ಒಟ್ಟು 26 ಕಡೆಗಳಲ್ಲಿ , 17 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿವಾಸರದುಪವಾಸದ ಫಲವು ಕಂಡವರಿಗೆ ದೊರಕುವುದೆ ಪ. ಹಿರಿದು ಜನ್ಮಗಳಲಿ ಹರಿಯನಾರಾಧಿಪ ಪರಮ ಭಾಗವತರ ಭಕ್ತರಿಗಲ್ಲದೆ ಅ.ಪ. ಸ್ನಾನಸಂಧ್ಯಾನವು ಮೊದಲಾದ ಕರ್ಮ ನ್ಯೂನದ ಪಾಪಂಗಳು ದೀನತ್ವದಿಂದ ತುಚ್ಛರಕೈಯ ಹಿಡಿದ ದು ರ್ದಾನದ ಪಾಪಂಗಳು ಭಾನುಬಿಂಬವ ಕಂಡ ಹಿಮದಂತೆ ಚಿದಾನಂದವಾದ ವ್ರತಕೆ ಸರಿ ಬಾರದು 1 ಪರಸತಿಯರ ನೋಡಿ ಮನವಿಟ್ಟ ಪಾಪವು ಪರದೂಷಣೆಯ ಪಾಪವು ಪರಮಾತ್ಮನ ಹೊಗಳುವ ನಾಲಗೆಯಲ್ಲಿ ನರರ ಹೊಗಳುವ ಪಾಪವು ಪರ ವಸ್ತುಗಳನಪ- ಹರಿಸುವ ಪಾಪಂಗಳು ಕರಿ ಓಡುವಂತೆ ದುರಿತ ಕೋಟಿಗಳನು ಪರಿಹರಿಸುವ ಶ್ರೀ 2 ಆಡುವ ಅನೃತವಾಕ್ಯಗಳಿಂದ ಸಂಭವವಾಗುವ ಪಾಪಂಗಳು ನೋಡಿಕೊಳ್ಳದೆ ದುರಾನ್ನವನುಂಬ ದುರ್ದಾನದ ಪಾಪಂಗಳು ಮಾಡಬಾರದ ದಿನದಲಿ ಸ್ತ್ರೀಗೋಷ್ಠಿಯ ಮಾಡಿದ ಪಾಪಂಗಳು ಓಡುವುದಘಸಂಘ ಉತ್ತಮವಾಗಿಹ3 ಮತ್ತೆ ಈ ಬಹಳ ಪಾಪಗಳಿಗೆಲ್ಲ ತಾ ಪಕ್ಷ ಪ್ರಾಯಶ್ಚಿತ್ತವು ಉತ್ತಮವಾದ ವ್ರತಗಳಿಗೆಲ್ಲ ತಾ ಉತ್ತಮವೆನಿಸುವುದು ಚಿತ್ತಶುದ್ಧಿಯನಿತ್ತು ಜ್ಞಾನವೈರಾಗ್ಯದಿ ಭಕ್ತಿ ಮಾರ್ಗವನೀವುದು ಮುಕ್ತಿಗೆ ಸೋಪಾನವಾಗಿ ಭವಾಭ್ಧಿಯ ದಾಟಿಸಿ ಹರಿಯ ಸನ್ನಿಧಿಗೆ ದಾರಿಯನೀವ 4 ತೋರುವ ದಶಮಿ ದ್ವಾದಶಿಗಳು ಸಂಪುಟಾಕಾರದಿ ಹರಿದಿನವು ಮೂರುದಿನದ ವ್ರತ ನಾಲ್ಕು ಹೊತ್ತಿನ ಆಹಾರಗಳು ವರ್ಜಿತವು ಊರುದಾರಿಗಳ ನಡೆಯದೆ ತಾಂಬೂಲ ಚರ್ವಣಂಗಳೊರ್ಜಿತವು ಜಾಗರ ಮಾಡಿ ವ್ರತವಾಚರಿಸುವ 5 ಅತಿಶಯವಾದ ಶ್ರೀಹರಿದಿನದಿ ಪಿತೃತರ್ಪಣಗಳು ವಜ್ರ್ಯವು ಪ್ರತಿವರುಷದಲಿ ಆಚರಿಸುವ ತಾಯಿತಂದೆ ತಿಥಿಗಳೆಲ್ಲ ವಜ್ರ್ಯವು ಸತತವು ಮಾಡುವ ಯಜ್ಞಪುರುಷಗೆ ಆಹುತಿಗಳೆಲ್ಲ ವಜ್ರ್ಯವು ಇತರ ಭೋಗ ಕೃತ್ಯಗಳನೆಲ್ಲ ವರ್ಜಿತಮಾಡಿ ಈ ವ್ರತವನಾಚರಿಸುವ 6 ಹಲವು ವ್ರತಗಳಾಚರಿಸಿ ದಾನಂಗಳ ಹಲವು ಮಾಡಿದರೇನು ಹಲವು ಪುಣ್ಯತೀರ್ಥನದಿಯಲ್ಲಿ ಸ್ನಾನವÀ ಮುದದಿ ಮಾಡಿದರೇನು ಹಲವು ಪುರಾಣಂಗಳ ಹಲವು ಶಾಸ್ತ್ರಂಗಳ ಹಲವು ಕೇಳಿದರೇನು ಶ್ರೀಹಯವದನನ್ನ ದಿನಕೆ ಸರಿಬಾರದು 7
--------------
ವಾದಿರಾಜ
(ಮೂಲ್ಕಿಯ ನರಸಿಂಹ ದೇವರು)ರಕ್ಷಿಸು ಮನದಾಪೇಕ್ಷೆಯ ಸಲಿಸುತಲಕ್ಷ್ಮೀನರಹರಿ ರಾಕ್ಷಸವೈರಿ ಪ.ಅಕ್ಷಮ ದುಶ್ಯೀಲ ದುವ್ರ್ಯಾಪಾರದಿಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ.ಉಭಯ ಶುಚಿತ್ವವು ಊರ್ಜಿತವೆನೆ ಜಗ-ದ್ವಿಭುವಿಶ್ವಂಭರವಿಬುಧಾರಾದ್ಯಶುಭಮತಿ ಸಂಸ್ಥಿತಿಯಭಯವ ಪಾಲಿಸೊತ್ರಿಭುವನಮೋಹನ ಪ್ರಭು ನೀನನುದಿನ 1ತಂದೆಯ ಮುನಿಸಿನ ಕಂದನ ಸಲಹುತಸಿಂಧುಶಯನ ನಿತ್ಯಾನಂದ ಗುಣಾಬ್ಧೇಹಿಂದಣ ಪಾಪವು ಮುಂದೆಸಗದ ರೀತಿಮಂದರಾದ್ರಿಧರ ಮಾಮವ ದಯಾಕರ 2ಪಾಪಾತ್ಮರಲಿ ಭೂಪಾಲಕನು ನಾಶ್ರೀಪತಿ ಕರುಣದಿ ಕಾಪಾಡುವುದುಗೋಪೀರಂಜನ ಗೋದ್ವಿಜರಕ್ಷಣಕಾಪುರುಷರ ಭಯ ನೀ ಪರಿಹರಿಸಯ್ಯ 3ಸರ್ವೇಂದ್ರಿಯ ಬಲತುಷ್ಟಿಪುಷ್ಟಿಯಿತ್ತುಸರ್ವಾಂತರ್ಯದೊಳಿರುವನೆ ಸಲಹೊದುರ್ವಾರಾಮಿತ ದುರ್ವಿಷಯದಿ ಬೇ-ಸರ್ವೇನು ಪನ್ನಗಪರ್ವತವಾಸನೇ 4ಶರಣಾಗತನಾಗಿ ಸೆರಗೊಡ್ಡಿ ಬೇಡುವೆವರಮೂಲಿಕಪುರ ದೊರೆಯೇಹರಿಲಕ್ಷ್ಮೀನಾರಾಯಣತ್ರಿಜಗದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕದವನಿಕ್ಕಿದಳಿದೆಕೊ ಗಯ್ಯಾಳಿ ಮೂಳಿ ಪ.ಕದವನಿಕ್ಕಿದಳಿದಕೊ ಚಿಲಕವಲ್ಲಾಡುತಿದೆ |ಒದಗಿದ ಪಾಪವು ಹೊರಗೆ ಹೋದೀತೆಂದು ಅ.ಪಭಾರತ - ರಾಮಾಯಣ ಪಂಚರಾತ್ರಾಗಮ |ಸಾರತತ್ವದ ಬಿಂದು ಕಿವಿಗೆ ಬಿದ್ದೀತೆಂದು 1ಹರಿಯ ಪಾದಾಂಬುಜಯುಗಳವ ನೆನೆವ ಭ - |ಕ್ತರ ಪಾದದರಜ ಒಳಗೆ ಬಿದ್ದೀತೆಂದು 2ಮಂಗಳ ಮೂರುತಿ ಪುರಂದರವಿಠಲನ |ತುಂಗವಿಕ್ರಮಪಾದ ಅಂಗಳ ಪೊಕ್ಕೀತೆಂದು 3
--------------
ಪುರಂದರದಾಸರು
