ಒಟ್ಟು 17 ಕಡೆಗಳಲ್ಲಿ , 12 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗಣಪತಿಗೆರಗಿ ಶಾರದೆಯನುರಾಗದಿಂದಲಿ ಸ್ಮರಿಸಿ ಶ್ರೀಗಿರಿಜಾತೆಯಲೋಕೈಕ ಮಾತೆಯ ಬೇಗದಿ ಹಸೆಗೆ ಕರೆದ ಸುಪದಂಗಳಾ ರಾಗದಿ ಪಾಡಿ ಪೊಗಳುವೆ 1 ಮಿಸುನಿಯ ಮಂಟಪದಿ ರಾರಾಜಿಪಪೊಸಪಸೆವಣೆಯನಿಟ್ಟು ಪೊಸದೇವಾಂಗವ ಮೇಲೆಪಸರಿಸಿ ಹಾಕುತ ಶಶಿಮುಖಿಯರು ನೆರೆದೊಂದಾಗಿ ಪಾಡುತ ಕುಶಲದಿ ಹಸೆಗೆ ಕರೆದರು 2 ಕಡೆಯಾಣಿಯ ಚಿನ್ನದ ಜಗಜ್ಯೋತಿಯಎಡಬಲದೊಳಗಿಟ್ಟು ಉಡುರಾಜಮುಖಿಯರುಮೃಗರಾಜಕಟಿಯರು ಕಡುಬೆಡಗಿಂದಪಾಡುತ ನಲಿದಾಡುತ ಮೃಡನರಸಿಯ ಹಸೆಗೆ ಕರೆದರು 3 ಚಿನ್ನದಪಿಲ್ಲಿಮಿಂಚು ಉಂಗುರಗಳುರನ್ನದಲ್ಲಣಿವೆಟ್ಟು ಉನ್ನತವಾದ ಕಾಲ್ಗಡಗಸರ್ಪಣಿಗೆಜ್ಜೆಯನ್ನು ತಳೆದ ಪಾದಪದುಮದಿಂದೊಮೈವ ಪೂರ್ಣೇಂದು ಮುಖಿಯರು || ಹ 4 ವರರತ್ನಖಚಿತವಾದ ಗೆಜ್ಜೆಮೊಗ್ಗೆಯಸರವೊಡ್ಯಾಣವು ಡಾಬು ಮಿರುಪಮಂಡೆಳೆಯುಡುದಾರ ಕಿಂಕಿಣಿಗಳ ಸರಫಲಿರೆನೆ ಚೆಂಗಾವಿಸೀರೆಯನುಟ್ಟು ಗಿರಿರಾಜತನುಜೆ || ಹ 5 ಚಳಿಕೆ ಹಿಂಬಳೆದೊರೆಯ ಚೂಡಾಕಟ್ಟುಬಳೆಕಂಕಣ ಕಡಗ ಪೊಳೆವ ಮುಂಗೈಯಮುರಾರಿ ಮುತ್ತಿನದಂಡೆ ಥಳಥಳಿಸುವಬೆರಳುಂಗುರಗಳನಿಟ್ಟು ಲಲಿತಾಂಗಿ ಬೇಗ | ಹಸೆಗೇಳು 6 ವರನಕ್ಷತ್ರದ ಸರವು ಏಕಾವಳಿ ಸರಗುಂಡಿನಸರವು ಮಿರುಪಬಿಲ್ಸರ ಚಳ್ಯಸರ ಚಕ್ರಸರಗೋಧಿಸರ ಮೋಹನಮುತ್ತಿನ ಸರಗಳನಿಟ್ಟವರಕಂಬುಕಂಠಿ ಬೇಗ | ಹಸೆಗೇಳು 7 ಅಣಿ ಮುತ್ತಿನ ಮೂಗುತಿ ಐದೆಳೆಯ ಕ-ಟ್ಟಾಣಿ ಕಾಶಿಯ ತಾಳಿ ಮಾಣಿಕಮಯಬತಿಮಲಕು ಅಡ್ಡಿಕೆ ಮಲಕಾಣಿ ಮುತ್ತಿನಬಟ್ಟುಮಲಕು ಸರಿಗೆಯಿಟ್ಟ ಏಣಾಕ್ಷಿ ಬೇಗ | ಹ 8 ತೊಳಪ ಮುತ್ತಿನಮಾಲೆ ಸರ್ಪಣಿಯಂಥಳಥಳಿಪ ವಜ್ರದವಾಲೆ ಚಳತುಂಬು ಮೀನ ಬಾ-ವಲಿ ಹಂಸೆಗಿಳಿಯ ಬಾವಲಿಯು ಹೊನ್ನೂಲುಕುಪ್ಪಿನವೆಂಟ್ಟೆಯವಿಟ್ಟ ಕಲಹಂಸಗಮನೆ | ಹ9
--------------
ಕೆಳದಿ ವೆಂಕಣ್ಣ ಕವಿ
ಸರಸಿಜನಯನಗೆ ಸಾಗರಶಯನಗೆ ನಿರುತ ಸುಖಾನಂದಭರಿತನಾದವಗೆ ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ- ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ ಸರಸದಾರತಿಯ ಬೆಳಗಿರೆ ಪ ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ ಸಿಂಧುಗಟ್ಟಿದ ರಾಮಚಂದ್ರಗ್ವೊಂದಿಸುತ ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ 1 ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ ನೀಲ ನಕ್ಷತ್ರದಂದದÀಲಿ ಒಪ್ಪುವÀ ಚಂದ್ರನಂಥ ವಾರಿಜಾಕ್ಷನು ಇರಲು ಅಷ್ಟಭಾರ್ಯೇರ ಸಹಿತ ನಕ್ಕು ಕುಳಿತ ಹರಿಗೆ 2 ನಾಶವಾಗಲಿ ನರ್ಕಾಸುರನ ಮಂದಿರ ಪೊಕ್ಕು ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು ಶ್ರೀಶನ್ವೊಲಿದ ಭೀಮೇಶಕೃಷ್ಣನು ಸೋಳ- ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ 3
--------------
ಹರಪನಹಳ್ಳಿಭೀಮವ್ವ