ಹರಿಯೇ ನಮ್ಮ ಪರದೈವಾ ಹರಿಯೇ ತ್ರಿಭುವನ ಕಾವಾ
ಹರಿಯೇ ಇಹಪರ ನೀವಾ ಜಗದೊಳಗೆ ಪ
ಬಿಟ್ಟು ತಾಯ ತಂದೆಗಳ ನೆಟ್ಟನಡವಿಗೆ ಪೋಗಿ |
ಮುಟ್ಟಿ ಭಜಿಸಲಾಗಿ ದಯವಿಟ್ಟು ಬಂದನು |
ವಿಠಲ ನಚಲ ಪದವಿಯ ಕೊಟ್ಟು ಸಲಹಿದಕ |
ಧಿಟ್ಟ ಧ್ರುವರಾಯ ಸಾಕ್ಷಿ ಅಂಬರದಲಿ 1
ಶರಧಿ ದಾಟ ಬಂದು ರಘು |
ಪತಿ ಕರಿಸಿದನು |
ಧರಿಯದುಳ್ಳನಕಾ ಲಂಕಾಪುರದ ಪದವಿಕೊಟ್ಟು ಕಾಯ್ದಾ |
ಮೆರೆವಾ ವಿಭಿಷಣÁ ಸಾಕ್ಷಿ ಮೃತ್ಯುಲೋಕದೀ 2
ಧರೆಯ ನೆಳೆದು ಕೊಟ್ಟರಂಘ್ರಿ ವೆರಡರಿಂದ ಮುಚ್ಚಲಾಗಿ |
ಶರಣ ತೃತಿಯ ಪಾದಕ ಶಿರಸವ ನೀಡಲು |
ಹೊರೆದನೆಂದು ಬಲಿಸಾಕ್ಷಿ ಪಾತಾಳದಲಿ 3