ಕೃಷ್ಣವೇಣಿ164ನಮೋ ನಮೋ ಕೃಷ್ಣವೇಣಿನಮೋ ನಮೋ ಕೃಷ್ಣವೇಣಿ ಕಲ್ಯಾಣಿ ಪ.ಈ ಜನ್ಮದಘವು ನಾನಾ ಜನ್ಮಕೃತದೋಷಆರ್ಜಿತವಾದ ಪಂಚ ಮಹಾಪಾಪವುತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ 1ವಿಪ್ರಮುನಿ ಸುರನರರು ಕನ್ಯಕ್ಕೆಗುರುಬರಲುಕ್ಷಿಪ್ರನೆರೆದರು ಉಭಯತೀರವಿಡಿದುಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯನೆ ಪ್ರಸನ್ನೀಕರಿಸಿಕೊಳ್ಳುವರಮ್ಮ 2ನಿರ್ಮಳಾತ್ಮಕÉ ಗಂಗೆ ಸಂಗೆ ಗುಣೋತ್ತುಂಗೆಹಿಂಗಿಸು ಭವವ ಪಾವನತರಂಗೆಜಂಗಮ ಜಡಾತ್ಮರನುದ್ಧರಿಸುತಿಹೆ ಸದಾಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ 3
--------------
ಪ್ರಸನ್ನವೆಂಕಟದಾಸರು
ಕೆಡಗೊಡದಿರು ದೇಶಿಗ ನಾ ರಂಗಕೆಡಗೊಡದಿರು ದೇಶಿಗ ನಾ ಪ.ನುಡಿ ನುಡಿದು ಮುಪ್ಪಾದೆ ನನ್ನಯನಡೆ ನೋಡಲು ಹುರುಳಿಲ್ಲಹುಡಿ ಹುಡಿಯಾದೆನೊ ವಿಷಯದ ಬಯಕೆಲಿಅಡಿಗಡಿಗೊದಗಿತು ಪಾಪವು ರಂಗ 1ಜಪತಪವ್ರತಗಳ ನೇಮವನರಿಯೆನಿಪುಣ ಪೂಜಾವಿಧಿಯರಿಯೆಅಪರಿಮಿತಶುಭಕ್ರಿಯದೊಳು ಕಾಮನಚಪಲತೆ ಭ್ರಮೆಗೊಳಿಸುತಿದೆ ರಂಗ 2ಹಿಡಿ ಹಿಡಿ ಮುಳುಗುವೆ ಯಾರಿಲ್ಲವೊ ಪಾಲ್ಗಡಲೊಡೆಯ ಭವಾಬ್ಧಿಯಲಿಚಡಪಡಿಸುವೆ ಮೂರುರಿಯಲಿಹರಿನಿನ್ನಡಿಯೆಡೆಲಿಡು ಪ್ರಸನ್ವೆಂಕಟ ರಂಗ 3
--------------
ಪ್ರಸನ್ನವೆಂಕಟದಾಸರು
ಮರುತ ದೇವರ ಹೊಂದಿರೋ ಮೂಜಗದ |ಗುರುಮರುತ ದೇವರ ಹೊಂದಿರೋ ಪಮರುತ ದೇವರ ಹೊಂದಿದವರ ಪಾಪವು ಪೋಗಿ |ಹರಿಮಂದಿರವನೈದುವದಕೆ ಸಂದೇಹವಿಲ್ಲ ||ಅ. ಪ||ದಶರಥ ಸುತನಂಗನೆಯ ಕದ್ದೊಯ್ದಿರಲಾಗಿ |ದಶಕವಾನರಸ್ತೋಮರವಿಜನಾಜ್ಞಾ ||ದೇಶದಿಂದೆಲ್ಲರಾಶೆ ಭಯದಲಡಗಿ ರಕ್ಷಿಸೋ |ಶ್ವಸನಾ ಯೆನಲು ಪೋಗಿ ಶೀಘ ್ರವಾರ್ತೆಯ 1ಕುರುಜನುಪಟಳಕೆ ಪಾರ್ಥಾರಳಲಿವನ|ಚರಿಸಲುತವಕಬೀಳದೆ ಪ್ರಾಂತಕ್ಕೆ ||ದುರುಳರ ಸದೆದು ಭೂಭಾರವ ಕಳೆದು ಸಹೋದ- |ರರ ಪ್ರೀತಿಪಡಿಸಿ ಕೃಷ್ಣನ ದಯೆ ಪಡೆದ 2ಗುಣಪೂರ್ಣಅನಘಶ್ರೀ ಪ್ರಾಣೇಶ ವಿಠಲನ ನಿ- |ರ್ಗುಣನೆಂದು ಅಸುರರು ದುರ್ಮತ ಸ್ಥಾಪಿಸೆ ||ಘನಶಾಸ್ತ್ರ ವಿರಚಿಸಿ ಐಕ್ಯವ ಬಿಡಿಸಿ ಸ |ಜ್ಜನರ ಪೊರೆವ ಶ್ರೀ ಆನಂದ ಮುನಿಪರೆಂಬ 3
--------------
ಪ್ರಾಣೇಶದಾಸರು
ಯೋಗಿಯಹುದಹುದೋ ಚಿದಾನಂದಯೋಗಿಯಹುದುಹುದೋ ದಯಾಸಾಗರ ಕಾರಣ್ಯದಾಗರ ನಿತ್ಯಾತ್ಮಪಅಷ್ಟಮದಂಗಳನ್ನು ಸುಟ್ಟು ಭಸ್ಮವ ಮಾಡಿಹಅಷ್ಟ ಪ್ರಕೃತಿಯನ್ನು ಕಾರಿ ಕಾರಿ ಮಹದಷ್ಟ ಯೋಗವ ಸಾಧಿಸಿ ಶ್ರವಣವನ್ನುಕೊಟ್ಟುನಾದವ ಭೇದಿಸಿ ಆತ್ಮದಲ್ಲಿದೃಷ್ಟಿ ಎಂಬುದ ನಿರಿಸಿ ಸರ್ವಕಾಲಶಿಷ್ಟರೆಂದೆನಿಪ ಉತ್ಕøಷ್ಟಮಾರ್ಗದವಾಸಿ1ಆರು ಅರಿಯ ಮೀರಿದರು ಭ್ರಮೆಯ ವಿಕಾರವ ತರಿದುತರಿದು ಹೀರಿ ಆರು ಚಕ್ರದ ಮೇಲೆಏರಿ ಸಹಸ್ರಾರ ಸ್ಥಳದಿನಿಂದುಜ್ಯೋತಿರ್ಮಯಸಾರವ ಸೇವಿಸುತಲಂದು ನಿತ್ಯಾನಿತ್ಯಘೋರತಪದಿಯೋಗಿಶೂರ ಭಕ್ತರ ಬಂಧು2ಸಪ್ತವ್ಯಸನರೂಪಕೆಡಿಸಿ ಬಳಿಕ ದುಷ್ಟಸಪ್ತಾವರಣವನ್ನು ತುಳಿದು ಪಾದದಲೊದ್ದುಗುಪ್ತವಾಗಿಹ ಪ್ರಭೆಯ ಶೋಧಿಸಿಘನತೃಪ್ತ ಅಮೃತ ಸುಧೆಯ ಸುರಿದು ಮೇರುಕಾಂಚನ ಗಿರಿಯ ಸೇರಿಯೆ ಜ್ಯೋತಿವ್ಯಾಪಕಭಾಸ್ಕರದೀಪ್ಯಮಾನ ಪ್ರಭಾ3ಕರ್ಮಪಾಪವು ಪುಣ್ಯಹಮ್ಮುವಾಸನಕ್ಷಯದುರ್ಮತಿ ದುರ್ಗುಣವೆಲ್ಲ ದೊಡ್ಡಬ್ರಹ್ಮಾನಂದದ ಲಕ್ಷಣ ತಿಳಿದಾ ನಿತ್ಯಾನಿರ್ಮಳ ನಿರಾವರಣ ರೂಪಿತ ಆತ್ಮಸ್ವರ್ಮಣಿ ಸುಗುಣನಿರ್ಗುಣಪರಬ್ರಹ್ಮವೇ ತಾನಾಗಿ ಬೆಳಗುವ ಯತಿ ಜಾಣ4ಸಾಧನ ನಾಲ್ಕನು ಸಾಧಿಸಿನಾದವ ಭೇದಿಸಿ ಜ್ಯೋತಿ ಸಂಪಾದಿಸಿ ಆತ್ಮನಭೇದವೆಂಬುದನರಿತ ಬಳಿಕಘನಸಾಧನಗುಣಚರಿತಯೋಗಿ ತಾನೆನಿಸಿ ಕೈವಿಡಿಯೆನ್ನಬೋಧಸದ್ಗುರು ಚಿದಾನಂದಅವಧೂತ5
--------------
ಚಿದಾನಂದ ಅವಧೂತರು
