಶ್ರೀಲತಾಂಗಿಯ ಲೋಲ ಧ್ಯಾನಿಪೆ ಪಾಲಿಸೈ ಜಾಜೀಶ ಕೇಶವ3
ಪರಿಪಾಲಿಪುದೈ ಗುರುವೆ ನೆರೆನಂಬಿದೆನಯ್ಯ ಪ್ರಭುವೆ ಪ ಘಾಸಿ ಗೊಂಡೆನಲ್ಲಾ ಮಾಯಾ ಪಾಶದಿ ಸಿಲುಕಿದೆನಲ್ಲಾ | ಉ- ಪಾಯ ವನರಿಯೆ ಪಾಲಿಸೈ ಪ್ರಭವೇ 1 ಕಾಯೋ ಪ್ರಭುವೇ 2 ಉಳಿಸಿಕೊ ಗುರುದೇವಾ ನಿರುತದಿ ಮಾಡುವೆ ನಿನ್ನ ಸೇವಾ ಕರುಣಿಸು ಶ್ರೀ ರಾಘವೇಂದ್ರಾ 3
ಪರಿಪಾಲಿಸೈ ವರ ವೆಂಕಟೇಶ ಚರಣಾಬ್ಜಯುಗ ಸ್ಮರಣೆಯನಿತ್ತು ಪ ದುರಿತಾಧಿದೂರ ಪರತತ್ವಸಾರ ಪರಮಾತ್ಮನೆ ಪೊರೆ ಎನ್ನುತ ಕರಿರಾಜ ಮೊರೆಯಿಡುತಿರಲು ನೀ ಗರುಡನ ಏರಿ ತ್ವರೆಯಿಂದ ಬಂದೆ ಪರಮ ದಯಾಕರ ಶ್ರೀನಿವಾಸ 1 ಪಾಪಿಷ್ಠನು ಅಜಾಮಿಳನೆಂದು ಕೋಪದಿ ಯಮ ಭಟರೆಳೆಯುತಿರೆ ತಾಪಕೆ ತನ್ನ ಪುತ್ರನ ಕೂಗುತಲಿರೆ ಕೃಪೆಯಿಂದ ನಿಜಪುರಕೆ ಒಯ್ದೆ 2 ಕನಕಾಚಲನಿಧಿ ಲಕ್ಷ್ಮೀಕಾಂತ ಪ್ರಣತಾರ್ಥಿಹರ ಆನಂದಕರ ವನಜಾಸನಾದಿ ಅಮಿಷಪಾಲ ಯೋಗಿ ಮನ ಕುಮುದಲೋಲ 3
ಪಾಲಿಸಯ್ಯಾ ಫಣಿಗಿರಿವಾಸಜೀಯಾ ಪ. ಪಾಲಿಸೈ ಪಾಲಾಬ್ಧಿಶಾಯಿ ಸುಳೀನೀರದನಿಭಶರೀರ ಶ್ರೀ ಕಾಲ ಕಾಮಿತಫಲಪ್ರದಾಯಕ ಅ.ಪ. ಮುನ್ನ ಮಾಡಿದ ಕರ್ಮದಿಂದಲಿ ಬನ್ನಪಟ್ಟೆನು ಶ್ರೀಹರಿ ಇನ್ನು ನಿನ್ನಯ ಚರಣಯುಗವನು ನಿರ್ಣಯದಿ ನಂಬಿದ ಪರಿ ಉನ್ನತೋನ್ನತವಪ್ಪ ತೆರದಲಿ ಮನ್ನಿಪುದು ನೀ ಕೃಪೆದೋರಿ ಬನ್ನ ಪಡುವುದು ಸಾಕು ಸಂತತ ನಿನ್ನನೆ ನೆರೆನಂಬಿದೆನು ಹರಿ 1 ವಾತಪಿತ್ತಕಫಾದಿ ರೋಗದ ವ್ರಾತದಿಂದ ಬಲು ನೊಂದೆನು ಧಾತುಬಲವತಿ ತಗ್ಗಿ ಉಷ್ಣೋಪೇತದಿಂದಲಿ ಬೆಂದೆನು ಚಾತುರ್ಥಿಕ ಜ್ವರಾತಿಶಯದಲಿ ಶೀತಸ್ಥಾನದಿ ನಿಂದೆನು ಈ ತೆರದ ಕಷ್ಟಗಳು ಬಾರದ ರೀತಿಯಲಿ ಪರಿಹರಿಸು ಸಂತತ 2 ನಿನ್ನನೆ ಮರೆಹೋಗುವ ತೆರದಲಿ ನಿನ್ನ ಸ್ಮರಣೆಯ ಮಾಡುವ ನಿನ್ನ ಭಕ್ತರ ಮೇಳದಲಿ ಸಂಪನ್ನನಾಗುತ ಕೂಡುವ ನಿನ್ನ ಮೂರ್ತಿಯ ನೊಡುವದು ಮತ್ತೆನ್ನ ಕಾಮಿತ ಬೇಡುವ ನಿನ್ನನೇ ಧ್ಯಾನಿಸುವ ಮತಿಸಂಪನ್ನವನು ನೀನಿತ್ತು ಕರುಣದಿ3 ಮಾರುತಿಯ ಚರಣಾರವಿಂದದದಿ ಸೇರಿ ನಿನ್ನನು ಧರೆಯಲಿ ಭೂರಿ ಮಹಿಮೆಯ ವರ್ಣಿಸುವ ಸಾಕಾರ ಮತಿಯನು ಎನ್ನಲಿ ಪ್ರೇರಿಸುತ ಕರುಣಾರಸಾಮೃತ ಬೀರಿ ಭೀತಿಯ ಪರಿಹರಿಸುತ್ತಲಿ4 ಕೊಂಚ ಧನವನು ಕೊಟ್ಟು ಎನಗೆ ಪ್ರಪಂಚವಹ ಗೃಹ ಗೈದಿಸಿ ಮುಂಚೆಮಾಡಿದ ಪಾಪವನು ನಿರ್ಲಚದಿಂದಲೆ ಛೇದಿಸಿ ಮಿಂಚಿಯೆನ್ನೊಳು ಮೋದಿಸಿ ಪಂಚಬಾಣನ ಪಿತನೆ ಮಂಗಳ ವಾಂಛಿತವನೆನಗಿತ್ತು ವಿಭವದಿ5 ಕಷ್ಟದಲಿ ನಿನ್ನ ಧ್ಯಾನ ಬಾರದು ತುಷ್ಟಿಯಲಿ ನಾ ಧ್ಯಾನಿಪೆ ಇಷ್ಟವೇ ನೀನಿತ್ತೆಯಾದರೆ ಕಷ್ಟಗಳ ನಾ ದೂಷಿಪೆ ಶ್ರೇಷ್ಠ ಕಾರ್ಕಳ ಪುರದಿ ಭಕ್ತರ ಒಟ್ಟುಗೂಡುತ ತೋಷಿಪೆ ಭ್ರಷ್ಟಲೋಭದ ಬಂಧುಗಳು ಎನ್ನೊಳಿಷ್ಟವಾಗುವ ತೆರದಿ ದ್ರವ್ಯವ6 ಕಾಲಭೈರವ ಪೇಳಿದಂದದಿ ನಾಲಿಗೆಯೊಳು ತಪ್ಪು ನೋಡದೆ ಪಾಲಿಸುತ ಇಷ್ಟಾರ್ಥವನು ಕೈ ಮೇಳವಿಸು ತಪ್ಪು ನೋಡದೆ ನೀಲಗಿರಿ ಸಮನಾಗಿ ಕಾರ್ಕಳದಾಲಯವ ನೀ ಮಾಡಿದೆ ಪಡುತಿರುಪತಿ ಪುರೇಶನೆ 7
ಪಾಲಿಸೀ ಪಸುಳೆಯನು ಪರಮ ಪುರುಷ ಪ. ಬಾಲೆ ನಿನ್ನವಳೆಂದು ಶ್ರೀ ಕರಿಗಿರೀಶ ಅ.ಪ. ನರಹರಿಯೆ ಲಕ್ಷೀಶ ತರಳೆ ನಿನ್ನವಳಿನ್ನು ತ್ವರಿತದಲಿ ಕಾಪಾಡು ತಡಮಾಡದೆ ಕರಕರೆಯ ರೋಗ ಬಾಧೆಯ ಬಿಡಿಸಿ ಹರಿ ನಿನ್ನ ಕರುಣಾಮೃತವಗರೆದು ಕಡುಕೃಪೆಯೊಳಿನ್ನು 1 ಫಣಿರಾಜಶಯನ ಪರ್ಯಂಕ ದೇವರದೇವ ಬಿನಗು ದೇವರ ಗಂಡ ಎಣೆಯುಂಟೆ ನಿನಗೆ ಮಣಿಯದಾಗ್ರಹದೇವಗಣ ಉಂಟೆ ನಿನಗಿನ್ನು ಕ್ಷಣ ಬಿಡದೆ ಸರ್ವಬಾಧೆಯ ಬಿಡಿಸಿ ಸತತ 2 ಪ್ರಾಣದೇವನೆ ಸರ್ವ ದೇವತೆಗಳಧಿನಾಥ ಪ್ರಾಣದೇವನು ನಿನ್ನ ಪ್ರಾಣ ಪದಕ ಪ್ರಾಣದೇವಗೆ ಪೇಳಿ ಪ್ರಾಣ ಭಯವನೆ ಬಿಡಿಸಿ ಪ್ರಾಣಸೂತ್ರವ ನಡಿಸಿ ತ್ರಾಣಗೆಡದಂತೆ 3 ನಿನ್ನ ದಾಸರ ದಾಸಳಿವಳು ಶ್ರೀಹರಿ ಕೇಳು ಎನ್ನ ಬಿನ್ನಪವ ನೀ ಬರಿದೆನಿಸದೆ ಚನ್ನಾಗಿ ಆಯುರಾರೋಗ್ಯ ಸಂಪದವಿತ್ತು ಮನ್ನಿಸಿ ಕಾಪಾಡು ಮಂಗಳಾತ್ಮಕನೆ 4 ಗುರುಕರುಣ ವರಬಲದಿ ಪುಟ್ಟಿದಾ ಶಿಶು ಇವಳು ಪರಮ ಮಂಗಳೆ ಎನಿಸಿ ಪಾಲಿಸೈ ಜಗದಿ ನಿರುತದಲಿ ನಿನ್ನ ಪದಭಕ್ತಿ ಜ್ಞಾನವ ಕೊಟ್ಟು ಹರಸಿ ಪೊರೆ ಗೋಪಾಲಕೃಷ್ಣವಿಠ್ಠಲನೆ 5
ಪಾಲಿಸೈ ಗೋಪಾಲರಾಯಾ ಶೀಲ ಭಕುತಿ ಜ್ಞಾನವ ನಿತ್ಯ ಸಲಿಸುತ ಪ್ರಸನ್ನನಾಗಿ ಪ ಓಡಿಸಿ ವಿಷ್ಣುವ ನೀಡು ವೈರಾಗ್ಯವ ಬೇಡುವೆ ನಾ ಕೃಪೆ ಮಾಡಿ ಗತಿ 1 ಆರ್ತರಭೀಷ್ಟೆಯ ಪೂರ್ತಿಪದಾನಿ ಶುಭ ಮೂರ್ತಿಸದಾ 2 ಶಾಮಸುಂದರ ಸ್ವಾಮಿಯ ನಿಜ ದಾಸ ಮೌನಿಯ ಘನ ಪ್ರೇಮಾನಿಸ್ವಿತಾ 3
ಪಾಲಿಸೈ ಮುಕುಂದ ಗೋವಿಂದ ಆನಂದದಿಂದ ಪ. ಮಾರಜನಕನೆ ಕೋರಿ ನಿನ್ನೆಡೆ ಸಾರಿ ಬೇಡುವೆನೊ ಗಾರುಗೊಳಿಸದೆ ತೋರು ಕರುಣೆಯ ಮಾರಹರನುತ ವೀರರಾಘವ 1 ಭಾನುಕೋಟಿ ಸಮಾನ ಭಾಸುರ ಜಾನಕೀ ಮನೋಹರ ದಾನವಾಂತಕ ದೀನರಕ್ಷಕ ಮಾನನಿಧಿ ಪೊರೆ ಸುಜ್ಞಾನವಾರಿಧಿ 2 ಪೋಷ ಭವಭಯನಾಶನ ಕ್ಲೇಶಹರಣ ಶ್ರೀಕೇಶವಾಚ್ಚುತ ಲೇಸು ಬೇಡುವೆ (ನಾ) ಮೀಸಲಿರಿಸಿಹೆ 3
ಪಾಲಿಸೈ ರಮಾರಮಣನೆ ಎನ್ನ ನೀಲಮೇಘ ಶ್ಯಾಮನೆ ಪ ಪಾಲಿಸಿ ಜಗಲೀಲೆ ತೋರಿದಿ ಪಾಲಭಕ್ತ ಭವಮೂಲಪರಿಹರ ಅ.ಪ ಜಾಳು ಸಂಸಾರೆಂಬೊಸಂಕೋಲೆ ಕಾಲಿಗೆ ತೊಡರಿ ಎನ್ನನು ಕೀಳನೆನಿಸಿತ್ತು ಶೀಲ ಕೆಡಿಸಿ ಬಾಳಿ ಫಲವಿಲ್ಲ ತಾಳೆನಭವ 1 ನಾಶವಾಗುವ ದೇಹಧರಿಸಿ ನಾಶನಾಲೋಚನೆಯ ಸ್ಮರಿಸಿ ಏಸು ರೀತಿಲಿ ಘಾಸಿಯಾದೆ ಭವ ಪಾಶದ ಬಾಧೆ ಸಹಿಸೆನಭವ 2 ತಂದೆ ಶ್ರೀರಾಮ ಮಂದಮತಿತನ ದಿಂದ ಕಂದನುಮಾಡಿದ ಒಂದು ದೋಷಗಣಿಸದಲೆ ದಯದಿಂ ಬಂಧದಿಂದ ಮುಕ್ತಿ ಹೊಂದಿಸಭವ 3
