ಒಟ್ಟು 22 ಕಡೆಗಳಲ್ಲಿ , 12 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸದೇವರು ಬಾರಯ್ಯ ವೇಂಕಟ ಮನ್ಮನಕೆ ತ್ವರಿತದಿ ನಿಜನಾರೀಸಹಿತದಿ ಈ ಸಮಯಕೆ ಶರಣೆಂಬೆನು ಪದಯುಗಕೆ ಪ ಸಾರಿದ ನಿಜಶÀರಣನ ಈ ಭವಭÀವ ಘೋರಭಯವ ಪರಿಹÀರಿಸುವುದಕ್ಕೆಅ.ಪ ವ್ಯಕ್ತಾವ್ಯಕ್ತ ತ್ರಿಜಗದ್ವ್ಯಾಪ್ತಾ ದೋಷ ನಿರ್ಲಿಪ್ತಾ ಮುಕ್ತಾ ಮುಕ್ತ ಜೀವರ ಗಣದಾಪ್ತಾ ನೀ ಸರ್ವತ್ರದಿ ವ್ಯಾಪ್ತ ಭಕ್ತನ ಹೃದಯದಿ ವ್ಯಕ್ತನಾಗಿ ನಿಜ ಮುಕ್ತಿಪಥವ ತೋರೊ ಭಕ್ತಿಯನಿತ್ತು 1 ಕವಿಜನಗೇಯಾ ಆನಂದದಾಯಕ ನಿರ್ಜಿತಮಾಯಾ ಕಾಯಯ್ಯಾ ಜೀಯಾ ಆನತಜನಸನ್ಮಾನದ ಮನ್ಮನ ವನಜದಿ ನೀ ಸನ್ನಿಹಿತಾಗುವುದಕೆ 2 ಸೋಮಾಸುರನಾಮಕ ದೈತ್ಯನ ಕೊಂದೂ ವೇದವ ತಂದೂ ಕೂರ್ಮ ಕಿಟ ನರಹರಿ ರೂಪದಿ ನಿಂದೂ ವಾಮನನೆಂದೂ ರಾಮ ಭಾರ್ಗವ ಯದುಕುಲಸಾಗರ - ಸೋಮ ಬೌದ್ಧ ಕಲ್ಕಿ ಪ್ರೇಮದಿ ಮನಕೆ 3 ನಿಗಮಗೋಚರ ನಿತ್ಯಾನಂದಾ ಬಗೆಬಗೆ ಜನ್ಮವನೈದಿದೆ ಮುಕುಂದಾ ಮುಗಿವೆನೊ ಕರದಿಂದಾ ಅಗಣಿತ ಗುಣನಿಧಿ ಸುಗಮದಿ ಭವದ ಬಗೆಯನು ತಿಳಿಸೊ ನಗೆ ಮೊಗದಿ ಬಾ 4 ವಿಧಿಶಂಭುವಂದಿತ ಪದಯುಗಕಮಲಾ ನಿತ್ಯ ನಿರ್ಮಲಾ ಆಧಿಭೂತಾಧ್ಯಾತ್ಮಿಕತಾಪದ ಶಮಲಾ ನೀ ಮಾಡೆನ್ನನು ವಿಮಲಾ ಸದಯ ಸುಧಾಕರ ಹೃದಯದಿ ತವಪದ ಪದುಮ ಭಜಿಪೆ ನೀ ಮುದದಲಿ ಮನಕೆ5 ಸಾಸಿರನಾಮ ನತಜನಪ್ರೇಮಾ ಪೊರೆಯೋ ಶ್ರೀ ರಾಮಾ ಆಶೀ ಪೂರ್ತಿಸಿ ಮಾಡೆನ್ನಲಿ ಪ್ರೇಮಾ ಸುರಸಾರ್ವಭೌಮಾ ವಾಸಮಾಡಿ ಅಭಿಲಾಷೆಯ ಪೂರ್ತಿಸೊ ವಾಸುದೇವ ವಾರಾಸಿಜರಮಣಾ 6 ಶರಣಾಗತಜನಪರಿಪಾಲಾ ಕರುಣಾಲವಾಲಾ ಕರುಣಿಸೆನ್ನನು ಹೇ ಶಿರಿಲೋಲಾ ನಮಿತಜನಸುgಸಾಲ ಅಜ ಭವ ಸುರ ನಿಕರಾರ್ಚಿತಪದ ಸರಸಿಜಯುತ ನೀ ಸುರವರದೇವಾ 7 ಪನ್ನಗಗಿರಿ ನಿಜಕೃತವಾಸಾ ಪೊರೆ ಎನ್ನನು ಶ್ರೀಶಾ ಬಿನ್ನಪ ಮಾಳ್ಪೆನು ಹೇ ಶ್ರೀನಿವಾಸಾ ಕೊಡು ಎನಗೆ ಲೇಸಾ ಎನ್ನ ಸಲಹೋದಕೆ ಅನ್ಯರ ಕಾಣೆನೊ ಮನ್ನಿಸು ನೀನಾಪನ್ನಜನಸುಖದಾ 8 ಲಕ್ಷ್ಮೀನಾಯಕ ವರಪಕ್ಷಿಗಮನಾ ಅಕ್ಷಯ ಫಲವನ್ನ ರಕ್ಷಿಸಿ ಕಾಯ್ವದೋ ನೀ ಎನ್ನಾ ಲಕ್ಷ್ಮಣನಣ್ಣಾ ಕ - ಟಾಕ್ಷದಿ ಎನ್ನ ವೀಕ್ಷಿಸು ಕ್ಷಣ ಕ್ಷಣ..... 9 ಧರ್ಮಾರ್ಥಕಾಮಮೋಕ್ಷವ ನಾನೊಲ್ಲೇ ಕರ್ಮದ ಸುಳಿಯಲ್ಲೇ ಮರ್ಮವ ತಿಳಿಯದೆ ಬೀಳುವೆ ನಾನಲ್ಲೇ ನಿರ್ಮಿಸದಿರು ಎನ್ನಲ್ಲೇ ಕರ್ಮಭವದ ಮಹÀ ಮರ್ಮವ ತಿಳಿಸೀ ದುರ್ಮನ ಬಿಡಿಸೆಲೊ ಬೊಮ್ಮನ ತಾತಾ 10 ದಿಟ್ಟ ಗುರು ಜಗನ್ನಾಥವಿಠಲ ನಾನನಾಥಾ ಥಟ್ಟಾನೆ ನೀ ಎನ್ನನು ಕಾಯೋ ಶ್ರೀನಾಥಾ ಇಷ್ಟೇ ಎನಮನದರ್ಥ ಸೃಷ್ಟಿಯೊಳಗೆ ಬಹು ಭ್ರಷ್ಟರಸ್ತುತಿಸಿ ನಿ - ಕೃಷ್ಟನಾದೇನೋ ಶ್ರೇಷ್ಠ ಮೂರುತೀ 11
--------------
ಗುರುಜಗನ್ನಾಥದಾಸರು
ಶ್ರೀನಿವಾಸಸುಗುಣೈಕನಿಧೆ ಶ್ರೀ ಮಾನಸಹಂಸ ದಯಾಜಲಧೇ ಪ ಕಾಯ ಮಾಪಮಧುರಾಲಾಪ ತೋಯಜಾಕ್ಷ ಪೃಥುಳಾಯತಪಕ್ಷ ನಿ ಧಾಯ ಹೃದಿಧ್ಯಾಯಾಮಿ ಹರೆ 1 ವಿಗ್ರಹಮಖಿಳಶುಭಗ್ರಹಣಂ ಮದ ನುಗ್ರಹಾರ್ಥಮದಿತಿಷ್ಠವಿಭೋ ಉಗ್ರಮುಖ ವಿಬುಧಾಗ್ರ್ಯಪೂಜಿತ ಸ ಮಗ್ರ ಸಮರ್ಯಾಂ ಸ್ವೀಕುರುಭೋ 2 ದಾದ್ಯ ಕಲ್ಪಿತಂ ಭವದರ್ಥಂ ಸದ್ಯಂಬುನಿಮೇಜ್ಯ ಸುಖೋಷ್ಣಮಿದಂ3 ಕಸ್ತೂರಿತಿಲಕಂ ಸುಮುಖೋ ಕೌಸ್ತುಭರತ್ನಮಜಸ್ತುತಮಂಡನ ಮಸ್ತುತನೌಗುಣ ಭೂಷಣತೇ 4 ಮಂದಾರಕಾ ಮಾಲ್ಯಾಕಲಿತಂ ಗದ ಬಂಧುರ ಸುಗಂಧಿ ತುಳಸಿಕಾ ಬೃಂದಮಲಂಕುರು ಸನ್ನಿಹಿತಂ 5 ಗಂಧರ್ವಾಮರ ವಂದಿತ ಮಲಯಾ ಗಂಧಲೇಪನಮಾಕಲಯಾ ಗಂಧವಾಹನುತ ಗಂದವತೀ ಗುಣ ಬಂಧುರ ದೂಪಂ ಜಿಘ್ರಹರೇ 6 ತಾಪಸ ಮಾನಸ ದೀಪಹರೇ ರೂಪಾಲೋಕಯ ಶ್ರೀನೃಹರೇ 7 ಮಂತ್ರಪೂತಮುಖ ಯಾತ್ರಾಧಾರ ಸು ಮಂತ್ರಪುಷ್ಪಂ ಸ್ವೀಕುರುಹೇ 8 ಛತ್ರಮಿದಂ ಭುವನತ್ರಯನಾಥಸ ವಿ ಚಿತ್ರದಂತ ಚಾಮರಯುಗಳಂ ಯಾತ್ರ ಭೋಗಾ ಮದಿರಾಜಕಳಂ 9 ಮಧುಮಧುರಿಮ ಪಾಯಸಮತಿಹೃದ್ಯಂ ಮಧುನಾಸ್ವೀಕುರು ನೈವೇದ್ಯಂ 10 ಬಿಂಬಾಧರಮಿಂದುಬಿಂಬವದನ ಶಿಶಿ ರಾಂಬುಪಿಬಾಮಲಘನಸಾರಂ ತಂಬಹುಮನ್ವಸ ಕರ್ಪೂರಂ 11 ಕಾರ ನಿಭೃತ ಪರಿವಾರ ವಿಭೋ ನೀರಾಜನಮತಿತಾರಾಯಿತ ಕ ರ್ಪೂರಾರ್ತಿಕಮಂಗೀಕುರು ಭೋ 12 ಪಕ್ಷ ಪ್ರದಕ್ಷಿಣಮನುವಾರಂ ಪಕ್ಷಿಗಮನನಿಜವಕ್ಷೋಧೃತಶುಭ ಲಕ್ಷಕರೋಮನಮಸ್ಕಾರಂ13 ಸಾಗರತನಯಾಯಾಗವಿಹಿತ ಭೂ ಭಾಗಧೇಯನೀಳಾಸಹಿತಂ ಭೋಗಿಶಯನಮನುರಾಗ ಪರಿಷ್ಕøತ ಮಾಗಮಗೋಚರ ಕುರುಲಸಿತಂ14 ಆರಾಧನಮಪಜಾಯತಮುಪ ಚಾರಮಿಷೇಣ ಮಯಾಚರಿತಂ ಕಾರುಣ್ಯೇನ ಕ್ಷಮಸ್ಸೇದಂ 15 ಹರಿಣಾರ್ಯದ್ರಿ ನಿಕೇತನ ತೇ ಚರಣಾರಾಧನ ಕರಣಾಂಚಿತಮಿತಿ ವರದವಿಠಲಗೀತಂ ನುತೇ 16
--------------
ವೆಂಕಟವರದಾರ್ಯರು
ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ ಪ ಕುಸುಮಾಸ್ತ್ರನೈಯ್ಯ ಕೋರಿ ಪ್ರಾರ್ಥಿಪೆ ಜೀಯಾ ಅ.ಪ ಪಕ್ಷಿಗಮನ ದುಷ್ಟ ರಾಕ್ಷಾಸಾಂತಕ ನೀನು- ಪೇಕ್ಷೆಮಾಡದೆ ನಿರಪೇಕ್ಷ ಸೌಖ್ಯವೀಯಲು 1 ಪದುಮೆಯೊಡನೆ ಹೃದಯಪದುಮ ಪೀಠದಿ ಕುಳಿತು ಸದಮಲ ಜ್ಞಾನ ವದಗಿಸುವದಕೀಗ 2 ಪ್ರೇಮಾದಿ ಸುಜನರಿಗೆ ಕಾಮಿತ ಫಲವೀವ ಸ್ವಾಮಿ ನೀನೆ ಶ್ರೀಗುರುರಾಮ ವಿಠಲ ವಲಿದು 3
--------------
ಗುರುರಾಮವಿಠಲ
ಆಗಲಿ ಹರಿಕೃಪೆ ಭಾಗವತರ ಸಂಗನೀಗುವೆ ನಿಮ್ಮ ದುರಿತಗಳಿರ ಪ.ಹರಿನಂಟರೋಲೈಸಿ ಜ್ಞಾನಾಸ್ತ್ರ ಗಳಿಸುವೆಹರಿನಾಮ ವಜ್ರಕವಚ ತೊಡುವೆಹರಿನಿರ್ಮಾಲ್ಯದ ಉತ್ತಮಾಂಗಾಭರಣವಿಟ್ಟುನೆರೆನಿಮ್ಮ ನಾಮ ನಿರ್ನಾಮವ ಮಾಳ್ಪೆ1ಶ್ರೀಲೋಲನಂಘ್ರಿ ಸಮ್ಮದ ಸೈನ್ಯವ ಕೂಡಿತಾಳ ದಂಡಿಗೆ ಗೀತಾಯುಧಗಳಿಂದಕಾಲಕಾಲಕೆ ನಿಮ್ಮ ಮೇಳವ ಮುರಿದಾಡಿಹಾಳು ಮಾಡುವೆ ಕೈಯಲಿಕಡ್ಡಿಕೊಡುವೆ2ಇಕ್ಷುಸ್ವಾದಾದರೆ ಬೇರಸಹಿತ ನೀವುಭಕ್ಷಿಸಬೇಡಿ ಬಾರದೆ ಮರಳಿಪಕ್ಷಿಗಮನ ಪ್ರಸನ್ನವೆಂಕಟೇಶನಪಕ್ಷದವರಹಗೆಹೊಲ್ಲಸಲ್ಲ3