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.ಶೀತಲವಾಯ್ತುಹಾಲಾಹಲಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ 1ಸಿರಿಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ 2ತ್ಯಾಗಭೋಗಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ ಫಲವಿದುಶ್ರೀ ಗಂಗಾಜನಕನ ತಂದು ತೋರುವುದು 3ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅಸಂಪ್ರಜ್ಞಾತಸ್ಥರಿಗೆ ಹರಿಗೋಲುಸುಪ್ರಾಪ್ತ ಮುಕ್ತರುಂಬಮೃತ ಕಣಗಳುಶ್ರೀ ಪ್ರಾಣನಾಥನ ನಾಮಾವಳಿಗಳು 4ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆಮಧ್ವಶಾಸ್ತ್ರಜÕರ ವಚನಾಗ್ನಿಗೆ ಅರಣಿಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ 5
--------------
ಪ್ರಸನ್ನವೆಂಕಟದಾಸರು
ಹರಿದಿನದಲಿ ಉಂಡ ನರರಿಗೆ -ಘೋರ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರಕ ತಪ್ಪದು ಎಂದುಶ್ರುತಿಸಾರುತಲಿದೆಪ.ಗೋವ ಕೊಂದ ಪಾಪ, ಸಾವಿರ ವಿಪ್ರರ |ಜೀವಹತ್ಯದ ಮಾಡಿದ ಪಾಪವು ||ಭಾವಜನಯ್ಯನ ದಿನದಲುಂಡವರಿಗೆ |ಕೀವಿನೊಳಗೆ ಹಾಕಿ ಕುದಿಸುವ ಯಮನು 1ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |ಅಂದಿನ ಅನ್ನವು ನಾಯ ಮಾಂಸ ||ಮಂದರಧರನ ದಿನದಲುಂಡವರನು |ಹಂದಿಯ ಸುಡುವಂತೆ ಸುಡುವನು ಯಮನು 2ಅನ್ನ -ಉದಕ ತಾಂಬೂಲ - ದರ್ಪಣಗಳು |ಚೆನ್ನವಸ್ತ್ರಗಳೆಲ್ಲ ವರ್ಜಿತವು ||ತನ್ನ ಸತಿಯ ಸಂಗ ಮಾಡುವ ಮನುಜನ |ಬೆನ್ನಲಿ ಕರುಳ ಉಚ್ಚಿಸುವನು ಯಮನು 3ಜಾವದಜಾಗರಕ್ರತು ನಾಲ್ಕು ಸಾವಿರ |ಜಾವ ನಾಲ್ಕರ ಫಲಕೆ ಮಿತಿಯಿಲ್ಲವು ||ದೇವದೇವನ ದಿನದಿ ನಿದ್ರೆಗೈದರೆ ಹುರಿ - |ಗಾವಿಲಿಯೊಳು ಹಾಕಿ ಹುರಿಯುವ ಯಮನು 4ಇಂತು ಏಕಾದಶಿ ಉಪವಾಸಜಾಗರ |ಸಂತತ ಕ್ಷೀರಾಬ್ಧಿಶಯನನ ಪೂಜೆ ||ಸಂತೋಷದಿಂದಲಿ ಮಾಡಿದ ಜನರಿಗ - |ನಂತ ಫಲವನೀವ ಪುರಂದರವಿಠಲ 5
--------------
ಪುರಂದರದಾಸರು