ಒಟ್ಟು 28 ಕಡೆಗಳಲ್ಲಿ , 18 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇಣು ಗಾನಪ್ರಿಯ - ಗೋವಿಂದ ನಮ್ಮಮಾನ್ಯ ಮಾನದನೇ - ಗೋವಿಂದ ಪ ದಕ್ಷಿಣಾಕ್ಷಿಯಲಿಹ - ಗೋವಿಂದ | ನಮ್ಮ | ಪಕ್ಷಿಯ ವಾಹ - ಮುಕುಂದ ||ಕುಕ್ಷಿಲಿ ತ್ರಿಭುವನ - ಗೋವಿಂದ | ನಮ್ಮ | ಅಕ್ಷರ ಕ್ಷರವರ _ ಮುಕುಂದ1 ಪೂರ್ಣ ಗುಣಾರ್ಣವ - ಗೋವಿಂದ | ನಮ್ಮ | ಪೂರ್ಣ ಭೋದನುತ ಮುಕುಂದಪೂರ್ಣಾನಂದ ಪ್ರದ - ಗೋವಿಂದ | ಕುಭ | ವಾರ್ಣವ ದಾಟಿಸು ಮುಕುಂದ 2 ಭವ | ಗೋಜನೆ ಬಿಡಿಸೊ - ಮುಕುಂದ 3 ಕಾರಣ ಕಾರಣ - ಗೋವಿಂದ | ಜಗ | ಕಾರಣ ನೈಮಿತ್ಯ - ಮುಕುಂದಈರಣ ಜಗಕೆಲ್ಲ - ಗೋವಿಂದ | ಮದ ವಾರಣ ಮಾರಣ - ಮುಕುಂದ 4 ಶಿರಿ ಹಯವದನನೆ - ಗೋವಿಂದ | ನಮ್ಮ | ಶಿರಿ ಕೃಷ್ಣ ರಾಮನೆ - ಮುಕುಂದಶಿರಿ ವೇದವ್ಯಾಸ - ಗೋವಿಂದ | ಕಾಯೊ | ಗುರು ಗೋವಿಂದ - ವಿಠಲ ಮುಕುಂದ 5
--------------
ಗುರುಗೋವಿಂದವಿಠಲರು
ಶರಣಜನೋದಧಿಚಂದ್ರಾ ಸಿರಿ ಯರಸ ದೇವ ದೇವ ಕರುಣಿ ಮುಕುಂದಾ ಪ ಹಾರದ ನಿಗದಿಯ ಬಿಟ್ಟು ಸೋತವನಾಗಿ ವ್ಯಾಸ ಭೀಷ್ಮನ ಗೆಲಿಸಿದೆ ಮುಕುಂದಾ 1 ಹಗಲೇ ಇರಳ ಮಾಡಿ ಸೈಂಧವನಸುವನು ತೆಗಿಸಿ ನರನ ವಾಸಿ ಕೊಂಡ್ಯೋ ಮುಕುಂದಾ 2 ಶರಧಿಯಂಜಿಸಿಕೊಂಡು ಪಕ್ಷಿಯ ಶಿಶುವಾಗಿ ಗರುಡನ ವಾಸಿಯ ಕೊಂಡ್ಯೊ ಮುಕುಂದಾ 3 ದಶಜನುಮವತಾಳಿ ಮುನಿಯ ಬೆದರಿಸ್ಯಂಬ ರಿಕ್ಷಣ ಫಲನಡಿಸಿದೆ ಮುಕುಂದಾ 4 ಗುರು ಮಹಿಪತಿ ಸ್ವಾಮಿ ಭಕ್ತ ವತ್ಸಲನೆಂಬ ಬಿರುದುವಾಳಿದರೆಂದು ಸಲಹೋ ಮುಕುಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀರಾಮ ನಿನ್ನ ಪದಕೆರಗಿ ನಮಿಸಿವೆನು ತೋರೆನಗೆ ನಿಜರೂಪ ಪರಿವಾರ ಸಹಿತ ಪ. ಶ್ರೀ ಗುರುಗಳಿಗೆರಗಿ ಅವರ ಕರುಣಾಬಲದಿ ಈಗ ಈ ಜನ್ಮದಲಿ ನಿನ್ನ ಭಜಿಪೆ ನಾಗಶಯನನೆ ನಿನ್ನ ಜನ್ಮಕರ್ಮದ ದಿನದಿ ಬೇಗ ಬಂದೆನ್ನೊಳಗೆ ನೆಲಸಿದೆಯೊ ದೇವ 1 ನಿನ್ನ ದರುಶನಕೆಂದು ಘನ್ನ ಯೋಗಿಗಳು ಬರೆ ಮನ್ನಿಸೆ ಇರುತಿರಲು ದ್ವಾರಪಾಲಕರು ಇನ್ನವರ ಶಾಪದಲಿ ದೈತ್ಯಕುಲದಲಿ ಜನಿಸೆ ಮುನ್ನವರ ಪೊರೆಯಲು ಭೂಮಿಯೊಳು ಬಂದೆ 2 ದಶರಥಗೆ ಸುತನಾಗಿ ತಾಟಕಿಯ ಸಂಹರಿಸಿ ಅನುಜ ಕುಶಲದಿಂದಲಿ ಶಿಲೆಯ ಹೆಣ್ಣುಗೈಯುತ ಬಂದು ಶಶಿಮುಖಿ ಸೀತೆಯನು ಕರಪಿಡಿದ ದೇವ 3 ಧನುವ ಮುರಿದುದ ಕೇಳೀ ಜಮದಗ್ನಿ ಕುವರನು ನಿನ ಸಂಗಡದಲಿ ಕಾಳಗಕೆ ಬರಲು ದನುಜರಿಗೆ ಭ್ರಮೆಗೊಳಿಸಿ ಕನಲುತಿಬ್ಬರು ಕಾದಿ ಘನಬಲ ಗೆಲಿದಂಥ ಅನುಗುಣನೆ ರಾಮ 4 ಅನುಜ ಸೀತೆ ಸಹಿತದಿ ವನಕೆ ಪ್ರೀತಿಯಿಂದಲಿ ಪೋದೆ ನೀತಿಯನು ತಿಳಿದು ಪಾತಕವ ಹರಿಸುವ ಪರಮ ಪಾವನ ಮೂರ್ತಿ ಈ ತೆರದ ಲೀಲೆಯನು ತೋರಿದೆಯೊ ಜಗಕೆ 5 ಕಂಡು ಮಾಯಾಮೃಗವ ಅಂಡಲೆದು ಅದರೊಡನೆ ಭಂಡ ರಾವಣ ಬಂದು ಭಿಕ್ಷುಕನ ತೆರದಿ ಲಂಡನತದಲಿ ಸೀತೆಯನು ಕದ್ದು ಓಡಲು ಕಂಡು ನಿರ್ಜನ ಗೃಹವ ಬೆಂಡಾದ ರಾಮ 6 ಅನುಜನೊಡನೆ ವನವ ಅಲೆದಲೆದು ಕಂಗೆಟ್ಟು ಘನ ಪಕ್ಷಿಯಿಂದಲಿ ವಾರ್ತೆ ತಿಳಿದು ಹನುಮ ಸುಗ್ರೀವರಿಗೆ ಒಲಿದು ವಾಲಿಯ ಕೊಂದು ವನಿತೆ ಸೀತೆಯನರಸೆ ವಾನರರ ಕಳುಹಿದೆ 7 ಹನುಮನಿಂದಲಿ ಸುಟ್ಟು ದನುಜಪುರ ಉಂಗುರವ ವನಿತೆ ಸೀತೆಗೆ ಕೊಟ್ಟು ವಾರ್ತೆ ತರಿಸಿ ವನಧಿಗೆ ಸೇತುವೆಯ ಕಟ್ಟಿ ವಾನರರೊಡನೆ ದನುಜ ರಾವಣ ಸಹಿತ ರಕ್ಕಸರ ಕೊಂದೆ 8 ಅಗ್ನಿಯಿಂ ಸೀತೆಯನು ಶುದ್ಧಳೆನಿಸಿ ಗ್ರಹಿಸಿ ವಿಘ್ನವಿಲ್ಲದ ಪದ ವಿಭೀಷಣಗಿತ್ತು ಮಗ್ನನಾಗಿರೆ ಭರತ ನಿನ್ನ ಪದಧ್ಯಾನದಲಿ ಅಗ್ನಿಸಖಸುತನೊಡನೆ ವಾರ್ತೆ ಕಳುಹಿಸಿದೆ 9 ಬಂದೆದುರುಗೊಳ್ಳೆ ಭರತನು ಸಕಲ ಪರಿವಾರ ಬಂದಯೋಧ್ಯೆಗೆ ಸಕಲ ಸನ್ನಾಹದಿ ಅಂದು ಸಿಂಹಾಸನದಿ ಪಟ್ಟಾಭಿಷೇಕವಗೊಂಡು ಬಂದ ಭಕ್ತರಿಗೆ ಇಷ್ಟ್ಟಾರ್ಥ ಸಲಿಸಿದೆಯೊ 10 ಕೊಟ್ಟು ಕಪಿಗೆ ಬ್ರಹ್ಮಪಟ್ಟದ ಪದವಿಯನು ಶ್ರೇಷ್ಠನೆನಿಸಿದೆಯೊ ಜಗಕೆ ಬೆಟ್ಟದೊಡೆಯ ಇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಎನಗೆಕೆಟ್ಟ ಸಂಸೃತಿ ಬಿಡಿಸಿ ಕೊಟ್ಟಭಯ ಸಲಹೊ 11
--------------
ಅಂಬಾಬಾಯಿ
ಸುಲಭದ ಮಾತಿದು ತಿಳಿದು ಪೇಳಿ ಹೊಲಬುದಪ್ಪಲು ಬೇಡ ಸುಲಿಗೆಯಾಹುದು ಮುಂದೆ ಪ ಅಂತರಿಕ್ಷದಲೊಂದು ನಿಂತಿಹ ವೃಕ್ಷವಾ- ನಂತಾನಂತವಾದೆಲೆಗಳುಂಟು ನಿಂತಿಹ ಎಲೆಗಳು ಬೀಳುವುದನು ನೋಡಿ ಮಂತ್ರಿಯೊಬ್ಬನು ಕುಳಿತು ಎಣಿಸುವನಯ್ಯ 1 ಭೂಮಿಯ ಮೇಲೊಂದು ಭೂಮಿಯು ಜನಿಸಲು ತಾ ಮನಸೋತನು ದೊರೆಯೊಬ್ಬನು ಪ್ರೇಮದಿ ರಾಜ್ಯವನಾಳುವ ಸಮಯಕ್ಕೆ ಸೀಮೆಯ ಮೇಲೆಲ್ಲ ಗುಡಿಗಟ್ಟಿತಯ್ಯ 2 ಕಡಗೋಲು ಮಿಡುಕಿತು ಒಡೆಯಿತು ಪಾತ್ರವು ಪಿಡಿದ ಬೆಣ್ಣೆಯೊಳೊಂದು ಗಿಡ ಹುಟ್ಟಿತು ಅಡವಿಯ ಮಧ್ಯದಿ ಹುಟ್ಟಿದ ಗಿಡವಿನ ಎಡೆಯೊಳು ಗಿಣಿ ಬಂದು ಮರಿಯಿಕ್ಕಿತಯ್ಯ 3 ಬಿಲ್ಲುಗಾರನು ಬಂದು ಬಲ್ಲಿದ ಪಕ್ಷಿಯ ಮೆಲ್ಲನೆ ಕೆಡೆಯಲು ಬೇಕೆನುತ ನೆಲ್ಲಿಯ ಎಲೆಯನ್ನು ಎಣಿಸಿ ಬೀಸಾಡುವ ನಲ್ಲನೊಬ್ಬನು ಕಂಡು ಹೊರಗಿಟ್ಟನಯ್ಯ 4 ಗುಡಿಯ ಬಾಗಿಲ ಮುಂದೆ ವೃಕ್ಷದ ಗಿಣಿಯನ್ನು ಮಡದಿಯೋರ್ವಳು ಕಂಡು ಒಳಗಿಟ್ಟಳು ಗಿಡುಗನ ಹಾವಸೆ ಒಡೆಯನು ಕಾಣುತ್ತ ಒಡಲಾಳು ಸುರಭಿಯ ಕಟ್ಟಿದನಯ್ಯ 5 ಮೂಗನು ಕಾಣುತ್ತ ಕೂಗ್ಯಾಡಿ ಕರೆಯಲು ಆಗಲೇ ಕಿವುಡನು ಧ್ವನಿಯ ಕೇಳಿ ಬೇಗದಿ ಕುರುಡನು ಬಂದು ಹಾಲೆರೆಯಲು ಆಗಲೆ ಪಕ್ಷಿಯು ಉಂಡು ಹಾರಿತಯ್ಯ6 ಬುದ್ದಿಹೀನನು ಕಂಡು ಶುದ್ಧ ಸ್ವಾಮಿಯೊಳು ತಿದ್ದಿದ ಗುಡಿಗಳು ಬಿದ್ದಮೇಲೆ ಎದ್ದು ಪಕ್ಷಿಯು ಹೋಗಿ ವರಾಹತಿಮ್ಮಪ್ಪನು ಇದ್ದಲ್ಲಿಗಾಗಿಯೆ ಹಾರಿಹೋಯಿತಯ್ಯ 7
--------------
ವರಹತಿಮ್ಮಪ್ಪ
ಹರಿಶಯ್ಯ - ಹರಿಶಯ್ಯ ಪ ಪೂರ್ವ ತ್ರಿಯಂಬಕ | ಜೀವರ ಮಾನಿಯೆ ಅ.ಪ. ಪತಿ ಚಾರು ಭವ ವಾರಿಧಿ ದಾಟಿಸು 1 ದಾತನೆ ಪ್ರಾರ್ಥಿಪೆ | ವಾತೋದ್ಭವ ಎನಪ್ರೀತಿಲಿ ಕರಪಿಡಿ | ವಾತಾಶನ ಗುರು2 ನಿಕರ ಸಿರಿ | ಕೇಶವನಲಿ ಬಿಡು 3 ಭವ 4 ಪಕ್ಷಿಯ ವಹ ಹರಿ | ಪಕ್ಷಸಾಧಕ ಗುರುಚಕ್ಷುಶ್ರ್ಯವ ಎನ | ಈಕ್ಷಿಸು ಕರುಣದಿ 5 ಸ್ವಪ್ನದಿ ಇತ್ತಿಹ | ಆಜ್ಞೆಯಂತೆ ಗುರುಸ್ವಪ್ನಾಖ್ಯಾನದಿ | ಪ್ರಜ್ಞೆಯ ನಿರಿಸೋ 6 ಸಾವಿರ ಮುಖದಲಿ | ಭುವಿಧರಭಿಧ ಗುರುಗೋವಿಂದ ವಿಠಲನ | ಸೇವಿಪೆ ಭಕುತಿಲಿ 7
--------------
ಗುರುಗೋವಿಂದವಿಠಲರು
ಏಕೆ ದೇಹವನು ದಂಡಿಸುವೆ ವೃಥಾ - ಬಿಡ - |ದೇಕ ಚಿತ್ತದಿ ಲಕ್ಷ್ಮೀಕಾಂತಹರಿಎನ್ನದೆಪ.ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - |ಮೌನವನು ಪಿಡಿದು ಬಕಪಕ್ಷಿಯಂತೆ |ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||ದಾನವಾಂತಕನ ನಾಮಕೆ ಮೌನವುಂಟೆ ? 1ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |ಗುಪಿತದಿಂದಲಿ ನೀನು ಕುಳಿತು ಫಲವೇನು ||ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ 2ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |ಸಂದೇಹವೇಕೆ ನೀನೊಂದು ಕ್ಷಣವಗಲದೆ |ತಂದೆ ಶ್ರೀ ಪುರಂದರವಿಠಲ ನೆನೆಮನವೆ 3
--------------
ಪುರಂದರದಾಸರು
ಕೇಳು ಕೋಪಿಸಬೇಡ ಹೇಳಲಿಕಂಜುವೆಬಾಳು ಬಡತನವ ನಾನು ಪ.ತಲೆಗೊಯ್ಕ ಹಿರಿಯ ಮಗ ಇಳೆಗೆ ಪೂಜಿತನಲ್ಲಬಲು ಭಂಡ ನಿನ್ನಯ ಕಿರಿಯ ಮಗ ||ಲಲನೆಯು ಸೇರಿದಳು ಬಲು ಲೋಭಿಗಳ ಮನೆಯಹೊಲಕುಲವರಿಯಳು ನಿನ್ನ ಸೊಸೆಯು ರಂಗ 1ಮಗಳ ಮಾರ್ಗವುಡೊಂಕು | ಮೈದುನ ಗುರುದ್ರೋಹಿಮಗನ ಮಗನು ಚಾಡಿಗಾರಹಗರಣಕೆ ನೀಚರ ಹಣ್ಣು ಮೆದ್ದೆಂಜಲಜಗದೊಡೆಯನೆನಿಸಿಕೊಂಡೆ - ನೀನುಂಡೆ 2ಲಕ್ಷ್ಮೀಪತಿಯು ಎನಿಸಿಭಿಕ್ಷೆ ಬೇಡಲು ಪೋದೆಪಕ್ಷಿಯ ಪೆಗಲೇರಿ ರಾಜನೆನಿಸಿದೆ ||ಸಾಕ್ಷಾತು ಪುರಂದರವಿಠಲನೆ ನಿನ್ನಗುಣಲಕ್ಷಣ ಪೇಳಲಳವೆ - ಕಳೆವೆ 3
--------------
ಪುರಂದರದಾಸರು
ಕೊಟ್ಟುರಾಯ ಸಂತುಷ್ಟನಾದಕೃಷ್ಣನರಸಿಯರಿಗೆ ಶ್ರೇಷ್ಠದ ಉಚಿತವ ಪ.ನೀಲಮಾಣಿಕದೊಸ್ತ ಸಾಲದೆ ಹಿಡಿದೇಜಿಮೇಲು ಜರತಾರಿಪಟ್ಟಾವಳಿಮೇಲು ಜರತಾರಿಪಟ್ಟಾವಳಿಉಚಿತವನೀಲಾದೇವಿಗೆ ದೊರೆ ಕೊಟ್ಟ 1ಸಾರಾವಳಿಯ ಸೀರೆ ಥೋರ ಮುತ್ತಿನ ವಸ್ತಹಾರಭಾರಗಳು ಹಿಡಿದೇಜಿ ಮೊದಲಾಗಿಹಾರಭಾರಗಳು ಹಿಡಿದೇಜಿ ಚಾಮರವನಾರಿ ಭದ್ರಾಗೆ ದೊರೆಕೊಟ್ಟ 2ಮುತ್ತಿನ ಝಲ್ಲೆ ವಸ್ತ ಮತ್ತೆ ಕುದುರೆಯ ಸಾಲುಛsÀತ್ರಚಾಮರ ದಿವ್ಯಪಟ್ಟಾವಳಿಛsÀತ್ರಚಾಮರ ಉಚಿತವಮಿತ್ರವಿಂದಾಗೆ ದೊರೆ ಕೊಟ್ಟ 3ಬರಿಯ ಮಾಣಿಕದೊಸ್ತ ಜರದಪಟ್ಟಾವಳಿಸೀರೆತುರುಗ ತಂಬಟಿಯು ಮೊದಲಾಗಿತುರಗತಂಬಟಿಯು ಮೊದಲಾಗಿಹೆಗ್ಗಾಳೆಹರದಿಕಾಲಿಂದಿಗೆ ದೊರೆಕೊಟ್ಟ4ಲಕ್ಷ ಮಾಣಿಕದೊಸ್ತ ಪಕ್ಷಿಯಂತೆಹಾರುವಕುದುರೆಲಕ್ಷ ಸೂರ್ಯರ ಬೆಳಕಿಲೆಲಕ್ಷ ಸೂರ್ಯರ ಬೆಳಗುವ ಉಚಿತವಲಕ್ಷಣದೇವಿಗೆ ದೊರೆಕೊಟ್ಟ 5ಪಚ್ಚ ರತ್ನದವಸ್ತ ಅಚ್ಚ ಜರತಾರಿ ಸೀರೆಹೆಚ್ಚಿನ ಧನ ಕುದುರೆ ರಥಗಳುಹೆಚ್ಚಿನ ಧನ ಕುದುರೆ ರಥ ಜಾಂಬವಂತಿಅಚ್ಯುತನ ಮಡದಿಗೆ ದೊರೆಕೊಟ್ಟ 6ಹದಿನಾರು ಸಾವಿರ ಚದುರೆಯರುಅದ್ಭತ ವಸ್ತ ರಥಗಳುಅದ್ಭುತ ವಸ್ತ ರಥಗಳು ರಾಮೇಶನಸುದತೆಯರಿಗೆ ದೊರೆ ಕೊಟ್ಟ 7
--------------
ಗಲಗಲಿಅವ್ವನವರು
ಬಲ್ಲವನಾದರೆ ಈ ತಳ್ಳಿಬೇಡ |ಅಲ್ಲದಪಥಇದರಾಸೆಯ ಬಿಡು ನೀನುಪ.ಸರ್ಪನ ಪಣೆಯೊಳು ಜೇನು ತುಪ್ಪವ ಕಂಡು |ಅಪ್ಪನೆ ತಾರೆಂದು ಅಳುತಿರಲು ||ತುಪ್ಪದ ಸವಿಯನು ಜನರುಂಡುತೀರಲು |ಮುಪ್ಪಾಗಿ ಇರುವುದ ಕಂಡು ಮೂದಲಿಸುವ 1ನಂಬಿದ ಮನುಜರ ಹಂಬಲ ಮರೆವುದು |ಡೊಂಬಿಯವರು ಕಂಡು ತಡೆಯಲಾಗಿ ||ಕುಂಭದ ರೊಕ್ಕದ ಲಂಚವನಿತ್ತಲ್ಲಿ |ಅಂಬರವನು ಕಂಡು ನಗುತಿಪ್ಪ ಮನುಜನ 2ಅಂಬರವಡಗಿಯೆಕುಂಭಿನಿ ಜಾರಿಯೆ |ನಂಬಿದ ಮನುಜರು ನಡೆವಡೆಯೆ ||ಕುಂಭದ ನೀರನು ಚೆಲ್ಲುತ ಮಗುಳಲ್ಲಿಕಂಬದ ಹಾಗೆಯೆ ನಿಂತಿಹ ನರನು 3ಇಟ್ಟಿಹ ಬಾಗಿಲ ಕಾಣದೆ ತಾ ಬಂದು |ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ ||ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ |ದುಷ್ಟನೊಬ್ಬನು