ಒಟ್ಟು 42 ಕಡೆಗಳಲ್ಲಿ , 26 ದಾಸರು , 40 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛೀ ಯಾತರ ಬುದ್ಧಿ | ಸೊಕ್ಕಿನ ಮಾತಿಲಿ ಬಲು ನÉೂಂದಿ ಪ ಗುರುಹಿರಯರ ಅನುಸರಿಸದೇ | ಹರಿಚರಣವ ಕೊಂಡಾಡದೇ | ಬರಡಾ ನಾಲಿಗೆ ಮಾಡಿದಿ ಬರಿದೇ 1 ವಳ್ಹವ ಹೊಲ್ಲವರಿಯದೇ | ಯಳ್ಳಿನಿತು ನೀ ವಿಚಾರಿಸದೇ | ನಿಲ್ಲದೇ ಮಾಡುವಿ ಬಗಳುವದೇ 2 ಕೆಂಡವ ಕಂಡು ನೆರೆ | ಮಂಡಿಯಾ ತುರಿಸುವರೆ | ತುಂಡತನ ಗುಣ ಬಿಡು ಇನ್ನಾರೆ 3 ಪೊಡವಿ ದೇವತೆಯ ಕೋಣಾ | ಯಡಬಲ ನೋಡದಿರಲೇನು | ಕಡೆಯಲಿ ಕೆಡುವರು ಒಂದಿನಾ 4 ಮಹಿಪತಿಸುತ ಪ್ರಭು ದಾಸರ ಕೈ | ಅಹುದೆನಿಸಿಕೊಂಬುದೆ ಸ್ವರ್ಗಯ್ಯ | ವಿಹಿತಲ್ಲೆಂಬುದೇ ನರ್ಕದಾಶ್ರಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯತು ಸೀತಾರಾಮ ರಾಮ ಚರ- ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮ ಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ- ಣಾರಿ ನೀನಲ್ಲದೆ ಯಾರಿಲ್ಲ ಗತಿ ಜಯ ರಾಮ ರಾಮ 1 ಬುದ್ಧಿ e್ಞÁನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ- ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮ ಬಿದ್ದೆನe್ಞÁನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ- ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2 ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ- ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮ ನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ- ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3 ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ- ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮ ಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ- ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4 ಸೀತಾರಾಮ ರಾಮ ದುಷ್ಟ- ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮ ಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ- ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5 ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ- ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮ ಸೀತಾರಾಮ ರಾಮ ಸಾಧು- ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6 e್ಞÁನವe್ಞÁನವು ಭಾನುತಿಮಿರ ಸೀತಾರಾಮ ರಾಮ ಸತ್ಯ- e್ಞÁನ ಭಕ್ತಿಭಾಗ್ಯ ನೀನಿತ್ತು ಪೊರೆ ಜಯ ರಾಮ ರಾಮ ಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ- ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7 ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವ ಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮ ಸೀತಾರಾಮ ರಾಮ ಪರ- ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8 ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವ ಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮ ಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ- ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9 ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷ ಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮ ದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ- ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10 ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ- ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮ ಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ- ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11 ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ- ಸನ್ನ ನಿನ್ನ ಸ್ಮರಣೆಯನಿತ್ತು ಪೊರೆ ಜಯ ರಾಮ ರಾಮ ಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣು ಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12 ನಿತ್ಯ ನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ- ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮ ಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ- ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13 ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು- ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮ ಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ- ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14 ಸೀತಾರಾಮ ರಾಮ ವಾಯು- ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮ ಸೀತಾರಾಮ ರಾಮ ಬ್ರಹ್ಮಾ- ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ತುಪಾಕಿ ವೆಂಕಟರಮಣಾಚಾರ್ಯ
ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ತಿರುವೀದಿಯಾ ಪ ದಂಡಕವನ ಕೋದಂಡರಾಮರ ಪಟ್ಟ- ದ್ಹೆಂಡತಿಚೋರನ್ಹತ್ತುರುಂಡ ನೋಡದೆ 1 ತರಳೆ ದ್ರೌಪದಿ ಸಭೆಗೆಳೆದÀು ಉಟ್ವಸನವ ಸೆಳೆದ ಕೌರವರೆಂಬೊ ದುರುಳರ ನÉೂೀಡದೆ 2 ಮಧ್ವಮತಗಳೆಂಬÉೂ ಮರದ ಹಣ್ಣನು ಮೆದ್ದು ಮುದ್ದು ಭೀಮೇಶಕೃಷ್ಣ ಎನ್ನದವರ ನೋಡಿ 3
--------------
ಹರಪನಹಳ್ಳಿಭೀಮವ್ವ
ನಮೋ ನಮೋ ಕಾಲಭೈರವ ಹರಿಯ ಚರಣ- ಸಮೀಪದೊಳಗಿದ್ದು ಮೆರೆವ ಪ. ಸಮೀಚೀನe್ಞÁನಭಕ್ತ- ಸಮೂಹವ ಕಾವ ಲಕ್ಷ್ಮೀ- ರಮಣನ ಕಾರ್ಯಮಂತ್ರಿ- ಯು ಮಾಧವನ ಸಮಾನಬಲ ಅ.ಪ. ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ- ಮುಟ್ಟಿ ಭಜಿಪ ವೈರಿಮರ್ದನ ಸೃಷ್ಟಿ ಮೂರರಲ್ಲಿ ಕೀರ್ತಿ- ಪಟ್ಟ ದಿಟ್ಟ ಧೀರ ಪರಮ ನಿಷ್ಠ ಪುಷ್ಪ ತುಷ್ಟಿಪ್ರದ ಬ- ಲಿಷ್ಠ ಶ್ರೇಷ್ಠ ಭೂತಪತಿಯೆ 1 ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ- ಧಾನ ಕಾರ್ಯ ನಿನ್ನದೆಂಬುದೆ ತಾನು ಕಿಂಚಿದರಿತು ಸನ್ನಿ- ಧಾನವನ್ನೋಲೈಸಿ ಬಂದೆ ದೀನಬಂಧು ಸುಗುಣಸಿಂಧು ಮಾನತ್ರಾಣವಿತ್ತು ಸಲಹೊ 2 ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ ಸ್ವಂತ ಬಂದು ಮಾಡು ರಕ್ಷಣೆ ಅಂತ್ಯಕಾಲದಲ್ಲಿ ಹರಿಯ ಚಿಂತನೆಗೆ ವಿಘ್ನ ಬಾರ- ದಂತೆ ಕಾವ ಮಹಾ ತೇಜೋ- ಸೂರಿ 3 ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ ಪಾಲಿಸುವ ಚಂದ್ರಶೇಖರ ಖೂಳ ಜನರ ಗರ್ವಮುರಿವ ಶೂಲಪಾಣಿ ಸುಗುಣಶ್ರೇಣಿ ಮೂಲಪತಿಯ ಪಾದಪದ್ಮ ಮೂಲದೊಳಗೆ ನಲಿವ ಚೆಲುವ 4 ಭೂರಿ ಮಹಿಮೆಯ ಭಕ್ತರಿಂಗಾ- ಧಾರವಾಗಿ ರಾಜಿಸಿರುವೆಯ ಧೀರ ಲಕ್ಷ್ಮೀನಾರಾಯಣನ ಸೇರಿದಾನತರ್ಗೆ ಮಂ- ದಾರ ಮಹೋದಾರ ಗಂ- ಭೀರ ಧೀರ ಚಾರುಚರಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಾರಾಯಣ ನಿಮ್ಮ ನಾಮ ನಾಲಿಗೆಲಿರಲಿ ನಾರಾಯಣ ಘೋರಪಾತಕವೆಲ್ಲ ಹಾರಿ ಹೋಗುವುದಯ್ಯ ನಾರಾಯಣ 1 ಸಾರ್ಯವಾಗುವುದು ಶ್ರೀಹರಿಯ ಪುರ ಅವರಿಗೆ ನಾರಾಯಣ ಮಾರಜನಕನÀ ಮೊದಲೆ ಮರೆಯದಿರೊ ಮನವೆ ನಾರಾಯಣ 2 ಎಷ್ಟೆಷ್ಟು ದುರಿತಗಳು ನಷ್ಟವಾಗಿ ಹೋಗುವುವು ನಾರಾಯಣ ಎಷ್ಟು ನಾಮವ ಬಿಡದೆ ನೆನೆಕಂಡ್ಯ ಮನವೆ ನಾರಾಯಣ 3 ಅಂತ್ಯಜಸ್ತ್ರೀ ಕೂಡಿ ಭ್ರಾಂತನಾಗ್ಯಜಮಿಳನು ನಾರಾಯಣ ಕಂತುನಯ್ಯನ ಮರೆತು ಕಾಲವನು ಕಳೆಯಲು ನಾರಾಯಣ 4 ಅಂತ್ಯಕಾಲಕೆ ಹರಿಯ ಸ್ಮರಣೆ ಜಿಹ್ವೆಗೆ ಬರಲು ನಾರಾಯಣ ಲಕ್ಷ್ಮೀ- ಕಾಂತ ಕರುಣಿಸಿ ಅವಗೆ ಕರೆದÀು ಮುಕ್ತಿಯ ಕೊಟ್ಟ ನಾರಾಯಣ5 ಲಕ್ಕುಮೀರಮಣನೆ ಸಕಲಗುಣಪರಿಪೂರ್ಣ ನಾರಾಯಣ ಮುಖ್ಯ ನೀ ಎನ ಮನದಿ ಹೊಕ್ಕರ್ಹೊಗಳುವೆನಯ್ಯ ನಾರಾಯಣ 6 ಘೋರ ವೇದವ ಕದ್ದು ನೀರೊಳಗಡಗಲು ನಾರಾಯಣ ಭೇದಿಸವನಕೊಂದು ವೇದವನು ತಂದಿಟ್ಟ ನಾರಾಯಣ 7 ಶ್ರುತಿಯ ಸುತಗೆ ಕೊಟ್ಟಿ ಸ್ತುತ್ಯನಾಗಜನಿಂದ ನಾರಾಯಣ ಮಚ್ಛರೂಪವ ಧರಿಸಿದಚ್ಯುತಗೆ ಶರಣೆಂಬೆ ನಾರಾಯಣ 8 ದೇವದೈತ್ಯರು ಕೂಡಿ ಸಾಗರವ ಕಡೆಯಲು ನಾರಾಯಣ ವಾಸುಕಿ ಸುತ್ತೆ ನಾರಾಯಣ 9 ಆಗ ಸುರರಸುರರಿಬ್ಭಾಗವಾಗಿ ನಿಂತು ನಾರಾಯಣ ಭಾಳ ತುಚ್ಛದಿ ಬಲಬಿಟ್ಟು ಬಾಯಿಂದೆಳೆಯೆ ನಾರಾಯಣ 10 ವಾಸುಕಿ ಬಿಡಲು ಅಸುರಜನ ಮಡಿದ್ಹೋಗೆ ನಾರಾಯಣ ಕುಸಿದು ಹೋಗಲು ಗಿರಿ ಕೂರ್ಮರೂಪಾದಿ ನಾರಾಯಣ11 ಅಮೃತ ದೈತ್ಯರು ಕೊಂಡೋಡಲು ನಾರಾಯಣ ಸೃಷ್ಟಿ ಆದಿಕರ್ತ ಶ್ರೀ (ಸ್ತ್ರೀ?) ರೂಪವನು ಧರಿಸಿದ ನಾರಾಯಣ 12 ಮುಂಚೆ ಮೋಹವ ಮಾಡಿ ವಂಚಿಸಿ ದೈತ್ಯರನೆ ನಾರಾಯಣ ಹಂಚಿ ಸುರರಿಗೆ ಅಮೃತಪಾನ ಮಾಡಿಸಿದಯ್ಯ ನಾರಾಯಣ 13 ದಿತಿಯ ಸುತನು ಬಂದು ಪೃಥಿವಿಯನೆ ಸುತ್ತೊಯ್ಯೆ ನಾರಾಯಣ ಅತಿಬ್ಯಾಗದಿಂದ ರಸಾತಳ ಭೇದಿಸಿ ನಾರಾಯಣ 14 ಕ್ರೂರ ಹಿರಣ್ಯಾಕ್ಷನ್ನ ಕೋರೆದಾಡೆಲಿ ಸೀಳಿ ನಾರಾಯಣ ವರಾಹ ನಾರಾಯಣ 15 ಬ್ರಹ್ಮನಿಂದ್ವರ ಪಡೆದು ಹಮ್ಮಿಂದ ಕÉೂಬ್ಬ್ಯಸುರ ನಾರಾಯಣ ದುರ್ಮತಿಯಿಂದ್ಹರಿಯ ದೂಷಿಸುತಲಿದ್ದ ನಾರಾಯಣ16 ಮತಿಹೀನ ತನ ಸುತಗೆ ಮತಿಯ ಹಿಡಿಸುವೆನೆಂದ ನಾರಾಯಣ ಪಾರ್ವತೀಪತಿ ನಾಮವನು ಹಿತದಿಂದ ಬರೆಯೆಂದ ನಾರಾಯಣ 17 ಹರಿ ಹರಿ ಹರಿಯೆಂದು ಬರೆಯಾ(ಯಲಾ?) ಬಾಲಕನೋಡಿ ನಾರಾಯಣ ಉರಿಯ ಹೊಗಿಸುವೆನೆಂದ ಉಗ್ರಕೋಪಗಳಿಂದ ನಾರಾಯಣ18 ಮೆಟ್ಟಿ ಸಾಗೀಯಿಂದೆ ಬೆಟ್ಟದಿಂದಲಿ ಕೆಡೆವೆ ನಾರಾಯಣ ಕಟ್ಟಿ ಶರಧಿಯಲ್ಲÁ್ಹಕಿ ವಿಷ್ಣುಭಕ್ತನು ಬರಲು ನಾರಾಯಣ19 ಪ್ರಹ್ಲಾದ ನಿನ್ನೊಡೆಯ ಎಲ್ಹಾನೆ ತೋರೆನಗೆ ನಾರಾಯಣ ಮಲ್ಲಮರ್ದನ ಸ್ವಾಮಿ ಇಲ್ಲದೇ ಸ್ಥಳವುಂಟೆ ನಾರಾಯಣ20 ಪೃಥ್ವಿಪರ್ವತದಲ್ಲಿ ಸಪ್ತದ್ವೀಪಗಳಲ್ಲಿ ನಾರಾಯಣ ಸುತ್ತೇಳು ಸಾಗರದಿ ವ್ಯಾಪ್ತನಾಗ್ಹರಿಯಿರುವ ನಾರಾಯಣ21 ಅಣುರೇಣು ತೃಣದಲ್ಲಿ ಇರುವ ಆಕಾಶದಲಿ ನಾರಾಯಣ ರವಿ ಸೋಮ ತಾರಾಮಂಡಲದಲ್ಲಿ ತಾನಿರುವ ನಾರಾಯಣ 22 ಹದಿನಾಲ್ಕು ಲೋಕದಲಿ ಹರಿ ವಿಶ್ವವ್ಯಾಪಕನು ನಾರಾಯಣ ಸರ್ವದಿಕ್ಕುಗಳಲ್ಲಿ ಸನ್ನಿಹಿತನಾಗಿರುವ ನಾರಾಯಣ 23 ಆರಣಿಯೊಳಗಗ್ನಿಯಂದದಿ ಜನಕೆ ತೋರದಿರೆ ನಾರಾಯಣ ಜನನ ಮರಣಿಲ್ಲ ಜಗಜನ್ಮಾದಿಕಾರಣಗೆ ನಾರಾಯಣ 24 ನೀನರಿಯೆ ನಿನ್ನಲ್ಲೆ ಜೀವರಾಶಿಗಳಲ್ಲೆ ನಾರಾಯಣ ಈ ಜಗತ್ತಿಗೊಬ್ಬ ಇದ್ದಾನೆ ಎನ್ನೊಡೆಯ ನಾರಾಯಣ25 ಮಂದಭಾಗ್ಯನೆಯೆನ್ನ ಮಾತು ನಿಜವೆಂದು ತಿಳಿ ನಾರಾಯಣ ಈ ಸ್ತಂಭದಲ್ಲಿದ್ದಾನೆ ಮಂದರೋದ್ಧರ ಸ್ವಾಮಿ ನಾರಾಯಣ26 ಬಂದು ಭರದಿಂದಸುರ ಕಂಬ ಕಾಲಿಂದೊದೆಯೆ ನಾರಾಯಣ ತುಂಬಿತಾ ಘನಘೋಷದಿಂದ ಘುಡಿಘುಡಿಸುತಲಿ ನಾರಾಯಣ27 ಸಿಡಿಲು ಗರ್ಜಿಸಿದಂತೆ ಖಡಿ ಖಡಿ ಕೋಪದಲಿ ನಾರಾಯಣ ಕಿಡಿಗಳ್ಹಾರುತ ಕಂಬವೊಡೆದು ರೋಷದಿ ಬಂದ ನಾರಾಯಣ 28 ಖಳನ ಸೆಳೆದಪ್ಪಳಿಸಿ ದುರುಳನುದರವ ಬಗೆದÀು ನಾರಾಯಣ ಕರುಳ ವನಮಾಲೆ ತನ ಕೊರಳಲ್ಲಿ ಧರಿಸಿದ ನಾರಾಯಣ29 ತಲ್ಲಣಿಸಿ ಸುರರಾಗ ಮಲ್ಲಿಗೆಮಳೆ ಕರೆಯೆ ನಾರಾಯಣ ಪ್ರಹ್ಲಾದಸಹಿತ ಶ್ರೀದೇವಿ ಮುಂದಕೆ ಬರಲು ನಾರಾಯಣ30 ಕರದಿ ಕಂಗಳ ಮುಚ್ಚಿ ಸಿರಿಯ ತೋಳಿಂದಪ್ಪಿ ನಾರಾಯಣ ತೊಡೆಯನÉೀರಿಸಿ ತನ್ನ ತರುಣಿಗಭಯವನಿಟ್ಟ ನಾರಾಯಣ 31 ಸ್ತೋತ್ರವನು ಮಾಡಲಜ ಬಿಟ್ಟುಗ್ರಕÉೂೀಪವನು ನಾರಾಯಣ ಕೊಟ್ಟ ಪ್ರಹ್ಲಾದ(ಗ್ವ)ರಗಳ ಲಕ್ಷ್ಮೀನರಸಿಂಹ ನಾರಾಯಣ32 ಅಜÁ್ಞನದಿಂದ ತಾ ಯಜ್ಞ ಮಾಡುತಲಿರಲು ನಾರಾಯಣ33 ಅದಿತಿಯಲ್ಲವತರಿಸೆ ಅತಿಬ್ಯಾಗ ಕಶ್ಯಪರು ನಾರಾಯಣ ಸುತಗೆ ಉಪನಯನ ಭಾಳ್ಹಿತದಿಂದ ಮಾಡಲು ನಾರಾಯಣ 34 ಯಜÉೂೀಪವೀತ ಕೈಪು ಕೃಷ್ಣಾಂಜಿನ ಧರಿಸಿ ನಾರಾಯಣ ಶೀಘ್ರದಿಂದ ವಟು ವಾಮನ್ಯಜಶಾಲೆಗೆ ಬರಲು ನಾರಾಯಣ35 ಬಲಿಯ ಯಜ್ಞದಿ ಬಂದು ಭಾಳ ಪೂಜಿತನಾಗಿ ನಾರಾಯಣ ಛಲವಿಟ್ಟು ಮನದೊಳಗೆ ಬಲಿಯ ಯಾಚನೆ ಮಾಡೆ ನಾರಾಯಣ 36 ನಾ ಕೊಡುವೆ ಬೇಡು ಬೇಕಾದಷ್ಟು ಅರ್ಥವನು ನಾರಾಯಣ ಸಾಕಾಗದೇನಯ್ಯ ಸಲ್ಲ ಧನದಾಸ್ಯೆನಗೆ ನಾರಾಯಣ 37 ದೃಢಮನಸಿನಲಿ ಭೂಮಿ ಕೊಡು ಮೂರು ಪಾದವನು ನಾರಾಯಣ ಕೊಡುವೆನೆಂದಾಕ್ಷಣದಿ ಎರಡು ಚರಣವ ತೊಳೆದ ನಾರಾಯಣ38 ಒಂದು ಪಾದದಲಿ ಭೂಮಂಡಲವ ವ್ಯಾಪಿಸಿ ನಾರಾಯಣ ಪಾದ ನಾರಾಯಣ 39 ಕಂಡು ಕಮಲಜನು ಕಮಂಡಲೋದಕ(ದಿ) ತೊಳೆಯ ನಾರಾಯಣ ಉಂಗುಷ್ಠ ನಖದಿ ಉತ್ಪನ್ನಳಾದಳು ಗಂಗೆ ನಾರಾಯಣ40 ರಕ್ಕಸಾಂತಕನು ತ್ರಿವಿಕ್ರಮ ರೂಪಾಗಿ ನಾರಾಯಣ ಆಕ್ರಮಿಸಿಕೊಂಡ ಹದಿನಾಲ್ಕು ಲೋಕವ ಸ್ವಾಮಿ ನಾರಾಯಣ41 ಕೊಟ್ಟ ವಚನವ ತಪ್ಪಿ ಭ್ರಷ್ಟÀನಾಗದೆ ಭೂಮಿ ನಾರಾಯಣ ಕೊಟ್ಟರಿನ್ನೀಪಾದಯಿಟ್ಟು ಬಿಡುವೇನೆಂದ ನಾರಾಯಣ 42 ಕಟ್ಟಿ ಪಾಶದಲಿ ಕಂಗೆಟ್ಟಾಗ ಬಲಿರಾಯ ನಾರಾಯಣ ಕೆಟ್ಟೆನೆನ್ನದಲೆ ಮನಮುಟ್ಟಿ ಸ್ತೋತ್ರವ ಮಾಡೆ ನಾರಾಯಣ43 ದುಷ್ಟಜನ ಮರ್ದಕನು ಸೃಷ್ಟಿಸ್ಥಿತಿಲಯ ಕರ್ತೃ ನಾರಾಯಣ ಸೃಷ್ಟಿಗೊಡೆಯಗೆ ದಾನಕೊಟ್ಟರೆಂಬುವರುಂಟೆ ನಾರಾಯಣ 44 ಬಂಧನ ಬಿಡಿಸಿ ಬಲಿರಾಯಗ್ವರಗ¼
--------------
ಹರಪನಹಳ್ಳಿಭೀಮವ್ವ
ನೀನೆ ಎನಗಾಗಿ ಬಂದು ನೀನೆ ನೀನಾಗೆನಗಿಂದು ಧ್ರುವ ಅಪ್ಪನಾಗೆನಗೆ ನೀ ಬಂದು ತಪ್ಪು ಕ್ಷಮೆ ಮಾಡಿದಿಂದು ಒಪ್ಪಿಸಿಕೊಳಲೆನ್ನ ಬಂದು ಅಪ್ಪಳಿಸಿದೆ(?) ಜನ್ಮವಿಂದು 1 ಅಮ್ಮನಾಗೆನಗೆ ನೀ ಬಂದು ರಂಬಿಸಿದೆ ಎನಗಿಂದು ಸಮ್ಯe್ಞÁನದಲಿ ನೀ ಬಂದು ಸುಮ್ಮನÉದೋರಿದೆನಗಿಂದು 2 ಅಣ್ಣನಾಗೆನಗೆ ನೀ ಬಂದು ಕಣ್ಣಿನೊಳಗೆ ಸುಳಿದಿಂದು ಸುಗುಣ ಸಹಕಾರದಲಿ ಬಂದು ಪುಣ್ಯಚರಣದೋರಿದಿಂದು 3 ಅಕ್ಕನಾಗೆನಗೆ ನೀ ಬಂದು ಅಕ್ಕಿದೆ ಆತ್ಮದಲಿಂದು ಸಾಕಿ ಸಲಹಲೆನ್ನ ಬಂದು ಸಿಕ್ಕಿದಕ್ಕಿದೆ ಎನಗಿಂದು 4 ತಮ್ಮನಾಗೆನಗೆ ನೀ ಬಂದು ತಮ್ಮೊಳರ್ಪಿಸಿಕೊಂಡೆ ಇಂದು ತಮ್ಮ ನಿಜವಾದಾರ(?) ಬಂದು ತನುವಿನೊಳಗೆ ಸುಳಿದಿಂದು 5 ತಂಗಿಯಾಗೆನಗೆ ನೀ ಬಂದು ಹಿಂಗಿಸಿದೆ ಭವವಿಂದು ಸಂಗ ಸುಖವದೋರ ಬಂದು ಅಂತರಂಗದಿ ಸುಳಿದಿಂದು 6 ಈಸು ಪರಿಯಲೆನಗಿಂದು ಆಶೆಪೂರಿಸಿದೆನಗಿಂದು ಭಾಸ್ಕರ ಗುರುವಾಗಿ ಬಂದು ಭಾಸಿ ಪಾಲಿಸಿದೆನಗಿಂದು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆಲೆಗೊಂಡದೇನು ಮನಮೇಗಚಲಿಸುವೆ ನೀನು ಹಲವು ವಿಷಯದೊಳು ಪಸಿಲುಕಿದ ಬಗೆುಂದ ಹೊಲಬುದಪ್ಪಿತು[ಸಲೆ]ನಿನ್ನ ನಿಜವ ನೀ ಕಾಣು ಅ.ಪಗುರುವಿನಂಘ್ರಿಗೆ ನೀನು ನಮಿಸಿ ನಿನ್ನಮರವೆಯ ಭಾವವ ಕೆಡಿಸಿಕರಣವ ನಿಲುಕಡೆಗೊಳಿಸಿ ಬಹುಕರುಣವ ನಿನ್ನೊಳಗಿರಿಸಿಪರಮಾತ್ಮನಾಗ್ಯನ್ಯ ವಿಷಯಮೊಂದಲಾಶೆಪರಿದು ಭ್ರಾಂತಿಯಲೊಂದಿದ ಸುಖವ ಸೂಸಿ 1ಮನೆಯೊಂದು ನನಗಿಹುದೆಂದು ಅಲ್ಲಿಜನರೆಡೆಗೊಳೆ ದುಃಖ ಬಂದುಅನುಭವಿಪುದು ಯುಕ್ತವೆಂದು ಅದ[ಕನು]ಕೂಲವಾಗಬೇಕೆಂದುಅನುದಿನವನು ಸಂಧಾನದಿ ನಿಂದು ಗುರು ಕೊಟ್ಟಅನುಭವ ಬಯಲಾಗಿ ಭ್ರಮೆಗೆ ನೀ ಸಂದು 2ನೀನೊದು ಕೊಡಹೇಳಿ ಕೇಳಿ ಅಲ್ಲಿಹೀನತೆಯನು ಬಹುತಾಳಿದೀನರು ನೀವೆಂದು ಪೇಳಿ ಅನುಮಾನದ ಬಲು ಬಿರುಗಾಳಿಏನೆಂಬೆ ಬೀಸಲು [ತಾ] ನದರೊಳಗಾಳಿe್ಞÁನಹೋುತು ಭೇದ ಬುದ್ಧಿಯ ತಾಳಿ 3ಮಾಯಕವಾಗಿರೆ ಜಗವೂ ಬಹೂಪಾಯಗಳಿಂದ್ರಜಾಲಕವೂಆಯವರಿಯದದರಿರವೂ ತನ್ನತಾಯ ಕಾಣದ ಶಿಶುತನವೂಈಯಶೇಷವು ಸ್ವಪ್ನದನುಭವವಳಿವವುಬಾಯಮಾತಿನe್ಞÁನ ಕಪಟ ಸಂಭ್ರಮವೂ 4ಪರಮಾತ್ಮನೊಬ್ಬನಾಗಿಹನೂ ತಾನುಪರಿ ಪರಿ ರೂಪ ತೋರುವನುಅರಿತೆ ಭೇದವನಿದ ನೀನು ಬಹುಜರೆಯುತ ಗುಣದೋಷಗಳನುಗುರುವಾಸುದೇವರೂಪಿಲಿ ನಿನ್ನ ಕರವನುತಿರುಪತಿ ವೆಂಕಟ ಪಿಡಿಯೆ ಭ್ರಾಂತೇನು 5
--------------
ತಿಮ್ಮಪ್ಪದಾಸರು
ಪರಾಕು ಹೇಳುವನ ನಿರಾಕರಿಸುವದು ಹೊಕ್ಕ ನಿನ್ನ ಸೇವೆಯೊಳಗೆ ಬಹು 1 ಮಲಾದು(?0 ಇರುವಂ-------ಳಗೆ ಇರುವ ಅಲಾದಿ ಅಂಗಗಳು ಅವತರಿಸಿದ ದೇವಾ 2 ನೆಲಾನ ಘೂರಿಸಿದ ಭಲಾಶೆ ಮಾಡಿ ದುರುಳಾದ ಕರುಳ ತೆಗೆದು ಕೊರಾಳಲ್ಲಿಟ್ಟ ಸ್ವಾಮಿ 3 ಧರಾನÉ ದಾನ ಬೇಡಿ ಸರಾನ ಕೋಪದಿಂದ ಶರ---------ಸಿದ ಶ್ರೀಹರಿ ಎಂದು ಬಹು 4 ಬಲಾನೆ ಕುಟ್ಟಿ ಖಳನ ಬಲಾನೆಲ್ಲವ ಮುರಿದು ಲಲಾನೆಯನು ತಂದು ರಘುರಾಮನೆಂದು ಬಹು 5 ದುಷ್ಟ ಕಂಸಾನ ಕೊಂದಾ ಸೃಷ್ಟಿಕರ್ತಾನು ನೀನು ಕೃಷ್ಣಾ ಕರುಣಿಸೂ ಎಂದು ಪ್ರಾಯದಲಿ ಮೊರೆಯಿಟ್ಟು 6 ಅಂಬಾರವನು ಬಿಟ್ಟು ಸಂಚಾರದಲಿ ನೀ---- ---ಂ ಬೇರಿದಂಥ ಶ್ರೀ ಮಹಾನುಭಾವನೆನುತಾ 7 ಶರಾಣು ಎಂದು ಬಂದವರಾನ ಪೊರೆದ ಶ್ರೀಧರಾನೆ ರಕ್ಷಿಸೆಂದು ಕರಾವು ಮುಗಿದಿಂದೂ8 ನಿರಾಮಯಾನಾದ ಶ್ರೀ ರಾಮದೇವರೆನ್ನ ಪತಿ `ಹೊನ್ನ ವಿಠ್ಠಲಾ’ 9
--------------
ಹೆನ್ನೆರಂಗದಾಸರು
ಪಾದ ಮಾಡಿದೆನೆ ಸಾಷ್ಟಾಂಗ ಬೇಡಿದೆನೆ ಮನದಭೀಷ್ಟ ಪ. ನೀಡು ಕೊಲ್ಲಾಪುರದ ನಾಡಿಗೊಡೆಯಳೆ ಲಕುಮಿ ಮಾಡಮ್ಮ ಕೃಪೆಯ ಬೇಗಾ ಈಗಾ ಅ.