--------------
ಪ್ರಸನ್ನವೆಂಕಟದಾಸರು
ಕೃಷ್ಣ ನೀನೆ ರಕ್ಷಿಸೆನ್ನ |ಪಕ್ಷಿಗಮನ | ಲಕ್ಷ್ಮೀರಮಣ ||ಸೃಷ್ಟಿಗೊಡೆಯಾ ಜಿಷ್ಣುಪ್ರೀಯ |ದುಷ್ಟ ಹನನಾ ಶಿಷ್ಟ ಸ್ಮರಣಾ 1ಯಮಿಕುಲಾಳಿ | ಹೃದಯನಿಲಯಾಕಮಲನಯನಾ ವಿಮಲಚರಣಾ ||ಸುಮನಸಾದೀ | ನಮಿತ ಪಾದಂಕುಮುದಸಖನಾ ಸಮಸುವದನಾ 2ತಂದೆ ತಾಯೀ | ಯಂದ ಸಲಹೋಇಂದಿರೇಶಾ ಸುಂದರಾಸ್ಯ ||ವಂದಿಸುವೆ ಗೋವಿಂದ ನಿನಗೆ |ಸಿಂಧುವಾಸಾ ಬಂಧನಾಶಾ ||ಕೃಷ್ಣ||
--------------
ಗೋವಿಂದದಾಸ
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11
--------------
ಪ್ರಸನ್ನವೆಂಕಟದಾಸರು
ರÀಕ್ಷಿಸು ರಕ್ಷಿಸು ದೇವವಿಶ್ವಕುಕ್ಷನೆ ಭಕ್ತ ಸಂಜೀವಪಕ್ಷಿಗಮನ ಕಾಯೊದಾತಭೃತ್ಯಪಕ್ಷನೆ ಶ್ರೀ ಪ್ರಾಣನಾಥ ಪ.ಜಾರಿದ ಶ್ರ್ರುತಿಯ ತಂದವನೆ ಉದಾರಿವಿಕ್ರಮತಮಹರನೆವಾರಿಧಿಯೊಳುದಿಸಿದನೆ ಮಂದರಗಿರಿಯನೆತ್ತಿದನೆ1ರಂಭೆಗೆ ತತ್ವ ಹೇಳಿದನೆ ಹೇಮಾಂಬಕನ ಚುಚ್ಚಿದವನೆಕಂಬವ ಸೀಳಿ ನಿಂದವನೆ ಆದಂಭೋಳಿವೈರಿಬಾಲಪನೆ2ಪದ್ಮಜಾಂಡವನೊಡೆದವನೆಬಲಿಸದ್ಮವ ಬಿಡದೆ ಕಾಯ್ದವನೆಛದ್ಮಿ ಪಾರ್ಥಿವರ ಸಂಹರನೆಕರಪದ್ಮದಿ ಪರಶು ಪಿಡಿದವನÉ 3ಅಡವಿ ಪ್ರಾಣಿಗಳನಾಳುವನೆ ಹತ್ತುಹೆಡಕಿನವನ ತಲೆಕಡಿದವನೆಮಡದಿಗೆ ಗಿಡವನಿತ್ತವನೆ ಭೀಮಮಡದಿಯ ಲಜ್ಜೆ ಕಾಯ್ದವನೆ 4ಮಿಥ್ಯದಹೊಲಬುಹೇಳಿದನೆಖಳದೈತ್ಯರ ವಶವ ಮಾಡಿದನೆಮತ್ತಕಲಿವಪುಹರನೆ ನನ್ನಕರ್ತಪ್ರಸನ್ವೆಂಕಟ ನೀನೆ5
--------------
ಪ್ರಸನ್ನವೆಂಕಟದಾಸರು