ಬಂದು ನಿಂತಿಹನು 4ಕಡಹದ ಪಲ್ಲಕ್ಕಿ ಬೆಡಗನು ಕಾಣುತ |ಅಡವಿಯಮೃಗ ಬಂದು ಕುಳಿತಿರ್ದುದ ||ಒಡನೆ ಕಟ್ಟಿದ ವಾಹಕರು ಹದಿನಾರು ಮಂದಿ |ಕಡಮೆಯ ಸಂಬಳ ತಡವಿಡುವವರನು 5ಅಕ್ಕಿಯ ರಾಶಿಯು ತೀರಲು ಕೊಳಗವು |ಬೆಕ್ಕಸ ಬೆರಗಾಗಿ ಕುಳಿತಿಪ್ಪದು ||ಬಿಕ್ಕಿದ ಅಕ್ಕಿದ ಹಕ್ಕಿಯು ಹಕ್ಕಿಯೆ |ಗಕ್ಕನೆ ಹಾರವ ಪಕ್ಷಿಯ ನೋಡುತ 6ಇರುತಿರೆ ಗಣಿತದಿರವಿಶಶಿ ಒಂದಾಗಿ |ಧರೆಯೊಳು ಸಾವಿರ ಎಲೆ ಬೀಳ್ವುದು ||ಎರವಿನಾಭರಣವ ಅವರವರೊಯ್ಯಲು |ಪುರಂದರವಿಠಲನ ಮೊರೆಬೀಳು ಕಂಡೆಯ 7
--------------
ಪುರಂದರದಾಸರು
ಮಧ್ವಮತಕಿನ್ನು ಸರಿಯುಂಟೆ - ಪ್ರ - |ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ? ಪ.ವೃಕ್ಷದೊಳಗೆ ತುಳಸಿ ವೃಕ್ಷಕಧಿಕವಿಲ್ಲ |ಪಕ್ಷಿಯೊಳಗೆ ಗರುಡ ಪಕ್ಷಿಗಿಂತ ಮಿಗಿಲಿಲ್ಲ ||ದಕ್ಷ ಹನುಮಂತನಂತೆ ಲೋಕದೊಳು ಬಂಟರಿಲ್ಲ |ಲಕ್ಷ್ಮಿಗೆ ಸರಿಯಾದ ಸ್ತ್ರೀಯರಿಲ್ಲ - ನೀ ಕೇಳೊ |ಪಕ್ಷಿವಾಹನನೆನಿಪ ದೇವ ತಾ ಬಲ್ಲ 1ಸಕಲ ಮಣಿಗಳಲಿ ಚಿಂತಾಮಣಿಗೆ ಸರಿಯಿಲ್ಲ |ಮಿಕ್ಕ ರತ್ನಮೊಳಗೆ ಮಾಣಿಕತೆ ಮಿಗಿಲಿಲ್ಲ ||ಭಕುತರೊಳಗೆಲ್ಲ ಚಂದ್ರಶೇಖರಗೆ ಸರಿಯಿಲ್ಲ |ಮುಕುತಿ ಸುಖಗಳಿಗೆಣೆಯಿಲ್ಲ - ನೀ ಕೇಳೊ |ಅಖಿಳಬ್ರಹ್ಮಾಂಡನಾಯಕ ತಾ ಬಲ್ಲ2ಪ್ರಥಮಯುಗದಲಿ ಹನುಮ , ದ್ವಿತಿಯ ಯುಗದಲಿ ಭೀಮ |ತೃತಿಯ ಯುಗದಲಿ ಮಧ್ವಾಚಾರ್ಯರೆಂದೆನಿಸಿ ||ಸತುಶಾಸ್ತ್ರ ಕಿದಿರಿಲ್ಲಅಮೃತಕಿಂತಧಿಕವಿಲ್ಲ |ರತಿಪತಿಗಿಂತ ಚೆಲುವರಿಲ್ಲ - ನೀ ಕೇಳೊ |ಕಥೆಯನು ಪುರಂದರವಿಠಲ ತಾ ಬಲ್ಲ 3
--------------
ಪುರಂದರದಾಸರು