ಕೈಯ ತೋರೋ ರಂಗ ಕೈಯ ತೋರೋ ಪ.
ಕೈಯ ತೋರೋ ಕರುಣೆಗಳರಸನೆ ಅ.ಪ.
ಶರಧಿ ಮಥನದಿ ದೇವಾಸುರರಿಗೆ ಮೋಹಿನಿಯೋಲ್
ಸುರರಿಗೆ ಸುಧೆಯಿತ್ತು ಸುರರಿಗಾಸರೆಯನಿತ್ತಾ 1
ಶಿರಮಂ ಸದ್ಗತಿವೊಂದಿಸಿ ಹರನಂ ನಲವಡಿಸಿದ 2
ಹರನ ವರದಿ ಭಸ್ಮಾಸುರ ಗರ್ವಿತನಾಗಿ [ಆ]
ಹರನಂ ಬೆನ್ನಟ್ಟಿ ಬರೆ ದುರುಳನ ದಂಡಿಸಿದಾ 3
ತರಳಧ್ರುವ ತಾಯ ಬಿರುನುಡಿಗೆ ಮನನೊಂದು
ಶರಣೆನೆ ಮೈದೋರಿ ತರಳನ ಮೈದಡಹಿದ4
ಕಂದ ಪ್ರಹ್ಲಾದನ ತಂದೆಯುಗ್ರದಿ ಜಡಿಯೆ
ಕಂಬದಿಂ ಬಂದು ಖಳನ ಕರುಳನು ಕಿತ್ತೆಸೆದಾ 5
ಮೊಸಳೆ ಬಾಯೊಳು ಸಿಕ್ಕಿ ಬಸವಳಿದು ಬಾಯ್ಬಿಡುತಿರೆ
ಎಸೆದ ಚಕ್ರದಿ ಸೀಳಿ ನಕ್ರನ ಕರಿಯನುದ್ಧರಿಸಿದ 6
ಚಕ್ರಧರ ರುಕ್ಮಿಣಿಯ ಕೈಪಿಡಿದ7
ತರುಣಿಯಭಿಮಾನವ ನೆರೆಕಾಯ್ದು ನರನಿಗೆ
ವರಸಾರಥಿಯಾಗಿ ತೇರನೆ ನಡೆಸಿದ 8
ವರಶೇಷಗಿರಿಯಲ್ಲಿ ಸ್ಥಿರವಾಗಿ ಶರಣರ
ಕರೆದಾದರಿಸಿ ವರಗಳ ಕೊಡುತಿಪ್ಪ 9