ವೆಂಕಟರಮಣನೆ ಸಂಕಟಹರಣನೆ
ಶಂಖ ಚಕ್ರ ಪೀತಾಂಬರನೆ ಪ
ಪಂಕಜನಾಭನೆ ಪರಮಗೋವಿಂದನೆ
ಲಂಕೆ ವಿಭೀಷಣ ನಿಗಿತ್ತವನೇ ಅ.ಪ
ಹಿಂದನ ಕರ್ಮದಿನೊಂದೆನು ನಿನ್ನಯ
ಕಂದನಮೊರೆಯನು ಲಾಲಿಪುದೂ
ಬಂದಿಸಿ ಭವಗಳ ಹೊಂದಿಸೊ ನಿಜಪುರ
ಚಂದದೆ ಕ್ಷಿತಿಯೊಳ್ ಪಾಲಿಪುದೂ 1
ಘಾಸಿ ಬಿಡಿಸಿ ನಿಜದಾಸನ ಮಾಡೆಲೊ
ಈಶನೆ ಕೇಶವ ಮೂರಿತಯೇ
ಆಸೆಯ ತೀರಿಸಬೇಕೈಯಾ ಭವ
ನಾಶನೆ ಪಾರ್ಥವ ಸಾರಥಿಯೆ 2
ಪರಿಪರಿ ಭವಗಳ ಹರಿಯುವನೆನ್ನುತಾ
ಕರದೊಳು ಕಂಕಣ ಕಟ್ಟಿರುವೇ
ಮೊರೆ ಬಿದ್ದೆನು ಶ್ರೀ ತುಲಸೀರಾಮನ
ಸ್ಮರಣೆಯ ಹೃದಯದೊಳಿಟ್ಟರುವೆ 3