ಪ. ಬಂದೆನೇ ಬಹುದೂರ ನಿಂದೆನೇ ತವಪದ ದ್ವಂದ್ವ ಸನ್ನಿಧಿಯಲೀಗ ವಂದನರಿಯೆನೆ ನಿನ್ನ ಚಂದದಿ ಸ್ತುತಿಪೊದಕೆ ಮಂದಮತಿಯಾಗಿಪ್ಪೆನÉೀ ತಂದೆ ಮುದ್ದುಮೊಹನ್ನ ಗುರು ಕರುಣ ಬಲದಿಂದ ಇಂದು ನಿನ್ನನು ಕಂಡೆನೇ ಮುಂದೆನ್ನ ಮಾನಾಭಿಮಾನ ನಿನಗೊಪ್ಪಿಸಿದೆ ಸಿಂಧುಸುತೆ ಪಾಲಿಸಮ್ಮಾ ದಯದೀ 1 ಉತ್ತರಾಯಣ ಪುಣ್ಯ ದಿನದಿ ನಿನ್ನನು ಕಂಡೆ ಮುಕ್ತರಾಧೀಶೆ ಕಾಯೆ ಉತ್ತಮಾಭರಣ ನವರತ್ನ ಪದಕವು ದಿವ್ಯ ನತ್ತು ಧರಿಸಿದ ಚಲ್ವಳೇ ಮುತ್ತೈದೆಯರು ಮತ್ತೆ ಭಕ್ತ ಸಂದಣಿ ಇಲ್ಲಿ ಎತ್ತನೋಡಲು ಕಂಡೆನೇ ಸತ್ಯ ಸಂಕಲ್ಪ ಶ್ರೀ ಹರಿಯ ಪಟ್ಟದ ರಾಣಿ ಚಿತ್ತಕ್ಕೆ ತಂದು ಕಾಯೆ ಮಾಯೆ 2 ರೂಪತ್ರಯಳೆ ನಿನ್ನ ವ್ಯಾಪಾರ ತಿಳಿಯಲು ಆ ಪದ್ಮಭವಗಸದಳಾ ಶ್ರೀಪತಿಯ ಕೃಪೆ ಯಿಂದ ಸೃಷ್ಟಿಸ್ಥಿತಿಲಯಗಳನು ವ್ಯಾಪಾರ ಮಾಳ್ಪ ಧೀರೆ ಕೃಪೆಯ ನೀ ಮಾಡದಲೆ ಉಭಯ ಸುಖವೆತ್ತಣದು ಭೋಪರೀ ನಂಬಿದರಿಗೆ ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ನೀ ಪಾರುಗೊಳಿಸೆ ಭವದೀ ದಯದೀ 3
--------------
ಅಂಬಾಬಾಯಿ
ಪಾಲಗಡಲೊಡೆಯ ಬಾರೊ ಎನ್ನÉುೀಲೆ ಕರುಣಾಮೃತದÀ ರಸಮಳೆಯ ಸುರಿವುತಲಿ ಪ. ನಾನಾ ರತುನ ಕಾಂತಿ ನವರಂಗ ಬಲಿಯಾಗಿಧ್ಯಾನಿಪರ ಮನದಾಶ್ರಯಶ್ರೀನಾಥ ಕಿಂಕಿಣಿ ಸ್ವರ ಮಂಜುರವದಿಂದ 1 ನೂಪುರ ಧ್ವನಿಯೆಂಬ ನೂತನದ ರಸಮಳೆಯÁಪಹರ ನಖಕಾಂತಿಯದೀಪಾವಳಿಯ ನಡುವೆ ದೀನೋಕ್ತಿಯು ಕೆಡದಂತೆ 2 [ಉರುಟು]ವಸನದ ಮಧ್ಯ ಹೊಳೆವ ನಾನಾಭರಣಕರಕಂಜ ಕಂಬುಕಂಠಸರಸಮುಖಚಂದ್ರ ಶೋಭನಮೂರ್ತಿ ಹಯವದನ 3
--------------
ವಾದಿರಾಜ
ಬಂದು ಹೃದಯಮಂದಿರದೊಳಗೆಕೂಡೋ ಕೇಶವಮಾಧವ ಪ ತಂದೆಯೆನಾಂ ವಂದಿಪೆನೋ ಕಂದನ ಕುಂದನೆಣಿಸದೆ ಅ.ಪ ಭ್ರಮರ ಕೀಟನ್ಯಾಯದಿ ಬೇಗದಿ ತಾನೆ ತಾ ತನ್ಮಯತೇ ದಿವ್ಯಮಂಗಳ ವಿಗ್ರಹನೇ 1 ನಾಲಗೆಯ ನಡೆಮುಡಿ ಹಾಸುವೆ ಪಾಲ ಸುಮೃದುಪದಾ ಶುಭದ ನೀನೊಲಿಯುತೆ ನಲಿದು 2 ಗಾತ್ರ ಮೂರ್ತಿ ಶ್ರೀಕರ ತಂಗದಿರಾ ಬೆಂಗದಿರಾ ಶಂಕಚಕ್ರ ಚತುರ್ಭುಜ 3 ಸಂಚಿತವೆಂತೋ ಸ್ವಾಮಿ ಹಂಚಿ ನಿನ್ನ ಸೇವೆಯ ಗೈಸುತ 4 ಮುನಿಜನಗಳ ಪೊರೆವುದು ಹೆಚ್ಚೇ ಚಿನುಮಯಾತ್ಮನೇ ಚೆನ್ನಿಗ ಅಣುಗನು ನಾನe್ಞÁನಿ ಕನಿಕರದೆನ್ನ ಕಾಯ್ದರೆ ಕೀರ್ತಿ 5 ಮಾಯಮುಚ್ಚಿ ಕಾಯನೆಚ್ಚಿ ನೋಯುತ್ತಿಹೆನೋ ನರಹರಿ ಜೀಯ ಜಾಜೀಶಹರಿ ರಾಮ ರಕ್ಷಿಸು ಶ್ರೇಯ ಕೊಟ್ಟು6
--------------
ಶಾಮಶರ್ಮರು
ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ಪ ಶ್ರೀಯರಸನೀಲಮೇಘಛ್ಛಾಯ ಕೃಷ್ಣರಾಯತನ್ನ ಅ.ಪ. ನಿರಂಜನ ತಾ ಲೀಲೆಯಿಂದ1 ಪುಟಿತ ಹಾಟಕ ಮಣಿಘಟಿತ ಕಂಕಣಾಂಗದಕಟಿಸೂತ್ರಗಳನಿಟ್ಟು ನಟನಂದದಿವಟಪತ್ರ ಶಾಯಿ ಓಷ್ಠಪುಟದಿ ಪಾದವನಿಕ್ಕಿಕಟಬಾಯೊಳಮೃತವ ಸ್ಫುಟವಾಗಿ ಸುರಿಸುತ 2 ನಿತ್ಯ ಮಂಗಳ ದೇವಿಯರಗಂಗೆಯ ಪಡೆದ ಶಿವನಂಗ ಶುದ್ಧಿಗೈಸಿದಾತನ3 ಗೋಪಿ ಗೃಹಕರ್ಮರತಳಾಗಿರಲು ಒಮ್ಮನದಿಂದಅಮರಗಣಾರಾಧೀತ ಕ್ಷಮೆಯನಳೆದ ಪಾದಸುಮ್ಮನೆ ಕರದೊಳೆತ್ತಿ ಕಮ್ಮಗಿಹದೆಂದು ತನ್ನ 4 ಕರಪಲ್ಲವಾಮೃತ ಲೋಕವಂದ್ಯರೂಪ ಫಣಿಶೇ-ಖರಾದ್ರಿವಾಸ ಭಕ್ತನಾಕ ಭೂರುಹ ನೀಕರೆಸಿ ದುರಿತವ ಸೋಕದಂತೆ ನಮ್ಮನೀಗಸಾಕುವ ಪರಮ ಕರುಣಾಕರ ಶ್ರೀಕೃಷ್ಣ 5
--------------
ವ್ಯಾಸರಾಯರು