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತ ಕಾಲಭೈರವ ನುತಿಪೆ ನಾ ಸತತ ಕಾಲಕಲ್ಪಿತ ಲೀಲೆಯರಿತು ಸು- ಶೀಲತನವನು ಮೆರೆಯಲೋಸುಗ ಸ್ಥೂಲಸೂಕ್ಷ್ಮಾಕೃತಿಯ ಧರಿಸಿದ ಮೂಲಿಕಾ ಶ್ರೀನಿವಾಸ ಭೈರವ 1 ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ- ವೀರ ಶ್ರೀರಾಮನ ಸೇತು ನೋಡುತ್ತ ಧರೆಯ ಸಂಚರಿಸುತ್ತ ಬರುತಿರೆ ಮಿರುಪ ಶೇಷಾಚಲ ನಿರೀಕ್ಷಿಸಿ ಭರದಿ ಗಿರಿಮೇಲಡರಿ ಶ್ರೀಶನ ಚರಣಕಾನತನಾಗಿ ಸ್ತುತಿಸಿದೆ 2 ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿ ಇರಿಸಿ ಮೆರೆಸಿದೆ ಕೀರ್ತಿಕರವಲ್ಲಿ ತ್ವರಿತದಿಂ ನೀನೆಲ್ಲ ದೇಶದ ಪರಿಪರಿಯ ಕಾಣಿಕೆಯ ತರಿಸುತ ಹರಿಯ ದರುಶನಗೈವ ಮೊದಲೆ ಹರುಷದಿಂದಲಿ ಪೂಜೆಗೊಂಬುವೆ 3 ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿ ಧರಿಸಿ ಮೃದುತರವಾದ ವಾಕ್ಯದಲಿ ಕರೆಸಿ ಒಬ್ಬೊಬ್ಬರ ವಿಚಾರಿಸಿ ಸರಸದಿಂದಲಿ ಪೊಗಳಿಕೊಳ್ಳುತ ನರರ್ಗೆ ಸೋಂಕಿದೆ ಭೂತಪ್ರೇತದ ಭಯಗಳನು ಪರಿಹರಿಸಿ ಪಾಲಿಪೆ 4 ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪ ಖ್ಯಾತ ವೆಂಕಟಪತಿಗೆ ಸಖಿಯಷ್ಪ ಖ್ಯಾತಿಯಿಂ ದೊರೆಯಿದಿರಿನಲಿ ಸಂ- ನಿಧಿಸನ್ನುತನಾಗಿ ಮೆರೆದಿಹೆ ಓತು ಕರುಣದೊಳೊಲಿದು ಪಾಲಿಪ ದಾತ ಲಕ್ಷ್ಮೀನಾರಾಯಣಾಪ್ತನೆ 5
ಪಾಲಿಸೈ ಶ್ರೀ ಲೋಲನೆ ಎನ್ನ ಪ ಕಾಲ ಯಾಲ, ಶೋಭಿತ ರತ್ನಜಾಲ, ಭೂಷಿತ ಲೀಲ ಅ.ಪ ತ್ರಿಜಗ ಬಂಧು, ಪೊರೆಯೊ ದಯಾಸಿಂಧು ನುತಿಪೆನಿಂದು 1 ಹಾರ, ಭವದೂರ, ಸುಖಸಾರ, ಯದುವೀರನೆ 2 ಭವ ರ್ವೇಶ, ದೇವೇಶ ಸದಾನಂದ ಶ್ರೀನಿವಾಸ 3