ಮಾನವಾತ್ಮರೆ ನಿಮ್ಮ ಮಾನಸ ಪೂಜೆಯಿಂಮಾನವನಿಗೆ ಮೋಕ್ಷ ಸಾಧಿಸೀರಿ ಪ ರತ್ನ ನಿರ್ಮಿತ ಸುಚರಿತ್ರ ಮಂಟಪವನ್ನುಸತ್ಯಭಾಮೆಯ ಪತಿಗಿತ್ತು ಪೂಜಿಸುವೆ1 ಆಸನ ನೀಡುವೆ ಶೇಷಶಯನನೆ ಇಲ್ಲಿವಾಸ ಮಾಡಿ ಎನ್ನ ಸೇವೆ ಸ್ವೀಕರಿಸು2 ಧ್ಯಾನ ಮಾಡುವೆ ನಿನ್ನ ಗಾನ ಮಾಡುವೆ ನಿನ್ನe್ಞÁನ ಭೂಷಣ ಶೋಭಿತಾನನಾಂಬುಜ 3 ಧೃತ ವೇಣುಗೋಪಾಲ ಬಾರೋ ಮನಸಿಗೆ ತೋರೊಮೂರುತಿ ನಿನ್ನಯ ಸಮೀರ ಸಂಸ್ತುತನೆ 4 ಅಘ್ರ್ಯ ನೀಡುವೆ ನಾನು ಅನಘ್ರ್ಯ ವಸ್ತುಗಳಿಂದಸ್ವಘ್ರ್ಯಗ್ರಹಣ ಮಾಡೋ ಭರ್ಗ ಸೇವಿತನೆ 5 ಪಾದ್ಯ ನೀಡುವೆ ವೇದ ವೇದ್ಯ ಮಹಿಮನೇ ಮುನ್ನಾವದ್ಯ ಕಳೆದು ಭವದಿಂದ ಉದ್ಧರಿಸೆನ್ನ 6 ಆಚಮನವ ನೀಡುವೆ ಹೇ ಚತುರಾನನೇಶವಾಚಾಮಗೋಚರ ಮೋಚಕ ಹೇತು 7 ಸುದತಿ ಮೋಹನ ತವಮಧುಪರ್ಕವನೀವೆ ಮುದದಿ ಸ್ವೀಕರಿಸು 8 ಮತ್ತೆ ಆಚಮನವನಿತ್ತು ಪೂಜಿಪೆ ಕರವೆತ್ತಿ ಮುಗಿವೆ ಸರ್ವಭಕ್ತ ಪೋಷಕನೆ 9 ಗಂಗೆ ಯಮುನೆ ಗೋದಾ ತುಂಗೆ ಜಲವ ತಂದಿಹೆ ಅ-ನಂಗ ಜನಕ ಮಾಡೋ ಅಭ್ಯಂಗ ಸ್ನಾನ 10 ನಿರಿಗೆಗಳನೆ ಹಾಕಿ ಜರದ ಪೀತಾಂಬರ ಗ-ರುಡವಾಹನ ನೀನು ಧರಿಸು ಮಧ್ಯದಲಿ 11 ಹಾರ ಕಿರೀಟ ಕಾಂಚಿ ನೀರ ನೂಪುರ ಸು-ಕೇಯೂರ ನೂಪುರನೀವೆ ಧಾರುಣಿಪತಿಗೆ 12 ಸ್ವರ್ಣ ರಚಿಸಿದ ಸೂತ್ರವನು ಕೊಡುವೆ ಲಕ್ಷ್ಮೀರನ್ನ ಸೌರಭ ಗಂಧವನು ಸ್ವೀಕರಿಸು 13 ವಾಸುದೇವನೆ ದಿವ್ಯ ನಾಸಿಕೇಂದ್ರಿಯದಿಂದಈಸು ಧೂಪದ ಗಂಧ ವಾಸನೆ ಗ್ರಹಿಸೋ 14 ಮರುಗು ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸುಮಗಳ ಪರಿಮಳ ಧರಿಸೋ ಮಧ್ಯದಲಿ 15 ಹತ್ತು ಅಂಗಗಳಿಂದ ಉತ್ತಮ ಸುಧೂಪವಎತ್ತುವೆ ನಿನಗೆ ಸರ್ವೋತ್ತಮ ಹರಿಗೆ16 ಆಕಳ ಘೃತದ ಅನೇಕ ದೀಪಗಳ್ಹಚ್ಚಿಶ್ರೀಕರ ತವ ಮುಖಾವಲೋಕಿಸುತ್ತಿಹೆನು 17 ಏಕಾರತಿ ಗೋಪಿಪ್ರೀತನೆ ಬೆಳಗುವೆನಾಕ ನಾಯಕ ಸುರಲೋಕ ಸೇವಿತನೆ 18 ಆರು ವಿಧದ ಅನ್ನ ಸಾರು ಪಾಯಸ ಭಕ್ಷ್ಯಭೂರಿ ಶಾಕಗಳೀವೆ ನೀರಜಾಂಬಕನೆ 19 ಮಾರಜನಕನೆ ಮುತ್ತಿನಾರತಿ ಬೆಳಗುವೆಶ್ರೀರಾಮನೆ ನಿನ್ನ ಮೋರೆಯ ತೋರೊ20 ಛತ್ರ ಚಾಮರ ವ್ಯಜನ ದರ್ಪಣ ಪರ್ಯಂಕಕರ್ಪುರ ತಾಂಬೂಲವಿತ್ತು ಪೂಜಿಸುವೆ 21 ಹತ್ತಾರು ಉಪಚಾರ ಚಿತ್ರ ಚರಿತನೆ ನಿನಗೆಅರ್ಥಿಯಲಿ ಕೊಡುವೆನು ಮುಕ್ತಿ ನೀಡೆನಗೆ 22 ಇಂದಿರೇಶನೆ ನಿನ್ನ ಮುಂದೆ ತುತಿಪನೆ ನಿಂತುನಂದಬಾಲನೆ ಕೃಪೆಯಿಂದ ನೋಡೆನ್ನ 23
--------------
ಇಂದಿರೇಶರು
ರಾಮದೂತ ನËಮಿಭಕುತ ಕಾಮಿತದಾತ ಸುರಶೇವಿತ ಪ ಈ ಮಹಿಯೊಳೂ ಗ್ರಾಮಕೂಡ್ಲಿಗಿ ಧಾಮಮಾರುತ ಪಾಹಿಸತತಅ.ಪ ಭೂಮಿಸುತೆಯ ಕ್ಷೇಮವಾರ್ತೆಯ ರಾಮಗರುಹಿದ ಪದಕೆರಗಿದ ಹೇ ಮಹಾತ್ಮನೆ ಪ್ರೇಮದಿ ರಘು ರಾಮ ನೀಡಿದ ಬ್ರಹ್ಮನ ಪದ 1 ಇಂದು ಕುಲದಿ ಬಂದು ಕೌರವ ವೃಂದ ಮಥಿಸಿದೆಯಾ ಪಾಂಡು ತನಯ ಪೊಂದಿದಿಯಾ ನಂದಗೋಪನ ಕಂದನ ಕೃಪೆಯಾ ಪಾಲಿಸಯ್ಯಾ 2 ವ್ಯಾಸಶಿಷ್ಯ ಯತೀಶ್ವರ ತವ ಶಾಸ್ತ್ರದಿ ಮತಿಯಾ ಕರುಣಿಸಯ್ಯಾ ಶ್ರೀಶಕಾರ್ಪರ ವಾಸ ಶ್ರೀನರ ಕೇಸರಿಗೆ ಪ್ರೀಯ ಮಧ್ವರಾಯಾ 3
--------------
ಕಾರ್ಪರ ನರಹರಿದಾಸರು